Asia cup 2023 PAK vs IND Live Score: ಭಾರತ-ಪಾಕ್ ಪಂದ್ಯ ನಾಳೆಗೆ ಮುಂದೂಡಿಕೆ
Asia cup 2023 Pakistan vs India Live Score in Kannada: ಏಷ್ಯಾಕಪ್ನ ಸೂಪರ್ ಫೋರ್ ಹಂತದ 3ನೇ ಪಂದ್ಯದಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಿದೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡುತ್ತಿದೆ.
ಭಾರತ-ಪಾಕಿಸ್ತಾನ್ ನಡುವಣ ಸೂಪರ್ ಫೋರ್ ಹಂತದ 3ನೇ ಪಂದ್ಯವನ್ನು ಮಳೆಯ ಕಾರಣ ಸೋಮವಾರಕ್ಕೆ ಮುಂದೂಡಲಾಗಿದೆ. ಅದರಂತೆ ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಾಳೆ ಪಂದ್ಯ ಮುಂದುವರೆಯಲಿದೆ. ಇಲ್ಲಿ ಟೀಮ್ ಇಂಡಿಯಾ ಇನಿಂಗ್ಸ್ ಸ್ಥಗಿತಗೊಂಡಲ್ಲಿಂದ ಪಂದ್ಯ ಶುರುವಾಗಲಿದ್ದು, ಆ ಮೂಲಕ 50 ಓವರ್ಗಳ ಪಂದ್ಯಗಳನ್ನಾಡಲಾಗುತ್ತದೆ. ಅಂದರೆ ಪ್ರಸ್ತುತ 24.1 ಓವರ್ಗಳಲ್ಲಿ ಟೀಮ್ ಇಂಡಿಯಾ 2 ವಿಕೆಟ್ ನಷ್ಟಕ್ಕೆ 147 ರನ್ ಕಲೆಹಾಕಿದೆ. ಇನ್ನು ಕ್ರೀಸ್ನಲ್ಲಿ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ನಾಳೆ ಇವರು ಇನಿಂಗ್ಸ್ ಆರಂಭಿಸಲಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಭಾರತ-ಪಾಕಿಸ್ತಾನ್ ಇದುವರೆಗೆ 133 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಭಾರತ ತಂಡವು ಕೇವಲ 55 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ. ಮತ್ತೊಂದೆಡೆ ಪಾಕಿಸ್ತಾನ್ ತಂಡವು 73 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಇನ್ನು 5 ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿದೆ.
ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಭಾರತ-ಪಾಕ್ ನಡುವಣ ಕೊನೆಯ 5 ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ 4 ಬಾರಿ ಗೆಲುವಿನ ನಗೆ ಬೀರಿರುವುದು. ಹೀಗಾಗಿ ಕೊಲಂಬೊದಲ್ಲೂ ಭಾರತ ತಂಡದ ಗೆಲುವವನ್ನು ನಿರೀಕ್ಷಿಸಬಹುದು.
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.
ಪಾಕಿಸ್ತಾನ್ ಪ್ಲೇಯಿಂಗ್ 11: ಫಖರ್ ಝಮಾನ್, ಇಮಾಮ್ ಉಲ್ ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸಲ್ಮಾನ್ ಆಘಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್.
ಪಾಕಿಸ್ತಾನ್ ತಂಡ: ಬಾಬರ್ ಆಝಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅಬ್ದುಲ್ಲಾ ಶಫೀಕ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾಮ್-ಉಲ್-ಹಕ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಸಲ್ಮಾನ್ ಅಲಿ ಅಘಾ, ಸೌದ್ ಶಕೀಲ್, ಶಾಹೀನ್ ಅಫ್ರಿದಿ ಮತ್ತು ಉಸಾಮಾ ಮಿರ್, ತಯ್ಯಬ್ ತಾಹಿರ್ (ಮೀಸಲು ಆಟಗಾರ).
ಇದನ್ನೂ ಓದಿ: ಸಚಿನ್ ತೆಂಡೂಲ್ಕರ್ ವಿಶ್ವ ದಾಖಲೆ ಮುರಿದ ಡೇವಿಡ್ ವಾರ್ನರ್
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ.
