IND vs NZ: ಲೈವ್ ಮ್ಯಾಚ್ನಲ್ಲೂ ದೀಪಕ್ ಚಹರ್‌ಗೆ ತನ್ನ ಪ್ರೇಯಸಿಯದ್ದೇ ಚಿಂತೆ! ವಿಡಿಯೋ ಸಾಕ್ಷಿ ಇದೆ ನೋಡಿ
IND vs NZ: ಚಹರ್ ಫೀಲ್ಡಿಂಗ್ ಮಾಡಿದ ನಂತರ ಹಿಂತಿರುಗಿ ತನ್ನ ಸಹೋದರಿಯತ್ತ ತಿರುಗಿ ನೋಡಿ ಅವಳು ಎಲ್ಲಿದ್ದಾಳೆ ಎಂದು ತನ್ನ ಭಾವೀ ಪತ್ನಿಯ ಬಗ್ಗೆ ಕೇಳಿದರು.
ಭಾರತದ ವೇಗದ ಬೌಲರ್ ದೀಪಕ್ ಚಹರ್ ಇತ್ತೀಚಿನ ದಿನಗಳಲ್ಲಿ ಪ್ರೀತಿಯಲ್ಲಿ ಮುಳುಗಿದ್ದಾರೆ. ಐಪಿಎಲ್ ಸಮಯದಲ್ಲಿ, ಅವರು ಪಂದ್ಯದ ನಂತರ ಸ್ಟ್ಯಾಂಡ್‌ನಲ್ಲಿ ತನ್ನ ಗೆಳತಿ ಜಯ ಭಾರದ್ವಾಜ್‌ಗೆ ಎಲ್ಲರ ಮುಂದೆ ಪ್ರೇಮ ನಿವೇದನೆ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಅಂದಿನಿಂದ ಚಹರ್ ಸೋಷಿಯಲ್ ಮೀಡಿಯಾದಲ್ಲಿ ಲವರ್ ಬಾಯ್ ಆಗಿದ್ದರು. ಆ ವೇಳೆ ಅವರ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದೀಗ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ದೀಪಕ್ ಚಹರ್ ತನ್ನ ಗೆಳತಿ ಜಯಾ ಅವರನ್ನು ಹುಡುಕುತ್ತಿರುವುದನ್ನು ಕಾಣಬಹುದು.
ಚಹರ್ ಅವರ ಈ ವೀಡಿಯೊವನ್ನು ಅವರ ಸಹೋದರಿ ಮಾಲ್ತಿ ಚಹರ್ ಹೊರತುಪಡಿಸಿ ಬೇರೆ ಯಾರೂ ಹಂಚಿಕೊಂಡಿಲ್ಲ. ಈ ವೀಡಿಯೊದ ಶೀರ್ಷಿಕೆಯಲ್ಲಿ ಅವರು ತನ್ನ ಸಹೋದರನ ಬಗ್ಗೆ ಹೆಮ್ಮೆಪಡುತ್ತೇನೆ ಮತ್ತು ದೀಪಕ್ ಆಡುವುದನ್ನು ಯಾವಾಗಲೂ ನೋಡಲು ಬಯಸುತ್ತೇನೆ ಎಂದು ಬರೆದಿದ್ದಾರೆ. ಮಾಲ್ತಿ ತನ್ನ ಸಹೋದರನಿಗಾಗಿ ಮುದ್ದಾದ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಲೈವ್ ಮ್ಯಾಚ್‌ನಲ್ಲಿಯೂ ಸಹ ಚಹರ್ ತನ್ನ ಗೆಳತಿಯ ಬಗ್ಗೆ ಚಿಂತೆ ಮಾಡುತ್ತಿರುವುದು ಎಲ್ಲರ ಹುಬ್ಬೆರುವಂತೆ ಮಾಡಿದೆ.
