AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia cup 2023 Final IND vs SL Live Score: ಭಾರತ ಏಷ್ಯನ್ ಚಾಂಪಿಯನ್ಸ್​

Asia cup 2023 India vs Sri Lanka, Final Live Score in Kannada: ಟೀಮ್ ಇಂಡಿಯಾ ಪರ 7 ಓವರ್​ಗಳಲ್ಲಿ 21 ರನ್ ನೀಡಿ ಮೊಹಮ್ಮದ್ ಸಿರಾಜ್ 6 ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಹಾರ್ದಿಕ್ ಪಾಂಡ್ಯ 3 ವಿಕೆಟ್ ಕಬಳಿಸಿದರೆ, ಜಸ್​ಪ್ರೀತ್ ಬುಮ್ರಾ 1 ವಿಕೆಟ್ ಪಡೆದರು. ಈ ಅದ್ಭುತ ಪ್ರದರ್ಶನದ ಫಲವಾಗಿ ಸಿರಾಜ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು.

Asia cup 2023 Final IND vs SL Live Score: ಭಾರತ ಏಷ್ಯನ್ ಚಾಂಪಿಯನ್ಸ್​
India vs Sri Lanka
TV9 Web
| Updated By: ಝಾಹಿರ್ ಯೂಸುಫ್|

Updated on:Sep 17, 2023 | 7:53 PM

Share

ಏಷ್ಯಾಕಪ್​ 2023 ರ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 10 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕೊಲಂಬೊದ ಆರ್​.  ಪ್ರೇಮದಾಸ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಆದರೆ ಮೊಹಮ್ಮದ್ ಸಿರಾಜ್ ಅವರ ಕರಾರುವಾಕ್ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡವು ಕೇವಲ 15.2 ಓವರ್​ಗಳಲ್ಲಿ 50 ರನ್​ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನು 6.1 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ ಟೀಮ್ ಇಂಡಿಯಾ 10 ವಿಕೆಟ್​ಗಳ ಜಯ ಸಾಧಿಸಿದೆ.

ಟೀಮ್ ಇಂಡಿಯಾ ಪರ 7 ಓವರ್​ಗಳಲ್ಲಿ 21 ರನ್ ನೀಡಿ ಮೊಹಮ್ಮದ್ ಸಿರಾಜ್ 6 ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಹಾರ್ದಿಕ್ ಪಾಂಡ್ಯ 3 ವಿಕೆಟ್ ಕಬಳಿಸಿದರೆ, ಜಸ್​ಪ್ರೀತ್ ಬುಮ್ರಾ 1 ವಿಕೆಟ್ ಪಡೆದರು. ಈ ಅದ್ಭುತ ಪ್ರದರ್ಶನದ ಫಲವಾಗಿ ಸಿರಾಜ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು.

ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್​ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್.

ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ದುಶನ್ ಹೇಮಂತ, ಪ್ರಮೋದ್ ಮದುಶನ್, ಮತೀಶ ಪತಿರಾಣ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ,  ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್.

ಶ್ರೀಲಂಕಾ ತಂಡ: ದಸುನ್ ಶಾನಕ (ನಾಯಕ), ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಪೆರೇರ, ಕುಸಾಲ್ ಮೆಂಡಿಸ್ (ಉಪನಾಯಕ), ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಸದೀರ ಸಮರವಿಕ್ರಮ, ದುನಿತ್ ವೆಲ್ಲಾಲಗೆ, ಮಥೀಶ ಪತಿರಾಣ, ಕಸುನ್ ರಜಿತ, ದುಶನ್ ಹೇಮಂತ, ಬಿನೂರ ಫರ್ನಾಂಡೊ, ಪ್ರಮೋದ್ ಮಧುಶನ್.

LIVE Cricket Score & Updates

The liveblog has ended.
  • 17 Sep 2023 07:50 PM (IST)

    Asia cup 2023 Final IND vs SL Live Score: 8ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಮ್ ಇಂಡಿಯಾ

    ಏಷ್ಯಾಕಪ್​ನಲ್ಲಿ 8ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಮ್ ಇಂಡಿಯಾ.

  • 17 Sep 2023 06:07 PM (IST)

    Asia cup 2023 Final IND vs SL Live Score: ಟೀಮ್ ಇಂಡಿಯಾಗೆ ಅಮೋಘ ಗೆಲುವು

    ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡಕ್ಕೆ 10 ವಿಕೆಟ್​ಗಳ ಭರ್ಜರಿ ಜಯ.

