India vs Pakistan: ಬದ್ಧವೈರಿಗಳ ಕ್ರಿಕೆಟ್ ಕದನ: ಹೀಗಿರಲಿದೆ ಪ್ಲೇಯಿಂಗ್ ಇಲೆವೆನ್..!

| Updated By: ಝಾಹಿರ್ ಯೂಸುಫ್

Updated on: Aug 25, 2022 | 5:59 PM

India vs Pakistan Playing 11: ಪಾಕ್ ಪರ ಆರಂಭಿಕನಾಗಿ ನಾಯಕ ಬಾಬರ್ ಆಜಂ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಮತ್ತೋರ್ವ ಆರಂಭಿಕನಾಗಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಮೊಹಮ್ಮದ್ ರಿಜ್ವಾನ್ ಬ್ಯಾಟ್ ಬೀಸಲಿದ್ದಾರೆ.

India vs Pakistan: ಬದ್ಧವೈರಿಗಳ ಕ್ರಿಕೆಟ್ ಕದನ: ಹೀಗಿರಲಿದೆ ಪ್ಲೇಯಿಂಗ್ ಇಲೆವೆನ್..!
India vs Pakistan
Follow us on

Asia Cup 2022: ಆಗಸ್ಟ್ 28…ಮತ್ತೊಮ್ಮೆ ಕ್ರಿಕೆಟ್ ಅಂಗಳದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ್ (India vs Pakistan) ಮುಖಾಮುಖಿಯಾಗುತ್ತಿದೆ. ಅದು ಕೂಡ ಕಳೆದ ಬಾರಿ ಎದುರು ಬದುರಾಗಿದ್ದ ದುಬೈ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ಎಂಬುದು ವಿಶೇಷ. ಅಂದರೆ 2021 ರಲ್ಲಿ ಇದೇ ಮೈದಾನದಲ್ಲಿ ಭಾರತ ತಂಡಕ್ಕೆ ಪಾಕಿಸ್ತಾನ್ 10 ವಿಕೆಟ್​ಗಳ ಸೋಲುಣಿಸಿತ್ತು. ಇದೀಗ ಈ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಅವಕಾಶ ಟೀಮ್ ಇಂಡಿಯಾ ಮುಂದಿದೆ.

ವಿಶೇಷ ಎಂದರೆ ಈ ಪಂದ್ಯದ ಬಳಿಕ ಉಭಯ ತಂಡಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲೂ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಹೀಗಾಗಿ ಏಷ್ಯಾಕಪ್ ಮೂಲಕವೇ ಬದ್ಧವೈರಿಗಳ ವಿರುದ್ದ ಮೇಲುಗೈ ಸಾಧಿಸುವ ಇರಾದೆಯಲ್ಲಿದೆ ಎರಡೂ ತಂಡಗಳು.

ಈಗಾಗಲೇ ಭಾರತ-ಪಾಕ್ ತಂಡಗಳು ಬಲಿಷ್ಠ ಪಡೆಯೊಂದಿಗೆ ಯುಎಇಗೆ ಆಗಮಿಸಿದ್ದು, ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರ ದಂಡೇ ಇದೆ. ಅದರಲ್ಲೂ ಕಳೆದ ಬಾರಿಯ ಟಿ20 ವಿಶ್ವಕಪ್​ನಲ್ಲಿ ಆಡಿದ ಬಹುತೇಕ ಆಟಗಾರರೇ ಎರಡೂ ತಂಡಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇದಾಗ್ಯೂ ಟೀಮ್ ಇಂಡಿಯಾ ಪರ ಜಸ್​ಪ್ರೀತ್ ಬುಮ್ರಾ ಹಾಗೂ ಪಾಕ್ ಪರ ಶಾಹೀನ್ ಅಫ್ರಿದಿ ಕಾಣಿಸಿಕೊಂಡಿಲ್ಲ. ಇಬ್ಬರು ವೇಗಿಗಳು ಗಾಯಕ್ಕೆ ತುತ್ತಾಗಿದ್ದು, ಹೀಗಾಗಿ ಏಷ್ಯಾಕಪ್​ನಿಂದ ಹೊರಗುಳಿದಿದ್ದಾರೆ.

