IND vs PAK: ಭಾರತ- ಪಾಕ್ ಪಂದ್ಯಕ್ಕೆ ಭಾರತದಲ್ಲಿ ಭಾರಿ ವಿರೋಧ; ಬಹಿಷ್ಕರಿಸುವಂತೆ ಒತ್ತಾಯ
India vs Pakistan Asia Cup 2025: 2025ರ ಏಷ್ಯಾ ಕಪ್‌ನಲ್ಲಿ ಸೆಪ್ಟೆಂಬರ್ 14ರಂದು ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಆಪರೇಷನ್ ಸಿಂಧೂರ್ ನಂತರದ ಮೊದಲ ಪಂದ್ಯ ಇದಾಗಿದ್ದು, ಭಾರತದಲ್ಲಿ ಈ ಪಂದ್ಯಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪಂದ್ಯ ರದ್ದತಿಗೆ ಒತ್ತಾಯ ಕೇಳಿಬರುತ್ತಿದೆ. ಬಿಸಿಸಿಐ ಟೀಕೆಗೆ ಗುರಿಯಾಗಿದೆ.

2025 ರ ಏಷ್ಯಾಕಪ್‌ನಲ್ಲಿ ( Asia Cup 2025) ಭಾರತ ಮತ್ತು ಪಾಕಿಸ್ತಾನ (India vs Pakistan) ಸೆಪ್ಟೆಂಬರ್ 14 ರಂದು ದುಬೈನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಆಪರೇಷನ್ ಸಿಂಧೂರ್ ನಂತರ ಎರಡೂ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಈ ಪಂದ್ಯದ ಬಗ್ಗೆ ಭಾರತದಲ್ಲಿ ಸಾಕಷ್ಟು ಪ್ರತಿಭಟನೆ ವ್ಯಕ್ತವಾಗುತ್ತಿದೆ. ಈ ಪಂದ್ಯವನ್ನು ರದ್ದುಗೊಳಿಸುವಂತೆ ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯ ಮಾಡಲಾಗುತ್ತಿದೆ. ದೇಶಕ್ಕಿಂತ ಕ್ರಿಕೆಟ್ ಮುಖ್ಯವಲ್ಲ, ಪಾಕಿಸ್ತಾನಕ್ಕೆ ಬುದ್ದಿ ಕಲಿಸಬೇಕೆಂದರೆ, ಅವರ ವಿರುದ್ಧ ಯಾವುದೇ ಪಂದ್ಯವನ್ನು ಆಡಬಾರದು ಎಂದು ಭಾರತೀಯರು ಒತ್ತಾಯಿಸುತ್ತಿದ್ದಾರೆ. ಹಾಗೆಯೇ ಭಾರತೀಯರಿಗೆ ಕರೆಕೊಟ್ಟಿರುವ ನೆಟ್ಟಿಗರು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ಯಾರು ನೋಡಬೇಡಿ ಎಂದಿದ್ದಾರೆ.
ಭಾರತದಲ್ಲಿ ಭಾರಿ ವಿರೋಧ
ಮೇಲೆ ಹೇಳಿದಂತೆ ಪಾಕಿಸ್ತಾನ ವಿರುದ್ಧದ ಪಂದ್ಯದ ಬಗ್ಗೆ ಭಾರತದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತವು ಆಪರೇಷನ್ ಸಿಂಧೂರ್ ನಡೆಸಿ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಶಿಬಿರವನ್ನು ನಾಶಪಡಿಸಿತ್ತು. ಅಂದಿನಿಂದ, ಎರಡೂ ದೇಶಗಳ ನಡುವೆ ಉದ್ವಿಗ್ನತೆ ಉಂಟಾಗಿದೆ.
ಇದು ಕ್ರೀಡೆಗಳ ಮೇಲೂ ಪರಿಣಾಮ ಬೀರಿತು. ಪಾಕಿಸ್ತಾನದ ಹಾಕಿ ತಂಡ ಏಷ್ಯಾಕಪ್ ಆಡಲು ಭಾರತಕ್ಕೆ ಬಂದಿರಲಿಲ್ಲ, ಆದರೆ ಯುಎಇಯಲ್ಲಿ ನಡೆಯುತ್ತಿರುವ 2025 ರ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಸೆಪ್ಟೆಂಬರ್ 14 ರಂದು ದುಬೈನಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯವನ್ನು ಆಡಲಿದೆ. ಇದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿಂದೆ ನಡೆದಿದ್ದ ಲೆಜೆಂಡ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಪಂದ್ಯವನ್ನಾಡಲು ನಿರಾಕರಿಸಿ ಪಂದ್ಯಾವಳಿಯಿಂದ ತನ್ನ ಹೆಸರನ್ನು ಹಿಂಪಡೆದುಕೊಂಡಿತ್ತು. ಇದೀಗ ಟೀಂ ಇಂಡಿಯಾ ಕೂಡ ಅದೇ ದಾರಿಯನ್ನು ಅನುಸರಿಸಬೇಕು ಎಂಬುದು ಭಾರತೀಯರ ಆಗ್ರಹವಾಗಿದೆ.
Entertainment is temporary, but our nation is forever. No match is bigger than the respect of our soldiers. So everyone boycott IND vs PAK Asia match. Jai hind🇮🇳#BoycottAsiaCup #boycottindvspak #BoycottIndiaVsPakMatch #India #Indian #indiaVsPakistan #IndianArmy #IndVsPak pic.twitter.com/QQh1xTB4vD
— Deepak381🇮🇳 (@Deepak_391) September 12, 2025
BOYCOTT ASIA CUP IS THE ONLY WAY TO GET THEM A LESSON ✊🏻✊🏻✊🏻
#DeshdrohiBCCI #IndVsPak pic.twitter.com/HFfrkm8QRh
— RAHUL SINGH (@RAHULKUMAR705) September 11, 2025
Never Forget. Never Forgive.
Remember, all #Pakistani are terr@rists.#BoycottAsiaCup #IndVsPak pic.twitter.com/fg1URF270L
— Zaira Nizaam 🇮🇳 (@Zaira_Nizaam) September 12, 2025
Aishanya Dwivedi, wife of Pahalgam terror attack victim Shubham Dwivedi, called for a boycott of the upcoming cricket match between India and Pakistan in the Asia Cup 2025 scheduled for Sunday.
Read here: https://t.co/Dc8DsfNklH#DNAUpdates | #indvspak2025 | #AsiaCup2025 pic.twitter.com/jXsoxBfMJP
— DNA (@dna) September 13, 2025
BCCI is cashing in on IND vs PAK drama while the nation still mourns. Is this cricket or cruelty? 🇮🇳💔 Blood is fresh, yet they want us to cheer? #INDvsPAK 🚨 India, think before you watch. Don’t fund their game. #BoycottAsiaCup #INDvPAK#DPWorldAsiaCup2025 pic.twitter.com/RUwMvdn3lI
— Amiyā (@i_am_srkboy) September 13, 2025
ಟೀಕೆಗೆ ಗುರಿಯಾದ ಬಿಸಿಸಿಐ
ಒತ್ತಾಯದ ನಡುವೆಯೂ ಪಾಕಿಸ್ತಾನದ ವಿರುದ್ಧ ಪಂದ್ಯವನ್ನಾಡಲು ಸಿದ್ಧವಾಗಿರುವ ಬಿಸಿಸಿಐ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟೀಕಿಸಲಾಗುತ್ತಿದೆ. ಆದಾಗ್ಯೂ ಅಭಿಮಾನಿಗಳ ಆಕ್ರೋಶವನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನದ ವಿಚಾರವಾಗಿ ಕ್ರೀಡಾ ಸಚಿವಾಲಯ ಹೊಸ ನೀತಿಯನ್ನು ಜಾರಿಗೆ ತಂದಿರುವುದಾಗಿ ತಿಳಿಸಿತ್ತು. ಅದರಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಯಾವುದೇ ದ್ವಿಪಕ್ಷೀಯ ಸರಣಿಯನ್ನು ಆಡುವುದಿಲ್ಲ. ಅಲ್ಲದೆ, ಭಾರತ ತಂಡವು ಯಾವುದೇ ಪಂದ್ಯಾವಳಿ ಅಥವಾ ಪಂದ್ಯಕ್ಕಾಗಿ ಪಾಕಿಸ್ತಾನಕ್ಕೆ ಹೋಗುವುದಿಲ್ಲ. ಪಾಕಿಸ್ತಾನ ತಂಡಕ್ಕೂ ಭಾರತದಲ್ಲಿ ಆಡಲು ಅವಕಾಶ ನೀಡುವುದಿಲ್ಲ. ಆದರೆ ಏಷ್ಯಾಕಪ್ ಬಹುರಾಷ್ಟ್ರೀಯ ಪಂದ್ಯಾವಳಿಯಾಗಿರುವುದರಿಂದ ನಾವು ಭಾರತ ಕ್ರಿಕೆಟ್ ತಂಡವನ್ನು ಅದರಲ್ಲಿ ಆಡುವುದನ್ನು ತಡೆಯುವುದಿಲ್ಲ ಎಂದು ಸಚಿವಾಲಯ ಸ್ಪಷ್ಟವಾಗಿ ತಿಳಿಸಿತ್ತು. ಈ ಕಾರಣದಿಂದಾಗಿ ಬಿಸಿಸಿಐ ಕೂಡ ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ತಂಡವನ್ನು ಕಣಕ್ಕಿಳಿಸುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
