Shardul Thakur: ನಾವು ಆ 4-5 ದಿನ ದುರ್ಬಲವಾಗಿದ್ದೆವು, ತುಂಬಾನೆ ಭಯವಿತ್ತು: ಐದನೇ ಟೆಸ್ಟ್ ಬಗ್ಗೆ ಶಾರ್ದೂಲ್ ಠಾಕೂರ್ ಮಾತು

Shardul Thakur: ನಾವು ಆ 4-5 ದಿನ ದುರ್ಬಲವಾಗಿದ್ದೆವು, ತುಂಬಾನೆ ಭಯವಿತ್ತು: ಐದನೇ ಟೆಸ್ಟ್ ಬಗ್ಗೆ ಶಾರ್ದೂಲ್ ಠಾಕೂರ್ ಮಾತು
Shardul Thakur

ಭಾರತ-ಇಂಗ್ಲೆಂಡ್ 5ನೇ ಟೆಸ್ಟ್ ರದ್ದಾದ ಬಗ್ಗೆ ಈಗಾಗಲೇ ರವಿಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಅನೇಕರು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಟೀಮ್ ಇಂಡಿಯಾದಲ್ಲಿ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ಶಾರ್ದೂಲ್ ಠಾಕೂರ್ ಈ ಘಟನೆ ಕುರಿತು ಮಾತನಾಡಿದ್ದಾರೆ.

TV9kannada Web Team

| Edited By: Vinay Bhat

Sep 16, 2021 | 11:27 AM

ಭಾರತ ಹಾಗೂ ಇಂಗ್ಲೆಂಡ್‌ (India vs England) ನಡುವೆ ಮ್ಯಾಂಚೆಸ್ಟರ್‌ನಲ್ಲಿ ನಡೆಯಬೇಕಾಗಿದ್ದ ಅಂತಿಮ ಐದನೇ ಟೆಸ್ಟ್‌ (5th Test) ಪಂದ್ಯ ಕೊರೊನಾ ಆತಂಕದಿಂದಾಗಿ ರದ್ದಾಗಿರುವುದು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಇಂಗ್ಲೆಂಡ್ ಕ್ರಿಕೆಟಿಗರು, ಮಾಜಿ ಆಟಗಾರರು ಭಾರತದ ಮೇಲೆ ಒಬ್ಬರ ಹಿಂದೆ ಒಬ್ಬರಂತೆ ಟೀಕೆಗಳನ್ನು ಮಾಡುತ್ತಿದ್ದಾರೆ. ಐಪಿಎಲ್ (IPL 2021) ಆಡಲೆಂದೇ ಟೀಮ್ ಇಂಡಿಯಾ (Team India) ಆಟಗಾರರು ಟೆಸ್ಟ್ ಪಂದ್ಯವನ್ನು ರದ್ದು ಮಾಡಿದ್ದಾರೆ ಎಂದು ಇಂಗ್ಲೆಂಡ್​ನ ಕೆಲ ಮಾಜಿ ಆಟಗಾರರು ದೂರಿದ್ದಾರೆ. ಇದರ ನಡುವೆ ಇದೀಗ ಟೀಮ್ ಇಂಡಿಯಾ ಆಟಗಾರ ಶಾರ್ದೂಲ್ ಠಾಕೂರ್ (Shardul Thakur) ಈ ಘಟನೆ ಕುರಿತು ವಿವರಣೆ ನೀಡಿದ್ದಾರೆ.

ತಂಡದಲ್ಲಿ ಮೊದಲು ಕೊರೊನಾ ಹರಡಲು ಕಾರಣವಾಗಿದ್ದು ಕೋಚ್ ರವಿಶಾಸ್ತ್ರಿ. ಇಂಗ್ಲೆಂಡ್​ನಲ್ಲಿ ಬುಕ್ ಲಾಂಚ್ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ರವಿಶಾಸ್ತ್ರಿಯಿಂದ ಎಡವಟ್ಟಾಗಿತ್ತು. ಬಿಸಿಸಿಐ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಅನುಮತಿ ಪಡೆಯದೆ ಕಾರ್ಯಕ್ರಮಕ್ಕೆ ತೆರಳಿದ್ದರಿಂದ ಮೊದಲು ರವಿಶಾಸ್ತ್ರಿ, ನಂತರ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಶ್ರೀಧರ್, ಹಿರಿಯ ಫಿಸಿಯೋ ನಿತಿನ್ ಪಟೇಲ್ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಐದನೇ ಟೆಸ್ಟ್‌ಗೆ ಮೊದಲು, ಸಹಾಯಕ ಫಿಸಿಯೋ ಯೋಗೀಶ್ ಪರ್ಮಾರ್ ಅವರಿಗೂ ಕೂಡ ಕೊರೊನಾ ದೃಢಪಟ್ಟ ಕಾರಣ ಅನಿವಾರ್ಯ ಪರಿಸ್ಥಿತಿಯಲ್ಲಿ ಪಂದ್ಯರದ್ದುಪಡಿಸಿದ್ದರು.

