
ಏಷ್ಯಾಕಪ್‌ನಲ್ಲಿ (Asia Cup 2025) ನಾಳೆ ಭಾರತ ಹಾಗೂ ಪಾಕಿಸ್ತಾನ (Pakistan vs India) ನಡುವೆ ಮಹತ್ವದ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಈಗಾಗಲೇ ಸಜ್ಜಾಗಿವೆ. ಆದಾಗ್ಯೂ ಈ ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ತಮ್ಮ ವೇಗದ ಬೌಲಿಂಗ್ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಮಾತನಾಡಿರುವ ಹ್ಯಾರಿಸ್ ರೌಫ್ ಇನ್ನು ಮುಂದೆ ಕೇವಲ ವೇಗವಾಗಿ ಬೌಲಿಂಗ್ ಮಾಡುವುದರ ಮೇಲೆ ಹೆಚ್ಚು ಗಮನ ಹರಿಸುವುದಿಲ್ಲ ಎಂದಿದ್ದಾರೆ. ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಹ್ಯಾರಿಸ್ ರೌಫ್ ಈ ರೀತಿಯ ಹೇಳಿಕೆ ನೀಡಿರುವುದು ಕೆಲವರಲ್ಲಿ ಅಚ್ಚರಿ ಮೂಡಿಸಿದೆ.
ಏಷ್ಯಾಕಪ್ ಪ್ರಸಾರಕರೊಂದಿಗೆ ಮಾತನಾಡುಡಿರುವ ಹ್ಯಾರಿಸ್ ರೌಫ್, ‘ಈಗ ತಮ್ಮ ಮನಸ್ಥಿತಿ ಮೊದಲಿನಂತಿಲ್ಲ, ನನಗೆ ವೇಗದ ಚೆಂಡನ್ನು ಎಸೆಯುವ ಮನಸ್ಥಿತಿ ಇಲ್ಲ. ಈಗ ಬ್ಯಾಟ್ಸ್‌ಮನ್‌ಗಳು ವೇಗದ ಚೆಂಡುಗಳ ಮೇಲೆ ವಿಚಿತ್ರ ಹೊಡೆತಗಳನ್ನು ಆಡುತ್ತಾರೆ. ಆಧುನಿಕ ಕಾಲಕ್ಕೆ ಅನುಗುಣವಾಗಿ ನಾನು ನನ್ನ ಕೌಶಲ್ಯವನ್ನು ಬದಲಾಯಿಸಿದ್ದೇನೆ. ಟಿ20 ಕ್ರಿಕೆಟ್‌ನಲ್ಲಿ ನಿಮಗೆ ಒಳ್ಳೆಯ ದಿನವಿದ್ದರೆ, ನೀವು ಅದ್ಭುತಗಳನ್ನು ಮಾಡಬಹುದು. ಟಿ20 ಕ್ರಿಕೆಟ್ ದಿನಕ್ಕೆ ತಕ್ಕಂತೆ ನಡೆಯುತ್ತದೆ. ನಿಮಗೆ ಒಳ್ಳೆಯ ದಿನವಿದ್ದರೆ, ಕೆಟ್ಟ ಚೆಂಡಿನಲ್ಲೂ ವಿಕೆಟ್ ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ, ಉತ್ತಮ ಚೆಂಡುಗಳ ಮೇಲೆ ಬಹಳಷ್ಟು ಉತ್ತಮ ಹಿಟ್‌ಗಳನ್ನು ಮಾಡಲಾಗುತ್ತಿದೆ ಎಂದಿದ್ದಾರೆ.
IND vs UAE, Asia Cup 2025: ಕೇವಲ 4.3 ಓವರ್‌ಗಳಲ್ಲಿ ಗೆದ್ದು ಏಷ್ಯಾಕಪ್‌ನಲ್ಲಿ ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ
ಹ್ಯಾರಿಸ್ ರೌಫ್ ಇದುವರೆಗೆ 89 ಟಿ20 ಪಂದ್ಯಗಳಲ್ಲಿ 124 ವಿಕೆಟ್‌ಗಳನ್ನು ಪಡೆದಿದ್ದಾರೆ ಆದರೆ ಅವರ ಎಕಾನಮಿ ದರ 8.34 ಆಗಿದೆ. ಭಾರತದ ವಿರುದ್ಧದ ಅವರ ಪ್ರದರ್ಶನದ ಬಗ್ಗೆ ಮಾತನಾಡಿದರೆ, ಅವರ ಎಕಾನಮಿ ದರ 8.15 ಆಗಿದ್ದು, ಆಡಿರುವ 5 ಪಂದ್ಯಗಳಲ್ಲಿ 7 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅವರು ಭಾರತದ ವಿರುದ್ಧ ಪ್ರಮುಖ ಸಂದರ್ಭಗಳಲ್ಲಿ ರನ್‌ಗಳನ್ನು ನೀಡಿದ್ದಾರೆ, ಇದರಿಂದಾಗಿ ಪಾಕಿಸ್ತಾನ ಸೋಲನ್ನು ಎದುರಿಸಿದೆ. 2022 ರ ಟಿ20 ವಿಶ್ವಕಪ್‌ನಲ್ಲಿ, ವಿರಾಟ್ ಕೊಹ್ಲಿ ಇದೇ ರೌಫ್ ಓವರ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಪಾಕಿಸ್ತಾನದಿಂದ ಜಯವನ್ನು ಕಸಿದುಕೊಂಡಿದ್ದರು. ಈಗ ಏಷ್ಯಾಕಪ್‌ನಲ್ಲಿ ಹ್ಯಾರಿಸ್ ಏನು ಮಾಡುತ್ತಾರೆ ಎಂಬುದನ್ನು ನೋಡುವುದು ಆಸಕ್ತಿದಾಯಕವಾಗಿರುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:29 pm, Sat, 13 September 25