Breaking News: ಟೀಂ ಇಂಡಿಯಾಕ್ಕೆ ಆಘಾತ; ಏಷ್ಯಾಕಪ್‌ನಿಂದ ರವೀಂದ್ರ ಜಡೇಜಾ ಔಟ್..!

Asia Cup 2022: ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಏಷ್ಯಾಕಪ್​ನಿಂದ ಹೊರಬಿದ್ದಿದ್ದಾರೆ. ಗಾಯದ ಕಾರಣದಿಂದ ಜಡೇಜಾ ಉಳಿದ ಏಷ್ಯಾಕಪ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಶುಕ್ರವಾರ ಹೇಳಿಕೆ ನೀಡಿದೆ.

Breaking News: ಟೀಂ ಇಂಡಿಯಾಕ್ಕೆ ಆಘಾತ; ಏಷ್ಯಾಕಪ್‌ನಿಂದ ರವೀಂದ್ರ ಜಡೇಜಾ ಔಟ್..!
ಜಡೇಜಾ ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಪೃಥ್ವಿಶಂಕರ

Updated on:Sep 02, 2022 | 6:29 PM

ಟೀಂ ಇಂಡಿಯಾದ ಸ್ಟಾರ್ ಆಲ್​ರೌಂಡರ್ ರವೀಂದ್ರ ಜಡೇಜಾ (Ravindra Jadeja) ಏಷ್ಯಾಕಪ್​ನಿಂದ ಹೊರಬಿದ್ದಿದ್ದಾರೆ. ಗಾಯದ ಕಾರಣದಿಂದ ಜಡೇಜಾ ಉಳಿದ ಏಷ್ಯಾಕಪ್ (Asia Cup 202) ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಶುಕ್ರವಾರ ಹೇಳಿಕೆ ನೀಡಿದೆ. ಜಡೇಜಾ ಬದಲಿಗೆ ಎಡಗೈ ಸ್ಪಿನ್ ಆಲ್ ರೌಂಡರ್ ಅಕ್ಷರ್ ಪಟೇಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಮಂಡಳಿ ತಿಳಿಸಿದೆ. ಪಾಕಿಸ್ತಾನ ಮತ್ತು ಹಾಂಕಾಂಗ್ ವಿರುದ್ಧ ಟೀಂ ಇಂಡಿಯಾ ಗೆಲುವಿನಲ್ಲಿ ಜಡೇಜಾ ಪ್ರಮುಖ ಪಾತ್ರ ವಹಿಸಿದ್ದರು. ಜಡೇಜಾ ಅವರ ಬಲ ಮೊಣಕಾಲಿಗೆ ಗಾಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ಇದು ಅವರನ್ನು ಕಾಡುತ್ತಿದೆ. ಹೀಗಿರುವಾಗ ಜಡೇಜಾ ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಬಿಸಿಸಿಐ ಆಯ್ಕೆ ಮಾಡುವುದರ ಬಗ್ಗೆ ಅನುಮಾನ ಹುಟ್ಟಿಕೊಂಡಿದೆ.

ಬಿಸಿಸಿಐ ತನ್ನ ಹೇಳಿಕೆಯಲ್ಲಿ, ಜಡೇಜಾ ಅವರ ಬಲ ಮೊಣಕಾಲಿಗೆ ಗಾಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಅವರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಹೀಗಾಗಿ “ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿಯು ಏಷ್ಯಾಕಪ್‌ನಲ್ಲಿ ರವೀಂದ್ರ ಜಡೇಜಾ ಬದಲಿಗೆ ಅಕ್ಷರ್ ಪಟೇಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ. ಸದ್ಯ ಅವರು ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ತಿಳಿಸಿದೆ.

ಸೂಪರ್- 4 ಮೊದಲು ಆಘಾತ

ಏಷ್ಯಾಕಪ್‌ನ ಸೂಪರ್ ಫೋರ್ ಹಂತಕ್ಕೂ ಮುನ್ನ ಟೀಂ ಇಂಡಿಯಾಗೆ ಈ ದುರಂತ ಸಂಭವಿಸಿದೆ. ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ ಭಾರತದ ಮೊದಲ ಪಂದ್ಯವು ಭಾನುವಾರ, ಸೆಪ್ಟೆಂಬರ್ 4 ರಂದು ನಡೆಯಲಿದೆ. ತಂಡವನ್ನು ಸೂಪರ್ ಫೋರ್‌ಗೆ ಕೊಂಡೊಯ್ಯುವಲ್ಲಿ ಜಡೇಜಾ ಕೂಡ ವಿಶೇಷ ಕೊಡುಗೆ ನೀಡಿದ್ದಾರೆ. ಪಾಕಿಸ್ತಾನದ ವಿರುದ್ಧದ ಮೊದಲ ಪಂದ್ಯದಲ್ಲಿ ಜಡೇಜಾ ಕಠಿಣ ಪರಿಸ್ಥಿತಿಯಲ್ಲಿ 35 ರನ್‌ಗಳ ಪ್ರಮುಖ ಇನ್ನಿಂಗ್ಸ್ ಆಡಿದರು. ನಂತರ ಹಾಂಕಾಂಗ್ ವಿರುದ್ಧ ಕೇವಲ 15 ರನ್‌ಗಳಿಗೆ ದೊಡ್ಡ ವಿಕೆಟ್ ಪಡೆದರು.

ಅಕ್ಷರ್ ಪಟೇಲ್​ಗೆ ಅವಕಾಶ

ಇತ್ತೀಚಿನ ದಿನಗಳಲ್ಲಿ, ಜಡೇಜಾ ಬದಲಿಗೆ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಎಡಗೈ ಸ್ಪಿನ್-ಆಲ್ ರೌಂಡರ್ ಅಕ್ಷರ್ ಪಟೇಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅಕ್ಷರ್ ಅವರನ್ನು ಈಗಾಗಲೇ ಆಯ್ಕೆದಾರರು ಸ್ಟ್ಯಾಂಡ್‌ಬೈ ಆಗಿ ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಹೀಗಾಗಿ ಅವರು ಈಗಾಗಲೇ ಯುಎಇಯಲ್ಲಿದ್ದು, ತಂಡದ ಅಭ್ಯಾಸ ಅವಧಿಯ ಭಾಗವಾಗಿದ್ದಾರೆ.

Published On - 5:19 pm, Fri, 2 September 22