AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England: ಐದನೇ ಟೆಸ್ಟ್ ರದ್ದಾದ ಬಗ್ಗೆ ರವಿಶಾಸ್ತ್ರಿ ಮೊದಲ ಪ್ರತಿಕ್ರಿಯೆ: ಏನಂದ್ರು ಕೇಳಿ

Ravi Shastri: ಭಾರತ ತಂಡದಲ್ಲಿ ಮೊದಲು ಕೊರೊನಾ ಹರಡಲು ಕಾರಣವಾಗಿದ್ದು ಕೋಚ್ ರವಿಶಾಸ್ತ್ರಿ. ಇಂಗ್ಲೆಂಡ್​ನಲ್ಲಿ ಬುಕ್ ಲಾಂಚ್ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ರವಿಶಾಸ್ತ್ರಿಯಿಂದ ಎಡವಟ್ಟಾಗಿತ್ತು.

India vs England: ಐದನೇ ಟೆಸ್ಟ್ ರದ್ದಾದ ಬಗ್ಗೆ ರವಿಶಾಸ್ತ್ರಿ ಮೊದಲ ಪ್ರತಿಕ್ರಿಯೆ: ಏನಂದ್ರು ಕೇಳಿ
Ravi Shastri
TV9 Web
| Edited By: |

Updated on: Sep 13, 2021 | 8:56 AM

Share

ಭಾರತ ಹಾಗೂ ಇಂಗ್ಲೆಂಡ್‌ (India vs England) ನಡುವೆ ಮ್ಯಾಂಚೆಸ್ಟರ್‌ನಲ್ಲಿ ನಡೆಯಬೇಕಾಗಿದ್ದ ಅಂತಿಮ ಐದನೇ ಟೆಸ್ಟ್‌ (5th Test) ಪಂದ್ಯ ಕೋವಿಡ್‌ ಆತಂಕದಿಂದಾಗಿ ರದ್ದಾಗಿರುವುದು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಇಂಗ್ಲೆಂಡ್ ಕ್ರಿಕೆಟಿಗರು, ಮಾಜಿ ಆಟಗಾರರು ಭಾರತದ ಮೇಲೆ ಒಬ್ಬರ ಹಿಂದೆ ಒಬ್ಬರಂತೆ ಟೀಕೆಗಳನ್ನು ಮಾಡುತ್ತಿದ್ದಾರೆ. ಐಪಿಎಲ್ (IPL 2021) ಆಡಲೆಂದೇ ಟೀಮ್ ಇಂಡಿಯಾ (Team India) ಆಟಗಾರರು ಟೆಸ್ಟ್ ಪಂದ್ಯವನ್ನು ರದ್ದು ಮಾಡಿದ್ದಾರೆ ಎಂದು ಇಂಗ್ಲೆಂಡ್​ನ ಕೆಲ ಮಾಜಿ ಆಟಗಾರರು ದೂರಿದ್ದಾರೆ. ಅಷ್ಟಕ್ಕೂ ಟೆಸ್ಟ್ ರದ್ದಾಗಲು ಕಾರಣವಾಗಿದ್ದು ಕೋಚ್ ರವಿಶಾಸ್ತ್ರಿ (Ravi Shastri) ಸೇರಿದಂತೆ ಸಹಾಯಕ ಸಿಬ್ಬಂದಿಗಳಿಗೆ ಕೊರೊನಾ (Corona) ಸೋಂಕು ಪತ್ತೆಯಾಗಿದ್ದು.

ತಂಡದಲ್ಲಿ ಮೊದಲು ಕೊರೊನಾ ಹರಡಲು ಕಾರಣವಾಗಿದ್ದು ಕೋಚ್ ರವಿಶಾಸ್ತ್ರಿ. ಇಂಗ್ಲೆಂಡ್​ನಲ್ಲಿ ಬುಕ್ ಲಾಂಚ್ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ರವಿಶಾಸ್ತ್ರಿಯಿಂದ ಎಡವಟ್ಟಾಗಿತ್ತು. ಬಿಸಿಸಿಐ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಅನುಮತಿ ಪಡೆಯದೆ ಕಾರ್ಯಕ್ರಮಕ್ಕೆ ತೆರಳಿದ್ದರಿಂದ ಮೊದಲು ರವಿಶಾಸ್ತ್ರಿ, ನಂತರ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಶ್ರೀಧರ್, ಹಿರಿಯ ಫಿಸಿಯೋ ನಿತಿನ್ ಪಟೇಲ್ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಐದನೇ ಟೆಸ್ಟ್‌ಗೆ ಮೊದಲು, ಸಹಾಯಕ ಫಿಸಿಯೋ ಯೋಗೀಶ್ ಪರ್ಮಾರ್ ಅವರಿಗೂ ಕೂಡ ಕೊರೊನಾ ದೃಢಪಟ್ಟ ಕಾರಣ ಅನಿವಾರ್ಯ ಪರಿಸ್ಥಿತಿಯಲ್ಲಿ ಪಂದ್ಯರದ್ದುಪಡಿಸಿದ್ದರು.

