IND vs AUS: ಏನಿದು ಬಾಕ್ಸಿಂಗ್ ಡೇ ಟೆಸ್ಟ್?

Boxing Day Test: ಡಿಸೆಂಬರ್ 26 ರಿಂದ ಶುರುವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಈ ಬಾರಿ 6 ತಂಡಗಳು ಕಣಕ್ಕಿಳಿಯಲಿವೆ. ಮೆಲ್ಬೋರ್ನ್​​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾದರೆ, ಸೆಂಚುರಿಯನ್​ನಲ್ಲಿ ಸೌತ್ ಆಫ್ರಿಕಾ ಮತ್ತು ಪಾಕಿಸ್ತಾನ್ ತಂಡಗಳು ಎದುರು ಬದುರುಗೊಳ್ಳಲಿದೆ. ಹಾಗೆಯೇ ಝಿಂಬಾಬ್ವೆ ಹಾಗೂ ಅಫ್ಘಾನಿಸ್ತಾನ್ ನಡುವೆ ಕೂಡ ಈ ಬಾರಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ನಡೆಯಲಿದೆ.

IND vs AUS: ಏನಿದು ಬಾಕ್ಸಿಂಗ್ ಡೇ ಟೆಸ್ಟ್?
Boxing Day
Follow us
ಝಾಹಿರ್ ಯೂಸುಫ್
|

Updated on:Dec 24, 2024 | 11:53 AM

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯಕ್ಕೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 26 ರಿಂದ ಶುರುವಾಗಲಿರುವ ಈ ಪಂದ್ಯಕ್ಕೆ ಮೆಲ್ಬೋರ್ನ್​ನ ಎಂಸಿಜಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಟೆಸ್ಟ್ ಪಂದ್ಯವನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯಲಾಗುತ್ತದೆ. ಹೆಚ್ಚಿನವರು ಬಾಕ್ಸಿಂಗ್ ಡೇ ಟೆಸ್ಟ್ ಎಂದರೆ ಎರಡು ತಂಡಗಳ ಹಣಾಹಣಿ ಅಥವಾ ಕಾಳಗ ಅಂದುಕೊಂಡಿದ್ದಾರೆ. ಹೀಗಾಗಿ ಇದನ್ನು ಬಾಕ್ಸಿಂಗ್ ಡೇ ಎಂದು ವರ್ಣಿಸಲಾಗುತ್ತಿದೆ ಎಂದು ಭಾವಿಸಿದ್ದಾರೆ. ಆದರೆ ಇಲ್ಲಿ ಬಾಕ್ಸಿಂಗ್ ಎಂದರೆ ಮುಷ್ಠಿ ಕಾಳಗವಲ್ಲ. ಬದಲಾಗಿ ಕ್ರಿಸ್​ಮಸ್ ಮರುದಿನ ನಡೆಯುತ್ತಿರುವುದರಿಂದ ಈ ಪಂದ್ಯವನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯಲಾಗುತ್ತಿದೆ.

ಅಂದರೆ ಕ್ರಿಸ್​ಮಸ್ ದಿನ ಸ್ನೇಹಿತರು, ಕುಟುಂಬದವರು ಪರಸ್ಪರ ಗಿಫ್ಟ್ ಬಾಕ್ಸ್​ಗಳನ್ನು ನೀಡುತ್ತಾರೆ​. ಮರುದಿನ ಅಂದರೆ ಡಿಸೆಂಬರ್ 26 ರಂದು ಆ ಉಡುಗೊರೆ ಬಾಕ್ಸ್​ಗಳನ್ನು ಓಪನ್ ಮಾಡಲಾಗುತ್ತದೆ. ಇದೇ ಕಾರಣದಿಂದ ಬಾಕ್ಸ್​ ಓಪನ್ ಮಾಡುವ ದಿನವನ್ನು ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ.  ಇದೇ ದಿನ ಟೆಸ್ಟ್​ ಪಂದ್ಯವನ್ನು ಆಯೋಜಿಸುತ್ತಿರುವುದರಿಂದ ಡಿಸೆಂಬರ್ 26 ರಂದು ಶುರುವಾಗುವ ಪಂದ್ಯಗಳಿಗೆ ಬಾಕ್ಸಿಂಗ್ ಡೇ ಟೆಸ್ಟ್​ ಎಂಬ ಹೆಸರು ಬಂದಿದೆ.