LIVE Cricket Score & Updates
-
Asia cup 2023 PAK vs IND Live Score: ಭಾರತ-ಪಾಕ್ ಪಂದ್ಯ ನಾಳೆಗೆ ಮುಂದೂಡಿಕೆ
ಭಾರತ-ಪಾಕಿಸ್ತಾನ್ ನಡುವಣ ಸೂಪರ್ ಫೋರ್ ಹಂತದ 3ನೇ ಪಂದ್ಯವನ್ನು ಮಳೆಯ ಕಾರಣ ಸೋಮವಾರಕ್ಕೆ ಮುಂದೂಡಲಾಗಿದೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ಇಂದು ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಟೀಮ್ ಇಂಡಿಯಾ ಇನಿಂಗ್ಸ್ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ನಾಳೆಗೆ ಮುಂದೂಡಲಾಗಿದೆ.
-
PAK vs IND Live Score: ಓವರ್ಗಳ ಕಡಿತದೊಂದಿಗೆ ಪಂದ್ಯ ಶುರುವಾಗುವ ಸಾಧ್ಯತೆ
8.30 ಕ್ಕೆ ಮೈದಾನವನ್ನು ಪರಿಶೀಲಿಸಲು ಅಂಪೈರ್ಗಳು ನಿರ್ಧರಿಸಿದ್ದಾರೆ. ಅದರಂತೆ 9 ಗಂಟೆಯಿಂದ ಪಂದ್ಯ ಶುರುವಾದರೆ 34 ಓವರ್ಗಳ ಮ್ಯಾಚ್ ನಡೆಯಲಿದೆ. ಅಂದರೆ 24.1 ಓವರ್ಗಳನ್ನು ಆಡಿರುವ ಭಾರತ ತಂಡವು 34 ಓವರ್ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಲಿದೆ. ಇನ್ನು ಪಾಕಿಸ್ತಾನ್ ತಂಡವು 34 ಓವರ್ಗಳಲ್ಲಿ ಟೀಮ್ ಇಂಡಿಯಾ ನೀಡುವ ಗುರಿಯನ್ನು ಬೆನ್ನತ್ತಬೇಕಾಗುತ್ತದೆ.
-
Asia cup 2023 PAK vs IND Live Score: 8.30 ಕ್ಕೆ ಮೂರನೇ ಪರಿಶೀಲನೆ
Fans in the ground to dry the ground. pic.twitter.com/etKP2iECtA
— Johns. (@CricCrazyJohns) September 10, 2023
ಮೈದಾನದಲ್ಲಿನ ತೇವಾಂಶವನ್ನು ನೀಗಿಸಲು ಫ್ಯಾನ್ಗಳ ಮೊರೆ ಹೋದ ಆರ್. ಪ್ರೇಮದಾಸ ಸ್ಟೇಡಿಯಂ ಸಿಬ್ಬಂದಿಗಳು.
