Ashes 2023: ಡೇವಿಡ್ ವಾರ್ನರ್ ವಿಕೆಟ್ ಕಬಳಿಸಿ ದಾಖಲೆ ಬರೆದ ಸ್ಟುವರ್ಟ್ ಬ್ರಾಡ್
Ashes 2023: ಈ ಬಾರಿಯ ಆ್ಯಶಸ್ ಸರಣಿಯ ಮೊದಲ ಪಂದ್ಯದಲ್ಲೂ ಬ್ರಾಡ್ ಎಸೆತದಲ್ಲಿ ವಾರ್ನರ್ ಔಟಾಗಿದ್ದರು. ಇದೀಗ ಮೂರನೇ ಟೆಸ್ಟ್ ಪಂದ್ಯದಲ್ಲಿ ಬ್ರಾಡ್ ಎಸೆತದಲ್ಲಿ ಸ್ಲಿಪ್ನತ್ತ ಕ್ಯಾಚ್ ನೀಡಿ ಡೇವಿಡ್ ವಾರ್ನರ್ (4) ಇನಿಂಗ್ಸ್ ಅಂತ್ಯಗೊಳಿಸಿದ್ದಾರೆ.
Ashes 2023: ಲೀಡ್ಸ್ನ ಹೆಡಿಂಗ್ಲಿ ಮೈದಾನದಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ಮೂರನೇ ಪಂದ್ಯದಲ್ಲೂ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ (Stuart Broad) ಎಸೆತದಲ್ಲಿ ಡೇವಿಡ್ ವಾರ್ನರ್ (David Warner) ವಿಕೆಟ್ ಒಪ್ಪಿಸಿದ್ದಾರೆ. ಇದರೊಂದಿಗೆ ವಾರ್ನರ್ ಅವರನ್ನು ಅತ್ಯಧಿಕ ಬಾರಿ ಔಟ್ ಮಾಡಿದ ದಾಖಲೆಯೊಂದು ಬ್ರಾಡ್ ಹೆಸರಿಗೆ ಸೇರ್ಪಡೆಯಾಗಿದೆ. ಅಷ್ಟೇ ಅಲ್ಲದೆ ಬ್ಯಾಟರ್ರೊಬ್ಬರನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ಬೌಲರ್ಗಳ ಪಟ್ಟಿಯಲ್ಲಿ ಸ್ಟುವರ್ಟ್ ಬ್ರಾಡ್ 6ನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಆಸ್ಟ್ರೇಲಿಯಾ ವೇಗಿ ಗ್ಲೆನ್ ಮೆಕ್ಗ್ರಾಥ್.
ಗ್ಲೆನ್ ಮೆಕ್ಗ್ರಾಥ್ ಇಂಗ್ಲೆಂಡ್ ಆಟಗಾರ ಮೈಕಲ್ ಅರ್ಥಟನ್ ಅವರನ್ನು 34 ಇನಿಂಗ್ಸ್ಗಳಲ್ಲಿ 19 ಬಾರಿ ಔಟ್ ಮಾಡಿದ್ದರು. ಇದೀಗ ಇಂಗ್ಲೆಂಡ್ ಆಟಗಾರ ಗ್ರಹಾಂ ಗೂಚ್ ಅವರನ್ನು 16 ಬಾರಿ ಔಟ್ ಮಾಡಿದ್ದ ವೆಸ್ಟ್ ಇಂಡೀಸ್ನ ಮಾಲ್ಕಮ್ ಮಾರ್ಷಲ್ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ಸ್ಟುವರ್ಟ್ ಬ್ರಾಡ್ ಈ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ್ದಾರೆ.
ಒಟ್ಟು 50 ಇನಿಂಗ್ಸ್ಗಳಲ್ಲಿ ಸ್ಟುವರ್ಟ್ ಬ್ರಾಡ್ ಅವರನ್ನು ಎದುರಿಸಿದ ಡೇವಿಡ್ ವಾರ್ನರ್ 16 ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಈ ಬಾರಿಯ ಆ್ಯಶಸ್ ಸರಣಿಯ ಮೊದಲ ಪಂದ್ಯದಲ್ಲೂ ಬ್ರಾಡ್ ಎಸೆತದಲ್ಲಿ ವಾರ್ನರ್ ಔಟಾಗಿದ್ದರು. ಇದೀಗ ಮೂರನೇ ಟೆಸ್ಟ್ ಪಂದ್ಯದಲ್ಲಿ ಬ್ರಾಡ್ ಎಸೆತದಲ್ಲಿ ಸ್ಲಿಪ್ನತ್ತ ಕ್ಯಾಚ್ ನೀಡಿ ಡೇವಿಡ್ ವಾರ್ನರ್ (4) ಇನಿಂಗ್ಸ್ ಅಂತ್ಯಗೊಳಿಸಿದ್ದಾರೆ.
