PCB: ಖರೀದಿಸುವವರೇ ಇಲ್ಲ; ಪಾಕ್ ಕ್ರಿಕೆಟ್ ಮಂಡಳಿಗೆ ಇದೆಂಥಾ ಅವಮಾನ..!

PCB: ಈ ಸೀಸನ್​ನಲ್ಲಿ, ಈ ಲೀಗ್‌ಗೆ ಖರೀದಿದಾರರು ಸಿಗದಿರಬಹುದು, ಆದರೆ ಕೆಲವು ಸೀಸನ್‌ಗಳ ನಂತರ, ಈ ಲೀಗ್ ವಾಣಿಜ್ಯ ರೂಪದಲ್ಲಿಯೂ ಹೆಚ್ಚು ಯಶಸ್ವಿಯಾಗುತ್ತದೆ ಎಂದು PCB ಆಶಿಸಿದೆ.

PCB: ಖರೀದಿಸುವವರೇ ಇಲ್ಲ; ಪಾಕ್ ಕ್ರಿಕೆಟ್ ಮಂಡಳಿಗೆ ಇದೆಂಥಾ ಅವಮಾನ..!
Follow us
TV9 Web
| Updated By: ಪೃಥ್ವಿಶಂಕರ

Updated on:Aug 31, 2022 | 8:46 PM

ಕೆಲವು ದಿನಗಳಿಂದ ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ದುರಾದೃಷ್ಟ ಸರಿಯಾಗಿಯೇ ವಕ್ಕರಿಸಿಕೊಂಡಿದೆ. ಮೊದಲಿಗೆ, ಸ್ಟಾರ್ ಬೌಲರ್ ಶಾಹೀನ್ ಶಾ ಅಫ್ರಿದಿ (Shaheen Shah Afridi) ಏಷ್ಯಾಕಪ್‌ನಿಂದ ಹೊರಗುಳಿದಿದ್ದರು, ನಂತರ ಮತ್ತೊಬ್ಬ ಸ್ಟಾರ್ ಬೌಲರ್​ ಕೂಡ ಇಂಜುರಿಯಿಂದ ಏಷ್ಯಾಕಪ್​ಗೆ (Asia Cup 2022) ಅಲಭ್ಯರಾದರು. ಬಳಿಕ ಪಾಕಿಸ್ತಾನ ತಂಡ ಭಾರತದೆದುರು ಹೀನಾಯವಾಗಿ ಸೋತಿತು. ಈಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆರಂಭಿಸಿರುವ ಹೊಸ ಲೀಗ್‌ನ ಒಂದೇ ಒಂದು ತಂಡವನ್ನು ಖರೀದಿಸಲು ಖರೀದಿದಾರರು ಮುಂದೆ ಬರುತ್ತಿಲ್ಲ. ವಾಸ್ತವವಾಗಿ ಪಿಸಿಬಿ ಅಂದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (Pakistan Cricket Board) ಪಾಕಿಸ್ತಾನ ಜೂನಿಯರ್ ಲೀಗ್ ಅನ್ನು ಆಯೋಜಿಸಲು ಏರ್ಪಾಟು ನಡೆಸುತ್ತಿದೆ ಆದರೆ ಈ ಲೀಗ್‌ನಲ್ಲಿರುವ 6 ತಂಡಗಳನ್ನು ಖರೀದಿಸಲು ಯಾವುದೇ ಖರೀದಿದಾರರು ಮುಂದೆ ಬಂದಿಲ್ಲ. ಹೀಗಾಗಿ ಪಾಕ್ ಮಂಡಳಿಯ ಸಿದ್ಧತೆಗಳಿಗೆ ದೊಡ್ಡ ಹಿನ್ನಡೆಯಾಗಿದೆ.

