Asia Cup 2022: 6 ತಿಂಗಳು, 11 ಇನ್ನಿಂಗ್ಸ್ ಬಳಿಕ ಅರ್ಧಶತಕ ಸಿಡಿಸಿ ಮಿಂಚಿದ ಕಿಂಗ್ ಕೊಹ್ಲಿ..!
Virat Kohli: 6 ತಿಂಗಳು ಹಾಗೂ 11 ಇನ್ನಿಂಗ್ಸ್‌ಗಳ ಬಳಿಕ ಕೊಹ್ಲಿ ಅರ್ಧಶತಕ ದಾಖಲಿಸಿದರು. ವಿರಾಟ್ ಕೊನೆಯ ಬಾರಿಗೆ ವೆಸ್ಟ್ ಇಂಡೀಸ್ ವಿರುದ್ಧ 18 ಫೆಬ್ರವರಿ 2022 ರಂದು ಅರ್ಧಶತಕ ಗಳಿಸಿದ್ದರು.
ವಿರಾಟ್ ಕೊಹ್ಲಿ (Virat Kohli), ಕಳೆದ ಕೆಲವು ವರ್ಷಗಳಿಂದ ಭಾರತದ ನಂಬರ್ ಒನ್ ಬ್ಯಾಟ್ಸ್‌ಮನ್. ಟಿ20 ಪಂದ್ಯದ 101ನೇ ಪಂದ್ಯದಲ್ಲಿ ವಿರಾಟ್ ಕೊಹ್ನಿ ಮತ್ತೊಮ್ಮೆ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಮನ ಗೆದಿದ್ದಾರೆ. ಕಿಂಗ್ ಕೊಹ್ಲಿ ಹಾಂಗ್ ಕಾಂಗ್ ವಿರುದ್ಧ ಅದ್ಭುತ ಅರ್ಧ ಶತಕ ಗಳಿಸಿದರು (IND vs Hongkong Asia Cup 2022 ). ಈ ಇನ್ನಿಂಗ್ಸ್ ಸಮಯದಲ್ಲಿ, ವಿರಾಟ್ ಕೊಹ್ಲಿ 100 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿ, ಭಾರತದ ಇನ್ನಿಂಗ್ಸ್ ನಿಭಾಯಿಸಿದರು. ರೋಹಿತ್ ಶರ್ಮಾ (Rohit Sharma) ವಿಕೆಟ್ ಬಳಿಕ ಬಂದ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 59 ರನ್ ಗಳಿಸಿದರು. ವಿರಾಟ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 190 ರನ್ ದಾಟಿತು.
ಮೂರನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಸೂರ್ಯಕುಮಾರ್ ಯವತ್ ಜೊತೆಗೂಡಿ ಅದ್ಭುತ ಜೊತೆಯಾಟವನ್ನು ನಿರ್ಮಿಸಿದರು. ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ವಿಕೆಟ್ ಉರುಳಿದ ಬಳಿಕ ಇಬ್ಬರೂ ಆಟಗಾರರು ತಮ್ಮ ಕ್ಲಾಸ್ ಪ್ರದರ್ಶಿಸಿ ಹಾಂಕಾಂಗ್ ಬೌಲರ್ಗಳನ್ನು ಬೆಂಡೆತ್ತಿದರು. ವಿರಾಟ್ 44 ಎಸೆತಗಳಲ್ಲಿ ಕೇವಲ ಒಂದು ಬೌಂಡರಿ ಬಾರಿಸಿದರೆ ಮೂರು ಸಿಕ್ಸರ್ ಬಾರಿಸಿದರು. 134.09 ಸ್ಟ್ರೈಕ್ ರೇಟ್‌ನೊಂದಿಗೆ ವಿರಾಟ್ ಕೊಹ್ಲಿ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ತಮ್ಮ ವಿಂಟೇಜ್ ಪರಾಕ್ರಮವನ್ನು ತೋರಿಸಿದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ವಿರಾಟ್ ಸಮಯೋಜಿತ ಬ್ಯಾಟಿಂಗ್ ಮಾಡಿದ್ದರು. ಆದರೆ ಸೆಟ್ ಆದ ನಂತರವೂ ಅರ್ಧಶತಕ ಬಾರಿಸುವ ಅವಕಾಶವನ್ನು ಮಧ್ಯದಲ್ಲಿಯೇ ವಿಕೆಟ್ ಕೈಬಿಟ್ಟರು. ಆದರೆ ಏಷ್ಯಾಕಪ್‌ನ ಎರಡನೇ ಪಂದ್ಯದಲ್ಲಿ ವಿರಾಟ್ ಅಜೇಯ ಅರ್ಧಶತಕ ಸಿಡಿಸಿದ್ದರು.
6 ತಿಂಗಳ ಬಳಿಕ ಅರ್ಧಶತಕ
6 ತಿಂಗಳು ಹಾಗೂ 11 ಇನ್ನಿಂಗ್ಸ್‌ಗಳ ಬಳಿಕ ಕೊಹ್ಲಿ ಅರ್ಧಶತಕ ದಾಖಲಿಸಿದರು. ವಿರಾಟ್ ಕೊನೆಯ ಬಾರಿಗೆ ವೆಸ್ಟ್ ಇಂಡೀಸ್ ವಿರುದ್ಧ 18 ಫೆಬ್ರವರಿ 2022 ರಂದು ಅರ್ಧಶತಕ ಗಳಿಸಿದ್ದರು. ಆ ಪಂದ್ಯದಲ್ಲಿ ಅವರು 41 ಎಸೆತಗಳಲ್ಲಿ 52 ರನ್ ಗಳಿಸಿದ್ದರು. ಒಟ್ಟಾರೆಯಾಗಿ ಕೊಹ್ಲಿ ಟಿ20ಯಲ್ಲಿ 31ನೇ ಅರ್ಧಶತಕ ದಾಖಲಿಸಿದರು. ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ 32 ತಿಂಗಳ ನಂತರ ಟಿ20 ಕ್ರಿಕೆಟ್‌ನಲ್ಲಿ ಸತತ 3 ಪಂದ್ಯಗಳಲ್ಲಿ 10ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅವರು ಕೊನೆಯ ಬಾರಿಗೆ 2020 ರ ಜನವರಿಯಲ್ಲಿ ಸತತ 3 ಪಂದ್ಯಗಳಲ್ಲಿ 10 ಕ್ಕಿಂತ ಹೆಚ್ಚು ರನ್ ಗಳಿಸಿದ್ದರು.
ಭಾರತದ ಇನ್ನಿಂಗ್ಸ್ ಹೀಗಿತ್ತು
ಭಾರತ 20 ಓವರ್‌ಗಳಲ್ಲಿ 9.6 ರನ್ ರೇಟ್‌ನಲ್ಲಿ 192 ರನ್ ಗಳಿಸಿತು. ಇದರಲ್ಲಿ ಹಾಂಗ್ ಕಾಂಗ್ ಬೌಲರ್‌ಗಳು ಹೆಚ್ಚುವರಿಯಾಗಿ 8 ರನ್ ನೀಡಿದರು. ಉಳಿದ ಎಲ್ಲಾ ರನ್‌ಗಳನ್ನು ಭಾರತದ ಬ್ಯಾಟ್ಸ್‌ಮನ್‌ಗಳು ಗಳಿಸಿದರು. ಏಷ್ಯಾಕಪ್‌ನಲ್ಲಿ ಎರಡನೇ ಪಂದ್ಯವನ್ನಾಡುತ್ತಿರುವ ಭಾರತ ಮೊದಲು ಬ್ಯಾಟಿಂಗ್ ಮಾಡಿ ಈ ರನ್ ಗಳಿಸಿತು. ವಿರಾಟ್ ಕೊಹ್ಲಿ ಮೊದಲು ಕೆಎಲ್ ರಾಹುಲ್ 39 ಎಸೆತಗಳಲ್ಲಿ 36 ರನ್ ಗಳಿಸಿದ್ದರು. ರೋಹಿತ್ ಶರ್ಮಾ ಕೇವಲ 13 ಎಸೆತಗಳಲ್ಲಿ 21 ರನ್ ಗಳಿಸಿದರು.
ಸೂರ್ಯ ಅಬ್ಬರ
ಇದೇ ವೇಳೆ ಅಮೋಘ ಫಾರ್ಮ್ನಲ್ಲಿರುವ ಸೂರ್ಯಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಕೊನೆಯ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ ರನ್ ಮಳೆ ಸುರಿಸಿದರು. ಸೂರ್ಯಕುಮಾರ್ ಯಾದವ್ ಕೊನೆಯ ಓವರ್‌ನಲ್ಲಿ 4 ಸಿಕ್ಸರ್‌ಗಳನ್ನು ಬಾರಿಸಿದರು. ಇದರೊಂದಿಗೆ ಕೇವಲ 26 ಎಸೆತಗಳಲ್ಲಿ 68 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ ಅಮೋಘ ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಹಾಂಕಾಂಗ್ ಬೌಲರ್‌ಗಳ ಸಂಪೂರ್ಣ ತಂತ್ರವನ್ನು ನಾಶಪಡಿಸಿದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅತ್ಯಂತ ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗದೆ ನಿರಾಸೆ ಅನುಭವಿಸಿದ್ದ ಸೂರ್ಯಕುಮಾರ್ ಯಾದವ್ ಏಷ್ಯಾಕಪ್‌ನ ಎರಡನೇ ಪಂದ್ಯದಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡಿದರು.