ಏಷ್ಯಾಕಪ್ (Asia Cup 2023) ಕಾಯುವಿಕೆಗೆ ಕೊನೆಗೂ ಬ್ರೇಕ್ ಬಿದ್ದಿದ್ದು, ಸತತ 5 ವರ್ಷಗಳ ನಂತರ ಭಾರತ ಮತ್ತೊಮ್ಮೆ ಏಷ್ಯಾಕಪ್ ವಶಪಡಿಸಿಕೊಂಡಿದೆ. ಸೆಪ್ಟೆಂಬರ್ 17 ರ ಭಾನುವಾರದಂದು, ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಕಾಳಗದಲ್ಲಿ ಶ್ರೀಲಂಕಾವನ್ನು ಮಣಿಸಿದ ಭಾರತ (India vs Sri lanka) 8ನೇ ಬಾರಿಗೆ ಏಷ್ಯನ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಮೊಹಮ್ಮದ್ ಸಿರಾಜ್ (6/21) (Mohammed Siraj) ದಾಳಿಗೆ ನಲುಗಿದ ಇಡೀ ಲಂಕಾ ತಂಡವು 92 ಎಸೆತಗಳಲ್ಲಿ ಕೇವಲ 50 ರನ್‌ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಈ ಪಂದ್ಯವನ್ನು 10 ವಿಕೆಟ್‌ಗಳಿಂದ ಗೆದ್ದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಇದರೊಂದಿಗೆ ಏಷ್ಯಾಕಪ್ಗೆ ಅದ್ಧೂರಿ ತೆರೆಬಿದ್ದಿದೆ. ಇನ್ನು ಈ ಕಾಂಟಿನೆಂಟಲ್ ಈವೆಂಟ್ನ ವಿವಿದ ವಿಭಾಗಗಳಲ್ಲಿ ಯಾರ ಪ್ರದರ್ಶನ ಅದ್ಭುತವಾಗಿತ್ತು ಎಂಬುದನ್ನು ನೋಡುವುದಾದರೆ..
ವಾಸ್ತವವಾಗಿ ಪಲ್ಲೆಕೆಲೆ ಮತ್ತು ಕೊಲಂಬೊದಲ್ಲಿನ ಪ್ರತಿಯೊಂದು ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿತು. ಇದು ಪಂದ್ಯಾವಳಿಯ ಅಂತಿಮ ಲೀಡರ್‌ಬೋರ್ಡ್ ಚಾರ್ಟ್‌ನ ಮೇಲೂ ಪರಿಣಾಮ ಬೀರಿತು. ಭಾರತದ ಶುಭ್ಮನ್ ಗಿಲ್ 300 ಪ್ಲಸ್ ರನ್ ಗಳಿಸಿದ ಏಕೈಕ ಆಟಗಾರ ಎನಿಸಿಕೊಂಡರೆ, ಇತರ ಮೂವರು ಆಟಗಾರರು ಮಾತ್ರ 200 ರನ್ ಗಡಿ ತಲುಪುವಲ್ಲಿ ಯಶಸ್ವಿಯಾದರು. ಬೌಲಿಂಗ್‌ನಲ್ಲಿ, ಕೇವಲ ನಾಲ್ವರು ಆಟಗಾರರು ವಿಕೆಟ್‌ಗಳ ವಿಷಯದಲ್ಲಿ ಎರಡಂಕಿಯ ಸಂಖ್ಯೆಯನ್ನು ತಲುಪುವಲ್ಲಿ ಯಶಸ್ವಿಯಾದರೆ, ಒಬ್ಬ ಆಟಗಾರ ಮಾತ್ರ ಪಂದ್ಯಾವಳಿಯಲ್ಲಿ 10ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಬರೆದರು.
ICC ODI Ranking: ಏಷ್ಯಾಕಪ್ ಗೆದ್ದ ಭಾರತ; ಅಗ್ರಸ್ಥಾನಕ್ಕೇರಿದ ಪಾಕಿಸ್ತಾನ..!
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