8.30 ಕ್ಕೆ ಮೂರನೇ ಬಾರಿ ಪರಿಶೀಲನೆ ನಡೆಸಲಿರುವ ಅಂಪೈರ್ಗಳು. ಆ ಬಳಿಕ ಪಂದ್ಯವನ್ನು ಮುಂದುವರೆಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
Asia cup 2023 PAK vs IND Live Score: ಮತ್ತೊಂದು ಸುತ್ತಿನ ಪರಿಶೀಲನೆ
ಮೊದಲ ಸುತ್ತಿನ ಪರಿಶೀಲನೆಯಲ್ಲಿ ಮೈದಾನದ ಕೆಳ ಭಾಗವು ಒದ್ದೆಯಾಗಿರುವುದನ್ನು ಗಣನೆಗೆ ತೆಗೆದುಕೊಂಡ ಅಂಪೈರ್ಗಳು. ತೇವಾಂಶದಿಂದ ಕೂಡಿರುವ ಮೈದಾನದ ಕೆಲ ಭಾಗಗಳನ್ನು ಸರಿಪಡಿಸುವಂತೆ ಮೈದಾನದ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ ಅರ್ಧಗಂಟೆಯ ಬಳಿಕ ಮತ್ತೊಮ್ಮೆ ಮೈದಾನವನ್ನು ಪರಿಶೀಲಿಸಲು ನಿರ್ಧರಿಸಿದ್ದಾರೆ. ಅದರಂತೆ 8 ಗಂಟೆಗೆ ಮತ್ತೊಂದು ಸುತ್ತಿನ ಪರಿಶೀಲನೆ ನಡೆಯಲಿದ್ದು, ಇದಾದ ಬಳಿಕ ಪಂದ್ಯ ಆಯೋಜಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
Asia cup 2023 PAK vs IND Live Score: 7.30 ಕ್ಕೆ ಪಿಚ್ ಪರಿಶೀಲನೆ
ಸದ್ಯ ಕೊಲಂಬೊದಲ್ಲಿ ಮಳೆ ಸ್ಥಗಿತವಾಗಿದ್ದು. ಮೈದಾನದಲ್ಲಿನ ನೀರನ್ನು ಸಂಪೂರ್ಣ ತೆರವುಗೊಳಿಸುವಲ್ಲಿ ಸಿಬ್ಬಂದಿಗಳು ನಿರತರಾಗಿದ್ದಾರೆ.
ಇನ್ನು 7.30 ಕ್ಕೆ ಅಂಪೈರ್ಗಳು ಪಿಚ್ ಪರಿಶೀಲನೆ ನಡೆಸಲಿದ್ದು, ಪಂದ್ಯ ಆಯೋಜಿಸಲು ಸೂಕ್ತವಾಗಿದೆಯಾ ಎಂಬುದನ್ನು ನಿರ್ಧರಿಸಲಿದ್ದಾರೆ. ಹೀಗಾಗಿ ಇನ್ನು ಅರ್ಧ ಗಂಟೆಯವರೆಗೆ ಪಂದ್ಯ ನಡೆಯಲಿದೆಯಾ ಎಂಬುದನ್ನು ತಿಳಿಯಲು ಕಾಯಲೇಬೇಕು.
Asia cup 2023 PAK vs IND Live Score: ಭಾರತ-ಪಾಕ್ ಪಂದ್ಯ: ಮಳೆ ಸ್ಥಗಿತ
ಕೊಲಂಬೊದಲ್ಲಿ ಮಳೆ ಸ್ಥಗಿತ. ಗ್ರೌಂಡ್ ಸಿಬ್ಬಂದಿಗಳು ಮೈದಾನದಲ್ಲಿನ ನೀರನ್ನು ತೆರವುಗೊಳಿಸುತ್ತಿದ್ದಾರೆ. ಹೀಗಾಗಿ ಪಂದ್ಯ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆಯಿದೆ.
ಒಂದು ವೇಳೆ ಇನ್ನೂ ಅರ್ಧಗಂಟೆ ತಡವಾಗಿ ಪಂದ್ಯ ಆರಂಭವಾದರೆ ಓವರ್ಗಳ ಕಡಿತವಾಗುವ ಸಾಧ್ಯತೆ ಹೆಚ್ಚಿದೆ.
ಸದ್ಯ ಕ್ರೀಸ್ನಲ್ಲಿ ಕೆಎಲ್ ರಾಹುಲ್ (17) ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
IND 147/2 (24.1)
Asia cup 2023 PAK vs IND Live Score: ಪಂದ್ಯ ರದ್ದಾದರೆ ಮುಂದೇನು?
