IND vs SA: ಆಫ್ರಿಕಾ ಪ್ರವಾಸದ ತಯಾರಿಯಲ್ಲಿರುವ ಟೀಂ ಇಂಡಿಯಾಗೆ ಆಘಾತ! ಸ್ಟಾರ್ ಬ್ಯಾಟರ್ ಸರಣಿಗೆ ಅಲಭ್ಯ?

IND vs SA: ಆಫ್ರಿಕಾ ಪ್ರವಾಸದ ತಯಾರಿಯಲ್ಲಿರುವ ಟೀಂ ಇಂಡಿಯಾಗೆ ಆಘಾತ! ಸ್ಟಾರ್ ಬ್ಯಾಟರ್ ಸರಣಿಗೆ ಅಲಭ್ಯ?
ಸೂರ್ಯಕುಮಾರ್ ಯಾದವ್

IND vs SA: ಸೂರ್ಯಕುಮಾರ್ ಅವರು ಐಪಿಎಲ್‌ನಲ್ಲಿ ಆಡುವುದರಿಂದ ವಿಶ್ರಾಂತಿ ಪಡೆದಿರುವುದರಿಂದ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಲಭ್ಯವಾಗುವ ಸಾಧ್ಯತೆ ಕಡಿಮೆಯಾಗಿದೆ.

TV9kannada Web Team

| Edited By: pruthvi Shankar

May 11, 2022 | 5:31 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಇನ್ನೇನು ಪ್ಲೇ ಆಫ್ ಹಂತದತ್ತ ತಲುಪುತ್ತಿದೆ. ಎಲ್ಲಾ ತಂಡಗಳ ಹಣೆ ಬರಹ ದಿನೆದಿನೆ ಹೊರಬರುತ್ತಿದೆ. ಈ ಸೀಸನ್​ನ ಫೈನಲ್ ಮುಗಿದ ಬಳಿಕ ಟೀಂ ಇಂಡಿಯಾ (Team India) ತನ್ನ ಮೊದಲ ಸರಣಿಯನ್ನು ದಕ್ಷಿಣ ಆಫ್ರಿಕಾ ವಿರುದ್ಧ (IND vs SA) ಆಡಲಿದ್ದು, ಐದು ಟಿ20 ಪಂದ್ಯಗಳ ಸರಣಿ ಇದಾಗಿದೆ. ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕೆಲವು ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅವಕಾಶ ಪಡೆಯಬಹುದು. ಬಿಸಿಸಿಐ (BCCI) ಆಯ್ಕೆ ಸಮಿತಿಯ ಸದಸ್ಯರು ಐಪಿಎಲ್‌ನಲ್ಲಿ ಆಡುವ ಆಟಗಾರರ ಪ್ರದರ್ಶನದ ಮೇಲೆ ನಿಗಾ ಇಡುತ್ತಿದ್ದಾರೆ. ಕೆಟ್ಟ ಫಾರ್ಮ್‌ನಲ್ಲಿರುವ ಕೆಲವು ಹಿರಿಯ ಆಟಗಾರರಿಗೆ ಈ ಪ್ರವಾಸದಿಂದ ಕೋಕ್ ಸಿಗಬಹುದು. ಇದರೊಂದಿಗೆ ಕೆಲವು ಪ್ರಮುಖ ಆಟಗಾರರ ಇಂಜುರಿ ಸಮಸ್ಯೆ ಟೀಮ್ ಇಂಡಿಯಾದ ಸಂಕಟವನ್ನು ಹೆಚ್ಚಿಸುತ್ತಿದೆ. ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಅವರು ಗಾಯದ ಸಮಸ್ಯೆಯಿಂದಾಗಿ ಐಪಿಎಲ್ ಆವೃತ್ತಿಯ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಸೂರ್ಯಕುಮಾರ್ ಯಾದವ್ ಐಪಿಎಲ್‌ನ ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು.

ಈ ಸಾಧ್ಯತೆ ಮಸುಕಾಗಿದೆ ಸೂರ್ಯಕುಮಾರ್ ಅವರು ಐಪಿಎಲ್‌ನಲ್ಲಿ ಆಡುವುದರಿಂದ ವಿಶ್ರಾಂತಿ ಪಡೆದಿರುವುದರಿಂದ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಲಭ್ಯವಾಗುವ ಸಾಧ್ಯತೆ ಕಡಿಮೆಯಾಗಿದೆ. ಸೂರ್ಯಕುಮಾರ್ ಯಾದವ್ ದಕ್ಷಿಣ ಆಫ್ರಿಕಾ ವಿರುದ್ಧದ ಸಂಪೂರ್ಣ ಸರಣಿಯನ್ನು ಕಳೆದುಕೊಳ್ಳಬಹುದು.

ಗಾಯ ಸ್ವಲ್ಪ ಗಂಭೀರವಾಗಿದೆ ಸೂರ್ಯಕುಮಾರ್ ಯಾದವ್ ಅವರ ಗಾಯ ಸ್ವಲ್ಪ ಗಂಭೀರವಾಗಿದೆ. ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಸಹ ಕಳೆದುಕೊಳ್ಳಬಹುದು. ಅವರು ಸಂಪೂರ್ಣ ಫಿಟ್ ಆಗದಿದ್ದರೆ, ಅವರನ್ನು ಆಯ್ಕೆ ಮಾಡಲು ನಾವು ಆತುರಪಡುವುದಿಲ್ಲ ಎಂದು ಇನ್ಸೈಡ್ ಸ್ಪೋರ್ಟ್ಸ್‌ಗೆ ಆಯ್ಕೆ ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ. ಸೋಮವಾರ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕೂ ಮೊದಲು ಸೂರ್ಯಕುಮಾರ್ ಯಾದವ್ ಗಾಯಗೊಂಡಿರುವ ಬಗ್ಗೆ ಮಾಹಿತಿ ನೀಡಲಾಯಿತು. ಜೊತೆಗೆ ಸೂರ್ಯ ಐಪಿಎಲ್ 2022 ರ ಉಳಿದ ಪಂದ್ಯಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ಮುಂಬೈ ಇಂಡಿಯನ್ಸ್ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ

ಸೂರ್ಯಕುಮಾರ್ ಪ್ರಸ್ತುತ ಮುಂಬೈ ಇಂಡಿಯನ್ಸ್ ವೈದ್ಯಕೀಯ ತಂಡದ ಆರೈಕೆಯಲ್ಲಿದ್ದಾರೆ. ಅವರು ಪುನರ್ವಸತಿಗಾಗಿ ಮುಂದಿನ ವಾರ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (NCA) ಹೋಗಲಿದ್ದಾರೆ. ಒಮ್ಮೆ ಅವರು ಎನ್‌ಸಿಎಗೆ ಬಂದರೆ, ಅವರ ಗಾಯದ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ತಿಳಿಯಲಿದೆ. ಆಗ ಮಾತ್ರ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಅವರು ಮುಂದಿನ ವಾರ ಎನ್‌ಸಿಎಗೆ ಬರುಲಿದ್ದಾರೆ. ಸೂರ್ಯ ಟಿ 20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾದ ಪ್ರಮುಖ ಆಟಗಾರರಾಗಿರುವುದರಿಂದ ಅವರ ವಿಚಾರದಲ್ಲಿ ನಾವು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎಂದು ಆಯ್ಕೆ ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada