Asia Cup 2022: ಹಾಲಿ ಚಾಂಪಿಯನ್ ಆಗಿದ್ದರೂ ಭಾರತ 1986 ರ ಏಷ್ಯಾಕಪ್ ಬಹಿಷ್ಕರಿಸಿದ್ಯಾಕೆ?

Asia Cup 2022: 1984ರಲ್ಲಿ ಮೊದಲ ಏಷ್ಯಾಕಪ್ ಆಡಿದ್ದಾಗ, ಭಾರತ ಗೆದ್ದು ಇತಿಹಾಸ ಸೃಷ್ಟಿಸಿತ್ತು. ನಂತರ 1986ರಲ್ಲಿ ಭಾರತಕ್ಕೆ ಸತತ ಎರಡನೇ ಬಾರಿ ಏಷ್ಯಾಕಪ್ ಗೆಲ್ಲುವ ಅವಕಾಶವಿತ್ತು, ಆದರೆ ಭಾರತ ಟೂರ್ನಿಯನ್ನು ಬಹಿಷ್ಕರಿಸಿತು.

Asia Cup 2022: ಹಾಲಿ ಚಾಂಪಿಯನ್ ಆಗಿದ್ದರೂ ಭಾರತ 1986 ರ ಏಷ್ಯಾಕಪ್ ಬಹಿಷ್ಕರಿಸಿದ್ಯಾಕೆ?
Asia Cup 2022
Follow us
TV9 Web
| Updated By: ಪೃಥ್ವಿಶಂಕರ

Updated on:Aug 26, 2022 | 8:41 PM

ಏಷ್ಯಾಕಪ್ 2022 (Asia Cup 2022) ಆಗಸ್ಟ್ 27 ರಿಂದ ಪ್ರಾರಂಭವಾಗಲಿದ್ದು, ಇಡೀ ಕ್ರಿಕೆಟ್ ಜಗತ್ತು ಈ ಪಂದ್ಯಾವಳಿಗಾಗಿ ಕಾದು ಕುಳಿತಿದೆ. ಆಗಸ್ಟ್ 28ರಂದು ನಡೆಯಲಿರುವ ಭಾರತ-ಪಾಕಿಸ್ತಾನ (India and Pakistan) ನಡುವಿನ ಪಂದ್ಯದ ಬಗ್ಗೆ ಭಾರೀ ಕುತೂಹಲ ಮೂಡಿದ್ದು, ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿ ಭಾರತ ಏಷ್ಯಾಕಪ್ ಪ್ರವೇಶಿಸಲಿದೆ. ಇದುವರೆಗೆ ಭಾರತ ಏಳು ಬಾರಿ ಏಷ್ಯಾಕಪ್ ಪ್ರಶಸ್ತಿ ಗೆದ್ದಿದೆ. ಆದರೆ ಇಂದು ಭಾರತ ಏಷ್ಯಾಕಪ್‌ನಲ್ಲಿ ಭಾಗವಹಿಸದ ಆ ವರ್ಷದ ಬಗ್ಗೆ ಮಾತನಾಡೋಣ.

ಏಷ್ಯಾಕಪ್​ಗೆ ಭಾರತ ಗೈರು

1986 ರಲ್ಲಿ ನಡೆದ ಏಷ್ಯಾಕಪ್‌ನ ಎರಡನೇ ಆವೃತ್ತಿಯಲ್ಲಿ ಭಾರತ ಭಾಗವಹಿಸಲಿಲ್ಲ. ಏಕೆಂದರೆ ಆ ಸೀಸನ್​ ಏಷ್ಯಾಕಪ್ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆ ಸಮಯದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧಗಳು ಉತ್ತಮವಾಗಿರಲಿಲ್ಲ. ಅದಕ್ಕಾಗಿಯೇ ಭಾರತ ಆ ಏಷ್ಯಾಕಪ್‌ನಲ್ಲಿ ಆಡಲು ನಿರಾಕರಿಸಿ ಏಷ್ಯಾಕಪ್ ಅನ್ನು ಬಹಿಷ್ಕರಿಸಿತು. 1984 ರಲ್ಲಿ ಏಷ್ಯಾಕಪ್ ಅನ್ನು ಪ್ರಾರಂಭಿಸುವ ಹಿಂದಿನ ಉದ್ದೇಶವೇ ಏಷ್ಯಾದ ದೇಶಗಳ ನಡುವಿನ ಸಾಮೀಪ್ಯವನ್ನು ಹೆಚ್ಚಿಸುವುದು ಮತ್ತು ಏಷ್ಯಾದಲ್ಲಿ ಕ್ರಿಕೆಟ್ ಅನ್ನು ಉತ್ತೇಜಿಸುವುದಾಗಿತ್ತು. ಇದಕ್ಕಾಗಿ 1983 ರಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅನ್ನು ರಚಿಸಲಾಯಿತು.