    ಟೀಮ್ ಇಂಡಿಯಾ ಹೊಸ ಏಷ್ಯನ್ ಚಾಂಪಿಯನ್ಸ್​.

    SL 50 (15.2)

    IND 51/0 (6.1)

      

  • 17 Sep 2023 06:03 PM (IST)

    Asia cup 2023 Final IND vs SL Live Score: 5 ಓವರ್​ಗಳು ಮುಕ್ತಾಯ

    ಮತೀಶ ಪತಿರಾಣ ಎಸೆದ 5ನೇ ಓವರ್​ನಲ್ಲಿ ಒಂದೊಂದು ಫೋರ್ ಬಾರಿಸಿದ ಶುಭ್​ಮನ್ ಗಿಲ್ ಹಾಗೂ ಇಶಾನ್ ಕಿಶನ್.

    ಗೆಲುವಿನತ್ತ ಟೀಮ್ ಇಂಡಿಯಾ

    SL 50 (15.2)

    IND 45/0 (5)

      

  • 17 Sep 2023 05:54 PM (IST)

    Asia cup 2023 Final IND vs SL Live Score: ಬ್ಯಾಕ್ ಟು ಬ್ಯಾಕ್ ಫೋರ್

    ಪ್ರಮೋದ್ ಮಧುಶನ್  ಎಸೆದ 3ನೇ ಓವರ್​ನ ಮೂರನೇ ಮತ್ತು 4ನೇ ಎಸೆತಗಳಲ್ಲಿ ಆಫ್ ಸೈಡ್​ನತ್ತ ಬ್ಯಾಕ್ ಟು ಬ್ಯಾಕ್ ಫೋರ್​ ಬಾರಿಸಿದ ಶುಭ್​ಮನ್ ಗಿಲ್. 5ನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಮತ್ತೊಂದು ಫೋರ್ ಸಿಡಿಸಿದ ಗಿಲ್.

    SL 50 (15.2)

    IND 32/0 (3)

      

      
      
  • 17 Sep 2023 05:45 PM (IST)

    Asia cup 2023 Final IND vs SL Live Score: ಟೀಮ್ ಇಂಡಿಯಾ ಇನಿಂಗ್ಸ್​ ಆರಂಭ

    ಪ್ರಮೋದ್ ಮಧುಶನ್ ಎಸೆದ ಮೊದಲ ಓವರ್​ನ ಕೊನೆಯ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಫೋರ್ ಬಾರಿಸಿದ ಶುಭ್​ಮನ್ ಗಿಲ್.

    ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣದಲ್ಲಿ ಇಶಾನ್ ಕಿಶನ್ ಹಾಗೂ ಶುಭ್​ಮನ್ ಗಿಲ್.

    SL 50 (15.2)

    IND 7/0 (1)

      

  • 17 Sep 2023 05:11 PM (IST)

    Asia cup 2023 Final IND vs SL Live Score: 50 ರನ್​ಗಳಿಗೆ ಶ್ರೀಲಂಕಾ ಆಲೌಟ್

    16ನೇ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದ ಹಾರ್ದಿಕ್ ಪಾಂಡ್ಯ.

    ಕೇವಲ 50 ರನ್​ಗಳಿಗೆ ಶ್ರೀಲಂಕಾ ತಂಡ ಆಲೌಟ್.

    ಟೀಮ್ ಇಂಡಿಯಾಗೆ ಕೇವಲ 51 ರನ್​ಗಳ ಗುರಿ.

    ಟೀಮ್ ಇಂಡಿಯಾ ಪರ 6 ವಿಕೆಟ್ ಕಬಳಿಸಿದ ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯಗೆ 3 ವಿಕೆಟ್, ಬುಮ್ರಾಗೆ 1 ವಿಕೆಟ್.

    SL 50 (15.2)

      

  • 17 Sep 2023 05:09 PM (IST)

    Asia cup 2023 Final IND vs SL Live Score: ಶ್ರೀಲಂಕಾ ತಂಡದ 9ನೇ ವಿಕೆಟ್ ಪತನ

    ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಸ್ಲಿಪ್​ನಲ್ಲಿದ್ದ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿದ ಪ್ರಮೋದ್ ಮಧುಶನ್.

