Asia Cup 2022: ಶಾಹೀನ್ ಶಾ ಆಫ್ರಿದಿ ಬಳಿಕ ಪಾಕ್ ತಂಡದ ಮತ್ತೊಬ್ಬ ಬೌಲರ್ ಏಷ್ಯಾಕಪ್​ನಿಂದ ಔಟ್..!

Asia Cup 2022: ಶಾಹೀನ್ ಶಾ ಆಫ್ರಿದಿ ನಂತರ ಪಾಕಿಸ್ತಾನದ ಮತ್ತೊಬ್ಬ ವೇಗದ ಬೌಲರ್ ಗಾಯದ ಸಮಸ್ಯೆಯಿಂದ ಇಡೀ ಏಷ್ಯಾಕಪ್​ಗೆ ಗೈರಾಗಲಿದ್ದಾರೆ.

Asia Cup 2022: ಶಾಹೀನ್ ಶಾ ಆಫ್ರಿದಿ ಬಳಿಕ ಪಾಕ್ ತಂಡದ ಮತ್ತೊಬ್ಬ ಬೌಲರ್ ಏಷ್ಯಾಕಪ್​ನಿಂದ ಔಟ್..!
Follow us
TV9 Web
| Updated By: ಪೃಥ್ವಿಶಂಕರ

Updated on:Aug 26, 2022 | 9:41 PM

ಏಷ್ಯಾಕಪ್ 2022 (Asia Cup 2022)ರ ಆರಂಭಕ್ಕೂ ಮೊದಲು, ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿನ ತೊಂದರೆಗಳು ಕಡಿಮೆಯಾಗುವಂತೆ ತೋರುತ್ತಿಲ್ಲ. ಏಷ್ಯಾಕಪ್ ಆರಂಭಕ್ಕೂ ಮುನ್ನ ತಂಡದ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ (Shaheen Shah Afridi) ಇಂಜುರಿಗೊಂಡು ಇಡೀ ಟೂರ್ನಿಯಿಂದ ಹೊರಬಿದ್ದಿದ್ದರು. ಅವರ ಅಲಭ್ಯತೆಯ ಆಘಾತದಿಂದ ಇನ್ನೂ ಹೊರಬರದ ಪಾಕ್ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಅದೆನೆಂದರೆ ಪಾಕಿಸ್ತಾನ ತಂಡದ ಮತ್ತೊಬ್ಬ ವೇಗದ ಬೌಲರ್ ಇಂಜುರಿಗೊಳಗಾಗಿದ್ದು ಇಡೀ ಏಷ್ಯಾಕಪ್​ನಿಂದ ಹೊರಬಿದ್ದಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶುಕ್ರವಾರ, ಆಗಸ್ಟ್ 26 ರಂದು ಹೇಳಿಕೆ ನೀಡಿದ್ದು, ತಂಡದ ಯುವ ವೇಗದ ಬೌಲರ್ ಮೊಹಮ್ಮದ್ ವಾಸಿಮ್ ಜೂನಿಯರ್ (Mohammad Wasim) ಗಾಯದ ಸಮಸ್ಯೆಯಿಂದಾಗಿ ಏಷ್ಯಾಕಪ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ. ಅಲ್ಲದೆ ಅವರ ಬದಲಿಗೆ ಅನುಭವಿ ವೇಗದ ಬೌಲರ್ ಹಸನ್ ಅಲಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.

ಎರಡು ದಿನಗಳ ಹಿಂದೆ ಪಾಕಿಸ್ತಾನ ತಂಡದ ಅಭ್ಯಾಸದ ವೇಳೆ ವಾಸಿಂ ಗಾಯಗೊಂಡಿದ್ದರು, ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಂದಿನಿಂದ ವಾಸಿಂ ತಂಡದಿಂದ ನಿರ್ಗಮನದ ಭೀತಿ ಎದುರಾಗಿತ್ತು. ಪಿಸಿಬಿ ತನ್ನ ಹೇಳಿಕೆಯಲ್ಲಿ, ಬುಧವಾರ ಪಾಕಿಸ್ತಾನ ತಂಡ ಅಭ್ಯಾಸ ನಡೆಸುವ ಸಮಯದಲ್ಲಿ ಬೌಲಿಂಗ್ ಮಾಡುವಾಗ ವಾಸಿಂ ಗಾಯಗೊಂಡಿದ್ದರು. ನಂತರ ತಂಡದ ವೈದ್ಯಕೀಯ ಸಿಬ್ಬಂದಿ ಅವರನ್ನು ಪರೀಕ್ಷಿಸಿ, ದುಬೈನಲ್ಲಿ MRI ಸ್ಕ್ಯಾನ್​ಗೆ ಒಳಪಡಿಸಿತ್ತು. ಸ್ಕ್ಯಾನಿಂಗ್​ನಲ್ಲಿ ಬಂದ ವರದಿಯ ಆದಾರದ ಮೇಲೆ ಈಗ ಅವರು ಗಾಯಗೊಂಡಿರುವುದು ದೃಢಪಡಿದ್ದು, ಅವರನ್ನು ಇಡೀ ಟೂರ್ನಿಯಿಂದ ಕೈಬಿಡಲಾಗಿದೆ ಎಂದು ಹೇಳಿದೆ.

