AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2023: ಟೀಮ್ ಇಂಡಿಯಾದ ಸ್ಟಾರ್ ಆಟಗಾರನಿಗೆ ಗಾಯ

India vs Pakistan: ಐಪಿಎಲ್ 2023 ರ ಆರಂಭಕ್ಕೂ ಮುನ್ನ ಬೆನ್ನು ನೋವಿನ ಸಮಸ್ಯೆಗೆ ಒಳಗಗಿದ್ದ ಶ್ರೇಯಸ್ ಅಯ್ಯರ್ ಕಳೆದ ಕೆಲ ತಿಂಗಳುಗಳಿಂದ ಮೈದಾನದಿಂದ ಹೊರಗುಳಿದಿದ್ದರು. ಅಲ್ಲದೆ ಏಷ್ಯಾಕಪ್​ಗೂ ಮುನ್ನ ಸಂಪೂರ್ಣ ಫಿಟ್​ನೆಸ್ ಸಾಧಿಸುವ ಮೂಲಕ ಟೀಮ್ ಇಂಡಿಯಾಗೆ ಮರಳಿದ್ದರು.

Asia Cup 2023: ಟೀಮ್ ಇಂಡಿಯಾದ ಸ್ಟಾರ್ ಆಟಗಾರನಿಗೆ ಗಾಯ
Team India
TV9 Web
| Updated By: ಝಾಹಿರ್ ಯೂಸುಫ್|

Updated on: Sep 10, 2023 | 4:32 PM

Share

ಏಷ್ಯಾಕಪ್​ಗೂ ಮುನ್ನ ಶುರುವಾಗಿದ್ದ ಟೀಮ್ ಇಂಡಿಯಾ ಆಟಗಾರರ ಗಾಯದ ಸಮಸ್ಯೆ ಈಗಲೂ ಮುಂದುವರೆದಿದೆ. ಗಾಯದ ಕಾರಣ ಏಷ್ಯಾಕಪ್​ನ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ಕೆಎಲ್ ರಾಹುಲ್ ಇದೀಗ ತಂಡಕ್ಕೆ ಆಗಮಿಸಿದ್ದಾರೆ. ಇತ್ತ ರಾಹುಲ್ ಸಂಪೂರ್ಣ ಫಿಟ್​ನೆಸ್ ಸಾಧಿಸುತ್ತಿದ್ದಂತೆ ಅತ್ತ ಶ್ರೇಯಸ್ ಅಯ್ಯರ್ ಬೆನ್ನುನೋವಿನ ಸಮಸ್ಯೆಗೆ ಒಳಗಾಗಿದ್ದಾರೆ.

ಪಾಕಿಸ್ತಾನ್ ವಿರುದ್ಧದ ಪಂದ್ಯಕ್ಕೂ ಮುನ್ನ ಶ್ರೇಯಸ್ ಅಯ್ಯರ್ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದು, ಹೀಗಾಗಿ ಕೊಲಂಬೊದಲ್ಲಿ ನಡೆಯುತ್ತಿರುವ ಪಂದ್ಯದಿಂದ ಹೊರಗುಳಿದಿದ್ದಾರೆ. ಇತ್ತ ಅಯ್ಯರ್ ಅವರ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಕಣಕ್ಕಿಳಿದಿದ್ದಾರೆ.

ಶ್ರೇಯಸ್ ಅಯ್ಯರ್ ಅನ್​ಫಿಟ್​?

ಐಪಿಎಲ್ 2023 ರ ಆರಂಭಕ್ಕೂ ಮುನ್ನ ಬೆನ್ನು ನೋವಿನ ಸಮಸ್ಯೆಗೆ ಒಳಗಗಿದ್ದ ಶ್ರೇಯಸ್ ಅಯ್ಯರ್ ಕಳೆದ ಕೆಲ ತಿಂಗಳುಗಳಿಂದ ಮೈದಾನದಿಂದ ಹೊರಗುಳಿದಿದ್ದರು. ಅಲ್ಲದೆ ಏಷ್ಯಾಕಪ್​ಗೂ ಮುನ್ನ ಸಂಪೂರ್ಣ ಫಿಟ್​ನೆಸ್ ಸಾಧಿಸುವ ಮೂಲಕ ಟೀಮ್ ಇಂಡಿಯಾಗೆ ಮರಳಿದ್ದರು.