ಕೊಲಂಬೊದಲ್ಲಿ ನಡೆಯುತ್ತಿರುವ ಭಾರತ-ಪಾಕಿಸ್ತಾನ್ ನಡುವಣ ಪಂದ್ಯವು ಮಳೆಯಿಂದಾಗಿ ಸ್ಥಗಿತಗೊಂಡಿದೆ. ಒಂದು ವೇಳೆ ಇಂದು ಪಂದ್ಯವನ್ನು ನಡೆಸಲು ಸಾಧ್ಯವಾಗದಿದ್ದರೆ ನಾಳೆಗೆ ಮುಂದೂಡಲಾಗುತ್ತದೆ. ಅಂದರೆ ಇವತ್ತು ಎಷ್ಟು ಓವರ್ಗಳವರೆಗೆ ಪಂದ್ಯ ನಡೆದಿದೆಯೋ ಅಲ್ಲಿಂದ ನಾಳೆ ಪಂದ್ಯ ಶುರುವಾಗಲಿದೆ. ಹೀಗಾಗಿ ಇಂದು ಸತತ ಮಳೆ ಬಂದರೂ ಮೀಸಲು ದಿನದಾಟದಲ್ಲಿ (ಸೋಮವಾರ) ಪಂದ್ಯವನ್ನು ಮುಂದುವರೆಸಲಾಗುತ್ತದೆ.
Asia cup 2023 PAK vs IND Live Score: ಮಳೆಯಿಂದಾಗಿ ಪಂದ್ಯ ಸ್ಥಗಿತ
25ನೇ ಓವರ್ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ.
ಸದ್ಯ ಧಾರಾಕಾರ ಮಳೆಯಾಗುತ್ತಿದ್ದು, ಹೀಗಾಗಿ ಮೈದಾನವನ್ನು ಕವರ್ಗಳಿಂದ ಮುಚ್ಚಲಾಗಿದೆ.
24.1 ಓವರ್ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ 147 ರನ್ ಕಲೆಹಾಕಿದೆ.
ಸದ್ಯ ಕ್ರೀಸ್ನಲ್ಲಿ ಕೆಎಲ್ ರಾಹುಲ್ (17) ಹಾಗೂ ವಿರಾಟ್ ಕೊಹ್ಲಿ (8) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
IND 147/2 (24.1)
Asia cup 2023 PAK vs IND Live Score: ಕೆಎಲ್ ರಾಹುಲ್ ಮಾರ್ಕ್-ಬೌಂಡರಿ
ಹ್ಯಾರಿಸ್ ರೌಫ್ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಕೆಎಲ್ ರಾಹುಲ್.
ಈ ಫೋರ್ನೊಂದಿಗೆ ಏಕದಿನ ಕ್ರಿಕೆಟ್ನಲ್ಲಿ 2000 ರನ್ ಪೂರೈಸಿದ ರಾಹುಲ್.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.
IND 145/2 (23.4)
Asia cup 2023 PAK vs IND Live Score: ಟೀಮ್ ಇಂಡಿಯಾದ 2ನೇ ವಿಕೆಟ್ ಪತನ
ಶಾಹೀನ್ ಅಫ್ರಿದಿಯ ಸ್ಲೋ ಎಸೆತದಲ್ಲಿ ಫ್ರಂಟ್ ಫೀಲ್ಡರ್ಗೆ ಸುಲಭ ಕ್ಯಾಚ್ ನೀಡಿದ ಶುಭ್ಮನ್ ಗಿಲ್
52 ಎಸೆತಗಳಲ್ಲಿ 10 ಫೋರ್ಗಳೊಂದಿಗೆ 58 ರನ್ ಬಾರಿಸಿ ನಿರ್ಗಮಿಸಿದ ಶುಭ್ಮನ್ ಗಿಲ್.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.
IND 123/2 (17.5)
Asia cup 2023 PAK vs IND Live Score: ಟೀಮ್ ಇಂಡಿಯಾದ ಮೊದಲ ವಿಕೆಟ್ ಪತನ
ಶಾದಾಬ್ ಖಾನ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ರೋಹಿತ್ ಶರ್ಮಾ…ಬೌಂಡರಿ ಲೈನ್ನಲ್ಲಿ ಫಹೀಮ್ ಅಶ್ರಫ್ ಅತ್ಯುತ್ತಮ ಕ್ಯಾಚ್… ಹಿಟ್ಮ್ಯಾನ್ ಔಟ್.
49 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 56 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ರೋಹಿತ್ ಶರ್ಮಾ.
IND 121/1 (16.4)
Asia cup 2023 PAK vs IND Live Score: ಅರ್ಧಶತಕ ಪೂರೈಸಿದ ಗಿಲ್-ರೋಹಿತ್ ಶರ್ಮಾ
ಶಾದಾಬ್ ಖಾನ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ.