ಇದನ್ನೂ ಓದಿ
Image
Asia Cup 2022: ಹಾಲಿ ಚಾಂಪಿಯನ್ ಆಗಿದ್ದರೂ ಭಾರತ 1986 ರ ಏಷ್ಯಾಕಪ್ ಬಹಿಷ್ಕರಿಸಿದ್ಯಾಕೆ?
Image
Asia Cup 2022: ಭಾರತದ ದಿಗ್ಗಜ ಆಟಗಾರರಿಗೆ ಏಷ್ಯಾಕಪ್ ತುಂಬಾ ವಿಶೇಷ ಏಕೆ ಗೊತ್ತಾ? ಈ ಸ್ಟೋರಿ ಓದಿ
Image
Asia Cup 2022: ಪಾಕ್ ವಿರುದ್ಧದ ಪಂದ್ಯದಿಂದ ಟೀಂ ಇಂಡಿಯಾದ ಈ 4 ಆಟಗಾರರಿಗೆ ಕೋಕ್..!

ಕೊನೆಗೂ ಹಸನ್ ಅಲಿಗೆ ಅವಕಾಶ ಸಿಕ್ಕಿತು

ವಾಸಿಂ ಅವರ ಫಿಟ್‌ನೆಸ್ ಮತ್ತು ಪುನರ್ವಸತಿ ಬಗ್ಗೆ ಮಂಡಳಿಯು ನಿರಂತರ ನಿಗಾ ಇರಿಸಲಿದೆ ಎಂದು ಪಿಸಿಬಿ ಹೇಳಿದೆ. ಇದರೊಂದಿಗೆ ಪಾಕ್ ಬೋರ್ಡ್ ಅನುಭವಿ ವೇಗಿ ಹಸನ್ ಅಲಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಈ ಹಿಂದೆ ಟೂರ್ನಿಗೆ ಆಯ್ಕೆಯಾಗಿದ್ದ ತಂಡದಲ್ಲಿ ಹಸನ್ ಅಲಿಗೆ ಸ್ಥಾನ ನೀಡಿರಲಿಲ್ಲ. ಈ ಬಗ್ಗೆ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದರು.

ಶಾಹೀನ್​ಗೂ ಇಂಜುರಿ

ಗಾಯದಿಂದಾಗಿ ಒಂದು ವಾರದೊಳಗೆ ಪಾಕಿಸ್ತಾನ ತನ್ನ ಎರಡನೇ ಬೌಲರ್ ಅನ್ನು ಕಳೆದುಕೊಂಡಿದೆ. ಕಳೆದ ವಾರ, ತಂಡದ ಲೆಜೆಂಡರಿ ವೇಗಿ ಶಾಹೀನ್ ಶಾ ಆಫ್ರಿದಿ ಮೊಣಕಾಲಿನ ಗಾಯದಿಂದಾಗಿ ಪಂದ್ಯಾವಳಿಯಿಂದ ಹೊರಗುಳಿದಿದ್ದರು. ಶಾಹೀನ್ ಬದಲಿಗೆ ಪಾಕಿಸ್ತಾನ ಮೊಹಮ್ಮದ್ ಹಸ್ನೈನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿತ್ತು. ಆದರೆ, ಇದೀಗ ಹಸನ್ ಅಲಿ ಆಗಮನದಿಂದ ಪಾಕ್ ಬೌಲಿಂಗ್​ನಲ್ಲಿ ಅನುಭವಕ್ಕೆ ಸ್ಥಾನ ಸಿಕ್ಕಿದೆ. ಏಕೆಂದರೆ ಶಾಹೀನ್ ಅನುಪಸ್ಥಿತಿಯ ನಂತರ ತಂಡ ಕೇವಲ ನಸೀಮ್ ಶಾ, ಹ್ಯಾರಿಸ್ ರೌಫ್ ಮತ್ತು ಮೊಹಮ್ಮದ್ ವಾಸಿಂ ಮೇಲೆ ಅವಲಂಬಿತವಾಗಿತ್ತಯ. ಆದರೆ ಈ ಮೂವರು ಆಟಗಾರರು ಇದುವರೆಗೆ ಹೆಚ್ಚು ಪಂದ್ಯಗಳನ್ನು ಆಡಿರಲಿಲ್ಲ.

Published On - 8:58 pm, Fri, 26 August 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್