ಇದನ್ನೂ ಓದಿ
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Team India: ಟೀಮ್ ಇಂಡಿಯಾದ ಸರ್ವಶ್ರೇಷ್ಠ ಆರಂಭಿಕ ಆಟಗಾರ ಯಾರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಈ ಇಬ್ಬರು ಆಟಗಾರರ ಅಲಭ್ಯತೆಯ ನಡುವೆಯೂ ಉಭಯ ತಂಡಗಳು ಬಲಿಷ್ಠ ಪ್ಲೇಯಿಂಗ್ ಇಲೆವೆನ್​ನನ್ನೇ ಕಣಕ್ಕಿಳಿಸಲಿದೆ. ಹಾಗಿದ್ರೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಬಹುದು ಎಂದು ನೋಡೋಣ…

ಟೀಮ್ ಇಂಡಿಯಾ:

ಭಾರತದ ಪರ ನಾಯಕನಾಗಿ ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸಲಿರುವುದು ಖಚಿತ. ಇನ್ನು ಮತ್ತೋರ್ವ ಆರಂಭಿಕನಾಗಿ ಕೆಎಲ್ ರಾಹುಲ್ ಕಾಣಿಸಿಕೊಳ್ಳಲಿದ್ದಾರೆ. 3ನೇ ಕ್ರಮಾಂಕ ವಿರಾಟ್ ಕೊಹ್ಲಿಗೆ ಫಿಕ್ಸ್ ಎನ್ನಬಹುದು. ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಆಡಲಿದ್ದಾರೆ.

ಐದನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಗಿ ರಿಷಭ್ ಪಂತ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಆಲ್​ರೌಂಡರ್​ಗಳಾಗಿ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಸ್ಥಾನ ಪಡೆಯಲಿದ್ದಾರೆ. ಇನ್ನು ಫಿನಿಶರ್ ಪಾತ್ರವನ್ನು ದಿನೇಶ್ ಕಾರ್ತಿಕ್​ಗೆ ವಹಿಸಲಾಗುತ್ತದೆ. ಈ ಮೂಲಕ ಟೀಮ್ ಇಂಡಿಯಾ 8 ಬ್ಯಾಟ್ಸ್​ಮನ್​ಗಳನ್ನು ಕಣಕ್ಕಿಳಿಸಬಹುದು.

ಇನ್ನು ಬೌಲರ್​ಗಳ ವಿಭಾಗದಲ್ಲಿ ವೇಗಿ ಭುವನೇಶ್ವರ್ ಕುಮಾರ್​ಗೆ ಸ್ಥಾನ ಖಚಿತ. ಹಾಗೆಯೇ ಎಡಗೈ ವೇಗಿ ಅರ್ಷದೀಪ್ ಸಿಂಗ್ 2ನೇ ವೇಗದ ಬೌಲರ್ ಆಗಿ ತಂಡದಲ್ಲಿ ಸ್ಥಾನ ಪಡೆಯಬಹುದು. ಅಲ್ಲದೆ ಸ್ಪಿನ್ನರ್ ಆಗಿ ಯುಜುವೇಂದ್ರ ಚಹಲ್ ಕಾಣಿಸಿಕೊಳ್ಳಲಿದ್ದಾರೆ.
ಇಲ್ಲಿ ಹಾರ್ದಿಕ್ ಪಾಂಡ್ಯ ಹೆಚ್ಚುವರಿ ವೇಗದ ಬೌಲರ್ ಆಗಿ ಕಾಣಿಸಿಕೊಂಡರೆ, ರವೀಂದ್ರ ಜಡೇಜಾ ಹೆಚ್ಚುವರಿ ಸ್ಪಿನ್ನರ್ ಪಾತ್ರ ನಿರ್ವಹಿಸಲಿದ್ದಾರೆ. ಅದರಂತೆ ಮೂವರು ವೇಗಿ ಹಾಗೂ ಇಬ್ಬರು ಸ್ಪಿನ್ನರ್​ಗಳನ್ನು ಟೀಮ್ ಇಂಡಿಯಾ ಬಳಸಿಕೊಳ್ಳಬಹುದು.

