ICC Events: ಇನ್ಮುಂದೆ ಕ್ರಿಕೆಟ್ ಬಲು ದುಬಾರಿ; ಭಾರತೀಯ ಕ್ರಿಕೆಟ್ ಅಭಿಮಾನಿಗಳ ಜೇಬಿಗೆ ಬೀಳಲಿದೆ ಕತ್ತರಿ!

ICC & IPL Digital and TV Rights: ಬಿಗ್ ಐಸಿಸಿ ಈವೆಂಟ್‌ಗಳು ಸೇರಿದಂರೆ ಐಪಿಎಲ್ ವೀಕ್ಷಿಸುವುದು ಕೂಡ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ದುಬಾರಿಯಾಗಲಿದೆ. ಇದಕ್ಕೆ ಕಾರಣ ಟಿವಿ ಮತ್ತು ಡಿಜಿಟಲ್ ಹಕ್ಕುಗಳು.

ICC Events: ಇನ್ಮುಂದೆ ಕ್ರಿಕೆಟ್ ಬಲು ದುಬಾರಿ; ಭಾರತೀಯ ಕ್ರಿಕೆಟ್ ಅಭಿಮಾನಿಗಳ ಜೇಬಿಗೆ ಬೀಳಲಿದೆ ಕತ್ತರಿ!
Follow us
TV9 Web
| Updated By: ಪೃಥ್ವಿಶಂಕರ

Updated on: Aug 31, 2022 | 4:44 PM

ಭಾರತದಲ್ಲಿ ಕ್ರಿಕೆಟ್ ಕ್ರೇಜ್ ದಿನೆದಿನೆ ಬೇರೆ ಲೆವೆಲ್​ಗೆ ಹೋಗುತ್ತಿದೆ. ಮಕ್ಕಳಿಂದ ಹಿಡಿದು ದೊಡ್ಡವರಲ್ಲೂ ಕ್ರಿಕೆಟ್ ಮೇಲಿನ ಆಸಕ್ತಿ ಹೆಚ್ಚುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಪ್ರಪಂಚದಾದ್ಯಂತದ ಜನರು ಭಾರತೀಯ ಕ್ರಿಕೆಟ್‌ ಮೇಲೆ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಇದಕ್ಕಾಗಿಯೇ ಭಾರತ ಒಂದು ಕ್ರಿಕೆಟ್ ಧರ್ಮ ರಾಷ್ಟ್ರವಾಗಿ ಪರಿವರ್ತನೆಗೊಂಡಿದ್ದು, ಪ್ರತಿ ಮನೆಯಲ್ಲೂ ಕ್ರಿಕೆಟ್ ಮೇಲೆ ಆಸಕ್ತಿ ಹೊಂದಿರುವ ಒಬ್ಬರಾದರು ಇರುತ್ತಾರೆ. ಆದರೆ ಇದೀಗ ಕ್ರಿಕೆಟ್ ಅಭಿಮಾನಿಗಳಿಗೆ ಕೆಟ್ಟ ಸುದ್ದಿಯೊಂದು ಬಂದಿದ್ದು, ಪ್ರಮುಖ ಕ್ರಿಕೆಟ್ ಪಂದ್ಯಾವಳಿಗಳನ್ನು ವೀಕ್ಷಿಸಲು ಬಯಸುವ ಕ್ರಿಕೆಟ್ ಅಭಿಮಾನಿಗಳ ಜೇಬಿಗೆ ಕತ್ತರಿ ಬಿಳಲಿದೆ.

ಟಿವಿ ಮತ್ತು ಡಿಜಿಟಲ್ ಹಕ್ಕುಗಳೇ ಇದಕ್ಕೆ ಕಾರಣ

ಬಿಗ್ ಐಸಿಸಿ ಈವೆಂಟ್‌ಗಳು ಸೇರಿದಂರೆ ಐಪಿಎಲ್ ವೀಕ್ಷಿಸುವುದು ಕೂಡ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ದುಬಾರಿಯಾಗಲಿದೆ. ಇದಕ್ಕೆ ಕಾರಣ ಟಿವಿ ಮತ್ತು ಡಿಜಿಟಲ್ ಹಕ್ಕುಗಳು. ವಾಸ್ತವವಾಗಿ, ಅಭಿಮಾನಿಗಳು ಐಸಿಸಿ ಟಿವಿ ಸ್ಟ್ರೀಮಿಂಗ್‌ಗಾಗಿ ಪ್ರತ್ಯೇಕ ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದಾಗ್ಯೂ, ಡಿಜಿಟಲ್ ಸ್ಟ್ರೀಮಿಂಗ್‌ಗೆ ಪ್ರತ್ಯೇಕ ಚಂದಾದಾರಿಕೆಯ ಅಗತ್ಯವಿದೆ. ಅದೇ ರೀತಿ, ಐಪಿಎಲ್ ಟಿವಿ ಸ್ಟ್ರೀಮಿಂಗ್‌ ಜೊತೆಗೆ ಅದರ ಡಿಜಿಟಲ್ ಸ್ಟ್ರೀಮಿಂಗ್‌ಗೆ ಪ್ರತ್ಯೇಕ ಚಂದಾದಾರಿಕೆಯ ಅಗತ್ಯವಿದೆ.

