ಯಾರಿಗೆ ಯಾವ ಪ್ರಶಸ್ತಿ? ಭಾರತ ತಂಡಕ್ಕೆ ಸಿಕ್ಕ ಪ್ರಶಸ್ತಿ ಮೊತ್ತ ಎಷ್ಟು? ಇಲ್ಲಿದೆ ಮಾಹಿತಿ

Asia Cup 2023 Award List: ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಮೊದಲ ಓವರ್​ನಲ್ಲೇ ಜಸ್​ಪ್ರೀತ್ ಬುಮ್ರಾ ಒಂದು ವಿಕೆಟ್ ಪಡೆದರು. ಇನ್ನು ಮೊಹಮ್ಮದ್ ಸಿರಾಜ್ 4ನೇ ಓವರ್​ನಲ್ಲಿ 4 ವಿಕೆಟ್ ಕಬಳಿಸಿದರು.

ಯಾರಿಗೆ ಯಾವ ಪ್ರಶಸ್ತಿ? ಭಾರತ ತಂಡಕ್ಕೆ ಸಿಕ್ಕ ಪ್ರಶಸ್ತಿ ಮೊತ್ತ ಎಷ್ಟು? ಇಲ್ಲಿದೆ ಮಾಹಿತಿ
Team India
Follow us
| Updated By: ಝಾಹಿರ್ ಯೂಸುಫ್

Updated on: Sep 17, 2023 | 9:22 PM

ಏಷ್ಯಾಕಪ್ 2023 ಕ್ಕೆ ತೆರೆ ಬಿದ್ದಿದೆ. ಕೊಲಂಬೊದ ಆರ್​. ಪ್ರೇಮದಾಸ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ಭಾರತ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರೊಂದಿಗೆ ಏಷ್ಯಾಕಪ್ ಇತಿಹಾಸದಲ್ಲೇ 8ನೇ ಬಾರಿ ಕಿರೀಟ ಮುಡಿಗೇರಿಸಿಕೊಂಡ ವಿಶೇಷ ಹಿರಿಮೆ ಟೀಮ್ ಇಂಡಿಯಾ ಪಾಲಾಯಿತು.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಮೊದಲ ಓವರ್​ನಲ್ಲೇ ಜಸ್​ಪ್ರೀತ್ ಬುಮ್ರಾ ಒಂದು ವಿಕೆಟ್ ಪಡೆದರು. ಇನ್ನು ಮೊಹಮ್ಮದ್ ಸಿರಾಜ್ 4ನೇ ಓವರ್​ನಲ್ಲಿ 4 ವಿಕೆಟ್ ಕಬಳಿಸಿದರು.

ಇನ್ನು 7 ಓವರ್​ಗಳನ್ನು ಎಸೆದ ಸಿರಾಜ್ 21 ರನ್ ನೀಡಿ 6 ವಿಕೆಟ್ ಪಡೆದರೆ, ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ 2.2 ಓವರ್​ಗಳಲ್ಲಿ 3 ರನ್ ನೀಡಿ 3 ವಿಕೆಟ್ ಉರುಳಿಸಿದರು. ಇದರೊಂದಿಗೆ ಶ್ರೀಲಂಕಾ ತಂಡವು 50 ರನ್​ಗಳಿಗೆ ಸರ್ವಪತನ ಕಂಡಿತು.

51 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 6.1 ಓವರ್​ಗಳಲ್ಲಿ ಚೇಸ್ ಮಾಡಿ 10 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿತು. ಇದಾದ ಬಳಿಕ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಟೀಮ್ ಇಂಡಿಯಾ ಟ್ರೋಫಿಯನ್ನು ಮುಡಿಗೇರಿಸಿಕೊಂಡರೆ ಕೆಲ ಆಟಗಾರರು ವಿಶೇಷ ಪ್ರಶಸ್ತಿಗಳನ್ನು ಪಡೆದರು. ಹೀಗೆ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…

  • ಅತ್ಯುತ್ತಮ ಕ್ಯಾಚ್ ಪ್ರಶಸ್ತಿ: ರವೀಂದ್ರ ಜಡೇಜಾ (ಭಾರತ) – 3000 ಯುಎಸ್​ ಡಾಲರ್ ನಗದು ಬಹುಮಾನ ( ಭಾರತೀಯ ಮೌಲ್ಯ ಸುಮಾರು 2.4 ಲಕ್ಷ ರೂ.)
  • ಪಂದ್ಯ ಶ್ರೇಷ್ಠ ಪ್ರಶಸ್ತಿ: ಮೊಹಮ್ಮದ್ ಸಿರಾಜ್ (ಭಾರತ) – 5000 ಯುಎಸ್​ ಡಾಲರ್ ನಗದು ಬಹುಮಾನ (ಭಾರತೀಯ ಮೌಲ್ಯ ಸುಮಾರು 4 ಲಕ್ಷ ರೂ.)
  • ಸರಣಿ ಶ್ರೇಷ್ಠ ಪ್ರಶಸ್ತಿ: ಕುಲ್ದೀಪ್ ಯಾದವ್ (ಭಾರತ)- 15000 ಯುಎಸ್ ಡಾಲರ್ ನಗದು ಬಹುಮಾನ (ಭಾರತೀಯ ಮೌಲ್ಯ ಸುಮಾರು 12 ಲಕ್ಷ ರೂ.)
  • ರನ್ನರ್ಸ್ ಅಪ್ ತಂಡ: ಶ್ರೀಲಂಕಾ- 75,000 ಯುಎಸ್ ಡಾಲರ್ ನಗದು ಬಹುಮಾನ (ಭಾರತೀಯ ಮೌಲ್ಯ ಸುಮಾರು 62 ಲಕ್ಷ ರೂ.)
  • ವಿನ್ನರ್ಸ್​ ತಂಡ: ಭಾರತ- 150,000 ಯುಎಸ್ ಡಾಲರ್ ನಗದು ಬಹುಮಾನ (ಭಾರತೀಯ ಮೌಲ್ಯ ಸುಮಾರು 1.25 ಕೋಟಿ ರೂ.)
  • ವಿಶೇಷ ಪ್ರಶಸ್ತಿ ಮೊತ್ತ: ಮೈದಾನದ ಸಿಬ್ಬಂದಿಗಳಿಗೆ 50,000 ಯುಎಸ್ ಡಾಲರ್ ನಗದು (ಭಾರತೀಯ ಮೌಲ್ಯ ಸುಮಾರು 41 ಲಕ್ಷ ರೂ.)