IND vs NZ 2021: ರಾಂಚಿ ಪಿಚ್ನಲ್ಲಿ ಗೆಲ್ಲೋರ್ಯಾರು? ಈ ಹಿಂದಿನ ಅಂಕಿ ಅಂಶಗಳು ಏನು ಹೇಳುತ್ತೆ?
India vs New Zealand 2021: ಆ ಬಳಿಕ ಡೆಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಮಳೆ ನಿಂತ ಬಳಿಕ ಟೀಮ್ ಇಂಡಿಯಾವನ್ನು ಬ್ಯಾಟಿಂಗ್ಗೆ ಇಳಿಸಲಾಗಿತ್ತು. ಅದರಂತೆ ಪಂದ್ಯ ಗೆಲ್ಲಲು ಭಾರತ 6 ಓವರ್‌ಗಳಲ್ಲಿ 48 ರನ್‌ಗಳ ಗುರಿ ಪಡೆದಿತ್ತು.
ಜೈಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿದ ಟೀಮ್ ಇಂಡಿಯಾ ಇದೀಗ 2ನೇ ಪಂದ್ಯಕ್ಕಾಗಿ ಸಜ್ಜಾಗಿದೆ. ಅದರಂತೆ ರಾಂಚಿಯ JSCA ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಸರಣಿ ವಶವಾಗಲಿದೆ. ಈಗಾಗಲೇ 1-0 ಮುನ್ನಡೆ ಹೊಂದಿರುವ ಭಾರತ 2ನೇ ಪಂದ್ಯದಲ್ಲೂ ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ಅತ್ತ ನ್ಯೂಜಿಲೆಂಡ್ಗೆ ಸರಣಿ ಉಳಿಸಿಕೊಳ್ಳಬೇಕಿದ್ದರೆ 2ನೇ ಪಂದ್ಯವನ್ನು ಗೆಲ್ಲಲೇಬೇಕು. ಹೀಗಾಗಿ ರಾಂಚಿಯ ಮೈದಾನದಲ್ಲಿ ಉಭಯ ತಂಡಗಳಿಂದ ರೋಚಕ ಹೋರಾಟ ನಿರೀಕ್ಷಿಸಬಹುದು.
ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂ ಪಿಚ್ ಈ ಹಿಂದಿನಿಂದಲೂ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿ ಗುರುತಿಸಿಕೊಂಡಿದೆ. ಇದಾಗ್ಯೂ ಈ ಮೈದಾನದಲ್ಲಿ ಹೆಚ್ಚಿನ ಪಂದ್ಯಗಳು ನಡೆಯುತ್ತಿಲ್ಲ ಎಂಬುದು ವಿಶೇಷ. ಅಂದರೆ ರಾಂಚಿ ಮೈದಾನವು ಇದುವರೆಗೆ ಕೇವಲ 2 ಟಿ20 ಪಂದ್ಯಗಳಿಗೆ ಮಾತ್ರ ಆತಿಥ್ಯವಹಿಸಿದೆ. ಈ ಎರಡೂ ಪಂದ್ಯಗಳನ್ನು ಟೀಮ್ ಇಂಡಿಯಾ ಗೆದ್ದಿರುವುದು ವಿಶೇಷ.
ಪಿಚ್ ಇತಿಹಾಸ ಮತ್ತು ಅಂಕಿ ಅಂಶಗಳು:
ಈ ಪಿಚ್ನಲ್ಲಿ ಎರಡು ಪಂದ್ಯಗಳು ನಡೆದಿವೆ. ಅದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಒಂದು ಪಂದ್ಯ ಗೆದ್ದರೆ, ಮತ್ತೊಂದು ಪಂದ್ಯವನ್ನು ಚೇಸಿಂಗ್ ಮಾಡಿ ಗೆಲ್ಲಲಾಗಿತ್ತು. ಇನ್ನು ಈ ಪಿಚ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರನೆಂದರೆ ಶಿಖರ್ ಧವನ್. ಟೀಮ್ ಇಂಡಿಯಾ ಆರಂಭಿಕ ಆಟಗಾರ ಧವನ್ ಶ್ರೀಲಂಕಾ ವಿರುದ್ದ 2016 ರಲ್ಲಿ ಈ ಮೈದಾನದಲ್ಲಿ 51 ರನ್ ಬಾರಿಸಿದ್ದು ಗರಿಷ್ಠ ವೈಯುಕ್ತಿಕ ಸ್ಕೋರ್. ಇನ್ನು ಬೌಲಿಂಗ್ನಲ್ಲಿ 2016 ರಲ್ಲಿ ಶ್ರೀಲಂಕಾ ವಿರುದ್ದ ರವಿಚಂದ್ರನ್ ಅಶ್ವಿನ್ 14 ರನ್ಗೆ 3 ವಿಕೆಟ್ ಪಡೆದಿರುವುದು ಅತ್ಯುತ್ತಮ ಬೌಲಿಂಗ್ ಆಗಿದೆ. JSCA ಇಂಟರ್ನ್ಯಾಷನಲ್ ಸ್ಟೇಡಿಯಂನ ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 157. ಹೀಗಾಗಿ ಮೊದಲ ಬ್ಯಾಟ್ ಮಾಡಿದ ತಂಡದಿಂದ ದೊಡ್ಡ ಮೊತ್ತವನ್ನು ನಿರೀಕ್ಷಿಸಬಹುದು.
