Vijay Devarakonda- Virat Kohli: ಕೊಹ್ಲಿ ಬಯೋಪಿಕ್ನಲ್ಲಿ ‘ರೌಡಿ’; ಮನಬಿಚ್ಚಿ ಮಾತನಾಡಿದ ಲೈಗರ್ ಹೀರೋ
Vijay Devarakonda: “ಧೋನಿ ಭಾಯ್ ಬಯೋಪಿಕ್ ಅನ್ನು ಈಗಾಗಲೇ ಸುಶಾಂತ್ ಸಿಂಗ್ ರಜಪೂತ್ ಮಾಡಿದ್ದಾರೆ. ಹಾಗಾಗಿ ಈಗ ವಿರಾಟ್ ಬಯೋಪಿಕ್ ಮಾಡಬೇಕೆಂದಿದ್ದೇನೆ ಎಂದು ಉತ್ತರಿಸಿದ್ದಾರೆ.
ಪುರಿ ಜಗನ್ನಾಥ್ ನಿರ್ದೇಶನದ ‘ಲೈಗರ್’ ಸಿನಿಮಾ (Liger Movie) ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಹತ್ತು ಹಲವು ಕಾರಣಗಳಿಂದಾಗಿ ಈ ಚಿತ್ರ ಹೈಪ್ ಸೃಷ್ಟಿ ಮಾಡಿತ್ತು. ಆಗಸ್ಟ್ 25ರಂದು ಬಿಡುಗಡೆ ಆದ ಈ ಸಿನಿಮಾ ಬಾಕ್ಸ್ ಆಫೀಸ್ ಗಳಿಕೆ ವಿಚಾರದಲ್ಲಿ ಹಿಂದೆ ಬಿದ್ದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೆ. ಅದೇನೇ ಇರಲಿ, ವಿಜಯ್ ದೇವರಕೊಂಡ (Vijay Deverakonda) ಅವರಿಗೆ ಈ ಸಿನಿಮಾದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಹೆಚ್ಚಿರುವುದಂತೂ ನಿಜ. ಲೈಗರ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಸೌತ್ ಸೂಪರ್‌ಸ್ಟಾರ್ ವಿಜಯ್ ದೇವರಕೊಂಡ, ಎರಡು ದಿನಗಳ ಹಿಂದೆ ನಡೆದ ಭಾರತ-ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ದುಬೈಗೆ ತೆರಳಿದ್ದರು. ದೇವರಕೊಂಡ, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರ ದೊಡ್ಡ ಅಭಿಮಾನಿಯಾಗಿದ್ದು, ಅವರ ಜೀವನಾಧಾರಿತ ಬಯೋಪಿಕ್ ಮಾಡುವ ಹಂಬಲವಿದೆ ಎಂಬ ಅಚ್ಚರಿಯ ಸಂಗತಿಯೊಂದನ್ನು ಹೊರಹಾಕಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಶೋನಲ್ಲಿ ಮಾತನಾಡಿದ ದೇವರಕೊಂಡ, ವಿರಾಟ್ ಕೊಹ್ಲಿ ಅವರ ಬಯೋಪಿಕ್ನಲ್ಲಿ ನಟಿಸುವ ಬಯಕೆಯನ್ನು ಹೊರಹಾಕಿದ್ದಾರೆ.
ಅರ್ಜುನ್ ರೆಡ್ಡಿಯಂತಹ ಹಿಟ್ ಸಿನಿಮಾ ನೀಡಿದ ವಿಜಯ್ ದೇವರಕೊಂಡ ಅವರಿಗೆ ಸ್ಟಾರ್ ಸ್ಪೋರ್ಟ್ಸ್ ಶೋನಲ್ಲಿ, ಯಾವ ಭಾರತೀಯ ಕ್ರಿಕೆಟಿಗನ ಬಯೋಪಿಕ್ ಮಾಡಲು ಇಷ್ಟಪಡುತ್ತೀರಿ ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ವಿಜಯ್, “ಧೋನಿ ಭಾಯ್ ಬಯೋಪಿಕ್ ಅನ್ನು ಈಗಾಗಲೇ ಸುಶಾಂತ್ ಸಿಂಗ್ ರಜಪೂತ್ ಮಾಡಿದ್ದಾರೆ. ಹಾಗಾಗಿ ಈಗ ವಿರಾಟ್ ಬಯೋಪಿಕ್ ಮಾಡಬೇಕೆಂದಿದ್ದೇನೆ ಎಂದು ಉತ್ತರಿಸಿದ್ದಾರೆ.
