ಪಾಕ್ ಮಾಜಿನಾಯಕನ ಮಗಳನ್ನು ಎರಡನೇ ಬಾರಿಗೆ ವರಿಸಲಿದ್ದಾರೆ ವೇಗಿ ಶಾಹೀನ್ ಅಫ್ರಿದಿ..!
Shaheen Afridi: ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲಿಂಗ್ ಜೀವಾಳ ಆಗಿರುವ ವೇಗದ ಬೌಲರ್ ಶಾಹೀನ್ ಅಫ್ರಿದಿ, ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ಮಗಳು ಅನ್ಶಾ ಅಫ್ರಿದಿ ಅವರನ್ನು ಎರಡನೇ ಬಾರಿಗೆ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲಿಂಗ್ ಜೀವಾಳ ಆಗಿರುವ ವೇಗದ ಬೌಲರ್ ಶಾಹೀನ್ ಅಫ್ರಿದಿ (Shaheen Afridi), ಮಾಜಿ ನಾಯಕ ಶಾಹಿದ್ ಅಫ್ರಿದಿ (Shahid Afridi) ಅವರ ಮಗಳು ಅನ್ಶಾ ಅಫ್ರಿದಿ (Ansha Afridi) ಅವರನ್ನು ಎರಡನೇ ಬಾರಿಗೆ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಪ್ರಸ್ತುತ ಏಷ್ಯಾಕಪ್ನಲ್ಲಿ (Asia Cup 2023) ಬ್ಯುಸಿಯಾಗಿರುವ ಈ ಪಾಕ್ ವೇಗಿ ಈ ಕಾಂಟಿನೆಂಟಲ್ ಈವೆಂಟ್ನ ಫೈನಲ್ ಪಂದ್ಯ ಮುಗಿದ 2 ದಿನಗಳ ನಂತರ ಅಂದರೆ, ಸೆಪ್ಟೆಂಬರ್ 19 ರಂದು ಎರಡನೇ ಬಾರಿಗೆ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ ಎಂದು ತಿಳಿದುಬಂದಿದೆ.
ವಾಸ್ತವವಾಗಿ ಶಾಹೀನ್ ಅಫ್ರಿದಿ ಮತ್ತು ಅನ್ಶಾ ಈ ವರ್ಷದ ಫೆಬ್ರವರಿಯಲ್ಲಿ ಸಾಂಪ್ರದಾಯಿಕ ಅಫ್ರಿದಿ ಬುಡಕಟ್ಟು ಸಂಪ್ರದಾಯದ ಪ್ರಕಾರ ಕುಟುಂಬದ ಆಪ್ತರ ಸಮ್ಮುಖದಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಅಂದು ಈ ವಿವಾಹ ಕಾರ್ಯಕ್ರಮದಲ್ಲಿ ಬಾಬರ್ ಅಜಮ್ ಮತ್ತು ಶಾದಾಬ್ ಖಾನ್ ಸೇರಿದಂತೆ ದಂಪತಿಗಳ ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರು ಮಾತ್ರ ಮದುವೆಯಲ್ಲಿ ಭಾಗವಹಿಸಿದ್ದರು.
Fakhta Told me that national team’s star fast bowler Shaheen Shah Afridi will tie the knot after the Asia Cup. Shaheen Afridi’s barat ceremony will be held on September 19 in Karachi and Walima ceremony will be held in a private hotel of Islamabad on 21st sep Gud luck…
— Qadir Khawaja (@iamqadirkhawaja) September 7, 2023
ಸೆ.19ರಂದು ಕರಾಚಿಯಲ್ಲಿ ಮದುವೆ
ಇದೀಗ ದಂಪತಿಗಳು ಈಗ ತಮ್ಮ ವಿಶೇಷ ದಿನವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ್ದು, ಎರಡನೇ ಬಾರಿಗೆ ಮದುವೆಯಾಗಲು ಯೋಜಿಸುತ್ತಿದ್ದಾರೆ. ಹೀಗಾಗಿ ಮೇಲೆ ಹೇಳಿದಂತೆ ಸೆಪ್ಟೆಂಬರ್ 19ರಂದು ಕರಾಚಿಯಲ್ಲಿ ಅದ್ಧೂರಿ ಮದುವೆ ಸಮಾರಂಭ ನಡೆಯಲಿದ್ದು, ಸೆಪ್ಟೆಂಬರ್ 21 ರಂದು ಇಸ್ಲಾಮಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ. ಈ ಸಮಾರಂಭಕ್ಕೆ ಪಾಕಿಸ್ತಾನದ ಗಣ್ಯರು ಹಾಗೂ ಪಾಕ್ ತಂಡದ ಮಾಜಿ ಹಾಗೂ ಹಾಲಿ ಆಟಗಾರರು ಉಪಸ್ಥಿತರಿರಲಿದ್ದಾರೆ ಎಂದು ವರದಿಯಾಗಿದೆ.
ಭಾರತದ ವಿರುದ್ಧ ಅಬ್ಬರಿಸಿದ ಅಫ್ರಿದಿ
ಶಾಹೀನ್ ಪ್ರಸ್ತುತ ನಡೆಯುತ್ತಿರುವ ಏಷ್ಯಾಕಪ್ ಸೂಪರ್ 4 ಪಂದ್ಯಗಳಿಗಾಗಿ ಶ್ರೀಲಂಕಾದಲ್ಲಿದ್ದಾರೆ. ಈ ಕಾಂಟಿನೆಂಟಲ್ ಈವೆಂಟ್ನಲ್ಲಿ ಪಾಕ್ ಪರ ಆಡಿರುವ 3 ಪಂದ್ಯಗಳಲ್ಲಿ 7 ವಿಕೆಟ್ ಪಡೆದಿರುವ ಅಫ್ರಿದಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಲೀಗ್ ಹಂತದಲ್ಲಿ ಟೀಂ ಇಂಡಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 35 ರನ್ ನೀಡಿ ಪ್ರಮುಖ 4 ವಿಕೆಟ್ ಉರುಳಿಸಿದ್ದು, ಈ ಪಂದ್ಯಾವಳಿಯಲ್ಲಿ ಇದುವರೆಗಿನ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