ಏಷ್ಯಾಕಪ್ (Asia Cup 2023) ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಆಗಸ್ಟ್ 30 ರಿಂದ ಆರಂಭವಾಗಲಿರುವ ಟೂರ್ನಿಗೆ ಪಾಕಿಸ್ತಾನ ಹಾಗೂ ಶ್ರೀಲಂಕಾ (Pakistan and Sri Lanka) ಜಂಟಿ ಆತಿಥ್ಯವಹಿಸುತ್ತಿವೆ. ಇದೀಗ ಈ ಪಂದ್ಯಾವಳಿಯ ಕ್ರಿಕೆಟ್ ಮಾರಾಟದ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಹೊರಬಿದ್ದಿದೆ. ಕಳೆದ ವಾರವಷ್ಟೇ, ಪಾಕಿಸ್ತಾನದಲ್ಲಿ ನಡೆಯಲ್ಲಿರುವ ನಾಲ್ಕು ಪಂದ್ಯಗಳ ಟಿಕೆಟ್ ಮಾರಾಟ ಆರಂಭಿಸಲಾಗಿತ್ತು. ಇದೀಗ ಅಂದರೆ ಆಗಸ್ಟ್ 17 ರಿಂದ ಶ್ರೀಲಂಕಾದಲ್ಲಿ ನಡೆಯುತ್ತಿರುವ ಪಂದ್ಯಗಳಿಗಾಗಿ ಅಭಿಮಾನಿಗಳು ಟಿಕೆಟ್‌ಗಳನ್ನು ಖರೀದಿಸಲು ಪ್ರಾರಂಭಿಸಬಹುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಹೇಳಿಕೆ ನೀಡಿದೆ.
ಪಾಕ್ ಮಂಡಳಿಯ ಪ್ರಕಟಣೆಯ ಪ್ರಕಾರ, ಆಗಸ್ಟ್ 17ರ ಮಧ್ಯಾಹ್ನ 12:30 ರಿಂದ ಶ್ರೀಲಂಕಾದಲ್ಲಿ ನಡೆಯಲ್ಲಿರುವ ಆರಂಭಿಕ ಪಂದ್ಯಗಳ ಟಿಕೆಟ್‌ಗಳನ್ನು ಅಭಿಮಾನಿಗಳು ಖರೀದಿಸಬಹುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರಕಟಿಸಿದೆ. ಇದಲ್ಲದೆ, ಶ್ರೀಲಂಕಾದಲ್ಲಿ ನಡೆಯಲ್ಲಿರುವ ಎರಡನೇ ಹಂತದ ಪಂದ್ಯಗಳ ಟಿಕೆಟ್ ಮಾರಾಟವು ಇದೇ ದಿನ ರಾತ್ರಿ 7:00 ಗಂಟೆಗೆ ಪ್ರಾರಂಭವಾಗಲಿದೆ ಎಂದು ಪಿಸಿಬಿ ಹೇಳಿದೆ. pcb.bookme.pk ಮೂಲಕ ಟಿಕೆಟ್‌ಗಳನ್ನು ಖರೀದಿಸಲು ಅವಕಾಶವಿದೆ ಎಂದು ಪಾಕ್ ಮಂಡಳಿ ತಿಳಿಸಿದೆ.
Asia Cup 2023: ಸ್ಟಾರ್ ಆಟಗಾರನ ರೀ ಎಂಟ್ರಿ; ಏಷ್ಯಾಕಪ್ ತಂಡದಿಂದ ಸಂಜು ಸ್ಯಾಮ್ಸನ್ಗೆ ಗೇಟ್ಪಾಸ್..!
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:49 am, Thu, 17 August 23