ಹೀಗೆ ಬಾಕ್ಸಿಂಗ್ ಡೇ ಪಂದ್ಯಗಳು ಆರಂಭವಾಗಿದ್ದು 128 ವರ್ಷಗಳ ಹಿಂದೆ ಎಂಬುದು ವಿಶೇಷ. 1892 ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಶೆಫೀಲ್ಡ್ ಶೀಲ್ಡ್ ಪಂದ್ಯವನ್ನು ಆಯೋಜಿಸಲಾಯಿತು. ಬಳಿಕ ಕ್ರಿಸ್‌ಮಸ್ ಸಮಯದಲ್ಲಿ ವಿಕ್ಟೋರಿಯಾ ಮತ್ತು ನ್ಯೂ ಸೌತ್ ವೇಲ್ಸ್ ನಡುವೆ ಕ್ರಿಕೆಟ್ ಪಂದ್ಯ ಆಯೋಜನೆ ಹೊಸ ಸಂಪ್ರದಾಯವಾಗಿ ಮಾರ್ಪಟ್ಟಿತು.

1950 ರಲ್ಲಿ ಮೆಲ್ಬೋರ್ನ್​ನಲ್ಲಿ ಕ್ರಿಸ್​ಮಸ್​ಗೆ ಅನುಗುಣವಾಗಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ಪಂದ್ಯವೊಂದು ಆಯೋಜನೆಗೊಂಡಿತು. ಡಿಸೆಂಬರ್ 22 ರಂದು ಆರಂಭವಾದ ಈ ಪಂದ್ಯವು ನಿಧಾನಕ್ಕೆ ಬಾಕ್ಸಿಂಗ್ ಡೇಗೆ ಬಂದು ನಿಂತಿತು. ಅಲ್ಲಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್​ಗೆ ನಾಂದಿಯಾಡಲಾಯಿತು.

1967, 1972 ಮತ್ತು 1976 ರಲ್ಲಿ ಅಡಿಲೇಡ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳನ್ನು ಆಡಲಾಯಿತು. 1975 ರಲ್ಲಿ ಕ್ಲೈವ್ ಲಾಯ್ಡ್ ನೇತೃತ್ವದ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವಣ ಬಾಕ್ಸಿಂಗ್ ಡೇ ಪಂದ್ಯವು ಇಡೀ ವಿಶ್ವದ ಗಮನ ಸೆಳೆಯಿತು. ಏಕೆಂದರೆ ಈ ಪಂದ್ಯವನ್ನು ವೀಕ್ಷಿಸಲು ಮೊದಲ ದಿನ ಸುಮಾರು 85,000 ಪ್ರೇಕ್ಷಕರು ಸ್ಟೇಡಿಯಂಗೆ ಬಂದಿದ್ದರು. ಆ ಬಳಿಕ ಆಸ್ಟ್ರೇಲಿಯಾದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ನಡೆಯುತ್ತಲೇ ಬರುತ್ತಿವೆ.

ಇನ್ನು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳನ್ನು ಆಸ್ಟ್ರೇಲಿಯಾದಲ್ಲಿ ಮಾತ್ರವಲ್ಲ, ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾದಲ್ಲಿಯೂ ಆಯೋಜಿಸಲಾಗುತ್ತದೆ. ಈ ಬಾರಿ ಸೌತ್ ಆಫ್ರಿಕಾ ಮತ್ತು ಪಾಕಿಸ್ತಾನ್ ನಡುವೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ನಡೆಯುತ್ತಿದೆ.

ಇದನ್ನೂ ಓದಿ: 468ನೇ ಆಟಗಾರ… ಟೀಮ್ ಇಂಡಿಯಾ ವಿರುದ್ಧ 19ರ ಹರೆಯದ ಸ್ಪೋಟಕ ದಾಂಡಿಗ ಎಂಟ್ರಿ

ಹಾಗೆಯೇ ಬಾಕ್ಸಿಂಗ್ ಡೇಯಂದೇ ಭಾರತ ಮತ್ತು ಆಸ್ಟ್ರೇಲಿಯಾ 4ನೇ ಟೆಸ್ಟ್ ಪಂದ್ಯ ಶುರು ಮಾಡಲಿದೆ. ಇದರ ಜೊತೆಗೆ ಝಿಂಬಾಬ್ವೆ ಹಾಗೂ ಅಫ್ಘಾನಿಸ್ತಾನ್ ತಂಡಗಳು ಕೂಡ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವಾಡುತ್ತಿರುವುದು ವಿಶೇಷ.

