CPL 2021: ವಾವ್ಹ್ ವಾಟ್ ಎ ಕ್ಯಾಚ್: ಅಕಿಲ್ ಹಿಡಿದ ಸೂಪರ್​ಮ್ಯಾನ್ ಕ್ಯಾಚ್ ವೀಡಿಯೋ ವೈರಲ್

Akeal Hosein catch: ಈ ಅದ್ಭುತ ಕ್ಯಾಚ್​ನಿಂದಾಗಿ ಅಮೆಜಾನ್ ವಾರಿಯರ್ಸ್ ತಂಡ ದಿಢೀರಣೆ ಕುಸಿತಕ್ಕೊಳಗಾಯಿತು. ಸುಲಭವಾಗಿ ಗೆಲ್ಲಬೇಕಿದ್ದ ಪಂದ್ಯದಲ್ಲಿ 138 ರನ್​ ಬಾರಿಸಿ ಅಮೆಜಾನ್ ಟೈ ಮಾಡಿಕೊಂಡಿತು.

CPL 2021: ವಾವ್ಹ್ ವಾಟ್ ಎ ಕ್ಯಾಚ್: ಅಕಿಲ್ ಹಿಡಿದ ಸೂಪರ್​ಮ್ಯಾನ್ ಕ್ಯಾಚ್ ವೀಡಿಯೋ ವೈರಲ್
Akeal Hosein catch
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 02, 2021 | 4:21 PM

T20 ಕ್ರಿಕೆಟ್​ನಲ್ಲಿ ಅದ್ಭುತಗಳು..ಅತ್ಯಾದ್ಭುತಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಇದೀಗ ಕೆರಿಬಿಯನ್ ಪ್ರೀಮಿಯರ್ ಲೀಗ್ (CPL 2021) ಸರದಿ. ಸಿಪಿಎಲ್​ನ 8ನೇ ಸೀಸನ್ ಆರಂಭದಿಂದಲೂ ಒಂದಲ್ಲ ಒಂದು ಕಾರಣದಿಂದ ಕ್ರಿಕೆಟ್ ಪ್ರೇಮಿಗಳನ್ನು ಸೆಳೆಯುತ್ತಿದೆ. ಈ ಹಿಂದೆ ಆ್ಯಂಡ್ರೆ ರಸೆಲ್ (Andre Russel) ಬಿರುಗಾಳಿ ಬ್ಯಾಟಿಂಗ್ ಮೂಲಕ ಸದ್ದು ಮಾಡಿದ್ದ ಸಿಪಿಎಲ್-8, ಈ ಬಾರಿ ಅಕಿಲ್ ಹುಸೈನ್ (Akeal Hosein) ಅವರ ಅತ್ಯಾದ್ಭುತ ಫೀಲ್ಡಿಂಗ್ ಎಲ್ಲರ ಗಮನ ಸೆಳೆದಿದೆ. CPLನ 11 ನೇ ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ (Guyana Amazon Warriors) ಹಾಗೂ ಟ್ರಿನ್​ಬಾಗೊ ನೈಟ್​ ರೈಡರ್ಸ್ (Trinbago Knight Riders) ​ ತಂಡಗಳು ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ಕೀರನ್ ಪೊಲಾರ್ಡ್ ನಾಯಕತ್ವದ ನೈಟ್​ ರೈಡರ್ಸ್ ತಂಡವು ನಿಗದಿತ 20 ಓವರ್​ನಲ್ಲಿ 9 ವಿಕೆಟ್​ ಕಳೆದುಕೊಂಡು 138 ರನ್​ ಕಲೆಹಾಕಿತು.

ಈ ಸಧಾರಣ ಗುರಿ ಬೆನ್ನತ್ತಿದ ಅಮೆಜಾನ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಟಿಕೆಆರ್​ ತಂಡ ಯಶಸ್ವಿಯಾಗಿತ್ತು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಚೇತರಿಸಿಕೊಂಡ ಅಮೆಜಾನ್ ಸುಲಭ ಜಯ ಸಾಧಿಸಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ರವಿ ರಾಂಪಾಲ್​ ಎಸೆದ 18ನೇ ಓವರ್​ನಲ್ಲಿ ಅಮೆಜಾನ್ ವಾರಿಯರ್ಸ್​ ನಾಯಕ ನಿಕೋಲಸ್ ಪೂರನ್ ವಿಕೆಟ್ ಬೀಳುವುದರೊಂದಿಗೆ ಪಂದ್ಯವು ರೋಚಕತೆಗೆ ತಿರುಗಿತು.

