
ಈ ವರ್ಷದ ಅಂತ್ಯದಲ್ಲಿ ನಡೆಯಬೇಕಿರುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (Australia vs England) ನಡುವಿನ ಪ್ರತಿಷ್ಠಿತ ಆ್ಯಷಸ್ ಸರಣಿಯನ್ನು (Ashes Series) ಆಡದಿರುವ ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಆಸ್ಟ್ರೇಲಿಯಾದಲ್ಲಿ ಕಠಿಣ ಕ್ವಾರಂಟೈನ್ ನಿಯಮ ಇರುವುದರಿಂದ ಆ್ಯಷಸ್‌ನಲ್ಲಿ ಆಡುವ ಆಟಗಾರರು ಸುಮಾರು ನಾಲ್ಕು ತಿಂಗಳ ಕಾಲ ಬಯೋ ಬಬಲ್ ಒಳಗಿರಬೇಕು. ಹೀಗಾಗಿ ಹೋಟೆಲ್ ರೂಮ್‌ನೊಳಗೆ ಅಷ್ಟು ದಿನಗಳ ಕಾಲ ಕಳೆಯಲು ಸಾಧ್ಯವಿಲ್ಲ ಎಂದು ಕೆಲವು ಆಟಗಾರರು ಪ್ರತಿಷ್ಠಿತ ಸರಣಿಯಲ್ಲಿ ಆಡದಿರಲು ಯೋಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಆಸ್ಟ್ರೇಲಿಯಾದಲ್ಲಿ ಕಠಿಣ ನಿಯಮಗಳ ಕಾರಣದಿಂದ ತಿಂಗಳುಗಳ ಸರಣಿ ಆಡುವುದು ಕಷ್ಟ ಎಂದು ಹಿರಿಯ ಆಟಗಾರರು ಇಸಿಬಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಸರಣಿಯನ್ನು ಮುಂದೂಡಲು ಮನವಿ ಮಾಡಿದ್ದಾರೆ.
ಇಂಗ್ಲೆಂಡ್‌ನ ಕೆಲ ಅನುಭವಿ ಆಟಗಾರರು ಆ್ಯಷಸ್ ಸರಣಿ ಬಹಿಷ್ಕರಿಸಲು ಯೋಚಿಸಿದ್ದರೂ ಇಂಗ್ಲೆಂಡ್ ಆಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಸಿಸಿಬಿ) ಆ್ಯಷಸ್ ಸರಣಿ ಮುಂದೂಡುವ ಬಗ್ಗೆ ಏನೂ ಯೋಚಿಸುತ್ತಿಲ್ಲ. ಯಾವ ಆಟಗಾರರು ಆಡದಿದ್ದರೂ ಆ್ಯಷಸ್‌ನಲ್ಲಿ ಪಾಲ್ಗೊಳ್ಳುವ ಯೋಚನೆಯಲ್ಲಿ ಇಸಿಬಿ ಇದೆ. ಈ ಬಗ್ಗೆ ಬೋರ್ಡ್, ಆಟಗಾರರು ಮತ್ತು ಬೆಂಬಲ ಸಿಬ್ಬಂದಿ ಮಧ್ಯೆ ಮಾತುಕತೆ ನಡೆಯುತ್ತಿದೆ.
“ಇಂಗ್ಲೆಂಡ್‌ನ ಫೀಲ್ಡಿಂಗ್ ಗಮನಾರ್ಹವಾಗಿ ಕಡಿಮೆ ಸಾಮರ್ಥ್ಯ ಹೊಂದಿದೆ. ಮುಂಬರುವ ಆ್ಯಷಸ್ ವೇಳೆ ಇನ್ನೂ ಸಮಸ್ಯೆ ಬೆಳೆಯಬಹುದು. ಈ ಬಗ್ಗೆ ಇಸಿಬಿ ಮತ್ತು ಅಧಿಕಾರಿಗಳ ಜೊತೆ ಮಾತುಕತೆ ನಡೆಯುತ್ತಿದೆ,” ಎಂದು ಇಎಸ್‌ಪಿಎನ್ ಕ್ರಿಕ್ ಇನ್ಫೋ ವರದಿ ಹೇಳಿದೆ.
ಕ್ವಾರಂಟೈನ್ ನಿಯಮ ಸ್ವಲ್ಪ ಮಟ್ಟಿಗೆ ಸಡಿಲಿಸುವಂತೆ ಅಥವಾ ಪ್ರವಾಸ ಸರಣಿ ಮುಂದೂಡುವಂತೆ ಇಂಗ್ಲೆಂಡ್ ಆಟಗಾರರು ಮಾಡಿಕೊಂಡ ಮನವಿಯನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಿರಸ್ಕರಿಸಿದೆ. ಇದರಿಂದ ಇಂಗ್ಲೆಂಡ್ ಅನುಭವಿ ಆಟಗಾರರು ನಿರಾಶೆಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.
Dwayne Bravo: ನೂರಲ್ಲ ಇನ್ನೂರಲ್ಲ ಬರೋಬ್ಬರಿ 500 ಟಿ-20 ಪಂದ್ಯವನ್ನಾಡಿ ದಾಖಲೆ ಬರೆದ ಡ್ವೇನ್ ಬ್ರಾವೋ
(Ashes series 2021 England could boycott Ashes Down Under in view of strict bubble life Reports)