Mitchell Marsh: ಸ್ಪೋಟಕ ಶತಕ ಸಿಡಿಸಿ ಅಬ್ಬರಿಸಿದ ಮಿಚೆಲ್ ಮಾರ್ಷ್
Ashes 2023: 5ನೇ ವಿಕೆಟ್ಗೆ ಜೊತೆಯಾದ ಈ ಜೋಡಿಯು 155 ರನ್ಗಳ ಜೊತೆಯಾಟವಾಡಿದರು. ವಿಶೇಷ ಎಂದರೆ ಈ ಶತಕದ ಜೊತೆಯಾಟದಲ್ಲಿ ಮಿಚೆಲ್ ಮಾರ್ಷ್ ಬ್ಯಾಟ್ನಿಂದಲೇ ಸೆಂಚುರಿ ಮೂಡಿಬಂದಿತ್ತು.
Ashes 2023: ಲೀಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ (England) ವಿರುದ್ಧ ಆಸ್ಟ್ರೇಲಿಯಾ (Australia) ಆಟಗಾರ ಮಿಚೆಲ್ ಮಾರ್ಷ್ (Mitchell Marsh) ಸ್ಪೋಟಕ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕರಾದ ಡೇವಿಡ್ ವಾರ್ನರ್ (4) ಹಾಗೂ ಉಸ್ಮಾನ್ ಖ್ವಾಜಾ (13) ಬೇಗನೆ ನಿರ್ಗಮಿಸಿದರೆ, ಆ ಬಳಿಕ ಬಂದ ಮಾರ್ನಸ್ ಲಾಬುಶೇನ್ (21) ಹಾಗೂ ಸ್ಟೀವ್ ಸ್ಮಿತ್ (22) ಕೂಡ ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅದರಂತೆ 85 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಸ್ಟ್ರೇಲಿಯಾಗೆ ಟ್ರಾವಿಸ್ ಹೆಡ್ ಹಾಗೂ ಮಿಚೆಲ್ ಮಾರ್ಷ್ ಆಸರೆಯಾದರು.
5ನೇ ವಿಕೆಟ್ಗೆ ಜೊತೆಯಾದ ಈ ಜೋಡಿಯು 155 ರನ್ಗಳ ಜೊತೆಯಾಟವಾಡಿದರು. ವಿಶೇಷ ಎಂದರೆ ಈ ಶತಕದ ಜೊತೆಯಾಟದಲ್ಲಿ ಮಿಚೆಲ್ ಮಾರ್ಷ್ ಬ್ಯಾಟ್ನಿಂದಲೇ ಸೆಂಚುರಿ ಮೂಡಿಬಂದಿತ್ತು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಮಾರ್ಷ್ ಇಂಗ್ಲೆಂಡ್ ಬೌಲರ್ಗಳ ತಂತ್ರಕ್ಕೆ ಬ್ಯಾಟ್ ಮೂಲಕವೇ ಉತ್ತರ ನೀಡಿದರು. ಪರಿಣಾಮ ಕೇವಲ 102 ಎಸೆತಗಳಲ್ಲಿ ಶತಕ ಪೂರೈಸಿದರು.
ಸೆಂಚುರಿ ಬಳಿಕ ಕೂಡ ಸ್ಪೋಟಕ ಇನಿಂಗ್ಸ್ಗೆ ಒತ್ತು ನೀಡಿದ ಮಿಚೆಲ್ ಮಾರ್ಷ್ 118 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 17 ಫೋರ್ಗಳೊಂದಿಗೆ 118 ರನ್ ಬಾರಿಸಿ ಕ್ರಿಸ್ ವೋಕ್ಸ್ಗೆ ವಿಕೆಟ್ ಒಪ್ಪಿಸಿದರು. ಅಂದರೆ ಟ್ರಾವಿಸ್ ಹೆಡ್ ಜೊತೆಗಿನ 155 ರನ್ಗಳ ಜೊತೆಯಾಟದಲ್ಲಿ ಮಿಚೆಲ್ ಮಾರ್ಷ್ ಬ್ಯಾಟ್ನಿಂದಲೇ 118 ರನ್ಗಳು ಮೂಡಿಬಂದಿತ್ತು.
“In 2023 every Australian is absolutely loving him” ??
What a century, Mitchell Marsh ? pic.twitter.com/W6HTBdGlXa
— Sky Sports Cricket (@SkyCricket) July 6, 2023
ಇನ್ನು ಮಾರ್ಷ್ ಔಟಾದ ಬೆನ್ನಲ್ಲೇ ಟ್ರಾವಿಸ್ ಹೆಡ್ (39) ಕೂಡ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಅಲೆಕ್ಸ್ ಕ್ಯಾರಿ (8), ಮಿಚೆಲ್ ಸ್ಟಾರ್ಕ್ (2) ಹಾಗೂ ಪ್ಯಾಟ್ ಕಮಿನ್ಸ್ (0) ಬಂದ ವೇಗದಲ್ಲೇ ಹಿಂತಿರುಗಿದ್ದರು. ಅಂತಿಮವಾಗಿ ಟಾಡ್ ಮರ್ಫಿ (13) ಔಟಾಗುವುದರೊಂದಿಗೆ ಆಸ್ಟ್ರೇಲಿಯಾ ತಂಡವು 263 ರನ್ಗಳಿಗೆ ಸರ್ವಪತನ ಕಂಡಿತು.
ಇಂಗ್ಲೆಂಡ್ ಪರ ಮಾರ್ಕ್ ವುಡ್ 5 ವಿಕೆಟ್ ಕಬಳಿಸಿ ಮಿಂಚಿದರೆ, ಕ್ರಿಸ್ ವೋಕ್ಸ್ 3 ವಿಕೆಟ್ ಪಡೆದರು. ಇನ್ನು ಸ್ಟುವರ್ಟ್ ಬ್ರಾಡ್ 2 ವಿಕೆಟ್ ಉರುಳಿಸಿದರು.
ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ, ಬೆನ್ ಡಕೆಟ್, ಹ್ಯಾರಿ ಬ್ರೂಕ್, ಜೋ ರೂಟ್, ಜಾನಿ ಬೈರ್‌ಸ್ಟೋ (ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್ (ನಾಯಕ), ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಒಲ್ಲಿ ರಾಬಿನ್ಸನ್, ಸ್ಟುವರ್ಟ್ ಬ್ರಾಡ್.
ಇದನ್ನೂ ಓದಿ: ODI World Cup 2023: ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನಕ್ಕೆ ಗೆಲುವು ಖಚಿತ..!
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲ್ಯಾಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್.