ಭಾರತ ಸಂಭಾವ್ಯ ಪ್ಲೇಯಿಂಗ್ ಇಲೆವೆನ್:

  1. ರೋಹಿತ್ ಶರ್ಮಾ (ನಾಯಕ)
  2. ಕೆಎಲ್ ರಾಹುಲ್
  3. ವಿರಾಟ್ ಕೊಹ್ಲಿ
  4. ಸೂರ್ಯಕುಮಾರ್ ಯಾದವ್
  5. ರಿಷಭ್ ಪಂತ್ (ವಿಕೆಟ್ ಕೀಪರ್​)
  6. ಹಾರ್ದಿಕ್ ಪಾಂಡ್ಯ
  7. ದಿನೇಶ್ ಕಾರ್ತಿಕ್
  8. ರವೀಂದ್ರ ಜಡೇಜಾ
  9. ಭುವನೇಶ್ವರ್ ಕುಮಾರ್
  10. ಅರ್ಷದೀಪ್ ಸಿಂಗ್
  11. ಯುಜುವೇಂದ್ರ ಚಾಹಲ್

ಪಾಕಿಸ್ತಾನ್:

ಪಾಕ್ ಪರ ಆರಂಭಿಕನಾಗಿ ನಾಯಕ ಬಾಬರ್ ಆಜಂ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಮತ್ತೋರ್ವ ಆರಂಭಿಕನಾಗಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಮೊಹಮ್ಮದ್ ರಿಜ್ವಾನ್ ಬ್ಯಾಟ್ ಬೀಸಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಫಖರ್ ಜಮಾನ್ ಕಾಣಿಸಿಕೊಂಡರೆ, ನಾಲ್ಕನೇ ಕ್ರಮಾಂಕದಲ್ಲಿ ಹೈದರ್ ಅಲಿ ಆಡಬಹುದು. ಇನ್ನು ಇಫ್ತಿಕರ್ ಅಹ್ಮದ್ 5ನೇ ಕ್ರಮಾಂಕದಲ್ಲಿ ಆಡಿದ್ರೆ ಫಿನಿಶರ್ ಪಾತ್ರದಲ್ಲಿ ಆಸಿಫ್ ಅಲಿ ಕಾಣಿಸಿಕೊಳ್ಳಲಿದ್ದಾರೆ.

ಹಾಗೆಯೇ ಸ್ಪಿನ್ ಆಲ್​ರೌಂಡರ್ ಆಗಿ ಶಾದಾಬ್ ಖಾನ್ ಹಾಗೂ ವಾಸಿಂ ಜೂನಿಯರ್ ಸ್ಥಾನ ಪಡೆಯುವುದು ಖಚಿತ. ಇನ್ನು ಬೌಲರ್​ಗಳ ಸ್ಥಾನದಲ್ಲಿ ಹ್ಯಾರಿಸ್ ರೌಫ್, ಮೊಹಮ್ಮದ್ ನವಾಜ್, ನಸೀಂ ಶಾ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಪಾಕಿಸ್ತಾನ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್:

  1. ಬಾಬರ್ ಆಜಂ (ನಾಯಕ)
  2. ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್)
  3. ಫಖರ್ ಜಮಾನ್
  4. ಹೈದರ್ ಅಲಿ
  5. ಇಫ್ತಿಕರ್ ಅಹ್ಮದ್
  6. ಆಸಿಫ್ ಅಲಿ
  7. ಶಾದಾಬ್ ಖಾನ್
  8. ವಾಸಿಂ ಜೂನಿಯರ್
  9. ಹ್ಯಾರಿಸ್ ರೌಫ್
  10. ಮೊಹಮ್ಮದ್ ನವಾಜ್
  11. ನಸೀಂ ಶಾ