Aiden Markram: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಡೆನ್ ಮಾರ್ಕ್ರಾಮ್

| Updated By: ಝಾಹಿರ್ ಯೂಸುಫ್

Updated on: Jul 23, 2023 | 7:26 PM

Aiden Markram: ದಕ್ಷಿಣ ಆಫ್ರಿಕಾದಲ್ಲಿ ಸ್ಟಾರ್ ಆಟಗಾರನಾಗಿ ಗುರುತಿಸಿಕೊಂಡಿರುವ ಮಾರ್ಕ್ರಾಮ್, ಐಪಿಎಲ್ 2023 ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ.

Aiden Markram: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಡೆನ್ ಮಾರ್ಕ್ರಾಮ್
Aiden Markram-Nicole Markram
Follow us on

ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟಿಗ, ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಐಡನ್ ಮಾರ್ಕ್ರಾಮ್ (Aiden Markram) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶನಿವಾರ ನಡೆದ ಸರಳ ಸಮಾರಂಭದಲ್ಲಿ ತಮ್ಮ ದೀರ್ಘಕಾಲದ ಗೆಳತಿ ನಿಕೋಲ್ ಅವರನ್ನು ಮಾರ್ಕ್ರಾಮ್ ವರಿಸಿದ್ದಾರೆ. ಈ ಶುಭ ಘಳಿಗೆಯ ಫೋಟೋವನ್ನು ನಿಕೋಲ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಮೂಲಕ ಐಡೆನ್ ಜೊತೆ ಹೊಸ ಜೀವನ ಆರಂಭಿಸಿರುವುದಾಗಿ ತಿಳಿಸಿದ್ದಾರೆ.

ಮಾರ್ಕ್ರಾಮ್ ಮತ್ತು ನಿಕೋಲ್ ಕಳೆದ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಲ್ಲದೆ ಹಿರಿಯರ ಆಶೀರ್ವಾದ ಪಡೆದು ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ದಂಪತಿಗಳಾಗಿ ಹೊಸ ಜೀವನ ಆರಂಭಿಸಲು ಮುಂದಾಗಿದ್ದಾರೆ. ಇನ್ನು ನವದಂಪತಿಗಳಿಗೆ ಹಲವಾರು ಕ್ರಿಕೆಟಿಗರು, ಅಭಿಮಾನಿಗಳು ಮತ್ತು ನೆಟ್ಟಿಗರು ಶುಭಾಶಯಗಳನ್ನು ಕೋರಿದ್ದು, ಹೊಸ ಇನಿಂಗ್ಸ್ ಶುಭಕರವಾಗಿರಲಿ ಎಂದು ಹಾರೈಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಸ್ಟಾರ್ ಆಟಗಾರನಾಗಿ ಗುರುತಿಸಿಕೊಂಡಿರುವ ಮಾರ್ಕ್ರಾಮ್, ಐಪಿಎಲ್ 2023 ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಅವರ ನಾಯಕತ್ವದಲ್ಲಿ ಎಸ್​ಆರ್​ಹೆಚ್​ ತಂಡವು ಹೆಚ್ಚು ಪ್ರಭಾವಿತವಾಗಿರಲಿಲ್ಲ. ಅಲ್ಲದೆ ಈ ಬಾರಿಯ ಟೂರ್ನಿಯ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನಗಳಿಸಿತ್ತು.
ಆದರೆ ದಕ್ಷಿಣ ಆಫ್ರಿಕಾ ಟಿ20 ಲೀಗ್ ನಲ್ಲಿ ಸನ್ ರೈಸರ್ಸ್ ಕೇಪ್ ಟೌನ್ ತಂಡದ ನಾಯಕರಾಗಿರುವ ಮಾರ್ಕ್ರಾಮ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.

ಐಡನ್ ಮಾರ್ಕ್ರಾಮ್ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಕಿ ಅಂಶಗಳು:

ಸೌತ್ ಆಫ್ರಿಕಾ ಪರ 35 ಟೆಸ್ಟ್ ಪಂದ್ಯಗಳನ್ನಾಡಿರುವ ಮಾರ್ಕ್ರಾಮ್ ಒಟ್ಟು 2285 ರನ್ ಕಲೆಹಾಕಿದ್ದಾರೆ. ಹಾಗೆಯೇ 50 ಏಕದಿನ ಪಂದ್ಯಗಳಿಂದ 1440 ರನ್ ಪೇರಿಸಿದ್ದಾರೆ. ಇದಲ್ಲದೆ 34 ಟಿ20 ಪಂದ್ಯಗಳಿಂದ 966 ರನ್ ಕಲೆಹಾಕಿದ್ದಾರೆ.

ಇದನ್ನೂ ಓದಿ: IPL 2024: RCB ತಂಡಕ್ಕೆ ಮೇಜರ್ ಸರ್ಜರಿ: ಕೋಚ್​ಗೆ ಗೇಟ್​ ಪಾಸ್..?

ಹಾಗೆಯೇ ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಪರ ಒಟ್ಟು 33 ಪಂದ್ಯಗಳನ್ನಾಡಿರುವ ಐಡೆನ್ ಮಾರ್ಕ್ರಾಮ್ 775 ರನ್​ಗಳಿಸಿದ್ದಾರೆ. ಸದ್ಯ ಎಸ್​ಆರ್​ಹೆಚ್ ತಂಡದ ನಾಯಕರಾಗಿರುವ ಮಾರ್ಕ್ರಾಮ್ ಅವರನ್ನು ಮುಂದಿನ ಸೀಸನ್​ನಲ್ಲೂ ಕಪ್ತಾನನಾಗಿ ಮುಂದುವರೆಸಲಿದ್ದಾರಾ ಕಾದು ನೋಡಬೇಕಿದೆ.