ಈ ಪರಿಸ್ಥಿತಿಗೆ ಮುಖ್ಯ ಕೋಚ್ ರವಿಶಾಸ್ತ್ರಿ ಕಾರಣ ಎಂಬ ವ್ಯಾಪಕ ಟೀಕೆಗಳ ಹಿನ್ನಲೆಯಲ್ಲಿ ಮೊದಲ ಬಾರಿ ರವಿಶಾಸ್ತ್ರಿ ಪ್ರತಿಕ್ರಿಯಿಸಿದ್ದು ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇಂಗ್ಲೆಂಡ್​ನಲ್ಲಿ ಇಡೀ ದೇಶವೇ ಮುಕ್ತವಾಗಿದೆ. ಅಲ್ಲಿ ಯಾವುದೇ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿಲ್ಲ. ಮೊದಲ ಟೆಸ್ಟ್ ಪಂದ್ಯದಿಂದಲೂ ಏನು ಬೇಕಾದರೂ ಆಗಬಹುದಿತ್ತು. ನನ್ನಿಂದಾಗಿ ತಂಡದ ಸದಸ್ಯರಿಗೆ ಕೊರೊನಾ ಸೋಂಕು ತಗುಲಿದೆ ಎಂಬುದನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಪತ್ರಿಕೆಯೊಂದರ ಸಂದರ್ಶನದಲ್ಲಿ ರವಿಶಾಸ್ತ್ರಿ ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ..

“ಬ್ರಿಟನ್‌ ನಲ್ಲಿ ಎಲ್ಲ ನಿರ್ಬಂಧಗಳನ್ನು ಸಂಪೂರ್ಣವಾಗಿ ಸಡಿಲಗೊಳಿಸಲಾಗಿದೆ. ಎಲ್ಲಾ ಜನರು ಮುಕ್ತವಾಗಿ ಸಂಚರಿಸುತ್ತಿದ್ದಾರೆ. ಒಂದೊಮ್ಮೆ ನನ್ನಿಂದ ಸೋಂಕು ಹರಡಿದ್ದರೆ ಮೊದಲ ಟೆಸ್ಟ್‌ನಿಂದಲೇ ಅದು ಸಂಭವಿಸಬೇಕಾಗಿತ್ತು. ಕೊರೋನಾ ವಿಪತ್ತಿನ ಸಮಯದಲ್ಲೂ ಟೀಂ ಇಂಡಿಯಾ ಇಂಗ್ಲೆಂಡಿನ ವಿರುದ್ಧ ಬಹುತೇಕ ಗೆದ್ದಂತೆಯೇ ಆಟವಾಡಿದೆ ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಇಂತಹದೇ ಪರಿಸ್ಥಿತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ” ಎಂದು ಅವರು ಹೇಳಿದ್ದಾರೆ.

ಇನ್ನೂ ರದ್ದುಗೊಳಿಸಲಾದ ಪಂದ್ಯದ ಫ‌ಲಿತಾಂಶವನ್ನು ನಿರ್ಧರಿಸಲು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ)ಗೆ ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಪತ್ರ ಬರೆದಿದೆ. ರವಿವಾರ ಪತ್ರ ಬರೆದಿರುವ ಇಸಿಬಿ, ಪಂದ್ಯದ ಪಲಿತಾಂಶವನ್ನು ಶೀಘ್ರದಲ್ಲೇ ನಿರ್ಧರಿಸುವಂತೆ ಕೇಳಿಕೊಂಡಿದೆ. ಇದರೊಂದಿಗೆ ಬಿಸಿಸಿಐ ಹಾಗೂ ಇಸಿಬಿ ನಡುವೆ ಒಮ್ಮತದ ನಿರ್ಧಾರ ಮೂಡಿಬಂದಿಲ್ಲ ಎಂಬುದು ಸಾಬೀತಾಗಿದೆ.