ಈ ಸಿಕ್ಸ್ನೊಂದಿಗೆ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಹಿಟ್ಮ್ಯಾನ್.
ಇದಕ್ಕೂ ಮುನ್ನ 37 ಎಸೆತಗಳಲ್ಲಿ ಹಾಫ್ ಸೆಂಚುರಿಸಿ ಪೂರೈಸಿದ್ದ ಶುಭ್ಮನ್ ಗಿಲ್.
ಟೀಮ್ ಇಂಡಿಯಾ ಆರಂಭಿಕರ ಅಬ್ಬರದ ಶತಕದ ಜೊತೆಯಾಟ.
IND 109/0 (14.1)
Asia cup 2023 PAK vs IND Live Score: ಹಿಟ್ಮ್ಯಾನ್ ಅಬ್ಬರ ಶುರು
ಶಾದಾಬ್ ಖಾನ್ ಎಸೆದ 13ನೇ ಓವರ್ನ 4ನೇ ಮತ್ತು 5ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ.
ಕೊನೆಯ ಎಸೆತದಲ್ಲಿ ಸ್ಕ್ವೇಟ್ ಕಟ್ ಮೂಲಕ ಮತ್ತೊಂದು ಆಕರ್ಷಕ ಫೋರ್ ಸಿಡಿಸಿದ ಹಿಟ್ಮ್ಯಾನ್.
IND 96/0 (13)
Asia cup 2023 PAK vs IND Live Score: ಅರ್ಧಶತಕ ಪೂರೈಸಿದ ಶುಭ್ಮನ್ ಗಿಲ್
37 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಪೂರೈಸಿದ ಶುಭ್ಮನ್ ಗಿಲ್
ಪಾಕ್ ವಿರುದ್ಧದ ತಮ್ಮ ಮೊದಲ ಹಾಫ್ ಸೆಂಚುರಿಯಲ್ಲಿ 10 ಫೋರ್ ಬಾರಿಸಿರುವ ಗಿಲ್
ಕ್ರೀಸ್ನಲ್ಲಿ ಶುಭ್ಮನ್ ಗಿಲ್ (50) ಹಾಗೂ ರೋಹಿತ್ ಶರ್ಮಾ (27) ಬ್ಯಾಟಿಂಗ್.
IND 80/0 (12.3)
Asia cup 2023 PAK vs IND Live Score: ರೌಫ್ ಟು ರೋಹಿತ್= ಫೋರ್
ಹ್ಯಾರಿಸ್ ರೌಫ್ ಎಸೆದ 12ನೇ ಓವರ್ನ ಕೊನೆಯ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ರೋಹಿತ್ ಶರ್ಮಾ.
ಕ್ರೀಸ್ನಲ್ಲಿ ಶುಭ್ ಮನ್ ಗಿಲ್ (49) ಹಾಗೂ ರೋಹಿತ್ ಶರ್ಮಾ (27) ಬ್ಯಾಟಿಂಗ್.
6.41 ಸರಾಸರಿಯಲ್ಲಿ ರನ್ ಪೇರಿಸಿರುವ ಟೀಮ್ ಇಂಡಿಯಾ ಆರಂಭಿಕರು.
IND 77/0 (12)
Asia cup 2023 PAK vs IND Live Score: 10 ಓವರ್ ಮುಕ್ತಾಯ: ಭಾರತ ಭರ್ಜರಿ ಬ್ಯಾಟಿಂಗ್
ನಸೀಮ್ ಶಾ ಎಸೆದ 10ನೇ ಓವರ್ನ 4ನೇ ಮತ್ತು 5ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ರೋಹಿತ್ ಶರ್ಮಾ.
ಮೊದಲ 10 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 61 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ರೋಹಿತ್ ಶರ್ಮಾ (18) ಹಾಗೂ ಶುಭ್ಮನ್ ಗಿಲ್ (41) ಬ್ಯಾಟಿಂಗ್.