    ಕೇವಲ 50 ರನ್​ಗಳಿಗೆ 9 ವಿಕೆಟ್ ಕಳೆದುಕೊಂಡ ಶ್ರೀಲಂಕಾ.

    ಹಾರ್ದಿಕ್ ಪಾಂಡ್ಯಗೆ 2 ವಿಕೆಟ್, ಮೊಹಮ್ಮದ್ ಸಿರಾಜ್​ಗೆ 6 ವಿಕೆಟ್​, ಬುಮ್ರಾಗೆ 1 ವಿಕೆಟ್.

    SL 50/9 (15.1)

      

  • 17 Sep 2023 04:55 PM (IST)

    Asia cup 2023 Final IND vs SL Live Score: ಶ್ರೀಲಂಕಾ ತಂಡದ 8ನೇ ವಿಕೆಟ್ ಪತನ

    ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ದುನಿತ್ ವೆಲ್ಲಾಲಗೆ

    ಶ್ರೀಲಂಕಾ ತಂಡದ 8ನೇ ವಿಕೆಟ್ ಪತನ.

    ಕ್ರೀಸ್​ನಲ್ಲಿ ದುಶನ್ ಹೇಮಂತ ಹಾಗೂ ಪ್ರಮೋದ್ ಮಧುಶನ್ ಬ್ಯಾಟಿಂಗ್.

    SL 40/8 (12.3)

    ಟೀಮ್ ಇಂಡಿಯಾ ಪರ 6 ವಿಕೆಟ್ ಕಬಳಿಸಿದ ಮೊಹಮ್ಮದ್ ಸಿರಾಜ್.

    ಹಾರ್ದಿಕ್ ಪಾಂಡ್ಯ ಹಾಗೂ

  • 17 Sep 2023 04:45 PM (IST)

    Asia cup 2023 Final IND vs SL Live Score: ಕೊಲಂಬೊದಲ್ಲಿ ಮಿಯಾ ಮ್ಯಾಜಿಕ್

    ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಕುಸಾಲ್ ಮೆಂಡಿಸ್ ಕ್ಲೀನ್ ಬೌಲ್ಡ್.

    34 ಎಸೆತಗಳಲ್ಲಿ 17 ರನ್​ಗಳಿಸಿ ವಿಕೆಟ್ ಒಪ್ಪಿಸಿದ ಮೆಂಡಿಸ್.

    6ನೇ ವಿಕೆಟ್​ ಕಬಳಿಸಿದ ಮೊಹಮ್ಮದ್ ಸಿರಾಜ್. ಒಂದು ವಿಕೆಟ್ ಪಡೆದಿರುವ ಬುಮ್ರಾ.

    ಟೀಮ್ ಇಂಡಿಯಾದ ಭರ್ಜರಿ ಬೌಲಿಂಗ್​ಗೆ ತತ್ತರಿಸಿದ ಶ್ರೀಲಂಕಾ.

    SL 33/7 (11.2)

      

  • 17 Sep 2023 04:38 PM (IST)

    Asia cup 2023 Final IND vs SL Live Score: 10 ಓವರ್​ಗಳು ಮುಕ್ತಾಯ

    10 ಓವರ್​ಗಳ ಮುಕ್ತಾಯದ ವೇಳೆಗೆ 31 ರನ್ ಕಲೆಹಾಕಿದ ಶ್ರೀಲಂಕಾ.

    ಕ್ರೀಸ್​ನಲ್ಲಿ ಕುಸಾಲ್ ಮೆಂಡಿಸ್ (17) ಹಾಗೂ ದುನಿತ್ ವೆಲ್ಲಾಲಗೆ (6) ಬ್ಯಾಟಿಂಗ್.

    5 ಓವರ್​ಗಳಲ್ಲಿ 7 ರನ್ ನೀಡಿ 5 ವಿಕೆಟ್ ಕಬಳಿಸಿದ ಮೊಹಮ್ಮ್​ ಸಿರಾಜ್, ಜಸ್​ಪ್ರೀತ್ ಬುಮ್ರಾಗೆ ಒಂದು ವಿಕೆಟ್.

    SL 31/6 (10)

      

  • 17 Sep 2023 04:17 PM (IST)

    Asia cup 2023 Final IND vs SL Live Score: ಸಿರಾಜ್ ಐದು ವಿಕೆಟ್​ಗಳ ಸಾಧನೆ

    ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಕ್ಲೀನ್ ಬೌಲ್ಡ್​.

