ಏಷ್ಯಾಕಪ್ನ 5ನೇ ಪಂದ್ಯದಲ್ಲಿ ನೇಪಾಳ ವಿರುದ್ಧ ಟೀಮ್ ಇಂಡಿಯಾ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಶ್ರೀಲಂಕಾದ ಪಲ್ಲೆಕಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು 230 ರನ್ಗಳಿಗೆ ಆಲೌಟ್ ಆಯಿತು. ಆದರೆ ಟೀಮ್ ಇಂಡಿಯಾ ಬ್ಯಾಟಿಂಗ್ ವೇಳೆ ಮಳೆ ಬಂದಿದ್ದರಿಂದ ಡಕ್ವರ್ತ್ ಲೂಯಿಸ್ ನಿಯಮದಂತೆ ಟಾರ್ಗೆಟ್ ನೀಡಲಾಯಿತು. ಅದರಂತೆ 23 ಓವರ್ಗಳಲ್ಲಿ 145 ರನ್ಗಳ ಗುರಿ ಪಡೆದ ಭಾರತ ತಂಡದ ಪರ ರೋಹಿತ್ ಶರ್ಮಾ (74) ಹಾಗೂ ಶುಭ್ಮನ್ ಗಿಲ್ (67) ಭರ್ಜರಿ ಬ್ಯಾಟಿಂಗ್ ನಡೆಸಿದರು. ಅಲ್ಲದೆ 20.1 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ಮುಟ್ಟುವ ಮೂಲಕ ಟೀಮ್ ಇಂಡಿಯಾ ಅಮೋಘ ಗೆಲುವು ದಾಖಲಿಸಿತು.
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ನೇಪಾಳ (ಪ್ಲೇಯಿಂಗ್ XI): ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ರೋಹಿತ್ ಪೌಡೆಲ್ (ನಾಯಕ), ಭೀಮ್ ಶರ್ಕಿ, ಸೋಂಪಾಲ್ ಕಾಮಿ, ಗುಲ್ಸನ್ ಝಾ, ದೀಪೇಂದ್ರ ಸಿಂಗ್ ಐರಿ, ಕುಶಾಲ್ ಮಲ್ಲಾ, ಸಂದೀಪ್ ಲಮಿಚಾನೆ, ಕರಣ್ ಕೆಸಿ, ಲಲಿತ್ ರಾಜಬನ್ಶಿ.
ನೇಪಾಳ ತಂಡ: ರೋಹಿತ್ ಪೌಡೆಲ್ (ನಾಯಕ), ಮಹಮದ್ ಆಸಿಫ್ ಶೇಖ್, ಕುಶಾಲ್ ಭುರ್ಟೆಲ್, ಲಲಿತ್ ರಾಜ್‌ಬಂಶಿ, ಭೀಮ್ ಶಾರ್ಕಿ, ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಸಂದೀಪ್ ಲಮಿಚಾನೆ, ಕರಣ್ ಕೆಸಿ, ಗುಲ್ಶನ್ ಕುಮಾರ್ ಝಾ, ಆರಿಫ್ ಶೇಖ್, ಸೋಂಪಾಲ್ ಕಾಮಿ, ಪ್ರತೀಶ್ ಜಿಸಿ, ಕಿಶೋರ್ ಮಹತೋ, ಸಂದೀಪ್ ಜೊರ , ಅರ್ಜುನ್ ಸೌದ್, ಶ್ಯಾಮ್ ಧಾಕಲ್.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).
ಡಕ್ವರ್ತ್ ಲೂಯಿಸ್ ನಿಯಮದಂತೆ 23 ಓವರ್ಗಳಲ್ಲಿ 145 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾ 20.1 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಟಾರ್ಗೆಟ್ ಅನ್ನು ಚೇಸ್ ಮಾಡಿದೆ. ಈ ಮೂಲಕ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ರೋಹಿತ್ ಶರ್ಮಾ ಅಜೇಯ- 74 ರನ್
ಶುಭ್ಮನ್ ಗಿಲ್ ಅಜೇಯ- 67 ರನ್
ಗುಲ್ಶನ್ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ರೋಹಿತ್ ಶರ್ಮಾ. ಟೀಮ್ ಇಂಡಿಯಾಗೆ ಗೆಲ್ಲಲು ಕೇವಲ 5 ರನ್ಗಳ ಅವಶ್ಯಕತೆ.
47 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಅರ್ಧಶತಕ ಪೂರೈಸಿದ ಶುಭ್ಮನ್ ಗಿಲ್. ಗೆಲುವಿನತ್ತ ಭಾರತ…ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಉತ್ತಮ ಬ್ಯಾಟಿಂಗ್.
ಡಿಎಲ್ಎಸ್ ನಿಯಮದಂತೆ ಭಾರತಕ್ಕೆ ಗೆಲ್ಲಲು 45 ಎಸೆತಗಳಲ್ಲಿ 27 ರನ್ಗಳ ಅವಶ್ಯಕತೆ
ರಾಜಬನ್ಶಿ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ. 4ನೇ ಸಿಕ್ಸ್ ಸಿಡಿಸಿದ ಹಿಟ್ಮ್ಯಾನ್, ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್.
39 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅರ್ಧಶತಕ ಪೂರೈಸಿದ ರೋಹಿತ್ ಶರ್ಮಾ. ಗೆಲುವಿನತ್ತ ಟೀಮ್ ಇಂಡಿಯಾ. ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್.
ಸಂದೀಪ್ ಲಾಮಿಚಾನೆ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ. ಗೆಲುವಿನತ್ತ ಮುನ್ನಡೆಯುತ್ತಿರುವ ಭಾರತ. ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್.
ಸಂದೀಪ್ ಲಾಮಿಚಾನೆ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಶುಭ್ಮನ್ ಗಿಲ್. ಟೀಮ್ ಇಂಡಿಯಾ ಮೊತ್ತ 60 ಕ್ಕೆ ಏರಿಕೆ. ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್.
ಸಂದೀಮ್ ಲಾಮಿಚಾನೆ ಎಸೆತದಲ್ಲಿ ಲೆಗ್ ಸೈಡ್ನತ್ತ ಸ್ವೀಪ್ ಶಾಟ್ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ. 7 ಓವರ್ ಮುಕ್ತಾಯಕ್ಕೆ ಟೀಮ್ ಇಂಡಿಯಾ ಮೊತ್ತ 45. ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್.
3 ಓವರ್‌ಗಳ ಮುಕ್ತಾಯ. ಮೂರು ಓವರ್ಗಳಲ್ಲಿ 19 ರನ್ ಕಲೆಹಾಕಿದ ಟೀಮ್ ಇಂಡಿಯಾ. ಇನ್ನು 20 ಓವರ್ಗಳಲ್ಲಿ 126 ರನ್ಗಳ ಗುರಿ. ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್.
10.15 ರಿಂದ ಪಂದ್ಯ ಶುರುವಾಗಲಿದ್ದು, ಪಂದ್ಯವನ್ನು 23 ಓವರ್ಗಳವರೆಗೆ ಸೀಮಿತಗೊಳಿಸಲಾಗಿದೆ. ಅದರಂತೆ ಟೀಮ್ ಇಂಡಿಯಾ 23 ಓವರ್ಗಳಲ್ಲಿ 145 ರನ್ಗಳಿಸಬೇಕಿದೆ.
ಸದ್ಯ 2.1 ಓವರ್ಗಳಲ್ಲಿ ಟೀಮ್ ಇಂಡಿಯಾ 17 ರನ್ ಕಲೆಹಾಕಿದ್ದು, ಇನ್ನುಳಿದ 20.5 ಓವರ್ಗಳಲ್ಲಿ 128 ರನ್ಗಳಿಸಬೇಕಿದೆ.
ಸದ್ಯ ಮಳೆ ಸ್ಥಗಿತಗೊಂಡಿದ್ದು, ಇದೀಗ ಮೈದಾನದಲ್ಲಿನ ನೀರನ್ನು ತೆರವುಗೊಳಿಸಲಾಗುತ್ತಿದೆ. ಹೀಗಾಗಿ 10 ಗಂಟೆಯಿಂದ ಪಂದ್ಯ ಶುರುವಾಗುವ ಸಾಧ್ಯತೆಯಿದೆ ಎಂದು ಅಂಪೈರ್ ತಿಳಿಸಿದ್ದಾರೆ.