US Open Final: ಜೋಕೊವಿಚ್​ಗೆ ಅರಗಿಸಿಕೊಳ್ಳಲಾಗದ ಸೋಲು: ಕೋರ್ಟ್​ನಲ್ಲೇ ಕಣ್ಣೀರಿಟ್ಟ ವಿಶ್ವದ ನಂಬರ್ ಒನ್ ಟೆನಿಸಿಗ

Novak Djokovic: ಇತಿಹಾಸ ಸೃಷ್ಟಿಸುವಲ್ಲಿ ಎಡವಿದ ಜೋಕೊವಿಚ್: ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಗೆದ್ದ ಡಾನಿಲ್‌ ಮಡ್ವೆಡೆವ್‌

(India vs England Ravi Shastri first response to the barrage of criticism his book launch event)

Follow Us
TV9 Web
TV9 Web

TV9 Kannada

Read More
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ
ಧರೆಗುರುಳಿದ ಬೃಹತ್ ಮರ, ಹೊಯ್ಸಳ ಪೊಲೀಸ್ ಕಾರು ಜಸ್ಟ್ ಮಿಸ್
ಧರೆಗುರುಳಿದ ಬೃಹತ್ ಮರ, ಹೊಯ್ಸಳ ಪೊಲೀಸ್ ಕಾರು ಜಸ್ಟ್ ಮಿಸ್
ಸ್ಟಿಂಗ್ ಆಪರೇಷನ್​​: ಪೆನ್‌ಡ್ರೈವ್​ ಪ್ರದರ್ಶಿಸಿ ಗಣಿಗ ರವಿ ಸ್ಫೋಟಕ ಆರೋಪ
ಸ್ಟಿಂಗ್ ಆಪರೇಷನ್​​: ಪೆನ್‌ಡ್ರೈವ್​ ಪ್ರದರ್ಶಿಸಿ ಗಣಿಗ ರವಿ ಸ್ಫೋಟಕ ಆರೋಪ
ಪಿಜಿಸಿಇಟಿ ಕೌನ್ಸಿಲಿಂಗ್ ವಿಳಂಬ: ಕೆಇಎ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ!
ಪಿಜಿಸಿಇಟಿ ಕೌನ್ಸಿಲಿಂಗ್ ವಿಳಂಬ: ಕೆಇಎ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ!
ಗಾನವಿ ಕೊಟ್ಟ ಕೌಂಟರ್​​ಗೆ ಸೈಲೆಂಟ್ ಆದ ತಾಂಡವ್ ರಾಮ್
ಗಾನವಿ ಕೊಟ್ಟ ಕೌಂಟರ್​​ಗೆ ಸೈಲೆಂಟ್ ಆದ ತಾಂಡವ್ ರಾಮ್
ಬೆಂಗಳೂರಿನಲ್ಲಿ ಭಕ್ತರ ಗಮನ ಸೆಳೆಯುತ್ತಿದೆ ಮಂತ್ರಾಲಯದ ಮಾದರಿಯ ಗಣೇಶ ಮಂಟಪ!
ಬೆಂಗಳೂರಿನಲ್ಲಿ ಭಕ್ತರ ಗಮನ ಸೆಳೆಯುತ್ತಿದೆ ಮಂತ್ರಾಲಯದ ಮಾದರಿಯ ಗಣೇಶ ಮಂಟಪ!
ಸಂಕೇಶ್ವರ: ಟಿಪ್ಪರ್​ಗೆ KSRTC ಬಸ್ ಡಿಕ್ಕಿ, ಚಾಲಕ ಸಾವು, 12 ಮಂದಿಗೆ ಗಾಯ
ಸಂಕೇಶ್ವರ: ಟಿಪ್ಪರ್​ಗೆ KSRTC ಬಸ್ ಡಿಕ್ಕಿ, ಚಾಲಕ ಸಾವು, 12 ಮಂದಿಗೆ ಗಾಯ