    ಕೇವಲ 4 ರನ್​ ನೀಡಿ 5 ವಿಕೆಟ್​ ಕಬಳಿಸಿದ ಮೊಹಮ್ಮದ್ ಸಿರಾಜ್.

    ಒಂದು ವಿಕೆಟ್ ಪಡೆದ ಜಸ್​ಪ್ರೀತ್ ಬುಮ್ರಾ.

    ಕ್ರೀಸ್​ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ದುನಿತ್ ವೆಲ್ಲಾಲಗೆ ಬ್ಯಾಟಿಂಗ್

    SL 12/6 (5.4)

     

  • 17 Sep 2023 04:10 PM (IST)

    Asia cup 2023 Final IND vs SL Live Score: ಸಿರಾಜ್ ಬೆಂಕಿ ಬೌಲಿಂಗ್: 4 ವಿಕೆಟ್ ಪತನ

    4ನೇ ಓವರ್​ನಲ್ಲಿ 4 ವಿಕೆಟ್ ಕಬಳಿಸಿದ ಮೊಹಮ್ಮದ್ ಸಿರಾಜ್.

    ಮೊದಲ ಎಸೆತದಲ್ಲಿ ಪಾತುಮ್ ನಿಸ್ಸಂಕಾ ಕ್ಯಾಚ್ ಔಟ್.

    ಎರಡನೇ ಎಸೆತದಲ್ಲಿ ಯಾವುದೇ ರನ್ ಇಲ್ಲ.

    ಮೂರನೇ ಎಸೆತದಲ್ಲಿ ಸದೀರ ಸಮರವಿಕ್ರಮ ಎಲ್​ಬಿಡಬ್ಲ್ಯೂ.

    ನಾಲ್ಕನೇ ಎಸೆತದಲ್ಲಿ ಚರಿತ್ ಅಸಲಂಕಾ ಕ್ಯಾಚ್ ಔಟ್.

    ಐದನೇ ಎಸೆತದಲ್ಲಿ ಫೋರ್ ಬಾರಿಸಿದ ಧನಂಜಯ ಡಿಸಿಲ್ವಾ.

    ಆರನೇ ಎಸೆತದಲ್ಲಿ ಧನಜಂಯ ಡಿಸಿಲ್ವಾ ಕೀಪರ್ ಕ್ಯಾಚ್ ಔಟ್.

    ಕೊಲಂಬೊದ ಮೈದಾನದಲ್ಲಿ ಮಿಯಾ ಮ್ಯಾಜಿಕ್

    SL 12/5 (4)

     

  • 17 Sep 2023 04:05 PM (IST)

    Asia cup 2023 Final IND vs SL Live Score: ಕೊಲಂಬೊದಲ್ಲಿ ಮಿಯಾ ಮ್ಯಾಜಿಕ್

    ಮೊಹಮ್ಮದ್ ಸಿರಾಜ್ ಎಸೆದ 3ನೇ ಓವರ್​ನ 4ನೇ ಎಸೆತದಲ್ಲಿ ಚರಿತ್ ಅಸಲಂಕಾ ವಿಕೆಟ್ ಪಡೆದ ಸಿರಾಜ್.

    ಒಂದೇ ಓವರ್​ನಲ್ಲಿ ಮೂರು ವಿಕೆಟ್ ಕಬಳಿಸಿದ ಸಿರಾಜ್.

    ಮೊದಲ ಎಸೆತದಲ್ಲಿ ಪಾತುಮ್ ಸಿಸ್ಸಂಕಾ, 3ನೇ ಎಸೆತದಲ್ಲಿ ಸದೀರ ಸಮರವಿಕ್ರಮ ಮತ್ತು 4ನೇ ಸ್ಥಾನದಲ್ಲಿ ಚರಿತ್ ಅಸಲಂಕಾ ಔಟ್.

    SL 8/4 (3.4)

      

  • 17 Sep 2023 04:01 PM (IST)

    Asia cup 2023 Final IND vs SL Live Score: ಶ್ರೀಲಂಕಾ ತಂಡದ 3ನೇ ವಿಕೆಟ್ ಪತನ

    ಮೊಹಮ್ಮದ್ ಸಿರಾಜ್ ಅವರ 4ನೇ ಓವರ್​ನ ಮೊದಲ ಎಸೆತದಲ್ಲಿ ಸ್ಕ್ವೇರ್ ಫೀಲ್ಡರ್​ಗೆ ಜಡೇಜಾಗೆ ಕ್ಯಾಚ್ ನೀಡಿದ ಪಾತುಮ್ ನಿಸ್ಸಂಕಾ.

