Asia Cup 2023: 15 ದಿನಗಳಲ್ಲಿ ಭಾರತ-ಪಾಕಿಸ್ತಾನ್ 3 ಬಾರಿ ಮುಖಾಮುಖಿ..?
Asia Cup 2023 Schedule: ಆಗಸ್ಟ್ 30 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯವು ಮುಲ್ತಾನ್ನಲ್ಲಿ ನಡೆಯಲಿದೆ.
Asia Cup 2023 Schedule: ಏಷ್ಯಾಕಪ್ 2023 ವೇಳಾಪಟ್ಟಿ ಬಿಡುಗಡೆಯಾಗಿದೆ. ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸುತ್ತಿರುವ ಈ ಬಾರಿಯ ಏಷ್ಯಾಕಪ್ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಅಂದರೆ 4 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ, ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ಜರುಗಲಿದೆ. ಇದಕ್ಕೂ ಮುನ್ನ ಇಡೀ ಟೂರ್ನಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಪಾಕ್ನಲ್ಲಿ ಟೂರ್ನಿ ನಡೆದರೆ ಭಾರತ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿತ್ತು. ಹೀಗಾಗಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಅದರಂತೆ ಆಗಸ್ಟ್ 30 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯವು ಮುಲ್ತಾನ್ನಲ್ಲಿ ನಡೆಯಲಿದೆ. ಇನ್ನು ಲಂಕಾದ ಕ್ಯಾಂಡಿಯಲ್ಲಿ ಆಗಸ್ಟ್ 31 ರಂದು ನಡೆಯಲಿರುವ 2ನೇ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ್ ತಂಡಗಳು ಸೆಣಸಲಿದೆ.
ಸೆಪ್ಟೆಂಬರ್ 2 ರಂದು ನಡೆಯಲಿರುವ ಮೂರನೇ ಪಂದ್ಯದ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದ್ದು, ಈ ಪಂದ್ಯದಲ್ಲಿ ಭಾರತದ ಎದುರಾಳಿ ಪಾಕಿಸ್ತಾನ್ ಎಂಬುದು ವಿಶೇಷ. ಅಲ್ಲದೆ ಈ ಪಂದ್ಯಕ್ಕೆ ಕ್ಯಾಂಡಿಯ ಕ್ರಿಕೆಟ್ ಗ್ರೌಂಡ್ ಆತಿಥ್ಯವಹಿಸಲಿದೆ.
ಭಾರತ-ಪಾಕ್ 3 ಬಾರಿ ಮುಖಾಮುಖಿ:
ಲೀಗ್ ಹಂತದಲ್ಲಿ ಸೆಪ್ಟೆಂಬರ್ 2 ರಂದು ಭಾರತ-ಪಾಕಿಸ್ತಾನ್ ಮುಖಾಮುಖಿಯಾಗುವುದು ಖಚಿತವಾಗಿದೆ. ಇನ್ನು ಲೀಗ್ ಪಂದ್ಯಗಳ ಬಳಿಕ ಪಾಕಿಸ್ತಾನ್ ಹಾಗೂ ಟೀಮ್ ಇಂಡಿಯಾ ಸೂಪರ್-4 ಹಂತಕ್ಕೇರಿದರೆ ಸೆಪ್ಟೆಂಬರ್ 10 ರಂದು ಮತ್ತೊಮ್ಮೆ ಮುಖಾಮುಖಿಯಾಗಲಿದೆ.
ಇನ್ನು ಸೂಪರ್-4 ಹಂತದಲ್ಲೂ ಎರಡು ತಂಡಗಳು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಅಲಂಕರಿಸಿದರೆ ಫೈನಲ್ ಪ್ರವೇಶಿಸಲಿದೆ. ಅದರಂತೆ ಸೆಪ್ಟೆಂಬರ್ 17 ರಂದು ಮೂರನೇ ಬಾರಿ ಮುಖಾಮುಖಿಯಾಗಬಹುದು.
ಅದರಂತೆ ಕೇವಲ 15 ದಿನಗಳ ನಡುವೆ ಭಾರತ-ಪಾಕಿಸ್ತಾನ್ ನಡುವಣ ಮೂರು ಹೈವೋಲ್ಟೇಜ್ ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಕ್ರಿಕೆಟ್ ಪ್ರೇಮಿಗಳಿಗೆ ದೊರಕಲಿದೆಯಾ ಕಾದು ನೋಡಬೇಕಿದೆ.
ಇದನ್ನೂ ಓದಿ: Asia Cup 2023 Schedule: ಏಷ್ಯಾಕಪ್ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಏಷ್ಯಾಕಪ್ ಭಾರತದ ವೇಳಾಪಟ್ಟಿ:
- ಸೆಪ್ಟೆಂಬರ್ 2- ಭಾರತ vs ಪಾಕಿಸ್ತಾನ್ (ಕ್ಯಾಂಡಿ)
- ಸೆಪ್ಟೆಂಬರ್ 4- ಭಾರತ vs ನೇಪಾಳ (ಕ್ಯಾಂಡಿ)
- ಸೆಪ್ಟೆಂಬರ್ 6 ರಿಂದ 15 ರವರೆಗೆ ಸೂಪರ್-4 ಪಂದ್ಯಗಳು
- ಸೆಪ್ಟೆಂಬರ್ 17- ಫೈನಲ್ ಪಂದ್ಯ (ಕೊಲಂಬೊ)
Published On - 10:08 pm, Wed, 19 July 23