ಇನ್ನು ಪಂದ್ಯ ಆರಂಭವಾದರೂ ಓವರ್‌ಗಳ ಕಡಿತ ಮಾಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ 25 ಓವರ್‌ಗಳ ಪಂದ್ಯ ನಡೆದರೂ ಅಚ್ಚರಿಪಡಬೇಕಿಲ್ಲ.
ಒಂದು ವೇಳೆ ಮಳೆ ನಿಂತರೆ ಓವರ್‌ಗಳ ಕಡಿತದೊಂದಿಗೆ ಪಂದ್ಯ ಮುಂದುವರೆಯಲಿದೆ. ಇಲ್ಲಿ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ ಗುರಿ ನೀಡಲಾಗುತ್ತದೆ. ಅದರಂತೆ ಟೀಮ್ ಇಂಡಿಯಾದ ಗುರಿ ಹೀಗಿರಲಿದೆ.
ಶ್ರೀಲಂಕಾದ ಪಲ್ಲೆಕಲೆಯಲ್ಲಿ ಮಳೆ ಮುಂದುವರೆದಿದ್ದು, ಹೀಗಾಗಿ ಮೈದಾನದಲ್ಲಿ ಕವರ್ಗಳಿಂದ ಹೊದಿಸಲಾಗಿದೆ. ಅಲ್ಲದೆ ಮಳೆ ನಿಂತರೂ ಪಂದ್ಯ ಆರಂಭವಾಗುವುದು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ.
ಒಂದು ವೇಳೆ ಪಂದ್ಯ ರದ್ದಾದರೆ ಟೀಮ್ ಇಂಡಿಯಾ ಸೂಪರ್-4 ಹಂತಕ್ಕೇರಲಿದೆ. ಅತ್ತ ನೇಪಾಳ ತಂಡವು ಏಷ್ಯಾಕಪ್ನಿಂದ ಹೊರಬೀಳಲಿದೆ.
3ನೇ ಓವರ್ ವೇಳೆ ಪಂದ್ಯಕ್ಕೆ ಮಳೆ ಅಡ್ಡಿ. ಟೀಮ್ ಇಂಡಿಯಾ ಇನಿಂಗ್ಸ್ ಸ್ಥಗಿತ. 2.1 ಓವರ್ಗಳಲ್ಲಿ 17 ರನ್ ಕಲೆಹಾಕಿರುವ ಟೀಮ್ ಇಂಡಿಯಾ. ಕ್ರೀಸ್ನಲ್ಲಿ ಶುಭ್ಮನ್ ಗಿಲ್ (12) ಹಾಗೂ ರೋಹಿತ್ ಶರ್ಮಾ (4) ಬ್ಯಾಟಿಂಗ್.
ಸೋಂಪಲ್ ಕಮಿ ಎಸೆದ 2ನೇ ಓವರ್ನ ಮೊದಲೆರಡು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಸಿಡಿಸಿದ ಶುಭ್ಮನ್ ಗಿಲ್. 5ನೇ ಎಸೆತದಲ್ಲಿ ಮತ್ತೊಂದು ಫೋರ್ ಬಾರಿಸಿದ ಗಿಲ್. ಒಂದೇ ಓವರ್ನಲ್ಲಿ 12 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕರಣ್ ಎಸೆದ ಮೂರನೇ ಓವರ್ನ ಮೊದಲ ಎಸೆತದಲ್ಲೇ ಹಿಟ್ಮ್ಯಾನ್ ಬ್ಯಾಟ್ನಿಂದ ಆಕರ್ಷಕ ಬೌಂಡರಿ.
ಮೊದಲ ಓವರ್ನಲ್ಲೇ ರೋಹಿತ್ ಶರ್ಮಾರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದ ಕರಣ್ ಕೆ.ಸಿ. ಕೇವಲ 1 ರನ್ ನೀಡಿ ನೇಪಾಳ ತಂಡಕ್ಕೆ ಶುಭಾರಂಭ ಒದಗಿಸಿದ ಯುವ ವೇಗಿ. ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್
ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ನೇಪಾಳ ತಂಡವು 48.2 ಓವರ್ಗಳಲ್ಲಿ 230 ರನ್ಗಳಿಗೆ ಆಲೌಟ್ ಆಗಿದೆ. ನೇಪಾಳ ಪರ ಆಸಿಫ್ ಶೇಖ್ (58) ಅರ್ಧಶತಕ ಬಾರಿಸಿದರೆ, ಸೋಂಪಲ್ ಕಮಿ 48 ರನ್ಗಳ ಕೊಡುಗೆ ನೀಡಿದರು.