ಪಂದ್ಯದ ಮಧ್ಯದಲ್ಲಿ ಪ್ರೇಯಸಿಯನ್ನು ಹುಡುಕಿದ ಚಹರ್ ದೀಪಕ್ ಬೌಂಡರಿ ಬಳಿ ಫೀಲ್ಡಿಂಗ್‌ಗೆ ಬಂದ ತಕ್ಷಣ ಅವರ ಸಹೋದರಿ ಅವರನ್ನು ಕೂಗಿ ಕರೆದಿದ್ದಾರೆ. ದೀಪಕ್ ತಿರುಗಿ ತಂಗಿಗೆ ಹಾಯ್ ಎಂದಿದ್ದಾರೆ. ಈ ವೇಳೆ ಪಂದ್ಯ ನಡೆಯುತ್ತಿತ್ತು. ಚಹರ್ ಫೀಲ್ಡಿಂಗ್ ಮಾಡಿದ ನಂತರ ಹಿಂತಿರುಗಿ ತನ್ನ ಸಹೋದರಿಯತ್ತ ತಿರುಗಿ ನೋಡಿ ಅವಳು ಎಲ್ಲಿದ್ದಾಳೆ ಎಂದು ತನ್ನ ಭಾವೀ ಪತಿಯ ಬಗ್ಗೆ ಕೇಳಿದರು. ಇದಕ್ಕೆ ಉತ್ತರಿಸಿದ ಅವರ ಸಹೋದರೆ ಮಾಲ್ತಿ, ಅವರು ಸ್ಟ್ಯಾಂಡ್‌ನಲ್ಲಿ ಮಹಡಿಯ ಮೇಲಿದ್ದಾರೆ ಎಂದು ಉತ್ತರಿಸಿದರು. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಕೆಲವು ಅಭಿಮಾನಿಗಳು ಚಹರ್ ಪಂದ್ಯದಲ್ಲೂ ಗೆಳತಿಯರ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಅವರ ಕಾಲೆಳೆದರೆ, ಇನ್ನೂ ಕೆಲವರು ಅವರ ಪ್ರೀತಿಯನ್ನು ಕೊಂಡಾಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಸರಣಿ ದೀಪಕ್ ಚಹರ್‌ಗೆ ಮಹತ್ವದ್ದಾಗಿದೆ ಬುಧವಾರದ ಪಂದ್ಯ ದೀಪಕ್ ಚಹರ್‌ಗೆ ಉತ್ತಮವಾಗಿರಲಿಲ್ಲ. ಅವರು ತಂಡದ ಅತ್ಯಂತ ದುಬಾರಿ ಬೌಲರ್ ಎಂದು ಸಾಬೀತುಪಡಿಸಿದರು. ಅವರು ತಮ್ಮ ನಾಲ್ಕು ಓವರ್‌ಗಳಲ್ಲಿ 42 ರನ್‌ಗಳನ್ನು ನೀಡಿದರು. ಆದರೆ, 70 ರನ್ ಗಳಿಸಿದ್ದ ಮಾರ್ಟಿನ್ ಗಪ್ಟಿಲ್ ಅವರ ಮಹತ್ವದ ವಿಕೆಟ್ ಪಡೆದರು. ಟಿ20 ವಿಶ್ವಕಪ್‌ಗೆ ದೀಪಕ್ ತಂಡದಲ್ಲಿ ಆಯ್ಕೆಯಾಗಿರಲಿಲ್ಲ. ಅವರನ್ನು ಮೀಸಲು ಆಟಗಾರನಾಗಿ ತಂಡದೊಂದಿಗೆ ಯುಎಇಗೆ ಕಳುಹಿಸಲಾಗಿತ್ತು. ನ್ಯೂಜಿಲೆಂಡ್ ವಿರುದ್ಧದ ಈ ಟಿ20 ಸರಣಿ ತನ್ನನ್ನು ತಾನು ಸಾಬೀತುಪಡಿಸಲು ಚಹರ್‌ಗೆ ಬಹಳ ಮುಖ್ಯವಾಗಿದೆ. ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರಂತಹ ಹೆಸರುಗಳಿಲ್ಲ, ಅವರ ಅನುಪಸ್ಥಿತಿಯಲ್ಲಿ ದೀಪಕ್ ತಮ್ಮ ಸಾಮರ್ಥ್ಯವನ್ನು ತೋರಿಸಲು ಅವಕಾಶವಿದೆ.