AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಲಂಬೊದಲ್ಲಿ ಶೇ. 70 ರಷ್ಟು ಮಳೆ; ಭಾರತ-ಪಾಕ್ ಪಂದ್ಯ ಮತ್ತೆ ರದ್ದಾಗುವ ಸಾಧ್ಯತೆ..!

India vs Pakistan: ಕೊಲಂಬೊದಲ್ಲಿ ಸೆಪ್ಟೆಂಬರ್ 10 ರಂದು ಅಂದರೆ ಭಾನುವಾರದಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ನವೀಕರಣ ವೆಬ್‌ಸೈಟ್ ಪ್ರಕಾರ, ಸೆಪ್ಟೆಂಬರ್ 10 ರಂದು ಕೊಲಂಬೊದಲ್ಲಿ ಬೆಳಿಗ್ಗೆ 70 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಆದರೆ ದೊಡ್ಡ ಅಪಾಯವೆಂದರೆ ಮಳೆಯ ಸಮಯ. ಪಂದ್ಯ ಪ್ರಾರಂಭವಾಗುವ ಸಮಯಕ್ಕೆ ಮಳೆಯ ಆಗಮನವಾಗಲಿದ್ದು, ಕ್ರಮೇಣ ಅದು ಹೆಚ್ಚಾಗುತ್ತದೆ ಎಂದು ವರದಿಯಾಗಿದೆ.

ಕೊಲಂಬೊದಲ್ಲಿ ಶೇ. 70 ರಷ್ಟು ಮಳೆ; ಭಾರತ-ಪಾಕ್ ಪಂದ್ಯ ಮತ್ತೆ ರದ್ದಾಗುವ ಸಾಧ್ಯತೆ..!
ಭಾರತ- ಪಾಕಿಸ್ತಾನ
ಪೃಥ್ವಿಶಂಕರ
|

Updated on:Sep 06, 2023 | 1:41 PM

Share

ಮಳೆ ಅಡ್ಡಿ ನಡುವೆಯೂ ಏಷ್ಯಾಕಪ್​ನ (Asia Cup 2023) ಲೀಗ್ ಹಂತ ಮುಕ್ತಾಯಗೊಂಡಿದೆ. ಇದೀಗ ಸೂಪರ್ 4 ಹಂತ ಇಂದಿನಿಂದ ಆರಂಭವಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ (Pakistan vs Bangladesh) ತಂಡಗಳ ಮುಖಾಮುಖಿಯಾಗಲಿವೆ. ಆ ಬಳಿಕ ಸೆಪ್ಟೆಂಬರ್ 10ರಂದು ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗಲಿವೆ. ಈ ಮೊದಲು ಈ ಉಭಯ ತಂಡಗಳು ಲೀಗ್ ಹಂತದಲ್ಲಿ ಮುಖಾಮುಖಿಯಾಗಿದ್ದಾಗ ಮಳೆ ಈ ಪಂದ್ಯಕ್ಕೆ ಅಡ್ಡಿಯುಂಟು ಮಾಡಿತ್ತು. ಇದು ಉಭಯ ದೇಶಗಳ ಅಭಿಮಾನಿಗಳಿಗೆ ಸಾಕಷ್ಟು ನಿರಾಸೆಯನ್ನುಂಟು ಮಾಡಿತ್ತು. ಇದೀಗ ಈ ತಂಡಗಳ ಎರಡನೇ ಬಾರಿಯ ಮುಖಾಮುಖಿಗೂ ವರುಣ ರಾಯನ ಅವಕೃಪೆ ಎದುರಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಸೆಪ್ಟೆಂಬರ್ 2 ರಂದು ಪಲ್ಲೆಕೆಲೆಯಲ್ಲಿ ನಡೆದ ಏಷ್ಯಾಕಪ್‌ನ ಎರಡನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮೊದಲ ಬಾರಿಗೆ ಮುಖಾಮುಖಿಯಾದ್ದವು. ಆದರೆ ಆ ಪಂದ್ಯದಲ್ಲಿ ಕೇವಲ ಒಂದು ಇನ್ನಿಂಗ್ಸ್ ಮಾತ್ರ ನಡೆದಿತ್ತು. ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 47 ಓವರ್​ಗಳ ಬ್ಯಾಟಿಂಗ್‌ ಮಾಡಿತ್ತು. ಆದರೆ ಪಾಕಿಸ್ತಾನದ ಇನ್ನಿಂಗ್ಸ್ ಆರಂಭಕ್ಕೂ ಮುನ್ನವೇ ಮಳೆ ಬಂದಿದ್ದರಿಂದ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಇದೀಗ ಕೊಲಂಬೊದಲ್ಲಿ ಈ ಉಭಯ ತಂಡಗಳು ಸೂಪರ್ 4 ಹಂತದಲ್ಲಿ ಮುಖಾಮುಖಿಯಾಗಲು ಸಿದ್ದತೆ ನಡೆಸಿವೆ. ಆದರೆ ಅಲ್ಲೂ ಸಹ, ಸೆಪ್ಟೆಂಬರ್ 10 ರಂದು ಮಳೆಯಾಗಲಿದೆ ಎಂದು ವರದಿಯಾಗಿದೆ.