Published On - 11:53 am, Tue, 24 December 24

ಮನೆಯಲ್ಲಿನ ಶಿವಲಿಂಗ ಎಷ್ಟು ಎತ್ತರ ಇರಬೇಕು, ಪೂಜಾ ವಿಧಾನ ತಿಳಿಯಿರಿ
ಮನೆಯಲ್ಲಿನ ಶಿವಲಿಂಗ ಎಷ್ಟು ಎತ್ತರ ಇರಬೇಕು, ಪೂಜಾ ವಿಧಾನ ತಿಳಿಯಿರಿ
Daily horoscope: ಈ ರಾಶಿಯವರ ಗೃಹ ನಿರ್ಮಾಣದ ಕನಸು ಇಂದು ಇಡೇರುತ್ತದೆ
Daily horoscope: ಈ ರಾಶಿಯವರ ಗೃಹ ನಿರ್ಮಾಣದ ಕನಸು ಇಂದು ಇಡೇರುತ್ತದೆ
ಆತುರದಲ್ಲಿ ಚಿಕನ್ ತಿಂದ ಧನರಾಜ್ ಆಚಾರ್; ಹೇಗಿದೆ ನೋಡಿ ಒದ್ದಾಟ
ಆತುರದಲ್ಲಿ ಚಿಕನ್ ತಿಂದ ಧನರಾಜ್ ಆಚಾರ್; ಹೇಗಿದೆ ನೋಡಿ ಒದ್ದಾಟ
ವೃದ್ಧೆಯನ್ನು ದರದರನೆ ಎಳೆದುಕೊಂಡು ಹೋಗಿ ಕಚ್ಚಿ ಕೊಂದ 7 ಬೀದಿ ನಾಯಿಗಳು
ವೃದ್ಧೆಯನ್ನು ದರದರನೆ ಎಳೆದುಕೊಂಡು ಹೋಗಿ ಕಚ್ಚಿ ಕೊಂದ 7 ಬೀದಿ ನಾಯಿಗಳು
ಉಗ್ರಾವತಾರ ತೋರಿಸಿ ಬಿಗ್ ಬಾಸ್ ಮನೆಯ ಗ್ಲಾಸ್ ಒಡೆದು ಹಾಕಿದ ಮಂಜು
ಉಗ್ರಾವತಾರ ತೋರಿಸಿ ಬಿಗ್ ಬಾಸ್ ಮನೆಯ ಗ್ಲಾಸ್ ಒಡೆದು ಹಾಕಿದ ಮಂಜು
ನೋವಿನಲ್ಲೂ ಅಭಿಮಾನಿಗಳನ್ನು ನೋಡಿ ನಗುತ್ತಾ ಕೈ ಬೀಸಿದ ದರ್ಶನ್
ನೋವಿನಲ್ಲೂ ಅಭಿಮಾನಿಗಳನ್ನು ನೋಡಿ ನಗುತ್ತಾ ಕೈ ಬೀಸಿದ ದರ್ಶನ್
2 ಸಮುದಾಯಗಳ ನಡುವೆ ಭೂಪಾಲ್​ನಲ್ಲಿ ಹಿಂಸಾತ್ಮಕ ಘರ್ಷಣೆ; 6 ಜನರಿಗೆ ಗಾಯ
2 ಸಮುದಾಯಗಳ ನಡುವೆ ಭೂಪಾಲ್​ನಲ್ಲಿ ಹಿಂಸಾತ್ಮಕ ಘರ್ಷಣೆ; 6 ಜನರಿಗೆ ಗಾಯ
ವಿನೋದ್ ಕಾಂಬ್ಳಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ ಘೋಷಿಸಿದ ಆಸ್ಪತ್ರೆ..!
ವಿನೋದ್ ಕಾಂಬ್ಳಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ ಘೋಷಿಸಿದ ಆಸ್ಪತ್ರೆ..!
ಕಲಬುರಗಿ ಬಂದ್​: ಕಿಡಿಗೇಡಿಗಳಿಂದ ಗೂಂಡಾ ವರ್ತನೆ; ಬೈಕ್ ಜಖಂ
ಕಲಬುರಗಿ ಬಂದ್​: ಕಿಡಿಗೇಡಿಗಳಿಂದ ಗೂಂಡಾ ವರ್ತನೆ; ಬೈಕ್ ಜಖಂ
ಬೀದರ್‌ನ ಜಾನುವಾರು ಸಂಶೋಧನೆ ಕೇಂದ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ
ಬೀದರ್‌ನ ಜಾನುವಾರು ಸಂಶೋಧನೆ ಕೇಂದ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