AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಲ್ ಕ್ರಿಕೆಟ್​ಗೆ ‘ವೇದಿಕೆ’ ನಿರ್ಮಿಸುವ ಪಿಚ್ ಮಲ್ಲೇಶ್​ರ ಶ್ರಮ ಮತ್ತು ಸವಾಲು

ಕ್ರಿಕೆಟ್ ಪಂದ್ಯ ಎಲ್ಲಿಯೇ ನಡೆಯಲಿ ಪಿಚ್ ಇಲ್ಲದೆ ಆಟ ನಡೆಯಲು ಸಾಧ್ಯವೇ ಇಲ್ಲ. ಭಾರತದಲ್ಲಿ ಕ್ರಿಕೆಟ್ ಎಂಬುದು ಧರ್ಮವೇ ಆಗಿಬಿಟ್ಟಿದೆ. ಭಾರತದ ಮೂಲೆ-ಮೂಲೆಯಲ್ಲಿ ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಲೇ ಇರುತ್ತವೆ. ಮೊದಲೆಲ್ಲ ಇಂಥಹಾ ಟೂರ್ನಿಗಳ ಪಿಚ್​ನ ಗುಣಮಟ್ಟದ ಬಗ್ಗೆ ಹೆಚ್ಚು ತಲೆಕೆಡೆಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಪಿಚ್ ಕ್ಯುರೇಟರ್​ಗಳನ್ನು ಕರೆಸಿ ಗುಣಮಟ್ಟದ ಪಿಚ್ ತಯಾರಿಸಿಕೊಳ್ಳಲಾಗುತ್ತಿದೆ. ಅಂಥಹಾ ಪಿಚ್ ಕ್ಯುರೇಟರ್ ಒಬ್ಬರ ಪರಿಚಯ, ಅವರ ಕೆಲಸದ ವಿಧಾನ, ಶ್ರಮ, ಸವಾಲುಗಳು ಇನ್ನಿತರೆ ಮಾಹಿತಿ ಇಲ್ಲಿದೆ.

ಲೋಕಲ್ ಕ್ರಿಕೆಟ್​ಗೆ ‘ವೇದಿಕೆ’ ನಿರ್ಮಿಸುವ ಪಿಚ್ ಮಲ್ಲೇಶ್​ರ ಶ್ರಮ ಮತ್ತು ಸವಾಲು
Follow us
ಮಂಜುನಾಥ ಸಿ.
|

Updated on: Jul 19, 2024 | 12:36 PM

ಇತ್ತೀಚೆಗಷ್ಟೆ ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೆದ್ದಿತು. ಕಪ್ ಗೆದ್ದ ಬಳಿಕ ನಾಯಕ ರೋಹಿತ್ ಶರ್ಮಾ ಪಂದ್ಯ ನಡೆದ ವೆಸ್ಟ್ ಇಂಡೀಸ್​ನ ಬಾರ್ಬಡೋಸ್ ಕ್ರೀಡಾಂಗಣದ ಪಿಚ್​ ಬದಿ ಕುಳಿತು ಪಿಚ್​ನ ಮಣ್ಣನ್ನು ಬಾಯಿಗೆ ಹಾಕಿಕೊಂಡು ಸಂಭ್ರಮಿಸಿದರು. ಅದಾದ ಬಳಿ ಪ್ರಧಾನಿ ಮೋದಿವರೊಂದಿಗಿನ ಅಭಿನಂದನಾ ಸಭೆಯಲ್ಲಿಯೂ ರೋಹಿತ್ ಶರ್ಮಾ, ಬಾರ್ಬೊಡೋಸ್​ನ ಪಿಚ್​ನ ಬಗ್ಗೆ ಮಾತನಾಡಿದರು. 2011 ರಲ್ಲಿ ಭಾರತ ತಂಡ ವಾಂಖಡೆಯಲ್ಲಿ ವಿಶ್ವಕಪ್ ಗೆದ್ದಾಗಲೂ ಸಹ ಭಾರತ ತಂಡ ಪಿಚ್ ಕ್ಯುರೇಟರ್​ಗಳನ್ನು ಅಪ್ಪಿಕೊಂಡು ಸಂಭ್ರಮಿಸಿತ್ತು. ಬಿಸಿಸಿಐ, ವಾಂಖಡೆ ಪಿಚ್​ ಸಿದ್ಧ ಪಡಿಸಿದ್ದ ಕ್ಯುರೇಟರ್ ಹಾಗೂ ಸಹಾಯಕ ಸಿಬ್ಬಂದಿಗೆ ನಗದು ಪ್ರಶಸ್ತಿಗಳನ್ನು ಘೋಷಿಸಿತ್ತು. ಒಂದು ಕ್ರಿಕೆಟ್ ಪಂದ್ಯಕ್ಕೆ ಪಿಚ್ ಅದೆಷ್ಟು ಅವಶ್ಯಕ ಎಂಬುದಕ್ಕೆ ಈ ಎರಡು ಉದಾಹರಣೆಗಳು ಸಾಕ್ಷಿ. ಕ್ರಿಕೆಟ್ ಪಂದ್ಯ ಎಲ್ಲಿಯೇ ನಡೆಯಲಿ ಪಿಚ್ ಇಲ್ಲದೆ ಆಟ ನಡೆಯಲು ಸಾಧ್ಯವೇ ಇಲ್ಲ. ಭಾರತದಲ್ಲಿ ಕ್ರಿಕೆಟ್ ಎಂಬುದು ಧರ್ಮವೇ ಆಗಿಬಿಟ್ಟಿದೆ. ಭಾರತದ ಮೂಲೆ-ಮೂಲೆಯಲ್ಲಿ ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಲೇ ಇರುತ್ತವೆ. ಈ ಯೂಟ್ಯೂಬ್ ಕಾಲದಲ್ಲಿ ಸ್ಥಳೀಯ ಟೂರ್ನಮೆಂಟ್​ಗಳನ್ನೂ ಲೈವ್ ಮಾಡಲಾಗುತ್ತಿದೆ, ಅವಕ್ಕೆ ಲಕ್ಷಾಂತರ ವೀವ್ಸ್ ದೊರೆಯುತ್ತಿವೆ. ಲಕ್ಷಾಂತರ ರೂಪಾಯಿ ಬಹುಮಾನವಿಟ್ಟು ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ. ಎಲ್ಲ ಊರುಗಳಲ್ಲಿಯೂ ಅಚ್ಚುಕಟ್ಟಾದ ಮೈದಾನಗಳು ಇರುವುದಿಲ್ಲ. ಬಹುತೇಕ ಊರುಗಳಲ್ಲಿ ಪಂದ್ಯಾವಳಿಗಳು ಒಣಗಿದ ಕೆರೆಯಲ್ಲಿಯೋ, ಖಾಲಿ ಬಿಟ್ಟಿರುವ ಜಮೀನುಗಳಲ್ಲಿಯೋ ನಡೆಯುತ್ತವೆ. ಮೊದಲೆಲ್ಲ ಇಂಥಹಾ ಟೂರ್ನಿಗಳ ಪಿಚ್​ಗಳಿಗೆ ಅಷ್ಟೋಂದು ಪ್ರಾಧಾನ್ಯತೆ ನೀಡಲಾಗುತ್ತಿರಲಿಲ್ಲ. ಆಟಗಾರರೆ ಪೊರಕೆ ಹಿಡಿದು ಗುಡಿಸಿ ಅದನ್ನೇ ಪಿಚ್ ಎಂದು ಕರೆದು ಆಟವಾಡುತ್ತಿದ್ದರು. ಆದರೆ ಈಗ ಇಂಥಹಾ ಸ್ಥಳೀಯ ಟೂರ್ನಮೆಂಟ್​ಗಳಿಗೂ ಪಿಚ್​ ತಯಾರು ಮಾಡಿಕೊಡುವ...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