ಇನ್ನು ಟೀಮ್ ಇಂಡಿಯಾ ಪರ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಸಿರಾಜ್ ತಲಾ 3 ವಿಕೆಟ್ ಕಬಳಿಸಿ ಮಿಂಚಿದರು.
ಮೊಹಮ್ಮದ್ ಶಮಿ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ ಸೋಂಪಲ್ ಕಮಿ. 56 ಎಸೆತಗಳಲ್ಲಿ 48 ರನ್ ಬಾರಿಸಿ ಅರ್ಧಶತಕ ವಂಚಿತರಾದ ಸೋಂಪಲ್. ಟೀಮ್ ಇಂಡಿಯಾಗೆ 8ನೇ ಯಶಸ್ಸು. ಕ್ರೀಸ್ನಲ್ಲಿ ಸಂದೀಪ್ ಲಾಮಿಚಾನೆ ಹಾಗೂ ಕರಣ್ ಬ್ಯಾಟಿಂಗ್.
ಮೊಹಮ್ಮದ್ ಸಿರಾಜ್ ಎಸೆದ 47ನೇ ಓವರ್ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್ನತ್ತ ಮತ್ತೊಂದು ಭರ್ಜರಿ ಸಿಕ್ಸ್ ಸಿಡಿಸಿದ ಸೋಂಪಲ್ ಕಮಿ. ಸ್ಪರ್ಧಾತ್ಮಕ ಮೊತ್ತದತ್ತ ಸಾಗುತ್ತಿರುವ ನೇಪಾಳ ತಂಡದ ಸ್ಕೋರ್. ಕ್ರೀಸ್ನಲ್ಲಿ ಸಂದೀಪ್ ಲಾಮಿಚಾನೆ ಹಾಗೂ ಸೋಂಪಲ್ ಬ್ಯಾಟಿಂಗ್.
ಹಾರ್ದಿಕ್ ಪಾಂಡ್ಯ ಎಸೆದ 46ನೇ ಓವರ್ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸೋಂಪಲ್ ಕಮಿ. ಈ ಸಿಕ್ಸ್ನೊಂದಿಗೆ ನೇಪಾಳ ತಂಡ ಮೊತ್ತ 216 ಕ್ಕೆ ಏರಿಕೆ.
ಕ್ರೀಸ್ನಲ್ಲಿ ಸೋಂಪಲ್ – ಸಂದೀಪ್ ಲಾಮಿಚಾನೆ ಬ್ಯಾಟಿಂಗ್.
44ನೇ ಓವರ್ನಲ್ಲಿ ದ್ವಿಶತಕ ಪೂರೈಸಿದ ನೇಪಾಳ ತಂಡ. ಕ್ರೀಸ್ನಲ್ಲಿ ಸೋಂಪಲ್ ಕಮಿ ಹಾಗೂ ಸಂದೀಪ್ ಲಾಮಿಚಾನೆ ಬ್ಯಾಟಿಂಗ್. 7 ವಿಕೆಟ್ ಕಬಳಿಸಿರುವ ಟೀಮ್ ಇಂಡಿಯಾ ಬೌಲರ್ಗಳು. ಕೊನೆಯ 3 ವಿಕೆಟ್ಗಳೊಂದಿಗೆ ಸ್ಪರ್ಧಾತ್ಮಕ ಮೊತ್ತ ಪೇರಿಸುವತ್ತ ನೇಪಾಳ ತಂಡ.
ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ನಿರ್ಗಮಿಸಿದ ದೀಪೇಂದ್ರ ಸಿಂಗ್. 25 ಎಸೆತಗಳಲ್ಲಿ 29 ರನ್ ಬಾರಿಸಿ ನಿರ್ಮಿಸಿದ ದೀಪೇಂದ್ರ, ಟೀಮ್ ಇಂಡಿಯಾಗೆ 7ನೇ ಯಶಸ್ಸು.
