Asia Cup 2022: ಏಷ್ಯಾಕಪ್ನ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 2 ಪಂದ್ಯಗಳಲ್ಲಿ ಜಯ ಸಾಧಿಸಿರುವ ಟೀಮ್ ಇಂಡಿಯಾ (Team India) ಹಾಗೂ ಅಫ್ಘಾನಿಸ್ತಾನ್ ತಂಡಗಳು ಸೂಪರ್-4 ಹಂತಕ್ಕೇರಿದೆ. ಇದಾಗ್ಯೂ ಸೂಪರ್-4 ಆಡಲಿರುವ ಮತ್ತೆರಡು ತಂಡಗಳಾವುವು ಎಂಬುದು ಇನ್ನೂ ಸಹ ನಿರ್ಧಾರವಾಗಿಲ್ಲ. ಅಂದರೆ ಗ್ರೂಪ್-A ಹಾಗೂ ಗ್ರೂಪ್-B ನಿಂದ ಎರಡು ತಂಡಗಳು ಇನ್ನಷ್ಟೇ ಅರ್ಹತೆ ಪಡೆಯಬೇಕಿದೆ. ಬಾಂಗ್ಲಾದೇಶ್-ಶ್ರೀಲಂಕಾ ನಡುವಣ ಮುಖಾಮುಖಿಯಲ್ಲಿ ಗೆಲ್ಲುವ ತಂಡ ಸೂಪರ್-4 ಹಂತಕ್ಕೇರುವುದು ಖಚಿತ. ಹಾಗೆಯೇ ಹಾಂಗ್ ಕಾಂಗ್ ವಿರುದ್ಧ ಪಾಕಿಸ್ತಾನ್ ಗೆದ್ದರೆ ಮುಂದಿನ ಹಂತಕ್ಕೇರಲಿದೆ.
ಮೇಲ್ನೋಟಕ್ಕೆ ಇಲ್ಲಿ ಪಾಕ್ ತಂಡವು ಬಲಿಷ್ಠವಾಗಿರುವುದರಿಂದ ಸೂಪರ್-4 ಆಡುವುದು ಖಚಿತ ಎಂದೇ ಹೇಳಬಹುದು. ಹಾಗೆಯೇ ಬಾಂಗ್ಲಾದೇಶ್, ಶ್ರೀಲಂಕಾ ತಂಡಗಳಲ್ಲಿ ಒಂದು ತಂಡವು ಅಂತಿಮ ರೌಂಡರ್ಗೆ ಎಂಟ್ರಿ ಕೊಡಲಿದೆ.
ಹೇಗಿರಲಿದೆ ಸೂಪರ್-4 ಹಂತ:
ಹೆಸರೇ ಸೂಚಿಸುವಂತೆ ಸೂಪರ್-4 ನಲ್ಲಿ ನಾಲ್ಕು ತಂಡಗಳು ಸೆಣಸಲಿದೆ. ಇಲ್ಲಿ ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳನ್ನು ಆಡಲಾಗುತ್ತದೆ. ಅಂದರೆ ಯಾವುದೇ ಗ್ರೂಪ್ ಇರುವುದಿಲ್ಲ. ಬದಲಾಗಿ ಒಂದು ತಂಡವು ಉಳಿದ 3 ತಂಡಗಳ ವಿರುದ್ದ ಒಂದೊಂದು ಪಂದ್ಯಗಳನ್ನು ಆಡಲಿದೆ. ಇಲ್ಲೂ ಕೂಡ ಪಾಯಿಂಟ್ ಟೇಬಲ್ ಇರಲಿದ್ದು, ಇದರಲ್ಲಿ ಮೊದಲ ಮತ್ತು 2ನೇ ಸ್ಥಾನ ಪಡೆಯುವ ತಂಡಗಳು ಫೈನಲ್ ಪ್ರವೇಶಿಸಲಿದೆ. ಅಂದರೆ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನ ಮತ್ತು ದ್ವಿತೀಯ ಸ್ಥಾನ ಪಡೆಯುವ ತಂಡಗಳೇ ಅಂತಿಮ ಹಣಾಹಣಿಯಲ್ಲಿ ಮುಖಾಮುಖಿಯಾಗಲಿದೆ.
ಭಾರತ-ಪಾಕ್ ಮತ್ತೆ ಮುಖಾಮುಖಿ:
ಈ ಬಾರಿಯ ಏಷ್ಯಾಕಪ್ನಲ್ಲಿ ಭಾರತ-ಪಾಕಿಸ್ತಾನ್ A ಗ್ರೂಪ್ನಲ್ಲಿದೆ. ಈಗಾಗಲೇ ಗ್ರೂಪ್- A ನಿಂದ ಟೀಮ್ ಇಂಡಿಯಾ ಸೂಪರ್ 4 ಹಂತಕ್ಕೇರಿದೆ. ಇನ್ನು 2ನೇ ತಂಡವಾಗಿ ಪಾಕಿಸ್ತಾನ ತಂಡವು ಸೂಪರ್-4 ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಭಾರತ-ಪಾಕಿಸ್ತಾನ್ ಸೂಪರ್-4 ನಲ್ಲಿ ಮತ್ತೆ ಮುಖಾಮುಖಿಯಾಗಲಿದೆ ಎಂದೇ ಹೇಳಬಹುದು. ಹಾಗೆಯೇ ಸೂಪರ್-4 ಹಂತದ ಪಾಯಿಂಟ್ ಟೇಬಲ್ನಲ್ಲಿ ಉಭಯ ತಂಡಗಳು ಮೊದಲೆರಡು ಸ್ಥಾನ ಪಡೆದರೆ, ಫೈನಲ್ನಲ್ಲಿ ಮತ್ತೆ ಮುಖಾಮುಖಿಯಾಗಬಹುದು.
ಸೂಪರ್ 4 ಪಂದ್ಯಗಳು ಯಾವಾಗ ಶುರು?
ಸೂಪರ್-4 ಹಂತದ ಪಂದ್ಯಗಳು ಸೆಪ್ಟೆಂಬರ್ 3 ರಿಂದ ಆರಂಭವಾಗಲಿದೆ. ಈ ಪಂದ್ಯಗಳು ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ಮತ್ತು ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ. ಈ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಹೀಗಿದೆ.
ಸೂಪರ್- 4 ವೇಳಾಪಟ್ಟಿ:
Published On - 3:55 pm, Thu, 1 September 22