Akshay Karnewar: ಎರಡೂ ಕೈನಲ್ಲಿ ಬೌಲಿಂಗ್ ಮಾಡಿ ಬ್ಯಾಟರ್ಗಳನ್ನು ಕಾಡುತ್ತಿರುವ ಬೌಲರ್
Syed Mushtaq Ali Trophy 2021: ಈ ಹಿಂದೆ ಮಣಿಪುರ ವಿರುದ್ಧದ ಪಂದ್ಯದಲ್ಲಿ ಅಕ್ಷಯ್ ಕರ್ನೆವಾರ್ ವಿಶ್ವದಾಖಲೆ ನಿರ್ಮಿಸಿದ್ದರು. 4 ಓವರ್‌ಗಳಲ್ಲಿ ಒಂದೇ ಒಂದು ರನ್ ನೀಡದೇ 2 ವಿಕೆಟ್ ಪಡೆದು ವರ್ಲ್ಡ್ ರೆಕಾರ್ಡ್ ಬರೆದಿದ್ದರು.
ಸೈಯದ್ ಮುಷ್ತಾಕ್ ಟ್ರೋಫಿಯಲ್ಲಿ ಅಕ್ಷಯ್ ಕರ್ನೆವಾರ್ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಟೂರ್ನಿಯುದ್ದಕ್ಕೂ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿರುವ ಅಕ್ಷಯ್ ಇದೀಗ ತಮ್ಮ ವಿಭಿನ್ನ ಬೌಲಿಂಗ್ನಿಂದಲೇ ಸುದ್ದಿಯಾಗುತ್ತಿದ್ದಾರೆ. ರಾಜಸ್ಥಾನ್ ವಿರುದ್ದ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 4 ಓವರ್ ಎಸೆದಿದ್ದ ಅಕ್ಷಯ್ ನೀಡಿದ್ದು ಕೇವಲ 7 ರನ್ ಮಾತ್ರ. ಜೊತೆಗೆ 1 ವಿಕೆಟ್ ಕೂಡ ಕಬಳಿಸಿದ್ದರು. ಈ ಭರ್ಜರಿ ಬೌಲಿಂಗ್ ಪ್ರದರ್ಶನದಿಂದಾಗಿ ಇದೀಗ ವಿದರ್ಭ ತಂಡವು ಸೆಮಿಫೈನಲ್ಗೆ ಲಗ್ಗೆಯಿಟ್ಟಿದೆ. 29 ವರ್ಷದ ಅಕ್ಷಯ್ ಕರ್ನೆವಾರ್ ಮುಷ್ತಾಕ್ ಅಲಿ ಟ್ರೋಫಿಯ ಪ್ರಸಕ್ತ ಸೀಸನ್ನಲ್ಲಿ 7 ಪಂದ್ಯಗಳಲ್ಲಿ 28 ಓವರ್ ಬೌಲಿಂಗ್ ಮಾಡಿದ್ದಾರೆ. ಅಂದರೆ, ಪ್ರತಿ ಪಂದ್ಯದಲ್ಲೂ 4 ಓವರ್ ಬೌಲ್ ಮಾಡುವ ಅವಕಾಶ ಸಿಕ್ಕಿದೆ. ಈ ವೇಳೆ ಅವರು ನೀಡಿದ್ದು ಕೇವಲ 100 ರನ್ ಮಾತ್ರ. ಅಂದರೆ ಅವರ ಪ್ರತಿ ಓವರ್ನಲ್ಲಿ ನೀಡಿದ ರನ್ ಕೇವಲ 3.57. ಟಿ20 ಕ್ರಿಕೆಟ್‌ನಲ್ಲಿ ಇದು ಅತ್ಯುತ್ತಮ ದಾಖಲೆಯಾಗಿದೆ. ಅಷ್ಟೇ ಅಲ್ಲದೆ 5 ರನ್‌ಗಳಿಗೆ 4 ವಿಕೆಟ್ ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಇನ್ನು 7 ಪಂದ್ಯಗಳಿಂದ 13 ವಿಕೆಟ್ ಉರುಳಿಸಿ ಟಾಪ್ ವಿಕೆಟ್ ಟೇಕರ್ ಪಟ್ಟಿಯಲ್ಲಿದ್ದಾರೆ. ಜೊತೆಗೆ ಈ ಬಾರಿ ಹ್ಯಾಟ್ರಿಕ್ ಸಾಧನೆಯನ್ನೂ ಮಾಡಿದ್ದಾರೆ.
ಈ ಹಿಂದೆ ಮಣಿಪುರ ವಿರುದ್ಧದ ಪಂದ್ಯದಲ್ಲಿ ಅಕ್ಷಯ್ ಕರ್ನೆವಾರ್ ವಿಶ್ವದಾಖಲೆ ನಿರ್ಮಿಸಿದ್ದರು. 4 ಓವರ್‌ಗಳಲ್ಲಿ ಒಂದೇ ಒಂದು ರನ್ ನೀಡದೇ 2 ವಿಕೆಟ್ ಪಡೆದು ವರ್ಲ್ಡ್ ರೆಕಾರ್ಡ್ ಬರೆದಿದ್ದರು. ಇವರನ್ನು ಬಿಟ್ಟರೆ ವಿಶ್ವದ ಯಾವ ಬೌಲರ್‌ಗೂ ಈ ಸಾಧನೆ ಮಾಡಿಲ್ಲ. ಇದುವರೆಗೆ ಇಡೀ ಟೂರ್ನಿಯಲ್ಲಿ ಯಾವುದೇ ಪಂದ್ಯದಲ್ಲೂ 30 ಕ್ಕಿಂತ ರನ್ ಬಿಟ್ಟುಕೊಟ್ಟಿಲ್ಲ ಎಂಬುದು ಮತ್ತೊಂದು ವಿಶೇಷ.
ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಅಕ್ಷಯ್ ಕರ್ನೆವಾರ್ ತಮ್ಮ ಬಾಲ್ಯವನ್ನು ಬಡತನದಲ್ಲಿ ಕಳೆದರು. ಅವರ ತಂದೆ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿದ್ದರು. ಅಕ್ಷಯ್ 15 ನೇ ವಯಸ್ಸಿನಲ್ಲಿ ನಾಗ್ಪುರದ ನವಕೇತನ್ ಕ್ರಿಕೆಟ್ ಕ್ಲಬ್ ಪರ ಮೊದಲ ಬಾರಿಗೆ ಆಡಿದ್ದರು. ಈ ಕ್ಲಬ್ ವಿದರ್ಭ ತಂಡಕ್ಕೆ ರಣಜಿ ಕ್ರಿಕೆಟಿಗರನ್ನು ಪರಿಚಯಿಸಿದ ಕೀರ್ತಿ ಹೊಂದಿದೆ. ಅದರಂತೆ 2016 ರಲ್ಲಿ ಅಕ್ಷಯ್ಗೆ ಜಾರ್ಖಂಡ್ ವಿರುದ್ಧ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡುವ ಅವಕಾಶ ಲಭಿಸಿತು. ಇದುವರೆಗೆ 15 ಪಂದ್ಯಗಳನ್ನು ಆಡಿರುವ ಅಕ್ಷಯ್ 23ರ ಸರಾಸರಿಯಲ್ಲಿ 36 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಲ್ಲದೇ ಎಡಗೈ ಬ್ಯಾಟ್ಸ್‌ಮನ್ 35ರ ಸರಾಸರಿಯಲ್ಲಿ 626 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಎರಡು ಅರ್ಧ ಶತಕ ಸೇರಿವೆ. ಇನ್ನು ಲಿಸ್ಟ್ ಎ ಕ್ರಿಕೆಟ್‌ನಲ್ಲಿ 50 ವಿಕೆಟ್ ಪಡೆದಿದ್ದಲ್ಲದೆ, 4 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಇಲ್ಲಿ ಅಕ್ಷಯ್ ಕರ್ನೆವಾರ್ ಅವರ ಪ್ರಮುಖ ಅಸ್ತ್ರವೆಂದರೆ ಬೌಲಿಂಗ್ ಶೈಲಿ. ಎಡಗೈ ಬ್ಯಾಟರ್ಗಳಿಗೆ ಎಡಗೈನಲ್ಲೇ ಬೌಲಿಂಗ್ ಮಾಡುವ ಅಕ್ಷಯ್, ಬಲಗೈ ಬ್ಯಾಟರ್ಗಳಿಗೆ ಬಲಗೈನಲ್ಲಿ ಬೌಲಿಂಗ್ ಮಾಡುತ್ತಾರೆ. ಇನ್ನು ಬ್ಯಾಟರುಗಳ ದೌರ್ಬಲ್ಯವನ್ನು ಗಮನಿಸಿ ಅದರಂತೆ ಎಡಗೈ-ಬಲಗೈ ಬೌಲಿಂಗ್ನಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಈ ಮೂಲಕ ಎದುರಾಳಿ ಬ್ಯಾಟರ್ಗಳನ್ನು ಇಕ್ಕಟಿಗೆ ಸಿಲುಕಿಸುವಲ್ಲಿ ಅಕ್ಷಯ್ ಕರ್ನೆವಾರ್ ಯಶಸ್ವಿಯಾಗುತ್ತಿದ್ದಾರೆ.
Same bowler bowling sla to RHB and offspin to LHB. Nice versatility to have. pic.twitter.com/zxHVaEwVYA
— swarna jeevan (@jeevaniith) November 16, 2021
ಇದನ್ನೂ ಓದಿ: Mahindra Roxor: ಮಹೀಂದ್ರಾ ರೋಕ್ಸರ್: ಜಬರ್ದಸ್ತ್ ಎಸ್ಯುವಿ ಬಿಡುಗಡೆ
ಇದನ್ನೂ ಓದಿ: 18 GB RAM, 1000 GB ಸ್ಟೋರೇಜ್: ದಾಖಲೆ ನಿರ್ಮಿಸಲಿದೆ ಹೊಸ ಸ್ಮಾರ್ಟ್ಫೋನ್
ಇದನ್ನೂ ಓದಿ: IPL 2022: ರಾಜಸ್ಥಾನ್ ರಾಯಲ್ಸ್ ತಂಡದಿಂದ ಪ್ರಮುಖ ಆಟಗಾರ ಔಟ್: ಬೇರೆ ತಂಡಕ್ಕೆ ನಾಯಕ?