ಈ ಬಗ್ಗೆ ಈಗಾಗಲೇ ರವಿಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಅನೇಕರು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಟೀಮ್ ಇಂಡಿಯಾದಲ್ಲಿ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ಶಾರ್ದೂಲ್ ಠಾಕೂರ್ ಈ ಘಟನೆ ಕುರಿತು ಮಾತನಾಡಿದ್ದಾರೆ. “ನಾನು ಡ್ರೆಸ್ಸಿಂಗ್​ ರೂಮ್​ನಲ್ಲಿರುವಾಗ ಯಾರೋ ಇದರ ಬಗ್ಗೆ ಪಿಸುಗುಟ್ಟುತ್ತಿರುವುದನ್ನು ಕೇಳಿದೆ. ಬಳಿಕ ಪಂದ್ಯ ಆರಂಭವಾಗುತ್ತಿದ್ದಂತೆ ಎಲ್ಲರೂ ಆಟದ ಮೇಲೆ ಗಮನ ಹರಿಸಿದರು. ಆದರೆ, ನಮ್ಮ ಮುಖ್ಯ ಸಹಾಯಕ ಸಿಬ್ಬಂದಿ ಇಲ್ಲದೆ ನಾವು ಮೊದಲ ಬಾರಿಗೆ ಕಣಕ್ಕಿಳಿದ ಸಂದರ್ಭ ಅದಾಗಿತ್ತು” ಎಂದು ಹೇಳಿದ್ದಾರೆ.

“ಭರತ್ ಅರುಣ್ ಅವರು ದಿನದ ಕೊನೆಯಲ್ಲಿ ನಮ್ಮನ್ನು ಕರೆದು ಮಾತನಾಡುತ್ತಿದ್ದರು. ನಾನುಕೂಡ ಭರತ್ ಅರುಣ್ ಸರ್ ಜೊತೆ ಮಾತನಾಡಿದ್ದೇನೆ, ಅವರು ನಾನು ಯಾವ ರೀತಿಯ ಲೈನ್ ಮತ್ತು ಲೆಂಗ್ತ್ ಬೌಲಿಂಗ್ ಮಾಡಬಹುದು ಎಂಬುದರ ಕುರಿತು ವಿವರಣೆ ನೀಡಿದರು”.

“ಇದರ ನಡುವೆ ಯಾರಿಗೆ ಸೋಂಕು ತಗಲುತ್ತದೆ ಎಂಬುದು ದೊಡ್ಡ ಚಿಂತೆಯಾಗಿತ್ತು. ಈ ಸೋಂಕನ್ನು ಟ್ರ್ಯಾಕ್ ಮಾಡುವುದು ಅಸಾಧ್ಯವಾದ ಕಾರಣ ಮುಂದೆ ಹೇಗೆ ಏನು ಎಂದು ನಮಗೆ ತಿಳಿದಿರಲಿಲ್ಲ. ಮುಂದಿನ ನಾಲ್ಕು-ಐದು ದಿನಗಳು ನಮಗೆ ತುಂಬಾನೆ ದುರ್ಬಲವಾಗಿದ್ದವು. ಏಕೆಂದರೆ ನಮಗೂ ಸೋಂಕು ತಗುಲಬಹುದು ಅಥವಾ ಬೇರೆ ಯಾರಿಗಾದರೂ ಪಾಸಿಟಿವ್ ಬರಬಹುದು ಎಂಬ ಭಯವಿತ್ತು. ಪ್ರತಿಯೊಬ್ಬರೂ ತಮ್ಮ ತಮ್ಮ ಕುಟುಂಬದ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದರು” ಎಂದು ಠಾಕೂರ್ ಹೇಳಿದ್ದಾರೆ.

CPL 2021: ಕ್ರಿಸ್ ಗೇಲ್ ಸ್ಫೊಟಕ ಹೊಡೆತ ತಾಳಲಾರದೆ ಬ್ಯಾಟ್ ಪೀಸ್ ಪೀಸ್: ಇಲ್ಲಿದೆ ವಿಡಿಯೋ

Ashes: ಪ್ರತಿಷ್ಠಿತ ಆ್ಯಷಸ್ ಸರಣಿ ಆಡದಿರಲು ಇಂಗ್ಲೆಂಡ್ ಆಟಗಾರರ ಚಿಂತನೆ: ಯಾಕೆ ಗೊತ್ತಾ?

(Shardul Thakur has revealed that the players were really scared before cancelled Manchester Test)

Follow us on

Related Stories

Most Read Stories

Click on your DTH Provider to Add TV9 Kannada