Asia Cup 2023: ಏಷ್ಯಾಕಪ್ನಲ್ಲಿ ಯಾರೆಲ್ಲ ವೀಕ್ಷಕ ವಿವರಣೆ ನೀಡಲಿದ್ದಾರೆ ಗೊತ್ತಾ? ಈ ಪಟ್ಟಿ ನೋಡಿ
Asia Cup 2023: ಆಗಸ್ಟ್ 30 ರಿಂದ ಆರಂಭವಾಗಲಿರುವ 2023ರ ಏಷ್ಯಾಕಪ್ಗೆ 12 ಸದಸ್ಯರ ವೀಕ್ಷಕ ವಿವರಣೆಗಾರರ ಪಟ್ಟಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಬಿಡುಗಡೆ ಮಾಡಿದೆ. 5 ದೇಶಗಳಿಂದ ಒಟ್ಟು 12 ಕಾಮೆಂಟೇಟರ್‌ಗಳು ಈ ಇವೆಂಟ್ನಲ್ಲಿ ಆಡದ ನಡುವೆ ತಮ್ಮ ಮಾತಿನಿಂದ ಪಂದ್ಯಕ್ಕೆ ಮತ್ತಷ್ಟು ರಂಗು ತರಲಿದ್ದಾರೆ.
ಆಗಸ್ಟ್ 30 ರಿಂದ ಆರಂಭವಾಗಲಿರುವ 2023ರ ಏಷ್ಯಾಕಪ್ಗೆ (Asia Cup 2023) 12 ಸದಸ್ಯರ ವೀಕ್ಷಕ ವಿವರಣೆಗಾರರ ಪಟ್ಟಿಯನ್ನು (Commentators List) ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಬಿಡುಗಡೆ ಮಾಡಿದೆ. 5 ದೇಶಗಳಿಂದ ಒಟ್ಟು 12 ಕಾಮೆಂಟೇಟರ್‌ಗಳು ಈ ಇವೆಂಟ್ನಲ್ಲಿ ಆಡದ ನಡುವೆ ತಮ್ಮ ಮಾತಿನಿಂದ ಪಂದ್ಯಕ್ಕೆ ಮತ್ತಷ್ಟು ರಂಗು ತರಲಿದ್ದಾರೆ. ಅದಾಗ್ಯೂ, ಈ ಕಾಮೆಂಟೇಟರ್‌ಗಳ ಪಟ್ಟಿಯಲ್ಲಿ ಭಾರತದ ಮಾಜಿ ಓಪನರ್ ಆಕಾಶ್ ಚೋಪ್ರಾ (Aakash Chopra) ಅವರ ಹೆಸರಿಲ್ಲದೆ ಇರುವುದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಏಕದಿನ ವಿಶ್ವಕಪ್‌ಗೆ ತಯಾರಿಯಾಗಿ ಈ ಪಂದ್ಯಾವಳಿಯನ್ನು ಆಡಲಾಗುತ್ತಿದ್ದು, ಈ ಪಂದ್ಯಾವಳಿಯಲ್ಲಿ 6 ತಂಡಗಳು ಕಣಕ್ಕಿಳಿಯಲಿವೆ. ಹೈಬ್ರಿಡ್ ಮಾದರಿಯಲ್ಲಿ ಈ ಟೂರ್ನಿ ನಡೆಯುತ್ತಿದ್ದು, ಪಂದ್ಯಾವಳಿಯ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ, ಉಳಿದ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಸೆಪ್ಟೆಂಬರ್ 2 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲ್ಲಿದೆ.
27 ಎಸೆತಗಳಲ್ಲಿ 60 ರನ್! ಏಷ್ಯಾಕಪ್ ತಂಡದಲ್ಲಿರುವ ಪಾಕ್ ಬೌಲರ್ಗೆ ಬೆವರಿಳಿಸಿದ ಕ್ಲಾಸೆನ್
ವೀಕ್ಷಕ ವಿವರಣೆಗಾರರ ಪಟ್ಟಿ
ಈ ಏಷ್ಯಾಕಪ್ಗೆ ಯಾವ ದೇಶದಿಂದ ಎಷ್ಟು ವೀಕ್ಷಕ ವಿವರಣೆಗಾರರು ಆಯ್ಕೆಯಾಗಿದ್ದಾರೆ ಎಂಬುದನ್ನು ನೋಡುವುದಾದರೆ..
ಭಾರತ: ಗೌತಮ್ ಗಂಭೀರ್, ರವಿಶಾಸ್ತ್ರಿ, ಸಂಜಯ್ ಮಂಜ್ರೇಕರ್, ಇರ್ಫಾನ್ ಪಠಾಣ್ ಮತ್ತು ದೀಪ್ ದಾಸ್‌ಗುಪ್ತಾ.
