ಅಂದಹಾಗೆ ಸ್ಯಾಮ್ ಕೊನ್ಸ್ಟಾಸ್ ಈಗಾಗಲೇ ಟೀಮ್ ಇಂಡಿಯಾ ವೇಗಿಗಳನ್ನು ಎದುರಿಸಿದ್ದಾರೆ. ಅಡಿಲೇಡ್ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಸ್ಯಾಮ್ ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ಪರ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ 97 ಎಸೆತಗಳನ್ನು ಎದುರಿಸಿದ್ದ ಸ್ಯಾಮ್ 14 ಫೋರ್ ಹಾಗೂ 1 ಸಿಕ್ಸ್ನೊಂದಿಗೆ 107 ರನ್ ಚಚ್ಚಿದ್ದರು.