ಪಂದ್ಯಕ್ಕೂ ಮುನ್ನ ಬಾಂಗ್ಲಾ- ಲಂಕಾ ತಂಡಗಳ ನಡುವೆ ವಾಕ್ಸಮರ; ಉರಿವ ಬೆಂಕಿಗೆ ತುಪ್ಪ ಸುರಿದ ಜಯವರ್ಧನೆ!

Asia Cup 2022: ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಕಂಡು ಬಂದ ಈ ಉದ್ವಿಗ್ನತೆಯ ನಡುವೆ ಶ್ರೀಲಂಕಾದ ಮಹೇಲಾ ಜಯವರ್ಧನೆ ಹೇಳಿಕೆ ನೀಡಿ, ಬೌಲರ್‌ಗಳು ತಮ್ಮ ಕ್ಲಾಸ್ ತೋರಿಸಬೇಕಾದ ಸಮಯ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ.

ಪಂದ್ಯಕ್ಕೂ ಮುನ್ನ ಬಾಂಗ್ಲಾ- ಲಂಕಾ ತಂಡಗಳ ನಡುವೆ ವಾಕ್ಸಮರ; ಉರಿವ ಬೆಂಕಿಗೆ ತುಪ್ಪ ಸುರಿದ ಜಯವರ್ಧನೆ!
Mahela Jayawardene, Dasun Shanaka and Khaled Mahmud
Follow us
TV9 Web
| Updated By: ಪೃಥ್ವಿಶಂಕರ

Updated on:Sep 01, 2022 | 4:20 PM

ಶ್ರೀಲಂಕಾ ಮತ್ತು ಬಾಂಗ್ಲಾದೇಶ (Sri Lanka and Bangladesh) ತಂಡಗಳು ಇಂದು ಏಷ್ಯಾಕಪ್‌ನಲ್ಲಿ (Asia Cup 2022) ಮುಖಾಮುಖಿಯಾಗಲಿವೆ. ಉಭಯ ತಂಡಗಳಿಗೂ ಇಂದು ನಡೆಯಲಿರುವ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಏಕೆಂದರೆ ಈಗಾಗಲೇ ಆಡಿರುವ ಒಂದೊಂದು ಪಮದ್ಯದಲ್ಲಿ ಉಭಯ ತಂಡಗಳು ಸೋಲುಂಡಿವೆ. ಹೀಗಾಘಿ ಇಂದು ಸೋತ ತಂಡದ ಪಯಣ ಇಲ್ಲಿಗೇ ಕೊನೆಗೊಳ್ಳಲಿದೆ. ಈ ಪಂದ್ಯದಲ್ಲಿ ಗೆದ್ದವರು ಪಂದ್ಯಾವಳಿಯ ಮುಂದಿನ ಸುತ್ತು ಅಂದರೆ ಸೂಪರ್ ಫೋರ್ ತಲುಪುತ್ತಾರೆ. ಆದರೆ ಈ ಪಂದ್ಯಕ್ಕೂ ಮುನ್ನ ಉಭಯ ತಂಡಗಳು ಪರಸ್ಪರ ಕಾಲೆಳೆದುಕೊಂಡಿವೆ.

ಅಖಾಡಕ್ಕಿಳಿಯುವ ಮುನ್ನವೇ ಎರಡು ತಂಡಗಳ ನಡುವಿನ ವಾಕ್ಸಮರ ಪತ್ರಿಕಾಗೋಷ್ಠಿಯಲ್ಲಿ ನಡೆದುಹೋಗಿದೆ. ಮೊದಲು ಪತ್ರಿಕಾಗೋಷ್ಠಿಯಲ್ಲಿ ಶ್ರೀಲಂಕಾ ನಾಯಕ ದಸುನ್ ಶನಕಾ ಬಾಂಗ್ಲಾದೇಶ ತಂಡವನ್ನು ಕಡೆಗಣಿಸಿ ಮಾತನಾಡಿದ್ದಾರೆ. ಬಳಿಕ ಲಂಕಾ ತಂಡದ ನಾಯಕನ ಈ ಮಾತುಗಳನ್ನು ಕೇಳಿದ ಬಾಂಗ್ಲಾದೇಶ ತಂಡದ ನಿರ್ದೇಶಕ ಪ್ರತ್ಯುತ್ತರ ನೀಡಿ ಸೇಡು ತೀರಿಸಿಕೊಂಡಿದ್ದಾರೆ. ಆದರೆ ಈ ವಾಕ್ಸಮರ ಇಷ್ಟಕ್ಕೆ ನಿಂತಿಲ್ಲ ಈ ಇಬ್ಬರ ಹೇಳಿಕೆಗಳ ನಡುವೆ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಮತ್ತೊಂದು ಹೇಳಿಕೆ ನೀಡಿ, ವಾಕ್ಸಮರಕ್ಕೆ ಟ್ವಿಸ್ಟ್ ನೀಡಿದ್ದಾರೆ.