38 ಓವರ್‌ಗಳ ಮುಕ್ತಾಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 178 ರನ್ ಕಲೆಹಾಕಿದ ನೇಪಾಳ ತಂಡ. ಕ್ರೀಸ್ನಲ್ಲಿ ಸೋಂಪಲ್ ಕಮಿ (11) ಹಾಗೂ ದೀಪೇಂದ್ರ ಸಿಂಗ್ (27) ಬ್ಯಾಟಿಂಗ್. ಕೊನೆಯ 12 ಓವರ್ಗಳಲ್ಲಿ ಬೃಹತ್ ಮೊತ್ತ ಪೇರಿಸುವ ವಿಶ್ವಾಸದಲ್ಲಿ ನೇಪಾಳ ಬ್ಯಾಟರ್ಗಳು.
ಪ್ರಸ್ತುತ ಮಾಹಿತಿ ಪ್ರಕಾರ, ಮಳೆಯು ಸ್ಥಗಿತವಾಗಿದ್ದು, ಮೈದಾನದಲ್ಲಿನ ಕವರ್ಗಳನ್ನು ತೆಗೆಯಲಾಗುತ್ತಿದೆ. ಹೀಗಾಗಿ ಶೀಘ್ರದಲ್ಲೇ ಪಂದ್ಯ ಆರಂಭವಾಗುವುದು ಖಚಿತ.
ಇನ್ನು ಮಳೆಯಿಂದ ಪಂದ್ಯಕ್ಕೆ ಅಡಚಣೆಯಾಗಿದ್ದರೂ ಓವರ್‌ಗಳ ಕಡಿತ ಮಾಡಲಾಗುತ್ತಿಲ್ಲ. ಅದರಂತೆ ನೇಪಾಳ ತಂಡವು 50 ಓವರ್ಗಳವರೆಗೆ ಬ್ಯಾಟ್ ಮಾಡಲಿದೆ.
ಶ್ರೀಲಂಕಾದ ಪಲ್ಲೆಕಲೆಯಲ್ಲಿ ಮಳೆ ಮುಂದುವರೆದಿದ್ದು, ಹೀಗಾಗಿ ಭಾರತ- ನೇಪಾಳ ನಡುವಣ ಪಂದ್ಯವು ಅರ್ಧದಲ್ಲೇ ಸ್ಥಗಿತಗೊಂಡಿದೆ. ಇನ್ನು 6.45 ರೊಳಗೆ ಪಂದ್ಯ ಆರಂಭವಾದರೆ ಮಾತ್ರ ಯಾವುದೇ ಓವರ್ ಕಡಿತವಿಲ್ಲದೆ ಮ್ಯಾಚ್ ಮುಂದುವರೆಯಲಿದೆ. 7 ಗಂಟೆಯ ಬಳಿಕ ಶುರುವಾದರೆ ಓವರ್‌ಗಳ ಕಡಿತ ಮಾಡಲಾಗುತ್ತದೆ.
38ನೇ ಓವರ್ ವೇಳೆ ಮಳೆ ಬಂದಿದ್ದರಿಂದ ಭಾರತ-ನೇಪಾಳ ನಡುವಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ.
37.5 ಓವರ್‌ಗಳ ಮುಕ್ತಾಯದ ವೇಳೆಗೆ ನೇಪಾಳ ತಂಡವು 178 ರನ್ಗಳಿಸಿದೆ.
ಇತ್ತ 6 ವಿಕೆಟ್ ಕಬಳಿಸುವಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಯಶಸ್ವಿಯಾಗಿದ್ದಾರೆ.
ಕ್ರೀಸ್ನಲ್ಲಿ ದೀಪೇಂದ್ರ ಸಿಂಗ್ (27) ಹಾಗೂ ಸೊಂಪಲ್ (11) ಬ್ಯಾಟಿಂಗ್
34 ಓವರ್‌ಗಳ ಮುಕ್ತಾಯದ ವೇಳೆಗೆ 151 ರನ್ ಕಲೆಹಾಕಿದ ನೇಪಾಳ ತಂಡ.