‘ಪಾಕಿಸ್ತಾನದಲ್ಲಿ ಏಷ್ಯಾಕಪ್ ಆಯೋಜಿಸುವುದು ಯಾರಿಗೂ ಇಷ್ಟವಿರಲಿಲ್ಲ’; ಗೊಂದಲಗಳಿಗೆ ತೆರೆ ಎಳೆದ ಜಯ್​ ಶಾ

ಸೆ. 10 ರಂದು ಕೊಲಂಬೊದಲ್ಲಿ ಭಾರಿ ಮಳೆ

ಕೊಲಂಬೊದಲ್ಲಿ ಸೆಪ್ಟೆಂಬರ್ 10 ರಂದು ಅಂದರೆ ಭಾನುವಾರದಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ನವೀಕರಣ ವೆಬ್‌ಸೈಟ್ ಪ್ರಕಾರ, ಸೆಪ್ಟೆಂಬರ್ 10 ರಂದು ಕೊಲಂಬೊದಲ್ಲಿ ಬೆಳಿಗ್ಗೆ 70 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಆದರೆ ದೊಡ್ಡ ಅಪಾಯವೆಂದರೆ ಮಳೆಯ ಸಮಯ. ಪಂದ್ಯ ಪ್ರಾರಂಭವಾಗುವ ಸಮಯಕ್ಕೆ ಮಳೆಯ ಆಗಮನವಾಗಲಿದ್ದು, ಕ್ರಮೇಣ ಅದು ಹೆಚ್ಚಾಗುತ್ತದೆ. ಆಗಸದಲ್ಲಿ ನಿರಂತರವಾಗಿ ಕಪ್ಪು ಮೋಡ ಕವಿದಿದ್ದು, ರಾತ್ರಿ ವೇಳೆ ಭಾರೀ ಮಳೆಯಾಗುವ ಸಂಪೂರ್ಣ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಉಳಿದ ಪಂದ್ಯಗಳಿಗೂ ಮಳೆ ಕಾಟ

ಒಂದು ವೇಳೆ ಹವಾಮಾನ ವರದಿ ನಿಜವಾದರೆ ಈ ಬಾರಿಯ ಏಷ್ಯಾಕಪ್​ನಲ್ಲಿ ಭಾರತ-ಪಾಕಿಸ್ತಾನದ ಸತತ ಎರಡನೇ ಪಂದ್ಯವನ್ನು ರದ್ದುಗೊಳ್ಳುವ ಸಾಧ್ಯತೆಗಳಿವೆ. ಇದು ಸಾಲದೆಂಬಂತೆ ಕೊಲಂಬೊದಲ್ಲಿ ನಡೆಯಲಿರುವ ಭಾರತ-ಪಾಕ್ ಪಂದ್ಯಕ್ಕೆ ಮಾತ್ರ ಮಳೆಯ ಭೀತಿ ಎದುರಾಗಿಲ್ಲ. ಬದಲಿಗೆ ಇಲ್ಲಿ ನಡೆಯಲಿರುವ ಭಾರತದ ಇನ್ನೆರಡು ಪಂದ್ಯಗಳಿಗೂ ಮಳೆಯಿಂದಾಗಿ ತೊಂದರೆಯಾಗಬಹುದು ಎಂದು ವರದಿಯಾಗಿದೆ.

ಸೆ.12ರಂದು ಇದೇ ಮೈದಾನದಲ್ಲಿ ಭಾರತ-ಶ್ರೀಲಂಕಾ ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಅಂದು ಕೊಲಂಬೊದಲ್ಲಿ ಶೇ.40ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಆದರೆ, ಸೆಪ್ಟೆಂಬರ್ 15ರಂದು ಬಾಂಗ್ಲಾದೇಶ ಹಾಗೂ ಭಾರತ ನಡುವಿನ ಪಂದ್ಯಕ್ಕೆ ಹಿಂದಿನ ದಿನಗಳಿಗೆ ಹೋಲಿಸಿದರೆ ವಾತಾವರಣ ಕೊಂಚ ಸ್ಪಷ್ಟವಾಗಲಿದೆ ಎಂದು ವರದಿಯಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:39 pm, Wed, 6 September 23

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​