AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs PAK: ಭಾರತ- ಪಾಕ್ ಪಂದ್ಯಕ್ಕೆ ಒಂದೇ ದಿನ ಬಾಕಿ; ಮಾರಾಟವಾಗದೆ ಉಳಿದ ಅರ್ಧದಷ್ಟು ಟಿಕೆಟ್​ಗಳು

Asia Cup 2025: 2025ರ ಏಷ್ಯಾಕಪ್ ಟೂರ್ನಿಯಲ್ಲಿ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿದ್ದು, ಟಿಕೆಟ್ ಬೆಲೆಗಳು ಹಾಗೂ ಪ್ರಮುಖ ಆಟಗಾರರ ಅನುಪಸ್ಥಿತಿ ಇದಕ್ಕೆ ಕಾರಣ ಎನ್ನಲಾಗಿದೆ. ಭಾರತ-ಪಾಕಿಸ್ತಾನ ಪಂದ್ಯಕ್ಕೂ ಅಭಿಮಾನಿಗಳ ಆಸಕ್ತಿ ಕಡಿಮೆಯಾಗಿದೆ. ಉನ್ನತ ದರ್ಜೆಯ ಟಿಕೆಟ್‌ಗಳ ಬೆಲೆಗಳು ಅತಿ ಹೆಚ್ಚಾಗಿದ್ದು, ಸಾಮಾನ್ಯ ಅಭಿಮಾನಿಗಳಿಗೆ ಪಂದ್ಯ ವೀಕ್ಷಿಸಲು ಕಷ್ಟವಾಗಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಅನುಪಸ್ಥಿತಿಯೂ ಅಭಿಮಾನಿಗಳ ನಿರಾಸಕ್ತಿಗೆ ಕಾರಣವಾಗಿದೆ.

IND vs PAK: ಭಾರತ- ಪಾಕ್ ಪಂದ್ಯಕ್ಕೆ ಒಂದೇ ದಿನ ಬಾಕಿ; ಮಾರಾಟವಾಗದೆ ಉಳಿದ ಅರ್ಧದಷ್ಟು ಟಿಕೆಟ್​ಗಳು
Ind Vs Pak
ಪೃಥ್ವಿಶಂಕರ
|

Updated on:Sep 13, 2025 | 3:34 PM

Share

ಯುಎಇಯಲ್ಲಿ ನಡೆಯುತ್ತಿರುವ 2025 ಏಷ್ಯಾಕಪ್ (Asia Cup 2025)​ ಅದ್ಯಾಕೋ ಅಭಿಮಾನಿಗಳಿಗೆ ರುಚಿಸುತ್ತಿಲ್ಲ. ಇದುವರೆಗೆ ನಡೆದಿರುವ 4 ಪಂದ್ಯಗಳಿಗೆ ಅಭಿಮಾನಿಗಳಿಂದ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಕ್ಕೆ ಪ್ರಚಾರದ ಕೊರತೆ ಒಂದೆಡೆಯಾದರೆ, ಮತ್ತೊಂದೆಡೆ ಟಿಕೆಟ್​ಗಳ ಬೆಲೆಯೂ ಕೂಡ ಅಭಿಮಾನಿಗಳ ಗೈರಿಗೆ ಕಾರಣ ಎನ್ನಲಾಗುತ್ತಿದೆ. ನಡೆದಿರುವ 4 ಪಂದ್ಯಗಳಲ್ಲೂ ಬೆರಳೆಣಿಕೆಯಷ್ಟು ಅಭಿಮಾನಿಗಳು ಮಾತ್ರ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಟೂರ್ನಿಯ ಹೈವೋಲ್ಟೇಜ್ ಕದನ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವೆ ಸೆಪ್ಟೆಂಬರ್ 14 ರಂದು ಅಂದರೆ ನಾಳೆ ನಡೆಯಲಿದೆ. ನಾಳೆ ನಡೆಯಲಿರುವ ಪಂದ್ಯಕ್ಕೆ ಇಡೀ ಕ್ರೀಡಾಂಗಣ ಭರ್ತಿಯಾಗಲಿದೆ ಎಂದು ನಿರೀಕ್ಷಿಸಿದ್ದ ಆಯೋಜಕರಿಗೆ ಮರ್ಮಾಘಾತ ಎದುರಾಗಿದೆ.