6 ವಿಕೆಟ್ ಕಬಳಿಸುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೀಮ್ ಇಂಡಿಯಾ
ಕ್ರೀಸ್ನಲ್ಲಿ ದೀಪೇಂದ್ರ ಸಿಂಗ್ ಹಾಗೂ ಸೋಂಪಲ್ ಕಮಿ ಬ್ಯಾಟಿಂಗ್.
ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಕ್ಯಾಚ್ ನೀಡಿದ ಆಸಿಫ್ ಶೇಖ್. ಫ್ರಂಟ್ ಫೀಲ್ಡ್ನಲ್ಲಿದ್ದ ವಿರಾಟ್ ಕೊಹ್ಲಿ ಒಂದೇ ಕೈಯಲ್ಲಿ ಅತ್ಯುತ್ತಮ ಕ್ಯಾಚ್…ಆಸೀಸ್ ಶೇಖ್ ಔಟ್.
97 ಎಸೆತಗಳಲ್ಲಿ 58 ರನ್ ಬಾರಿಸಿ ನಿರ್ಗಮಿಸಿದ ಆಸಿಫ್ ಶೇಖ್. ಕ್ರೀಸ್ನಲ್ಲಿ ಗುಲ್ಶನ್ ಹಾಗೂ ದೀಪೇಂದ್ರ ಸಿಂಗ್ ಬ್ಯಾಟಿಂಗ್
ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಹಿಂಬದಿಯತ್ತ ಲೇಟ್ ಕಟ್ ಫೋರ್ ಬಾರಿಸಿದ ಗುಲ್ಶನ್ ಜಾ. ಕ್ರೀಸ್ನಲ್ಲಿ ಆಸಿಫ್ ಶೇಖ್ (58) ಹಾಗೂ ಗುಲ್ಶನ್ ಜಾ (18).
ಟೀಮ್ ಇಂಡಿಯಾ ಪರ 3 ವಿಕೆಟ್ ಕಬಳಿಸಿರುವ ರವೀಂದ್ರ ಜಡೇಜಾ. 1 ವಿಕೆಟ್ ಪಡೆದಿರುವ ಶಾರ್ದೂಲ್ ಠಾಕೂರ್.
88 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಆಸಿಫ್ ಶೇಖ್. ಈ ಮೂಲಕ ಟೀಮ್ ಇಂಡಿಯಾ ವಿರುದ್ದ ಹಾಫ್ ಸೆಂಚುರಿ ಸಿಡಿಸಿದ ನೇಪಾಳ ತಂಡದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಆಸಿಫ್ ಶೇಖ್ ಪಾತ್ರರಾಗಿದ್ದಾರೆ.
ರವೀಂದ್ರ ಜಡೇಜಾ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ಕುಶಾಲ್ ಮಲ್ಲ (2). ಟೀಮ್ ಇಂಡಿಯಾಗೆ 4ನೇ ಯಶಸ್ಸು. ಕೇವಲ 8 ರನ್ಗಳ ಒಳಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ನೇಪಾಳ ತಂಡ. ಕ್ರೀಸ್ನಲ್ಲಿ ಆಸಿಫ್ ಶೇಖ್ ಬ್ಯಾಟಿಂಗ್.
ರವೀಂದ್ರ ಜಡೇಜಾ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿ ಹೊರನಡೆದ ನೇಪಾಳ ತಂಡದ ನಾಯಕ ರೋಹಿತ್ ಪೌಡೆಲ್. 8 ಎಸೆತಗಳಲ್ಲಿ 5 ರನ್ಗಳಿಸಿ ನಿರ್ಗಮಿಸಿದ ಪೌಡೆಲ್.
20 ಓವರ್ ಮುಕ್ತಾಯದ ವೇಳೆಗೆ 93 ರನ್ ಕಲೆಹಾಕಿದ ನೇಪಾಳ ತಂಡ. 3 ವಿಕೆಟ್ ಕಬಳಿಸಿರುವ ಟೀಮ್ ಇಂಡಿಯಾ.