ಶ್ರೀಲಂಕಾ ದಾಳಿ, ಬಾಂಗ್ಲಾದೇಶ ಪ್ರತಿದಾಳಿ

ಅಷ್ಟಕ್ಕೂ ಈ ಯುದ್ಧ ಆರಂಭವಾಗಿದ್ದು, ಶ್ರೀಲಂಕಾ ತಂಡದ ನಾಯಕರಾಗಿರುವ ದಸುನ್ ಶನಕಾ ಅವರ ಪತ್ರಿಕಾಗೋಷ್ಠಿಯಿಂದ. ಪಂದ್ಯಕ್ಕೂ ಮುಂಚಿನ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶನಕಾ, ಅಫ್ಘಾನಿಸ್ತಾನ ತಂಡಕ್ಕೆ ಹೋಲಿಸಿದರೆ ಬಾಂಗ್ಲಾದೇಶ ತಂಡ ದುರ್ಬಲವಾಗಿದೆ. ಬಾಂಗ್ಲಾ ಬೌಲಿಂಗ್‌ ವಿಭಾಗದಲ್ಲಿ ಮುಸ್ತಾಫಿಜುರ್ ಮತ್ತು ಶಕೀಬ್ ಅಲ್ ಹಸನ್ ಮಾತ್ರ ವಿಶ್ವ ದರ್ಜೆಯ ಬೌಲರ್‌ಗಳಾಗಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ.

ಲಂಕಾ ನಾಯಕನ ಉದ್ದಟತನದ ಹೇಳಿಕೆಯನ್ನು ಆಲಿಸಿದ ಬಾಂಗ್ಲಾದೇಶ ತಂಡದ ನಿರ್ದೇಶಕರು, ದಸುನ್ ಶನಕಾ ಅವರ ಈ ಹೇಳಿಕೆಗೆ ಪ್ರತೀಕಾರ ತೀರಿಸಿಕೊಂಡಿದ್ದಾರೆ. ಬಾಂಗ್ಲಾ ತಂಡದ ತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತಂಡದ ನಿರ್ದೇಶಕರು, ನಮ್ಮಲ್ಲಿ ಇಬ್ಬರು ವಿಶ್ವ ದರ್ಜೆಯ ಬೌಲರ್‌ಗಳು ಇದ್ದಾರೆ ಎಂದು ಅವರು ಅರ್ಥಮಾಡಿಕೊಳ್ಳುತ್ತಿದ್ದಾರೆ. ಆದರೆ ಶ್ರೀಲಂಕಾ ತಂಡದಲ್ಲಿ ಒಬ್ಬನೇ ಒಬ್ಬ ಬೌಲರ್ ಕೂಡ ವಿಶ್ವ ದರ್ಜೆಯವನಲ್ಲ ಎಂದು ಹೇಳುವ ಮೂಲಕ ಟಾಂಗ್ ಕೊಟ್ಟಿದ್ದಾರೆ.

ಕಿಡಿಯನ್ನು ಮತ್ತಷ್ಟು ಹೊತ್ತಿಸಿದ ಜಯವರ್ಧನೆ

ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಕಂಡು ಬಂದ ಈ ಉದ್ವಿಗ್ನತೆಯ ನಡುವೆ ಶ್ರೀಲಂಕಾದ ಮಹೇಲಾ ಜಯವರ್ಧನೆ ಹೇಳಿಕೆ ನೀಡಿ, ಬೌಲರ್‌ಗಳು ತಮ್ಮ ಕ್ಲಾಸ್ ತೋರಿಸಬೇಕಾದ ಸಮಯ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಉಭಯ ತಂಡಗಳ ನಡುವೆ ಹೊತ್ತಿದ್ದ ಬೆಂಕಿಗೆ ತುಪ್ಪ ಸುರಿದಿದ್ದಾರೆ.

Published On - 4:19 pm, Thu, 1 September 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