ಅಪ್ಪ ಯಾವತ್ತಿದ್ದರೂ ಅಪ್ಪನೇ…ಪಾಕ್ ವಿರುದ್ದದ ಪಂದ್ಯದ ಬಳಿಕ ಮತ್ತೆ ವೈರಲ್ ಆದ ಹಳೆಯ ಡೈಲಾಗ್

| Updated By: ಝಾಹಿರ್ ಯೂಸುಫ್

Updated on: Aug 30, 2022 | 10:54 AM

Asia Cup 2022: ಇಂತಹದೊಂದು ಕ್ಯಾಚಿ ಡೈಲಾಗ್ ನೀಡಿದ್ದು ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಎಂಬುದು ವಿಶೇಷ. ಪಾಕ್ ವಿರುದ್ದದ ಪಂದ್ಯದ ವೇಳೆ ಶೊಯೇಬ್ ಅಖ್ತರ್ ಸ್ಟ್ರೈಕ್​ನಲ್ಲಿದ್ದ ಸೆಹ್ವಾಗ್ ಅವರನ್ನು ಕೆಣಕ್ಕಿದ್ದರು.

ಅಪ್ಪ ಯಾವತ್ತಿದ್ದರೂ ಅಪ್ಪನೇ...ಪಾಕ್ ವಿರುದ್ದದ ಪಂದ್ಯದ ಬಳಿಕ ಮತ್ತೆ ವೈರಲ್ ಆದ ಹಳೆಯ ಡೈಲಾಗ್
virender sehwag
Follow us on

Asia Cup 2022: ಏಷ್ಯಾಕಪ್​ನ 2ನೇ ಪಂದ್ಯದಲ್ಲಿ ಬದ್ಧ ವೈರಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿಯುವ ಮೂಲಕ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ದುಬೈ ಇಂಟರ್​ನ್ಯಾಷನಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕ್ ತಂಡವು 147 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 2 ಬಾಲ್​ಗಳು ಬಾಕಿಯಿರುವಂತೆಯೇ ಗೆದ್ದು ಬೀಗಿತು. ಈ ರೋಚಕ ಗೆಲುವಿನ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಬಾಪ್ ಬಾಪ್ ಹೋತಾ ಹೈ (ಅಪ್ಪ ಯಾವತ್ತಿದ್ದರೂ ಅಪ್ಪನೇ) ಹ್ಯಾಶ್​ಟ್ಯಾಗ್ ಟ್ರೆಂಡ್ ಆಗಿರುವುದು ವಿಶೇಷ.

ಅಂದರೆ 1947ರಲ್ಲಿ ಅಖಂಡ ಭಾರತದಿಂದ ಬೇರ್ಪಟ್ಟ ಪಾಕಿಸ್ತಾನವನ್ನು ಭಾರತದ ಕೂಸು ಎಂದು ಪರಿಗಣಿಸಲಾಗುತ್ತದೆ. ಇದೇ ಕಾರಣದಿಂದಾಗಿ ಪ್ರತಿ ಬಾರಿಯೂ ಪಾಕ್ ವಿರುದ್ದ ಭಾರತ ಮೇಲುಗೈ ಸಾಧಿಸಿದಾಗೆಲ್ಲಾ ಬಾಪ್ ಬಾಪ್ ಹೋತಾ ಹೈ ಎಂಬ ಡೈಲಾಗ್ ಕೇಳಿ ಬರುತ್ತದೆ. ಈ ಬಾರಿ ಪಾಕ್ ವಿರುದ್ದ ಟೀಮ್ ಇಂಡಿಯಾ ಗೆಲ್ಲುತ್ತಿದ್ದಂತೆ ಮತ್ತೊಮ್ಮೆ ‘Baap Baap Hota Hai’ ಹ್ಯಾಶ್ ಟ್ಯಾಗ್​ಗಳು ಸೋಷಿಯಲ್ ಮೀಡಿಯಾದಲ್ಲಿ ರಾರಾಜಿಸಿದೆ.