ರವೀಂದ್ರ ಜಡೇಜಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಭೀಮ್ ಶರ್ಕಿ (5). ಟೀಮ್ ಇಂಡಿಯಾಗೆ 2ನೇ ಯಶಸ್ಸು. ಕ್ರೀಸ್ನಲ್ಲಿ ಆಸಿಫ್ ಶೇಖ್ ಹಾಗೂ ರೋಹಿತ್ ಪೌಡೆಲ್ ಬ್ಯಾಟಿಂಗ್.
ಮೊದಲ ವಿಕೆಟ್ಗೆ ಶಾರ್ದೂಲ್ ಠಾಕೂರ್ಗೆ, 2ನೇ ವಿಕೆಟ್ ಪಡೆದ ರವೀಂದ್ರ ಜಡೇಜಾ.
15 ಓವರ್ಗಳಲ್ಲಿ ಕೇವಲ 1 ವಿಕೆಟ್ ಪಡೆದ ಟೀಮ್ ಇಂಡಿಯಾ. 73 ರನ್ ಬಾರಿಸಿದ ನೇಪಾಳ ತಂಡ. ಕ್ರೀಸ್ನಲ್ಲಿ ಆಸಿಫ್ ಶೇಖ್ (26) ಹಾಗೂ ಭೀಮ್ ಶರ್ಕಿ (5) ಬ್ಯಾಟಿಂಗ್.
ಮೊದಲ 15 ಓವರ್ಗಳಲ್ಲಿ ಟೀಮ್ ಇಂಡಿಯಾ ಬೌಲರ್ಗಳ ವಿರುದ್ಧ ಮೇಲುಗೈ ಸಾಧಿಸಿದ ನೇಪಾಳ ತಂಡ.
12 ಓವರ್ ಮುಕ್ತಾಯದ ವೇಳೆಗೆ 67 ರನ್ ಕಲೆಹಾಕಿದ ನೇಪಾಳ ತಂಡ. ಈ ವೇಳೆ ಕೇವಲ 1 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾದ ಟೀಮ್ ಇಂಡಿಯಾ ಬೌಲರ್ಗಳು. ಕ್ರೀಸ್ನಲ್ಲಿ ಆಸಿಫ್ ಶೇಖ್ ಹಾಗೂ ಭೀಮ್ ಶರ್ಕಿ ಬ್ಯಾಟಿಂಗ್.
ಶಾರ್ದೂಲ್ ಠಾಕೂರ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಕುಶಾಲ್ ಭುರ್ಟೆಲ್. 25 ಎಸೆತಗಳಲ್ಲಿ 38 ರನ್ ಬಾರಿಸಿ ನಿರ್ಗಮಿಸಿದ ಕುಶಾಲ್. ಕ್ರೀಸ್ನಲ್ಲಿ ಆಸಿಫ್ ಶೇಖ್ ಹಾಗೂ ಭೀಮ್ ಶರ್ಕಿ ಬ್ಯಾಟಿಂಗ್.
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕುಶಾಲ್ ಭುರ್ಟೆಲ್. ಕ್ರೀಸ್ನಲ್ಲಿ ಆಸಿಫ್ ಶೇಖ್ ಹಾಗೂ ಕುಶಾಲ್ ಭರ್ಜರಿ ಬ್ಯಾಟಿಂಗ್. ವಿಕೆಟ್ಗಾಗಿ ಟೀಮ್ ಇಂಡಿಯಾ ವೇಗಿಗಳ ಪರದಾಟ.
ಹಾರ್ದಿಕ್ ಪಾಂಡ್ಯ ಎಸೆದ 9ನೇ ಓವರ್ನ 5ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಆಸಿಫ್ ಶೇಖ್. ಈ ಫೋರ್ನೊಂದಿಗೆ ಅರ್ಧಶತಕ ಪುರೈಸಿದ ನೇಪಾಳ ತಂಡ. ಕ್ರೀಸ್ನಲ್ಲಿ ಕುಶಾಲ್ ಭುರ್ಟೆಲ್ (29) ಹಾಗೂ ಆಸಿಫ್ ಶೇಖ್ (20) ಬ್ಯಾಟಿಂಗ್.
ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಫೋರ್ ಬಾರಿಸಿದ ಕುಶಾಲ್ ಭುರ್ಟೆಲ್. ನೇಪಾಳ ತಂಡದ ಉತ್ತಮ ಆಟ. ಕ್ರೀಸ್ನಲ್ಲಿ ಆಸಿಫ್ ಶೇಖ್ ಹಾಗೂ ಕುಶಾಲ್ ಭುರ್ಟೆಲ್ ಭರ್ಜರಿ ಬ್ಯಾಟಿಂಗ್ ಮುಂದುವರಿಕೆ. ವಿಕೆಟ್ ಕಬಳಿಸಲು ಟೀಮ್ ಇಂಡಿಯಾ ಬೌಲರ್ಗಳ ಹರಸಾಹಸ.
ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಕುಶಾಲ್ ಭುರ್ಟೆಲ್. ನೇಪಾಳ ತಂಡದ ಅತ್ಯುತ್ತಮ ಬ್ಯಾಟಿಂಗ್. ಕ್ರೀಸ್ನಲ್ಲಿ ಕುಶಾಲ್ ಹಾಗೂ ಆಸಿಫ್ ಶೇಖ್ ಬ್ಯಾಟಿಂಗ್.
3 ಓವರ್ ಮುಕ್ತಾಯ. 18 ಎಸೆತಗಳಲ್ಲಿ 12 ರನ್ ಕಲೆಹಾಕಿದ ನೇಪಾಳ ತಂಡ. ಆರಂಭಿಕರಾದ ಆಸಿಫ್ ಶೇಖ್ ಹಾಗೂ ಕುಶಾಲ್ ಉತ್ತಮ ಬ್ಯಾಟಿಂಗ್. ಇದುವರೆಗೆ ಇಂದೇ ಒಂದು ಫೋರ್ ನೀಡದ ಟೀಮ್ ಇಂಡಿಯಾ ಬೌಲರ್ಗಳು.
🚨 Toss & Team News 🚨#TeamIndia have elected to bowl against Nepal.
A look at our Playing XI 🔽
Follow the match ▶️ https://t.co/i1KYESEMV1 #AsiaCup2023 | #INDvNEP pic.twitter.com/wX572GyE07
— BCCI (@BCCI) September 4, 2023
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ನೇಪಾಳ (ಪ್ಲೇಯಿಂಗ್ XI): ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ರೋಹಿತ್ ಪೌಡೆಲ್ (ನಾಯಕ), ಭೀಮ್ ಶರ್ಕಿ, ಸೋಂಪಾಲ್ ಕಾಮಿ, ಗುಲ್ಸನ್ ಝಾ, ದೀಪೇಂದ್ರ ಸಿಂಗ್ ಐರಿ, ಕುಶಾಲ್ ಮಲ್ಲಾ, ಸಂದೀಪ್ ಲಮಿಚಾನೆ, ಕರಣ್ ಕೆಸಿ, ಲಲಿತ್ ರಾಜಬನ್ಶಿ
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಜಸ್ಪ್ರೀತ್ ಬುಮ್ರಾ ಬದಲಿಗೆ ಮೊಹಮ್ಮದ್ ಶಮಿ ಕಣಕ್ಕೆ.
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ನೇಪಾಳ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.
ಪಾಕಿಸ್ತಾನ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಮಾಡಿತ್ತು. ಆದರೆ ಮಳೆಯ ಕಾರಣ ಆ ಪಂದ್ಯ ರದ್ದಾಗಿದ್ದರಿಂದ ಬೌಲಿಂಗ್ ಮಾಡಿರಲಿಲ್ಲ. ಇದೀಗ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದಾರೆ.
The first ever ODI between Nepal and Pakistan is set to be a memorable clash, especially for the Nepalese cricket team. A proud moment for them to make their Asia Cup debut against one of the most prominent teams in world cricket. 👏#AsiaCup2023 #INDvNEP pic.twitter.com/BXXX16EYxP
— AsianCricketCouncil (@ACCMedia1) September 4, 2023
ಇದೇ ಮೊದಲ ಬಾರಿಗೆ ಭಾರತ ಮತ್ತು ನೇಪಾಳ ತಂಡಗಳ ಮುಖಾಮುಖಿ.
Published On - 2:24 pm, Mon, 4 September 23