IND 61/0 (10)
Asia cup 2023 PAK vs IND Live Score: ಅರ್ಧಶತಕ ಪೂರೈಸಿದ ಟೀಮ್ ಇಂಡಿಯಾ
ಫಹೀಮ್ ಅಶ್ರಫ್ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಶುಭ್ಮನ್ ಗಿಲ್.
ಈ ಫೋರ್ನೊಂದಿಗೆ ಅರ್ಧಶತಕ ಪೂರೈಸಿದ ಟೀಮ್ ಇಂಡಿಯಾ.
IND 51/0 (8.2)
ಕ್ರೀಸ್ ನಲ್ಲಿ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್.
Asia cup 2023 PAK vs IND Live Score: ವಾಟ್ ಎ ಶಾಟ್: ಗಿಲ್ ಬ್ಯಾಟ್ನಿಂದ ಫೋರ್
ನಸೀಮ್ ಶಾ ಎಸೆತದಲ್ಲಿ ಪಾಯಿಂಟ್ ಕವರ್ ಮೂಲಕ ಆಕರ್ಷಕ ಬೌಂಡರಿ ಬಾರಿಸಿದ ಶುಭ್ಮನ್ ಗಿಲ್.
ಕ್ರೀಸ್ನಲ್ಲಿ ರೋಹಿತ್ ಶರ್ಮಾ (10) ಹಾಗೂ ಶುಭ್ಮನ್ ಗಿಲ್ (30) ಭರ್ಜರಿ ಬ್ಯಾಟಿಂಗ್.
IND 42/0 (7.1)
Asia cup 2023 PAK vs IND Live Score: ಮೂರು ಫೋರ್ ಬಾರಿಸಿದ ಗಿಲ್
ಶಾಹೀನ್ ಅಫ್ರಿದಿ ಎಸೆದ 5ನೇ ಓವರ್ನಲ್ಲೂ 3 ಆಕರ್ಷಕ ಫೋರ್ ಬಾರಿಸಿದ ಶುಭ್ಮನ್ ಗಿಲ್
2ನೇ ಎಸೆತದಲ್ಲಿ ಆಫ್ ಸೈಡ್ನತ್ತ ಬೌಂಡರಿ ಬಾರಿಸಿದ ಗಿಲ್, 4ನೇ ಮತ್ತು 5ನೇ ಎಸೆತದಲ್ಲಿ ಕವರ್ ಡ್ರೈವ್ ಫೋರ್ ಸಿಡಿಸಿದರು.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಉತ್ತಮ ಬ್ಯಾಟಿಂಗ್
IND 37/0 (5)
Asia cup 2023 PAK vs IND Live Score: ಬ್ಯಾಕ್ ಟು ಬ್ಯಾಕ್ ಫೋರ್ ಸಿಡಿಸಿದ ಗಿಲ್
ಶಾಹೀನ್ ಶಾ ಅಫ್ರಿದಿ ಎಸೆದ 3ನೇ ಓವರ್ನ ಮೊದಲೆರಡು ಎಸೆತಗಳಲ್ಲಿ ಅತ್ಯಾಕರ್ಷಕ ಫೋರ್ಗಳನ್ನು ಸಿಡಿಸಿದ ಶುಭ್ಮನ್ ಗಿಲ್.
ಕೊನೆಯ ಎಸೆತದಲ್ಲಿ ಸ್ಟ್ರೈಟ್ ಡ್ರೈವ್ ಫೋರ್ ಬಾರಿಸಿ ಒಟ್ಟು 12 ರನ್ ಕಲೆಹಾಕಿದ ಗಿಲ್.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಗಿಲ್ ಬ್ಯಾಟಿಂಗ್
IND 23/0 (3)
Asia cup 2023 PAK vs IND Live Score: ಹಿಟ್ಮ್ಯಾನ್ ಟೈಮಿಂಗ್ ಶಾಟ್
ನಸೀಮ್ ಶಾ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ರೋಹಿತ್ ಶರ್ಮಾ.
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್.
ಮೊದಲ ಓವರ್ನಲ್ಲಿ ಸಿಕ್ಸ್ ಬಾರಿಸಿದ್ದ ಹಿಟ್ಮ್ಯಾನ್ 2ನೇ ಓವರ್ನಲ್ಲಿ ಫೋರ್ ಸಿಡಿಸಿದರು.