ಪಾಕಿಸ್ತಾನ: ವಾಸೀಂ ಅಕ್ರಮ್, ವಕಾರ್ ಯೂನಿಸ್, ಬಾಜಿದ್ ಖಾನ್ ಮತ್ತು ರಮೀಜ್ ರಾಜಾ
ಬಾಂಗ್ಲಾದೇಶ; ಅಥರ್ ಅಲಿ ಖಾನ್
ಶ್ರೀಲಂಕಾ: ರಸೆಲ್ ಅರ್ನಾಲ್ಡ್
-ಇನ್ನು ನ್ಯೂಜಿಲೆಂಡ್ನ ಸ್ಕಾಟ್ ಸ್ಟೈರಿಸ್ ತಟಸ್ಥ ವಿವರಣೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಏಷ್ಯಾಕಪ್ ವೇಳಾಪಟ್ಟಿ
ದಿನಾಂಕ |
ಸ್ಥಳ | ಪಂದ್ಯ | ಹಂತ |
ಸಮಯ |
30 ಆಗಸ್ಟ್ |
ಮುಲ್ತಾನ್ | ಪಾಕಿಸ್ತಾನ vs ನೇಪಾಳ | ಗುಂಪು ಹಂತ |
ಮಧ್ಯಾಹ್ನ 3 ಗಂಟೆ |
31 ಆಗಸ್ಟ್ |
ಕ್ಯಾಂಡಿ | ಬಾಂಗ್ಲಾದೇಶ vs ಶ್ರೀಲಂಕಾ | ಗುಂಪು ಹಂತ | ಮಧ್ಯಾಹ್ನ 3 ಗಂಟೆ |
2 ಸೆಪ್ಟೆಂಬರ್ | ಕ್ಯಾಂಡಿ | ಪಾಕಿಸ್ತಾನ vs ಭಾರತ | ಗುಂಪು ಹಂತ |
ಮಧ್ಯಾಹ್ನ 3 ಗಂಟೆ |
3 ಸೆಪ್ಟೆಂಬರ್ |
ಲಾಹೋರ್ | ಬಾಂಗ್ಲಾದೇಶ vs ಅಫ್ಘಾನಿಸ್ತಾನ | ಗುಂಪು ಹಂತ | ಮಧ್ಯಾಹ್ನ 3 ಗಂಟೆ |
4 ಸೆಪ್ಟೆಂಬರ್ | ಕ್ಯಾಂಡಿ | ಇಂಡಿಯಾ vs ನೇಪಾಳ | ಗುಂಪು ಹಂತ |
ಮಧ್ಯಾಹ್ನ 3 ಗಂಟೆ |
5 ಸೆಪ್ಟೆಂಬರ್ |
ಲಾಹೋರ್ | ಅಫ್ಘಾನಿಸ್ತಾನ vs ಶ್ರೀಲಂಕಾ | ಗುಂಪು ಹಂತ | ಮಧ್ಯಾಹ್ನ 3 ಗಂಟೆ |
6 ಸೆಪ್ಟೆಂಬರ್ | ಲಾಹೋರ್ | ಎ ಗುಂಪಿನ ಮೊದಲ ತಂಡ vs ಬಿ ಗುಂಪಿನ 2ನೇ ತಂಡ | ಸೂಪರ್ 4 ಹಂತ |
ಮಧ್ಯಾಹ್ನ 3 ಗಂಟೆ |
9 ಸೆಪ್ಟೆಂಬರ್ |
ಕೊಲಂಬೊ | ಬಿ ಗುಂಪಿನ ಮೊದಲ ತಂಡ vs ಬಿ ಗುಂಪಿನ 2ನೇ ತಂಡ | ಸೂಪರ್ 4 ಹಂತ | ಮಧ್ಯಾಹ್ನ 3 ಗಂಟೆ |
10 ಸೆಪ್ಟೆಂಬರ್ | ಕೊಲಂಬೊ | ಎ ಗುಂಪಿನ ಮೊದಲ ತಂಡ vs ಎ ಗುಂಪಿನ 2ನೇ ತಂಡ | ಸೂಪರ್ 4 ಹಂತ |
ಮಧ್ಯಾಹ್ನ 3 ಗಂಟೆ |
12 ಸೆಪ್ಟೆಂಬರ್ |
ಕೊಲಂಬೊ | ಎ ಗುಂಪಿನ 2ನೇ ತಂಡ vs ಬಿ ಗುಂಪಿನ ಮೊದಲನೇ ತಂಡ | ಸೂಪರ್ 4 ಹಂತ | ಮಧ್ಯಾಹ್ನ 3 ಗಂಟೆ |
14 ಸೆಪ್ಟೆಂಬರ್ | ಕೊಲಂಬೊ | ಎ ಗುಂಪಿನ ಮೊದಲ ತಂಡ vs ಬಿ ಗುಂಪಿನ ಮೊದಲ ತಂಡ | ಸೂಪರ್ 4 ಹಂತ |
ಮಧ್ಯಾಹ್ನ 3 ಗಂಟೆ |
15 ಸೆಪ್ಟೆಂಬರ್ |
ಕೊಲಂಬೊ | ಎ ಗುಂಪಿನ ಎರಡನೇ ತಂಡ vs ಬಿ ಗುಂಪಿನ ಎರಡನೇ ತಂಡ | ಸೂಪರ್ 4 ಹಂತ |
ಮಧ್ಯಾಹ್ನ 3 ಗಂಟೆ |
17 ಸೆಪ್ಟೆಂಬರ್ | ಕೊಲಂಬೊ | ಫೈನಲ್ | ಸೂಪರ್ 4 ಹಂತ |
ಮಧ್ಯಾಹ್ನ 3 ಗಂಟೆ |
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:28 am, Sun, 13 August 23