ಇನ್ನು ರಾಂಚಿಯಲ್ಲಿ ಕೊನೆಯ ಟಿ20 ಪಂದ್ಯ ನಡೆದಿದ್ದು 2017ರಲ್ಲಿ. ಆಸ್ಟ್ರೇಲಿಯಾ ವಿರುದ್ದ ನಡೆದ ಆ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 18.4 ಓವರ್‌ಗಳಲ್ಲಿ 118/8 ಸ್ಕೋರ್ ಗಳಿಸಿದ್ದ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು.
ಆ ಬಳಿಕ ಡೆಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಮಳೆ ನಿಂತ ಬಳಿಕ ಟೀಮ್ ಇಂಡಿಯಾವನ್ನು ಬ್ಯಾಟಿಂಗ್ಗೆ ಇಳಿಸಲಾಗಿತ್ತು. ಅದರಂತೆ ಪಂದ್ಯ ಗೆಲ್ಲಲು ಭಾರತ 6 ಓವರ್‌ಗಳಲ್ಲಿ 48 ರನ್‌ಗಳ ಗುರಿ ಪಡೆದಿತ್ತು. ರೋಹಿತ್ ಶರ್ಮಾ 11 ರನ್ ಬಾರಿಸಿದ ಔಟಾದರೆ, ಶಿಖರ್ ಧವನ್ 12 ಎಸೆತಗಳಲ್ಲಿ 15 ಹಾಗೂ ವಿರಾಟ್ ಕೊಹ್ಲಿ ಅವರ 14 ಎಸೆತಗಳಲ್ಲಿ ಅಜೇಯ 22 ರನ್ ಬಾರಿಸಿ 5.3 ಓವರ್‌ಗಳಲ್ಲಿ 49 ರನ್‌ಗಳ ಗುರಿಮುಟ್ಟಿತು. ಅ ಬಳಿಕ ಈ ಮೈದಾನದಲ್ಲಿ ಟಿ20 ಪಂದ್ಯ ನಡೆದಿಲ್ಲ. ಇದೀಗ 3ನೇ ಬಾರಿ ರಾಂಚಿ ಮೈದಾನದಲ್ಲಿ ಟಿ20 ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲೂ ಗೆಲ್ಲುವ ಮೂಲಕ ರಾಂಚಿಯಲ್ಲಿ ಟೀಮ್ ಇಂಡಿಯಾ ಹ್ಯಾಟ್ರಿಕ್ ಜಯ ಸಾಧಿಸಲಿದೆಯಾ ಕಾದು ನೋಡಬೇಕಿದೆ.
ಇದನ್ನೂ ಓದಿ: Mahindra Roxor: ಮಹೀಂದ್ರಾ ರೋಕ್ಸರ್: ಜಬರ್ದಸ್ತ್ ಎಸ್ಯುವಿ ಬಿಡುಗಡೆ
ಇದನ್ನೂ ಓದಿ: 18 GB RAM, 1000 GB ಸ್ಟೋರೇಜ್: ದಾಖಲೆ ನಿರ್ಮಿಸಲಿದೆ ಹೊಸ ಸ್ಮಾರ್ಟ್ಫೋನ್
ಇದನ್ನೂ ಓದಿ: IPL 2022: ರಾಜಸ್ಥಾನ್ ರಾಯಲ್ಸ್ ತಂಡದಿಂದ ಪ್ರಮುಖ ಆಟಗಾರ ಔಟ್: ಬೇರೆ ತಂಡಕ್ಕೆ ನಾಯಕ?