    4 ಎಸೆತಗಳಲ್ಲಿ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಶ್ರೀಲಂಕಾ ತಂಡದ ಆರಂಭಿಕ ಆಟಗಾರ ನಿಸ್ಸಂಕಾ.

    ಇದರ ಬೆನ್ನಲ್ಲೇ  ಸದೀರ ಸಮರವಿಕ್ರಮ (0) ರನ್ನು ಎಲ್​ಬಿ ಬಲೆಗೆ ಕೆಡವಿದ ಸಿರಾಜ್.

    ಟೀಮ್ ಇಂಡಿಯಾಗೆ ಬ್ಯಾಕ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟ ಮೊಹಮ್ಮದ್ ಸಿರಾಜ್.

    SL 8/3 (3.3)

     

  • 17 Sep 2023 03:46 PM (IST)

    Asia cup 2023 Final IND vs SL Live Score: ಮೆಂಡಿಸ್ ಮಾರ್ಕ್​- ಫೋರ್

    ಜಸ್​ಪ್ರೀತ್ ಬುಮ್ರಾ ಎಸೆದ ಮೊದಲ ಓವರ್​ನ 4ನೇ ಎಸೆತದಲ್ಲಿ ಮಿಡ್​ ಆಫ್​ನತ್ತ ಫೋರ್ ಬಾರಿಸಿದ ಕುಸಾಲ್ ಮೆಂಡಿಸ್.

    ಬೌಂಡರಿಯೊಂದಿಗೆ ಖಾತೆ ತೆರೆದ ಕುಸಾಲ್ ಮೆಂಡಿಸ್. ಇದು ಶ್ರೀಲಂಕಾ ಇನಿಂಗ್ಸ್​ನ ಮೊದಲ ಬೌಂಡರಿ.

    ಕ್ರೀಸ್​ನಲ್ಲಿ ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.

    SL 7/1 (1)

      

      

  • 17 Sep 2023 03:44 PM (IST)

    Asia cup 2023 Final IND vs SL Live Score: ಶ್ರೀಲಂಕಾ ತಂಡದ ಮೊದಲ ವಿಕೆಟ್ ಪತನ

    ಜಸ್​ಪ್ರೀತ್ ಬುಮ್ರಾ ಎಸೆದ ಮೊದಲ ಓವರ್​ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಕುಸಾಲ್ ಪೆರೇರಾ.

    ವಿಕೆಟ್ ಕೀಪರ್ ಕೆಎಲ್ ರಾಹುಲ್ ಅತ್ಯುತ್ತಮ ಡೈವಿಂಗ್ ಕ್ಯಾಚ್..ಕುಸಾಲ್ ಪೆರೇರಾ (0) ಔಟ್.

    ಟೀಮ್ ಇಂಡಿಯಾಗೆ ಆರಂಭಿಕ ಯಶಸ್ಸು ತಂದುಕೊಟ್ಟ ಜಸ್​ಪ್ರೀತ್ ಬುಮ್ರಾ.

    SL 1/1 (0.3)

      

  • 17 Sep 2023 03:40 PM (IST)

    Asia cup 2023 Final IND vs SL Live Score: ಶ್ರೀಲಂಕಾ ತಂಡದ ಇನಿಂಗ್ಸ್​ ಆರಂಭ

    ಶ್ರೀಲಂಕಾ ಆರಂಭಿಕರು: ಕುಸಾಲ್ ಪೆರೇರಾ, ಪಾತುಮ್ ನಿಸ್ಸಂಕಾ

    ಭಾರತದ ಪರ ಮೊದಲ ಓವರ್: ಜಸ್​ಪ್ರೀತ್ ಬುಮ್ರಾ.

    ಶ್ರೀಲಂಕಾ ಬ್ಯಾಟಿಂಗ್ ಲೈನಪ್: ಪಾತುಮ್ ನಿಸ್ಸಂಕಾ, ಕುಸಾಲ್ ಪೆರೇರಾ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ.