IND 11/0 (1.5)
Asia cup 2023 PAK vs IND Live Score: ಭರ್ಜರಿ ಸಿಕ್ಸ್ನೊಂದಿಗೆ ಶುಭಾರಂಭ
ಶಾಹೀನ್ ಶಾ ಅಫ್ರಿದಿಯ ಮೊದಲ ಓವರ್ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ.
ಸಿಕ್ಸ್ನೊಂದಿಗೆ ಟೀಮ್ ಇಂಡಿಯಾ ರನ್ ಖಾತೆ ತೆರೆದ ನಾಯಕ ರೋಹಿತ್ ಶರ್ಮಾ.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್.
IND 6/0 (1)
Asia cup 2023 PAK vs IND Live Score: ಟೀಮ್ ಇಂಡಿಯಾ ಇನಿಂಗ್ಸ್ ಆರಂಭ
ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್
ಪಾಕಿಸ್ತಾನ್ ಪರ ಮೊದಲ ಓವರ್ ಎಸೆಯುತ್ತಿರುವ ಎಡಗೈ ವೇಗಿ ಶಾಹೀನ್ ಶಾ ಅಫ್ರಿದಿ.
Asia cup 2023 PAK vs IND Live Score: ಭಾರತದ ಪರ ಕಣಕ್ಕಿಳಿಯುವ ಕಲಿಗಳು
🚨 Toss & Team News 🚨
Pakistan have elected to bowl against #TeamIndia.
A look at our Playing XI 🔽
Follow the match ▶️ https://t.co/kg7Sh2t5pM#AsiaCup2023 | #INDvPAK pic.twitter.com/fkABP5uWxr
— BCCI (@BCCI) September 10, 2023
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.
Asia cup 2023 PAK vs IND Live Score: ಪಾಕಿಸ್ತಾನ್ ಪ್ಲೇಯಿಂಗ್ ಇಲೆವೆನ್
ಪಾಕಿಸ್ತಾನ್ ಪ್ಲೇಯಿಂಗ್ 11: ಫಖರ್ ಝಮಾನ್, ಇಮಾಮ್ ಉಲ್ ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸಲ್ಮಾನ್ ಆಘಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್.
Asia cup 2023 PAK vs IND Live Score: ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.
Asia cup 2023 PAK vs IND Live Score: ಟಾಸ್ ಗೆದ್ದ ಪಾಕಿಸ್ತಾನ್
ಕೊಲಂಬೊದ ಆರ್. ಪ್ರೇಮದಾಸ ಇಂಟರ್ನ್ಯಾಷನಲ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಬೌಲಿಂಗ್ ಆಯ್ದುಕೊಂಡಿದ್ದಾರೆ.
Asia cup 2023 PAK vs IND Live Score: ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ
Last time we were all left wanting after a competitive first innings. Second shot of the grandest contest is due, TODAY! 🔥#AsiaCup2023 #INDvsPAK pic.twitter.com/Nbn0UGzxck
— AsianCricketCouncil (@ACCMedia1) September 10, 2023
ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಶುರು.
Asia cup 2023 PAK vs IND Live Score: ಸೂಪರ್-4 ಪಂದ್ಯ: ಇಂಡೊ-ಪಾಕ್ ಮುಖಾಮುಖಿ
ಸೂಪರ್ ಫೋರ್ ಹಂತದ 3ನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗುತ್ತಿದೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಜಯ ಸಾಧಿಸಿದರೆ ಟೀಮ್ ಇಂಡಿಯಾ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಬಹುದು. ಹೀಗಾಗಿ ಸೂಪರ್-4 ಹಂತದ ಮೊದಲ ಪಂದ್ಯದಲ್ಲೇ ಜಯ ಸಾಧಿಸಿ ಶುಭಾರಂಭ ಮಾಡುವ ಇರಾದೆಯಲ್ಲಿದೆ ಟೀಮ್ ಇಂಡಿಯಾ.
Published On - Sep 10,2023 2:11 PM