Asia Cup 2022: ಏಷ್ಯಾಕಪ್ನ ಮೊದಲ ಸುತ್ತಿನ ಪಂದ್ಯಗಳು ಪೂರ್ಣಗೊಂಡಿದೆ. 6 ತಂಡಗಳಲ್ಲಿ 4 ತಂಡಗಳು ಸೂಪರ್-4 ಹಂತಕ್ಕೆ ಎಂಟ್ರಿ ಕೊಟ್ಟಿದೆ. ಅಂದರೆ ಮೊದಲ ಸುತ್ತಿನ 2 ಪಂದ್ಯಗಳನ್ನು ಸೋತ ಬಾಂಗ್ಲಾದೇಶ್ ಹಾಗೂ ಹಾಂಗ್ ಕಾಂಗ್ ತಂಡಗಳು ಏಷ್ಯಾಕಪ್ನಿಂದ ಹೊರಬಿದ್ದಿದೆ. ಇನ್ನು ಸೂಪರ್-4 ನಲ್ಲಿ ಭಾರತ, ಪಾಕಿಸ್ತಾನ್, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ್ ತಂಡಗಳು ಸೆಣಸಲಿದೆ. ವಿಶೇಷ ಎಂದರೆ ಸೂಪರ್-4 ಹಂತದಲ್ಲಿ ಯಾವುದೇ ಗ್ರೂಪ್ಗಳು ಇರುವುದಿಲ್ಲ. ಅಂದರೆ ನಾಲ್ಕು ತಂಡಗಳು ಒಂದೇ ಸುತ್ತಿನಲ್ಲಿ ಸೆಣಸಲಿದೆ. ಹಾಗಿದ್ರೆ ಸೂಪರ್-4 ಹಂತದ ನಿಯಮಗಳೇನು ನೋಡೋಣ…
ಹೇಗಿರಲಿದೆ ಸೂಪರ್-4 ಫಾರ್ಮಾಟ್:
ಸೂಪರ್-4 ಅಂದರೆ ನಾಲ್ಕು ತಂಡಗಳ ಸೆಣಸಾಟ. ಇಲ್ಲಿ ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿದೆ. ಅಂದರೆ ಯಾವುದೇ ಗ್ರೂಪ್ ಇರುವುದಿಲ್ಲ. ಬದಲಾಗಿ ಒಂದು ತಂಡವು ಉಳಿದ 3 ತಂಡಗಳ ವಿರುದ್ದ 3 ಪಂದ್ಯಗಳನ್ನು ಆಡಲಿದೆ. ಅದರಂತೆ ಭಾರತ ತಂಡವು ಸೂಪರ್-4 ನಲ್ಲಿ ಪಾಕಿಸ್ತಾನ್, ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ್ ವಿರುದ್ದ ಆಡಲಿದೆ.
ಇಲ್ಲೂ ಕೂಡ ಪಾಯಿಂಟ್ ಟೇಬಲ್ ಇರಲಿದ್ದು, ಇದರಲ್ಲಿ ಮೊದಲ ಮತ್ತು 2ನೇ ಸ್ಥಾನ ಪಡೆಯುವ ತಂಡಗಳು ಫೈನಲ್ ಪ್ರವೇಶಿಸಲಿದೆ. ಅಂದರೆ ಮುಂದಿನ ಮೂರು ಪಂದ್ಯಗಳನ್ನು ಗೆದ್ದರೆ ಟೀಮ್ ಇಂಡಿಯಾ ಫೈನಲ್ ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳಬಹುದು. ಒಂದೇ ವೇಳೆ ಒಂದರಲ್ಲಿ ಸೋತರೂ ನೆಟ್ ರನ್ ರೇಟ್ನ ಮೊರೆ ಹೋಗಬೇಕಾಗುತ್ತದೆ. ಇಲ್ಲಿ 4 ತಂಡಗಳಲ್ಲೂ ಅತೀ ಹೆಚ್ಚು ಪಂದ್ಯ ಗೆಲ್ಲುವ ತಂಡಗಳು ಫೈನಲ್ ಪ್ರವೇಶಿಸಲಿದೆ.
ಇನ್ನು ಎಲ್ಲಾ ತಂಡಗಳು ಸಮಾನ ಪಂದ್ಯಗಳನ್ನು ಗೆದ್ದರೆ ನೆಟ್ ರನ್ ರೇಟ್ನ ಮೊರೆ ಹೋಗಬೇಕಾಗುತ್ತದೆ. ಅಂದರೆ ಸೂಪರ್-4 ನಲ್ಲಿ ಯಾವುದೇ ಸೆಮಿ ಫೈನಲ್ ಪಂದ್ಯಗಳು ಇರುವುದಿಲ್ಲ. ಬದಲಾಗಿ ಪಾಯಿಂಟ್ ಟೇಬಲ್ನಲ್ಲಿ ಮೊದಲ ಮತ್ತು 2ನೇ ಸ್ಥಾನ ಪಡೆಯುವ ತಂಡಗಳು ಫೈನಲ್ ಆಡಲಿದೆ.
ಭಾರತ-ಪಾಕ್ ಮುಖಾಮುಖಿ:
ಈ ಬಾರಿಯ ಏಷ್ಯಾಕಪ್ನ ಮೊದಲ ಸುತ್ತಿನಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಿತ್ತು. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್ಗಳಿಂದ ಪಾಕ್ ತಂಡವನ್ನು ಬಗ್ಗು ಬಡಿದಿತ್ತು. ಇದೀಗ ಸೂಪರ್- 4 ಹಂತದಲ್ಲೂ ಉಭಯ ತಂಡಗಳು ಮುಖಾಮುಖಿಯಾಗುತ್ತಿದೆ. ಇನ್ನು ಸೂಪರ್-4 ಪಾಯಿಂಟ್ ಟೇಬಲ್ನಲ್ಲಿ ಭಾರತ-ಪಾಕ್ ಮೊದಲೆರಡು ಸ್ಥಾನ ಪಡೆದರೆ, ಫೈನಲ್ನಲ್ಲಿ ಮತ್ತೆ ಮುಖಾಮುಖಿಯಾಗಬಹುದು. ಹೀಗಾಗಿ ಒಂದೇ ಟೂರ್ನಿಯ ಮೂಲಕ ಭಾರತ-ಪಾಕ್ 3 ಪಂದ್ಯವಾಡಲಿದೆಯಾ ಕಾದು ನೋಡಬೇಕಿದೆ.
ಸೂಪರ್-4 ವೇಳಾಪಟ್ಟಿ ಹೀಗಿದೆ:
ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ರವಿ ಬಿಷ್ಣೋಯ್.
ಮೀಸಲು ಆಟಗಾರರು: ದೀಪಕ್ ಚಹರ್ ಮತ್ತು ಶ್ರೇಯಸ್ ಅಯ್ಯರ್.
Published On - 10:32 am, Sat, 3 September 22