Asia Cup: ಏಷ್ಯಾಕಪ್ ಫೈನಲ್ ಪಾಕಿಸ್ತಾನದಲ್ಲಿ ನಡೆಯುವುದು ಅನುಮಾನ; ಪಿಸಿಬಿಗೆ ಮತ್ತಷ್ಟು ಅವಮಾನ!

Asia Cup 2023: ಈ ಹಿಂದಿನಿಂದಲೂ ಏಷ್ಯಾಕಪ್ ಆಡಲು ಭಾರತ ಪಾಕಿಸ್ತಾನಕ್ಕೆ ಬರಲೇಬೇಕು ಎಂಬುದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮೊಂಡು ವಾದವಾಗಿತ್ತು.

Asia Cup: ಏಷ್ಯಾಕಪ್ ಫೈನಲ್ ಪಾಕಿಸ್ತಾನದಲ್ಲಿ ನಡೆಯುವುದು ಅನುಮಾನ; ಪಿಸಿಬಿಗೆ ಮತ್ತಷ್ಟು ಅವಮಾನ!
ಬಾಬರ್- ರೋಹಿತ್
Follow us
|

Updated on:Mar 24, 2023 | 4:02 PM

ಏಷ್ಯಾಕಪ್ ( Asia Cup) ಆಯೋಜನೆಯ ಬಗ್ಗೆ ಇದ್ದ ಗೊಂದಲಗಳಿಗೆ ಅಂತಿಮವಾಗಿ ತೆರೆಬಿದ್ದಿದೆ. ಈ ಬಾರಿಯ ಏಷ್ಯಾಕಪ್ ಪಾಕಿಸ್ತಾನದಲ್ಲಿ ನಡೆಯಲಿದೆ. ಭಾರತ ತಂಡ (Team India) ಏಷ್ಯಾಕಪ್ ಆಡಲು ಪಾಕಿಸ್ತಾನಕ್ಕೆ ಬರದಿದ್ದರೆ ನಾವೂ ಕೂಡ ವಿಶ್ವಕಪ್ ಆಡಲು ಭಾರತಕ್ಕೆ ಹೋಗುವುದಿಲ್ಲ ಎಂದು ಹೇಳುತ್ತಾ ಬಿಸಿಸಿಐಗೆ (BCCI) ಪದೇಪದೇ ಬೆದರಿಕೆಯೊಡ್ಡುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board) ಕ್ರಿಕೆಟ್​ ಬಿಗ್​ಬಾಸ್ ಮುಂದೆ ತಲೆಬಾಗಿದೆ. ವಾಸ್ತವವಾಗಿ ಏಷ್ಯಾಕಪ್ ಪಾಕಿಸ್ತಾನದಲ್ಲಿ ನಡೆಯಲ್ಲಿದೆಯಾದರೂ, ಭಾರತ ತಂಡ ಮಾತ್ರ ಪಾಕಿಸ್ತಾನಕ್ಕೆ ಹೋಗುತ್ತಿಲ್ಲ. ಬದಲಿಗೆ ಭಾರತ ಆಡಬೇಕಿರುವ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಆದರೆ ಈ ನಡುವೆ ಹುಟ್ಟಿಕೊಂಡಿರುವ ಪ್ರಶ್ನೆ ಎಂದರೆ, ಏಷ್ಯಾಕಪ್ ಫೈನಲ್ ಎಲ್ಲಿ ನಡೆಯಲಿದೆ? ಎಂಬುದು.

ಏಕೆಂದರೆ ಒಂದು ವೇಳೆ ಟೀಂ ಇಂಡಿಯಾ ಏಷ್ಯಾಕಪ್‌ನಲ್ಲಿ ಫೈನಲ್ ತಲುಪಿದರೆ ಫೈನಲ್ ಪಂದ್ಯ ಪಾಕಿಸ್ತಾನದಲ್ಲಿ ನಡೆಯಲು ಸಾಧ್ಯವೆ ಇಲ್ಲ. ಅಲ್ಲದೆ ಟೂರ್ನಿ ಆರಂಭಕ್ಕೂ ಮುನ್ನವೇ ಭಾರತ ತನ್ನ ಪಂದ್ಯಗಳನ್ನು ಪಾಕಿಸ್ತಾನದ ಹೊರಗೆ ಆಡಬಹುದು ಎಂದು ಪಿಸಿಬಿಯೇ ಒಪ್ಪಿಕೊಂಡಿದೆ. ಆದರೆ ಇತರ ತಂಡಗಳು ಮಾತ್ರ ಏಷ್ಯಾಕಪ್ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಡಲಿವೆ. ಆದರೆ ಟೀಂ ಇಂಡಿಯಾ ಫೈನಲ್‌ಗೆ ತಲುಪಿದರೆ, ಪಾಕಿಸ್ತಾನಕ್ಕೆ ತವರಿನಲ್ಲಿ ಪ್ರಶಸ್ತಿ ಪಂದ್ಯವನ್ನು ಆಯೋಜಿಸಲು ಸಾಧ್ಯವಾಗುವುದಿಲ್ಲ.