Ohhhhh yes, what a start from Stuart Broad ?#Ashes
— The Cricketer (@TheCricketerMag) July 6, 2023
ಇನ್ನು ನಾಲ್ಕು ಬಾರಿ ಡೇವಿಡ್ ವಾರ್ನರ್ ಅವರನ್ನು ಬ್ರಾಡ್ ಔಟ್ ಮಾಡಿದರೆ, ಹೊಸ ವಿಶ್ವ ದಾಖಲೆಯೊಂದು ನಿರ್ಮಾಣವಾಗಲಿದೆ. ಸದ್ಯ ಆ್ಯಶಸ್ ಸರಣಿಯ 3ನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಮೊದಲ ಇನಿಂಗ್ಸ್ನಲ್ಲಿ ವಾರ್ನರ್ ಅವರನ್ನು ಬ್ರಾಡ್ ವಜಾಗೊಳಿಸಿದ್ದಾರೆ. ಇನ್ನು ದ್ವಿತೀಯ ಇನಿಂಗ್ಸ್ ಬಾಕಿಯಿದೆ. ಹಾಗೆಯೇ 4ನೇ ಮತ್ತು 5ನೇ ಟೆಸ್ಟ್ಗಳಲ್ಲೂ ವಾರ್ನರ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಅಂದರೆ ಮುಂದಿನ 5 ಇನಿಂಗ್ಸ್ಗಳಲ್ಲಿ ಡೇವಿಡ್ ವಾರ್ನರ್ ಅವರನ್ನು 4 ಬಾರಿ ಔಟ್ ಮಾಡಿದರೆ ಒಬ್ಬರೇ ಬ್ಯಾಟರ್ನನ್ನು 20 ಬಾರಿ ವಜಾಗೊಳಿಸಿದ ಹೊಸ ವಿಶ್ವ ದಾಖಲೆಯೊಂದು ಸ್ಟುವರ್ಟ್ ಬ್ರಾಡ್ ಹೆಸರಿಗೆ ಸೇರ್ಪಡೆಯಾಗಲಿದೆ.
ಭಾರತೀಯರ ದಾಖಲೆ:
ಬ್ಯಾಟರ್ರೊಬ್ಬರನ್ನು ಅತೀ ಹೆಚ್ಚು ಬಾರಿ ವಜಾಗೊಳಿಸಿದ ಭಾರತೀಯ ಬೌಲರ್ಗಳ ದಾಖಲೆ ಪಟ್ಟಿಯಲ್ಲಿ ಮಾಜಿ ನಾಯಕ ಕಪಿಲ್ ದೇವ್ ಅಗ್ರಸ್ಥಾನದಲ್ಲಿದ್ದಾರೆ. ಕಪಿಲ್ ದೇವ್ ಪಾಕಿಸ್ತಾನದ ಮುದಸ್ಸರ್ ನಝರ್ ಅವರನ್ನು 24 ಇನಿಂಗ್ಸ್ಗಳಲ್ಲಿ 12 ಬಾರಿ ಔಟ್ ಮಾಡಿದ್ದರು.
ಇದನ್ನೂ ಓದಿ: World Record: 7 ಶತಕಗಳು, 1768 ರನ್…101 ವರ್ಷಗಳ ವಿಶ್ವದಾಖಲೆ ಉಡೀಸ್..!
ಇನ್ನು ಒಬ್ಬರೇ ಬೌಲರ್ಗೆ ಅತೀ ಹೆಚ್ಚು ಬಾರಿ ವಿಕೆಟ್ ಒಪ್ಪಿಸಿದ ದಾಖಲೆ ಚೇತೇಶ್ವರ ಪೂಜಾರ ಹೆಸರಿನಲ್ಲಿದೆ. ಪೂಜಾರ ಆಸ್ಟ್ರೇಲಿಯಾದ ನಾಥನ್ ಲಿಯಾನ್ಗೆ 13 ಬಾರಿ ವಿಕೆಟ್ ಒಪ್ಪಿಸಿದ್ದಾರೆ.