ಆದರೀಗ ಏಷ್ಯಾಕಪ್​ನಲ್ಲಿ ಕೇವಲ 2 ಪಂದ್ಯಗಳನ್ನಾಡುವಷ್ಟರಲ್ಲಿ ಅವರು ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದಾರೆ. ಇದರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಅವರ ಫಿಟ್​ನೆಸ್ ಮೇಲೆ ಪ್ರಶ್ನೆಗಳೆದ್ದಿವೆ.

ಏಕೆಂದರೆ ಪಾಕಿಸ್ತಾನ್ ಹಾಗೂ ನೇಪಾಳ ವಿರುದ್ಧದ ಪಂದ್ಯದಲ್ಲಿ ಮಾತ್ರ ಶ್ರೇಯಸ್ ಅಯ್ಯರ್ ಕಣಕ್ಕಿಳಿದಿದ್ದರು. ಇಲ್ಲಿ ಪಾಕ್ ವಿರುದ್ಧ ಬ್ಯಾಟಿಂಗ್ ಮಾಡಿದ್ದರೂ ಮಳೆಯ ಕಾರಣ ಆ ಪಂದ್ಯದಲ್ಲಿ ಫೀಲ್ಡಿಂಗ್ ಮಾಡಿರಲಿಲ್ಲ.

ಇನ್ನು ನೇಪಾಳ ವಿರುದ್ಧ ಫೀಲ್ಡಿಂಗ್ ಮಾಡಿದ್ದರೂ, ಬ್ಯಾಟಿಂಗ್​ನಲ್ಲಿ ಕಣಕ್ಕಿಳಿದಿರಲಿಲ್ಲ. ಅಂದರೆ ಶ್ರೇಯಸ್ ಅಯ್ಯರ್ ಕಂಬ್ಯಾಕ್ ಮಾಡಿ ಸಂಪೂರ್ಣ 50 ಓವರ್​ಗಳ ಪಂದ್ಯವನ್ನಾಡಿಲ್ಲ ಎನ್ನಬಹುದು. ಅದಕ್ಕೂ ಮುನ್ನವೇ ಮತ್ತೆ ಫಿಟ್​ನೆಸ್ ಸಮಸ್ಯೆಗೆ ಒಳಗಾಗಿರುವುದು ಅಚ್ಚರಿ ಎನ್ನಬಹುದು.

ಸದ್ಯ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾ ಜೊತೆಗಿದ್ದು, ಸೂಪರ್-4 ಹಂತದಲ್ಲಿ ಭಾರತ ಇನ್ನೆರಡು ಪಂದ್ಯಗಳನ್ನಾಡಬೇಕಿದೆ. ಆ ವೇಳೆಗೆ ಅಯ್ಯರ್ ಸಂಪೂರ್ಣ ಫಿಟ್​ನೆಸ್ ಸಾಧಿಸಿದರೆ ಮಾತ್ರ ಏಕದಿನ ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಳ್ಳಬಹುದು.

ಭಾರತ-ಪಾಕಿಸ್ತಾನ್ ಪಂದ್ಯದಲ್ಲಿ ಕಣಕ್ಕಿಳಿದ ಆಟಗಾರರ ಪಟ್ಟಿ:

ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್​ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.

ಇದನ್ನೂ ಓದಿ: ಸಚಿನ್ ತೆಂಡೂಲ್ಕರ್ ವಿಶ್ವ ದಾಖಲೆ ಮುರಿದ ಡೇವಿಡ್ ವಾರ್ನರ್

ಪಾಕಿಸ್ತಾನ್ ಪ್ಲೇಯಿಂಗ್ 11: ಫಖರ್ ಝಮಾನ್, ಇಮಾಮ್ ಉಲ್ ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸಲ್ಮಾನ್ ಆಘಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್.