  • 17 Sep 2023 03:28 PM (IST)

    Asia cup 2023 Final IND vs SL Live Score: 3:40 ಗಂಟೆಗೆ ಪಂದ್ಯ ಶುರು

    ಕೊಲಂಬೊದಲ್ಲಿ ಮಳೆ ಸ್ಥಗಿತವಾಗಿದ್ದು, 3:40 ಗಂಟೆಯಿಂದ ಪಂದ್ಯ ಶುರುವಾಗಲಿದೆ.

    ಇನ್ನು ತಡವಾಗಿ ಪಂದ್ಯ ಆರಂಭವಾಗುತ್ತಿದ್ದರೂ ಯಾವುದೇ ಓವರ್ ಕಡಿತ ಮಾಡಲಾಗಿಲ್ಲ.

    ಒಂದು ವೇಳೆ ಪಂದ್ಯವು ಮಳೆಯ ಕಾರಣ ಸ್ಥಗಿತವಾದರೆ ಮೀಸಲು ದಿನವಾದ ಸೋಮವಾರ ಮ್ಯಾಚ್ ಮುಂದುವರೆಯಲಿದೆ.

  • 17 Sep 2023 03:16 PM (IST)

    Asia cup 2023 Final IND vs SL Live Score: ಮಳೆಯ ಕಾರಣ ಪಂದ್ಯ ಆರಂಭ ವಿಳಂಬ

    ಕೊಲಂಬೊದಲ್ಲಿ ತುಂತುರು ಮಳೆಯಾಗುತ್ತಿದ್ದು, ಹೀಗಾಗಿ ಪ್ರೇಮದಾಸ ಮೈದಾನದಲ್ಲಿ ಕವರ್​ಗಳನ್ನು ಹೊದಿಸಲಾಗಿದೆ. ಇದೇ ಕಾರಣದಿಂದಾಗಿ ಪಂದ್ಯ ಆರಂಭ ವಿಳಂಬವಾಗಿದೆ.

    ______________________________________________________________________

    ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಟೀಮ್ ಇಂಡಿಯಾ ಮೊದಲು ಬೌಲಿಂಗ್ ಮಾಡಲಿದೆ.

  • 17 Sep 2023 02:46 PM (IST)

    Asia cup 2023 Final IND vs SL Live Score: ಅಕ್ಷರ್ ಸ್ಥಾನದಲ್ಲಿ ವಾಷಿಂಗ್ಟನ್ ಕಣಕ್ಕೆ

    ಗಾಯಗೊಂಡಿರುವ ಅಕ್ಷರ್ ಪಟೇಲ್ ಸ್ಥಾನದಲ್ಲಿ ಕಣಕ್ಕಿಳಿದ ವಾಷಿಂಗ್ಟನ್ ಸುಂದರ್.

    ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್​ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್.

  • 17 Sep 2023 02:39 PM (IST)

    Asia cup 2023 Final IND vs SL Live Score: ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್

    ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ದುಶನ್ ಹೇಮಂತ, ಪ್ರಮೋದ್ ಮದುಶನ್, ಮತೀಶ ಪತಿರಾಣ.

  • 17 Sep 2023 02:38 PM (IST)

    Asia cup 2023 Final IND vs SL Live Score: ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್

    ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್​ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್.

  • 17 Sep 2023 02:31 PM (IST)

    Asia cup 2023 Final IND vs SL Live Score: ಟಾಸ್ ಗೆದ್ದ ಶ್ರೀಲಂಕಾ

    ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಟೀಮ್ ಇಂಡಿಯಾ ಮೊದಲು ಫೀಲ್ಡಿಂಗ್ ಮಾಡಲಿದೆ.

  • 17 Sep 2023 02:17 PM (IST)

    Asia cup 2023 Final IND vs SL Live Score: ಭಾರತ-ಶ್ರೀಲಂಕಾ ನಡುವೆ ಫೈನಲ್ ಫೈಟ್

    ಭಾರತ-ಶ್ರೀಲಂಕಾ ನಡುವಣ ಏಷ್ಯಾಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ.

    ಟಾಸ್ ಪ್ರಕ್ರಿಯೆ- 2.30 ಕ್ಕೆ

    ಪಂದ್ಯ ಶುರು- 3 ಗಂಟೆಗೆ

    ಸ್ಥಳ- ಆರ್​. ಪ್ರೇಮದಾಸ ಮೈದಾನ, ಕೊಲಂಬೊ

Published On - Sep 17,2023 2:15 PM

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್