ಪಾಕಿಸ್ತಾನ ಲೀಗ್‌ನಲ್ಲಿ ಯಾರಿಗೂ ಆಸಕ್ತಿ ಇಲ್ಲ

ಅಚ್ಚರಿ ಎಂದರೆ, ಈ ತಂಡಗಳಲ್ಲಿ ಮೆಂಟರ್ ಜಾವೇದ್ ಮಿಯಾಂದಾದ್, ವಿವಿಯನ್ ರಿಚರ್ಡ್ಸ್, ಶಾಹಿದ್ ಅಫ್ರಿದಿಯಂತಹ ಅನುಭವಿ ಆಟಗಾರರಿದ್ದಾರೆ. ಇದರ ಹೊರತಾಗಿಯೂ, ಪಾಕಿಸ್ತಾನದ ಈ ಲೀಗ್‌ನಲ್ಲಿ ಯಾರೂ ಆಸಕ್ತಿ ತೋರಿಸಲಿಲ್ಲ. ಈ ಲೀಗ್‌ನ ತಂಡಗಳನ್ನು ಖರೀದಿಸಲು ಯಾವುದೇ ಖರೀದಿದಾರರು ಮುಂದೆ ಬಂದಿಲ್ಲ. ಹೀಗಾಗಿ ಪಾಕಿಸ್ತಾನ ಜೂನಿಯರ್ ಲೀಗ್ ಪೂರ್ವನಿರ್ಧರಿತ ವೇಳಾಪಟ್ಟಿಯ ಪ್ರಕಾರ ನಡೆಯಲ್ಲಿದ್ದು, ಎಲ್ಲಾ ತಂಡಗಳ ನಿರ್ವಹಣೆಯನ್ನು ಪಿಸಿಬಿಯೇ ನಿರ್ವಹಿಸುತ್ತದೆ ಎಂದು ಮಂಡಳಿ ಘೋಷಿಸಿದೆ.

ಬಿಡ್ ಮಾಡಲು ಹಿಂದೇಟು ಹಾಕಿದಪ್ರಾಯೋಜಕರು

ಇದರೊಂದಿಗೆ, ಲೀಗ್‌ನ ಮಾರ್ಗದರ್ಶಕರಾಗಿ ಪಾಕಿಸ್ತಾನದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಇರುತ್ತಾರೆ ಎಂದು ಮಂಡಳಿಯು ಖಚಿತಪಡಿಸಿದೆ. ಮಿಯಾಂದಾದ್ ಹೊರತಾಗಿ, ಅನುಭವಿ ಆಟಗಾರರಾದ ವಿವಿಯನ್ ರಿಚರ್ಡ್ಸ್, ಇಮ್ರಾನ್ ತಾಹಿರ್, ಡ್ಯಾರೆನ್ ಸಾಮಿ, ಕಾಲಿನ್ ಮುನ್ರೊ, ಶಾಹಿದ್ ಅಫ್ರಿದಿ ಮತ್ತು ಶೋಯೆಬ್ ಮಲಿಕ್ ತಂಡಗಳಿಗೆ ಮಾರ್ಗದರ್ಶನ ನೀಡುವ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಹಿಂದೆ, ಪಾಕಿಸ್ತಾನ ಮಂಡಳಿಯು ಎಲ್ಲಾ 6 ತಂಡಗಳಿಗೆ ಬಿಡ್ ಮಾಡಲು ಬಿಡ್ ದಾರರಿಗೆ ಅವಕಾಶ ನೀಡಿತ್ತು. ಆದರೆ ಪಿಸಿಬಿ ನಿಗದಿಪಡಿಸಿದ ಬೆಲೆಗೆ ಯಾರೂ ಬಿಡ್ ಮಾಡಲಿಲ್ಲ.

ಇದು ಮೊದಲ ಜೂನಿಯರ್ ಟಿ 20 ಇಂಟರ್ನ್ಯಾಷನಲ್ ಲೀಗ್ ಆಗಿರುವುದರಿಂದ ಪ್ರಾಯೋಜಕರು ಮತ್ತು ಬಿಡ್ಡರ್‌ಗಳು ಸ್ವಲ್ಪ ಹಿಂಜರಿದಿದ್ದಾರೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ. ಈ ಸೀಸನ್​ನಲ್ಲಿ, ಈ ಲೀಗ್‌ಗೆ ಖರೀದಿದಾರರು ಸಿಗದಿರಬಹುದು, ಆದರೆ ಕೆಲವು ಸೀಸನ್‌ಗಳ ನಂತರ, ಈ ಲೀಗ್ ವಾಣಿಜ್ಯ ರೂಪದಲ್ಲಿಯೂ ಹೆಚ್ಚು ಯಶಸ್ವಿಯಾಗುತ್ತದೆ ಎಂದು PCB ಆಶಿಸಿದೆ.

Published On - 8:46 pm, Wed, 31 August 22