ಇದನ್ನೂ ಓದಿ
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Team India: ಟೀಮ್ ಇಂಡಿಯಾದ ಸರ್ವಶ್ರೇಷ್ಠ ಆರಂಭಿಕ ಆಟಗಾರ ಯಾರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಭಾರತವು ಗೆಲುವನ್ನು ಸಂಭ್ರಮಿಸುತ್ತಿರುವ ಅನೇಕ ವಿಡಿಯೋಗಳನ್ನು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋಗೆ ಬಾಪ್ ಬಾಪ್ ಹೋತಾ ಹೈ, ಬೇಟ ಬೇಟಾ ಹೋತಾ ಹೈ..ಎಂಬ ಶೀರ್ಷಿಕೆಗಳನ್ನು ಬರೆಯಲಾಗಿದೆ. ಅಂದರೆ ಅಪ್ಪ ಯಾವತ್ತಿದ್ದರೂ ಅಪ್ಪನೇ…ಕೂಸು ಯಾವತ್ತಿದ್ದರೂ ಕೂಸುವೇ ಎಂಬಾರ್ಥದಲ್ಲಿ ಪಾಕಿಸ್ತಾನವನ್ನು ಟ್ರೋಲ್ ಮಾಡಲಾಗುತ್ತಿದೆ.

ಅಂದಹಾಗೆ ಇಂತಹದೊಂದು ಕ್ಯಾಚಿ ಡೈಲಾಗ್ ನೀಡಿದ್ದು ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಎಂಬುದು ವಿಶೇಷ. ಪಾಕ್ ವಿರುದ್ದದ ಪಂದ್ಯದ ವೇಳೆ ಶೊಯೇಬ್ ಅಖ್ತರ್ ಸ್ಟ್ರೈಕ್​ನಲ್ಲಿದ್ದ ಸೆಹ್ವಾಗ್ ಅವರನ್ನು ಕೆಣಕ್ಕಿದ್ದರು. ಅಲ್ಲದೆ ಈ ವೇಳೆ ಸೆಹ್ವಾಗ್ 200 ರ ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಹೀಗಾಗಿಯೇ ನಿರಾಸೆಗೊಂಡಿದ್ದ ಅಖ್ತರ್ ಬೌನ್ಸರ್ ಎಸೆದು, ಹುಕ್ ಶಾಟ್ ಹೊಡೆದು ತೋರಿಸುವಂತೆ ಸವಾಲು ಹಾಕುತ್ತಿದ್ದರು.

ಇದೇ ವೇಳೆ  ನಾನ್​ ಸ್ಟ್ರೈಕ್​ನಲ್ಲಿದ್ದ ಸಚಿನ್ ಅವರನ್ನು ತೋರಿಸಿ ಅಲ್ಲಿ ನಿನ್ನ ಅಪ್ಪ ನಿಂತಿದ್ದಾರೆ. ಇದನ್ನು ಅವರಿಗೆ ಹೇಳು ನೋಡೋಣ ಎಂದು ಸೆಹ್ವಾಗ್ ಮರುತ್ತರ ನೀಡಿದ್ದರು. ಮುಂದಿನ ಓವರ್​ನಲ್ಲಿ ಅಖ್ತರ್ ಸಚಿನ್ ತೆಂಡೂಲ್ಕರ್​ಗೆ ಬೌನ್ಸರ್ ಎಸೆದರು. ಸಚಿನ್ ನಿರಾಯಾಸವಾಗಿ ಭರ್ಜರಿ ಸಿಕ್ಸ್ ಸಿಡಿಸಿದರು. ಈ ವೇಳೆ ನಾನು ಅಖ್ತರ್​ಗೆ…ಬೇಟ ಬೇಟ ಹೋತಾ ಹೈ..ಬಾಪ್ ಬಾಪ್ ಹೋತಾ ಹೈ ಎಂದಿದ್ದೆ ಎಂದು ಸೆಹ್ವಾಗ್ ಈ ಹಿಂದೊಮ್ಮೆ ತಿಳಿಸಿದ್ದರು. ಇದೀಗ ಇದೇ ಬಾಪ್ ಡೈಲಾಗ್ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ತರಂಗ ಸೃಷ್ಟಿಸಿದೆ.