Arjun Reddy star @TheDeverakonda has expressed his desire to do a biopic on @imVkohli
When he was asked on whom would you like to make a biopic, he replied, “Dhoni bhai biopic already did by Sushant so I’m interested to do Virat anna biopic”#VijayDeverakonda #Viratkohli #Liger pic.twitter.com/M5y38ULEys
— FilmiFever (@FilmiFever) August 28, 2022
ಶತಕದ ಟಿ20 ಪಂದ್ಯ
ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ 100ನೇ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಈ ಮೂಲಕ ಎಲ್ಲಾ ಮಾದರಿಗಳಲ್ಲಿ 100 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಭಾರತದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿಶ್ವ ಕ್ರಿಕೆಟ್‌ನಲ್ಲಿ ಅವರಿಗಿಂತ ಮೊದಲು, ನ್ಯೂಜಿಲೆಂಡ್‌ನ ರಾಸ್ ಟೇಲರ್ ಮಾತ್ರ ಈ ದಾಖಲೆಯನ್ನು ಹೊಂದಿದ್ದರು. ಈ ಪಂದ್ಯದಲ್ಲಿ ಕೊಹ್ಲಿ 34 ಎಸೆತಗಳಲ್ಲಿ 35 ರನ್ ಗಳಿಸಿದರು. ಪಂದ್ಯಕ್ಕೂ ಮುನ್ನ ಸ್ಟಾರ್ ಸ್ಪೋರ್ಟ್ಸ್ ಶೋನಲ್ಲಿ ಮಾತನಾಡಿದ ವಿಜಯ್ ದೇವರಕೊಂಡ, ಈ ಪಂದ್ಯದಲ್ಲಿ ಕೊಹ್ಲಿ ಕನಿಷ್ಠ 50 ರನ್ ಗಳಿಸಬೇಕೆಂದು ಹೇಳಿಕೊಂಡಿದ್ದರು.
ಒಟಿಟಿಯಲ್ಲಿ ಲೈಗರ್
‘ಲೈಗರ್’ ತೆರೆಕಂಡು ಕೆಲವೇ ದಿನಗಳು ಕಳೆದಿವೆ. ಹಲವು ಥಿಯೇಟರ್ಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ನಿರ್ಮಾಪಕರು ಈಗಲೇ ಒಟಿಟಿ ರಿಲೀಸ್ ಡೇಟ್ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಹಾಗಿದ್ದರೂ ಕೂಡ ಒಂದಷ್ಟು ವರದಿಗಳು ಪ್ರಕಟ ಆಗಿವೆ. ಮೂಲಗಳ ಪ್ರಕಾರ, ಸೆಪ್ಟೆಂಬರ್ 30ರಂದು ‘ಲೈಗರ್’ ಒಟಿಟಿಗೆ ಬರಲಿದೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೂಲಕ ಈ ಚಿತ್ರ ಪ್ರಸಾರ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಅಧಿಕೃತ ಪ್ರಕಟಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
‘ಲೈಗರ್’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರು ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರಕ್ಕೆ ವಿಶೇಷ ಮ್ಯಾನರಿಸಂ ಇದೆ. ವಿಶ್ವ ವಿಖ್ಯಾತ ಬಾಕ್ಸರ್ ಮೈಕ್ ಟೈಸನ್ ಅವರು ಕೂಡ ಈ ಚಿತ್ರದಲ್ಲಿ ನಟಿಸಿದ್ದರಿಂದ ಹೆಚ್ಚು ಹೈಪ್ ಕ್ರಿಯೇಟ್ ಆಯಿತು. ಹಾಡುಗಳು ಕೂಡ ಸಖತ್ ಸೌಂಡು ಮಾಡಿದವು. ಅದಕ್ಕೆ ತಕ್ಕಂತೆ ಬಾಕ್ಸ್ ಆಫೀಸ್ ಕಲೆಕ್ಷನ್ ಆಗಿಲ್ಲ ಎಂಬುದು ಬೇಸರದ ಸಂಗತಿ. ಈ ಚಿತ್ರಕ್ಕೆ ಪುರಿ ಜಗನ್ನಾಥ್, ಕರಣ್ ಜೋಹರ್, ಚಾರ್ಮಿ ಕೌರ್ ಬಂಡವಾಳ ಹೂಡಿದ್ದಾರೆ.