ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ತಾಂಜಾನಿಯಾ ಮಹಿಳಾ ತಂಡ ಹೊಸ ವಿಶ್ವ ದಾಖಲೆ ಬರೆದಿದೆ. ಚುಟುಕು ಕ್ರಿಕೆಟ್ನಲ್ಲಿ 200 ಅಥವಾ ಅದಕ್ಕಿಂತ ಹೆಚ್ಚು ರನ್ ಅಂತರದಿಂದ ಎರಡು ಬಾರಿ ಗೆದ್ದ ಮೊದಲ ಮಹಿಳಾ ತಂಡ ಎಂಬ ಹೆಗ್ಗಳಿಕೆಗೆ ತಾಂಜಾನಿಯಾ ತಂಡ ಪಾತ್ರವಾಗಿದೆ. ಟಿ20 ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮೊಜಾಂಬಿಕ್ ತಂಡ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ತಾಂಜಾನಿಯಾ ಬ್ಯಾಟರ್ ಫಾತುಮಾ ಕಿಬಾಸು 35 ಎಸೆತಗಳಲ್ಲಿ 62 ರನ್ ಬಾರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಮಾವಡಿ ಸ್ವೀಡಿ 48 ಎಸೆತಗಳಲ್ಲಿ ಅಜೇಯ 87 ರನ್ ಗಳಿಸಿ ತಂಡದ ಮೊತ್ತವನ್ನು 4 ವಿಕೆಟ್ ನಷ್ಟಕ್ಕೆ 228 ರನ್ಗೆ ತಂದು ನಿಲ್ಲಿಸಿದರು.
ತಾಂಜಾನಿಯಾ ನೀಡಿದ ಬೃಹತ್ ಗುರಿ ಬೆನ್ನತ್ತಿದ ಮೊಜಾಂಬಿಕ್ ತಂಡ ಆರಂಭದಿಂದಲೇ ಮುಗ್ಗರಿಸಿತು. ಇಡೀ ತಂಡ 12.5 ಓವರ್ ಗಳಲ್ಲಿ 28 ರನ್ಗಳಿಸಿ ಆಲೌಟ್ ಆಯಿತು. ತಂಡದ ಯಾವುದೇ ಆಟಗಾರ್ತಿ ಎರಡು ಅಂಕಿ ರನ್ ಗಳಿಸಲಿಲ್ಲ. ಓಪನರ್ ಪಾಲ್ಮಿರಾ ಕುನಿಕಾ 6 ರನ್ ಗಳಿಸಿದ್ದು ಅತ್ಯಧಿಕ ವೈಯುಕ್ತಿಕ ಸ್ಕೋರ್. ತಾಂಜಾನಿಯಾ ಪರ ವೇಗದ ಬೌಲರ್ ಪಿರೈಸ್ ಕಮುನ್ಯ 6 ರನ್ ನೀಡಿ 3 ವಿಕೆಟ್ ಪಡೆದರು. ಇದಲ್ಲದೇ, ನಸ್ರಾ ಸೈದಿ ಮತ್ತು ಸೋಫಿಯಾ ಜೆರೋಮ್ ತಲಾ 2 ವಿಕೆಟ್ ಕಬಳಿಸಿದರು. ಅದರೊಂದಿಗೆ ತಾಂಜಾನಿಯಾ ತಂಡವು 200 ರನ್ಗಳ ಬೃಹತ್ ವಿಜಯ ಸಾಧಿಸಿತು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 2 ಬಾರಿ 200 ಅಥವಾ ಅದಕ್ಕಿಂತ ಹೆಚ್ಚಿನ ಅಂತರದಿಂದ ಗೆಲುವು ದಾಖಲಿಸಿದ ತಂಡ ಎಂಬ ದಾಖಲೆ ಬರೆಯಿತು.
ಬೃಹತ್ ಅಂತರದ ಜಯದ ದಾಖಲೆ: ಮಹಿಳಾ ಕ್ರಿಕೆಟ್ನಲ್ಲಿ ಒಂದು ತಂಡವು ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು 200 ಅಥವಾ ಅದಕ್ಕಿಂತ ಹೆಚ್ಚು ರನ್ಗಳಿಸಿ ಗೆದ್ದಿರುವುದು ಇದು ಐದನೇ ಬಾರಿ. ತಾಂಜಾನಿಯ 2019 ರಲ್ಲಿ ಮಾಲಿ ತಂಡವನ್ನು 268 ರನ್ ಗಳಿಂದ ಸೋಲಿಸಿತ್ತು. ಇದೀಗ ಮೊಜಾಂಬಿಕ್ ತಂಡವನ್ನು 200 ರನ್ಗಳಿಸಿ ಸೋಲಿಸಿ ವಿಶ್ವ ದಾಖಲೆ ಬರೆದಿದೆ. ಇನ್ನು ಬೃಹತ್ ಮೊತ್ತದ ಗೆಲುವಿನ ದಾಖಲೆಯನ್ನು ಉಗಾಂಡಾ ತಂಡ ಹೊಂದಿದೆ. 2019 ರಲ್ಲಿ ಮಾಲಿ ತಂಡವನ್ನು ಉಗಾಂಡಾ 304 ರನ್ಗಳಿಂದ ಸೋಲಿಸಿ ಇತಿಹಾಸ ನಿರ್ಮಿಸಿತ್ತು. ಇದಲ್ಲದೇ, ಬಾಂಗ್ಲಾದೇಶವು ಮಾಲ್ಡೀವ್ಸ್ ವಿರುದ್ಧ 249 ರನ್ಗಳ ಜಯ ಹಾಗೂ ಮತ್ತು ಮಾಲಿ ವಿರುದ್ದ ರುವಾಂಡಾ ತಂಡ 216 ರನ್ಗಳ ವಿಜಯ ಸಾಧಿಸಿದೆ.
ಇದನ್ನೂ ಓದಿ: 16 ಸಿಕ್ಸರ್, 4 ಫೋರ್: ಒಂದೇ ಓವರ್ನಲ್ಲಿ 6 ಸಿಕ್ಸ್ ಸಿಡಿಸಿ ವಿಶ್ವ ದಾಖಲೆ ಬರೆದ ಜಸ್ಕರನ್
ಇದನ್ನೂ ಓದಿ: Rashid Khan: ಟಿ20 ವಿಶ್ವಕಪ್ಗೆ ಅಫ್ಘಾನ್ ತಂಡ ಪ್ರಕಟ: ನಾಯಕತ್ವಕ್ಕೆ ರಶೀದ್ ಖಾನ್ ರಾಜೀನಾಮೆ
ಇದನ್ನೂ ಓದಿ: Crime News: ಯುವತಿಗೆ ಡ್ರಾಪ್ ಕೊಡಲು ಬೈಕ್ ನಿಲ್ಲಿಸಿದ ಯುವಕ: ಆಮೇಲೆ ಆಗಿದ್ದೇ ಬೇರೆ!
ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು
(Tanzania womens team beat Mozambique by 200 runs in t20)