ಐಸಿಸಿ ಈವೆಂಟ್‌ಗಳ ಟಿವಿ ಹಕ್ಕುಗಳನ್ನು ಸೋನಿ + ಝೀ ಪಡೆದರೆ, ಡಿಜಿಟಲ್ ಹಕ್ಕುಗಳನ್ನು ಹಾಟ್‌ಸ್ಟಾರ್ ಪಡೆದುಕೊಂಡಿದೆ. ವಾಸ್ತವವಾಗಿ Sony + Zee ಬೃಹತ್ ICC ಈವೆಂಟ್‌ಗಳ ಟಿವಿ ಹಕ್ಕುಗಳನ್ನು ಪಡೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಟಿವಿಯಲ್ಲಿ Sony + Zee ಗೆ ಚಂದಾದಾರರಾಗುವ ಮೂಲಕ ICC ಈವೆಂಟ್‌ಗಳನ್ನು ಆನಂದಿಸಬಹುದು. ಆದಾಗ್ಯೂ, ನಿಮ್ಮ ಫೋನ್‌ನಲ್ಲಿ ನೀವು ICC ಈವೆಂಟ್‌ಗಳನ್ನು ಆನಂದಿಸಲು ಬಯಸಿದರೆ, ನೀವು Disney + Hotstar ಗೆ ವಿಶೇಷ ಚಂದಾದಾರಿಕೆಯನ್ನು ಖರೀದಿಸಬೇಕಾಗುತ್ತದೆ.

ಸ್ಟಾರ್ ಟಿವಿ, ವಯಾಕಾಮ್ 18 ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ. ಆದರೆ ಐಸಿಸಿ ಪಂದ್ಯಾವಳಿಗಳ ಹೊರತಾಗಿ, ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಐಪಿಎಲ್‌ನ ಟಿವಿ ಹಕ್ಕುಗಳನ್ನು ಸ್ಟಾರ್ ಇಂಡಿಯಾ ಹೊಂದಿದೆ. ಟಿವಿಯಲ್ಲಿ ಐಪಿಎಲ್ ಅನ್ನು ಆನಂದಿಸಲು ನೀವು ಸ್ಟಾರ್‌ಗೆ ಚಂದಾದಾರರಾಗಬೇಕು. ಮತ್ತೊಂದೆಡೆ, ಡಿಜಿಟಲ್ ಸ್ಟ್ರೀಮಿಂಗ್‌ಗಾಗಿ, ನೀವು Viacom 18 ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದ ಕ್ರಿಕೆಟ್ ಅಭಿಮಾನಿಗಳ ಜೀಬಿಗೆ ಕತ್ತರಿ ಬೀಳುವುದಂತೂ ಖಚಿತ.

24 ಸಾವಿರ ಕೋಟಿ

ಐಪಿಎಲ್ (IPL) ಪ್ರಸಾರ ಹಕ್ಕುಗಳ ಮೆಗಾ ಬಿಡ್ ನಂತರ, ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ( International Cricket Council) ಮಾಧ್ಯಮ ಹಕ್ಕುಗಳಿಗಾಗಿ ಪ್ರಬಲ ಬಿಡ್ ಕೂಡ ನಡೆದಿತ್ತು. ICC ಟೂರ್ನಮೆಂಟ್‌ಗಳ ಪ್ರಸ್ತುತ ಪ್ರಸಾರಕರಾದ ಡಿಸ್ನಿ ಸ್ಟಾರ್ (Disney Star) ಮತ್ತೊಮ್ಮೆ ಈ ಹಕ್ಕುಗಳನ್ನು ಅತ್ಯಧಿಕ ಬಿಡ್‌ನೊಂದಿಗೆ ಖರೀದಿಸುವಲ್ಲಿ ಯಶಸ್ವಿಯಾಗಿತ್ತು. ಮಾಹಿತಿ ಪ್ರಕಾರ ನಾಲ್ಕು ವರ್ಷಗಳ ಅವಧಿಗಾಗಿ ಸುಮಾರು 24 ಸಾವಿರ ಕೋಟಿಗೆ ಡಿಸ್ನಿ ಸ್ಟಾರ್ ಈ ಹಕ್ಕುಗಳನ್ನು ಖರೀದಿಸಿದ್ದು, ಈ ಮಾಧ್ಯಮ ಹಕ್ಕುಗಳು 2024 ರಿಂದ 2027 ರವರೆಗೆ ಮುಂದುವರಿಯಲಿದೆ. ಜೊತೆಗೆ ಈ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ ನಡೆಯುವ ಎಲ್ಲಾ ಪಂದ್ಯಾವಳಿಗಳನ್ನು ಡಿಸ್ನಿ ಸ್ಟಾರ್ ಪ್ರಸಾರ ಮಾಡಲಿದೆ.