ಇದನ್ನೂ ಓದಿ
Image
Asia Cup 2022: ಏಷ್ಯಾಕಪ್​ನಲ್ಲಿ ಸಚಿನ್, ಗಪ್ಟಿಲ್ ಜೊತೆಗೆ ಕೊಹ್ಲಿ ದಾಖಲೆಯನ್ನು ಮುರಿಯಲಿದ್ದಾರೆ ರೋಹಿತ್..!
Image
Asia Cup 2022: ಪಾಕ್ ತಂಡಕ್ಕೆ ಆಘಾತದ ಮೇಲೆ ಆಘಾತ; ತಂಡದ ಮತ್ತೊಬ್ಬ ವೇಗದ ಬೌಲರ್​ಗೆ ಇಂಜುರಿ..!
Image
Asia Cup 2022: ಸ್ವದೇಶಿಯರು ಒಬ್ಬರೂ ಇಲ್ಲ; ಏಷ್ಯಾಕಪ್​ ಆಡುತ್ತಿರುವ ಹಾಂಕಾಂಗ್ ತಂಡದ ಬಗ್ಗೆ ನಿಮಗೆಷ್ಟು ಗೊತ್ತು?

ಬಾಂಗ್ಲಾದೇಶಕ್ಕೆ ಏಷ್ಯಾಕಪ್‌ನಲ್ಲಿ ಮೊದಲ ಅವಕಾಶ ಸಿಕ್ಕಿತು

1984ರಲ್ಲಿ ಮೊದಲ ಏಷ್ಯಾಕಪ್ ಆಡಿದ್ದಾಗ, ಭಾರತ ಗೆದ್ದು ಇತಿಹಾಸ ಸೃಷ್ಟಿಸಿತ್ತು. ನಂತರ 1986ರಲ್ಲಿ ಭಾರತಕ್ಕೆ ಸತತ ಎರಡನೇ ಬಾರಿ ಏಷ್ಯಾಕಪ್ ಗೆಲ್ಲುವ ಅವಕಾಶವಿತ್ತು, ಆದರೆ ಭಾರತ ಟೂರ್ನಿಯನ್ನು ಬಹಿಷ್ಕರಿಸಿತು. ಭಾರತೀಯ ಆಟಗಾರರ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಶ್ರೀಲಂಕಾ ಪ್ರವಾಸಕ್ಕೆ ತಂಡವನ್ನು ಕಳುಹಿಸಲು ಭಾರತೀಯ ಕ್ರಿಕೆಟ್ ಮಂಡಳಿ ನಿರಾಕರಿಸಿತು. 1986ರಲ್ಲಿ ಭಾರತ ಏಷ್ಯಾಕಪ್‌ನಿಂದ ಹಿಂದೆ ಸರಿದಾಗ, ನೆರೆಯ ಬಾಂಗ್ಲಾದೇಶಕ್ಕೆ ಟೂರ್ನಿಯಲ್ಲಿ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿತು. ಏಷ್ಯಾಕಪ್‌ನಲ್ಲಿ ಬಾಂಗ್ಲಾದೇಶಕ್ಕೆ ಮೊದಲ ಬಾರಿಗೆ ಆಡುವ ಅವಕಾಶ ಸಿಕ್ಕಿತು ಆದರೆ ಈ ತ್ರಿಕೋನ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಬಾಂಗ್ಲಾದೇಶ ಎರಡೂ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ.

1986ರಲ್ಲಿ ಶ್ರೀಲಂಕಾ ಏಷ್ಯಾಕಪ್ ಗೆದ್ದಿತ್ತು

1986ರಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಫೈನಲ್ ಪಂದ್ಯ ನಡೆದಿತ್ತು. ಪಾಕಿಸ್ತಾನ ಮೊದಲ ಇನಿಂಗ್ಸ್​ನಲ್ಲಿ 9 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತ್ತು. ಪಾಕಿಸ್ತಾನ ಪರ ಜಾವೇದ್ ಮಿಯಾದಾದ್ 67 ರನ್ ಗಳಿಸಿದರು, ಉತ್ತರವಾಗಿ ಶ್ರೀಲಂಕಾ ಕೇವಲ 5 ವಿಕೆಟ್‌ಗೆ 195 ರನ್ ಗಳಿಸಿ ಆಲೌಟ್ ಆಗಿತ್ತು. ಇದರಲ್ಲಿ ಅರ್ಜುನ್ ರಣತುಂಗಾ ಮತ್ತು ಅರವಿಂದ್ ಡಿಸಿಲ್ವಾ ಅವರ ಅರ್ಧಶತಕಗಳು ಸೇರಿವೆ. ಪಂದ್ಯದ ಕೊನೆಯಲ್ಲಿ ಮಿಯಾದ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾದರೆ, ಶ್ರೀಲಂಕಾದ ಅರ್ಜುನ್ ರಣತುಂಗಾ ಪಂದ್ಯಾವಳಿಯಲ್ಲಿ ಬ್ಯಾಟ್‌ನೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿ ಸರಣಿಯ ಆಟಗಾರ ಪ್ರಶಸ್ತಿಗೆ ಭಾಜನರಾದರು.

Published On - 8:41 pm, Fri, 26 August 22

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