IPL 2023: ನಿಟ್ಟುಸಿರು ಬಿಟ್ಟ ಚೆನ್ನೈ ಫ್ಯಾನ್ಸ್; ತಂಡ ಸೇರಿಕೊಂಡ ಧೋನಿಯ ಉತ್ತರಾಧಿಕಾರಿ..!

ಪಾಕಿಸ್ತಾನ ಫೈನಲ್‌ಗೆ ಬಂದರೆ ಮತ್ತಷ್ಟು ಅವಮಾನ!

ಒಂದು ವೇಳೆ ಭಾರತ ತಂಡ ಫೈನಲ್ ತಲುಪಿದರೆ, ಮತ್ತೊಂದು ತಂಡವಾಗಿ ಪಾಕಿಸ್ತಾನ ತಂಡ ಕೂಡ ಫೈನಲ್ ಪ್ರವೇಶಿಸಿದರೆ ಪಿಸಿಬಿಗೆ ಮತ್ತಷ್ಟು ಮುಖಭಂಗವಾಗಲಿದೆ. ಏಕೆಂದರೆ ಏಷ್ಯಾಕಪ್‌ನ ಆತಿಥೇಯವಾಗಿರುವ ಪಾಕಿಸ್ತಾನ, ಫೈನಲ್​ ಪಂದ್ಯವನ್ನು ತಟಸ್ಥ ಸ್ಥಳದಲ್ಲಿ ಆಡಬೇಕಾಗುತ್ತದೆ.

ಬಿಸಿಸಿಐ ಮುಂದೆ ತಲೆಬಾಗಿದ ಪಾಕಿಸ್ತಾನ

ಈ ಹಿಂದಿನಿಂದಲೂ ಏಷ್ಯಾಕಪ್ ಆಡಲು ಭಾರತ ಪಾಕಿಸ್ತಾನಕ್ಕೆ ಬರಲೇಬೇಕು ಎಂಬುದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮೊಂಡು ವಾದವಾಗಿತ್ತು. ಆದರೆ ಬಿಸಿಸಿಐ ಬಹಳ ಹಿಂದೆಯೇ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು. ಇದಾದ ನಂತರ ಪಿಸಿಬಿ, ನೀವು ಬರದಿದ್ದರೆ, ಭಾರತಕ್ಕೆ ತಮ್ಮ ತಂಡ ವಿಶ್ವಕಪ್ ಆಡಲು ಬರುವುದಿಲ್ಲ ಎಂದು ಬೆದರಿಕೆ ಹಾಕಿತ್ತು. ಇಷ್ಟು ಮಾತ್ರವಲ್ಲದೆ ಏಷ್ಯಾಕಪ್​ನಲ್ಲಿ ಆಡುತ್ತಿರುವ ಇತರ ದೇಶಗಳ ಆಡಳಿತ ಮಂಡಳಿಗಳ ಜತೆ ಪ್ರತ್ಯೇಕ ಸಭೆ ನಡೆಸಿ ಬಿಸಿಸಿಐ ವಿರುದ್ಧ ವಾತಾವರಣ ಸೃಷ್ಟಿಸಲು ಪಿಸಿಬಿ ಬಯಸಿತ್ತು. ಆದರೆ ಕ್ರಿಕೆಟ್ ಲೋಕದಲ್ಲಿ ಬಿಸಿಸಿಐ ಹೊಂದಿರುವ ಅಧಿಕಾರದ ಮುಂದೆ ಪಾಕಿಸ್ತಾನ ತಲೆಬಾಗಬೇಕಾಯಿತು.

ಟೀಂ ಇಂಡಿಯಾ ಎಲ್ಲಿ ಪಂದ್ಯ ಆಡಲಿದೆ?

ಏಷ್ಯಾಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡ ತನ್ನ ಪಂದ್ಯಗಳನ್ನು ಎಲ್ಲಿ ಆಡಲಿದೆ ಎಂಬ ಈ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಸ್ಥಳವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಭಾರತ ತಂಡವು ಯುಎಇ, ಶ್ರೀಲಂಕಾ, ಓಮನ್‌, ಈ ಮೂರು ದೇಶಗಳ ಯಾವುದಾದರೂ ಒಂದರಲ್ಲಿ ತನ್ನ ಪಂದ್ಯಗಳನ್ನು ಆಡಲಿದೆ ಎಂದು ಹೇಳಲಾಗುತ್ತಿದೆ. ಅಂದಹಾಗೆ, ಈ ಮೂರು ದೇಶಗಳೊಂದಿಗೆ ಇಂಗ್ಲೆಂಡ್ ಹೆಸರೂ ಚಾಲ್ತಿಯಲ್ಲಿದೆ. ಆದರೆ ಈ ಬಗ್ಗೆ ಇನ್ನಷ್ಟೆ ಸ್ಪಷ್ಟನೆ ಸಿಗಬೇಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:00 pm, Fri, 24 March 23