ರಾಂಪಾಲ್ ಎಸೆದ ಆಫ್ ಸ್ಟಂಪ್ ಹೊರಗಿನ ಎಸೆತವನ್ನು ಪೂರನ್ ಕವರ್‌ನತ್ತ ಸಿಕ್ಸರ್​ ಬಾರಿಸಲು ಯತ್ನಿಸಿದ್ದರು. ಇನ್ನೇನು ಚೆಂಡು ಗಾಳಿಯಲ್ಲಿ ಬೌಂಡರಿ ಗೆರೆ ದಾಟಲಿದೆ ಅನ್ನುವಷ್ಟರಲ್ಲಿ ಅಲ್ಲೇ ಫೀಲ್ಡಿಂಗ್​ನಲ್ಲಿ ಅಕಿಲ್ ಹುಸೈನ್ ಅದ್ಭುತವಾಗಿ ಜಿಗಿದು ಚೆಂಡನ್ನು ಕೈಯಲ್ಲಿ ಬಂಧಿಸಿದರು. ಅಷ್ಟೇ ಅಲ್ಲದೆ ಕ್ಯಾಚ್ ಹಿಡಿದ ಬಳಿಕ, ದೇಹವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದ ಅಕಿಲ್ ನಿಕೋಲಸ್​ ಪೂರನ್​ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು.

ಈ ಅದ್ಭುತ ಕ್ಯಾಚ್​ನಿಂದಾಗಿ ಅಮೆಜಾನ್ ವಾರಿಯರ್ಸ್ ತಂಡ ದಿಢೀರಣೆ ಕುಸಿತಕ್ಕೊಳಗಾಯಿತು. ಸುಲಭವಾಗಿ ಗೆಲ್ಲಬೇಕಿದ್ದ ಪಂದ್ಯದಲ್ಲಿ 138 ರನ್​ ಬಾರಿಸಿ ಅಮೆಜಾನ್ ಟೈ ಮಾಡಿಕೊಂಡಿತು. ಇದಾಗ್ಯೂ ಸೂಪರ್​ ಓವರ್​ನಲ್ಲಿ ಟಿನ್​ಬಾಗೊ ನೈಟ್ ರೈಡರ್ಸ್​ ನೀಡಿದ 6 ರನ್​ಗಳ ಗುರಿಯನ್ನು ಬೆನ್ನತ್ತುವ ಮೂಲಕ ಅಮೆಜಾನ್ ವಾರಿಯರ್ಸ್ ಈ ಪಂದ್ಯವನ್ನು ಗೆದ್ದುಕೊಂಡಿತು. ಇದೀಗ ಅಕಿಲ್ ಹುಸೈನ್ ಹಿಡಿದ ಅದ್ಭುತ ಕ್ಯಾಚ್ ಪ್ರಸ್ತುತ ಕೆರಿಬಿಯನ್ ಲೀಗ್​ನ ಬೆಸ್ಟ್ ಕ್ಯಾಚ್ ಎನಿಸಿಕೊಂಡಿದೆ. ಅಲ್ಲದೆ ಸಿಪಿಎಲ್​ನ ಅತ್ಯುತ್ತಮ ಕ್ಯಾಚ್​ಗಳಲ್ಲಿ ಇದು ಕೂಡ ಒಂದು ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ರಾಹುಲ್ ದ್ರಾವಿಡ್ ಗರಡಿ ಹುಡುಗನ ಆರ್ಭಟ: ಎದುರಾಳಿ ತಂಡ 69 ರನ್​ಗೆ ಆಲೌಟ್

ಇದನ್ನೂ ಓದಿ: Shane Warne: ಸಾರ್ವಕಾಲಿಕ ಟಾಪ್ 10 ವೇಗಿಗಳನ್ನು ಹೆಸರಿಸಿದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್​

ಇದನ್ನೂ ಓದಿ: Crime News: ಬಾಲಕನನ್ನು ಮದುವೆಯಾಗಿ ಜೈಲು ಸೇರಿದ ಯುವತಿ

(Akeal Hosein takes brilliant catch in cpl 2021)

ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’