ನಷ್ಟದ ಸುಳಿಯಲ್ಲಿ ಆಯೋಜಕರು

ವಾಸ್ತವವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಎಂದರೆ ವಾರಕ್ಕೂ ಮೊದಲೇ ಪಂದ್ಯದ ಟಿಕೆಟ್​ಗಳು ಮಾರಾಟವಾಗುತ್ತಿದ್ದವು. ಕಾಳ ಸಂತೆಯಲ್ಲೂ ಟಿಕೆಟ್​ಗಳ ಬೆಲೆ ಗಗನಕ್ಕೇರಿರುತ್ತಿತ್ತು. ಆದರೆ ಉಭಯ ತಂಡಗಳ ನಡುವಿನ ಪಂದ್ಯಕ್ಕೆ ಇನ್ನೊಂದು ದಿನ ಬಾಕಿ ಉಳಿದಿರುವಾಗಲೂ ಅರ್ಧದಷ್ಟು ಟಿಕೆಟ್‌ಗಳು ಮಾರಾಟವಾಗಿಲ್ಲ ಎಂದು ವರದಿಯಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ನೋಡಲು ಅಭಿಮಾನಿಗಳು ಕ್ರೀಡಾಂಗಣಕ್ಕೆ ಬರದಿದ್ದರೆ, ಆಯೋಜಕರಿಗೆ ನಷ್ಟ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಪಂದ್ಯದ ಮೂಲಕ ಇದುವರೆಗೆ ಉಂಟಾಗಿರುವ ನಷ್ಟವನ್ನು ಭರ್ತಿ ಮಾಡಿಕೊಳ್ಳಲು ನೋಡುತ್ತಿದ್ದ ಆಯೋಜಕರು ಮತ್ತೆ ನಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ.

ದುಬಾರಿ ಟಿಕೆಟ್ ಬೆಲೆ

ವಾಸ್ತವವಾಗಿ ಭಾರತ- ಪಾಕ್ ಪಂದ್ಯಕ್ಕೂ ಅಭಿಮಾನಿಗಳ ಬರ ಉಂಟಾಗಲು ನಾನಾ ಕಾರಣಗಳಿವೆ. ಅದರಲ್ಲಿ ಮುಖ್ಯ ಕಾರಣ ಈ ಪಂದ್ಯಕ್ಕೆ ನಿಗದಿಪಡಿಸಿರುವ ಟಿಕೆಟ್ ಬೆಲೆ. ವರದಿಗಳ ಪ್ರಕಾರ, ವಿಐಪಿ ಸೂಟ್ಸ್​ನ 2 ಟಿಕೆಟ್‌ಗಳನ್ನು ಖರೀದಿಸಲು ಬರೋಬ್ಬರಿ 2.5 ಲಕ್ಷ ರೂ.ಗಳನ್ನು ವ್ಯಯಿಸಬೇಕಿದೆ. ಹಾಗೆಯೇ ರಾಯಲ್ ಬಾಕ್ಸ್ ಟಿಕೆಟ್ ಬೆಲೆ 2.3 ಲಕ್ಷ ರೂ.ಗಳಾಗಿದ್ದು, ಸ್ಕೈ ಬಾಕ್ಸ್ ಟಿಕೆಟ್ ಬೆಲೆ 1.6 ಲಕ್ಷ ರೂ.ಗಳಿಗೆ ನಿಗದಿಪಡಿಸಲಾಗಿದೆ. ಉಳಿದಂತೆ ಪ್ಲಾಟಿನಂ ಟಿಕೆಟ್‌ಗಳ ಬೆಲೆಯೂ ಸಹ 75,659 ರೂ. ಆಗಿದ್ದು, ಇಬ್ಬರಿಗೆ 10,000 ರೂ. ಅತ್ಯಂತ ಕಡಿಮೆ ಬೆಲೆಯ ಟಿಕೆಟ್ ಆಗಿದೆ. ಹೀಗಾಗಿ ಟಿಕೆಟ್​ಗಳ ಬೆಲೆಯೂ ಕೂಡ ಅಭಿಮಾನಿಗಳು ನಿರಾಸಕ್ತಿ ತೋರಿಸಲು ಕಾರಣ ಎನ್ನಲಾಗುತ್ತಿದೆ.

ಸ್ಟಾರ್ ಆಟಗಾರರಲಿಲ್ಲ

ಇದಲ್ಲದೆ ಅಭಿಮಾನಿಗಳನ್ನು ಕ್ರೀಡಾಂಗಣಕ್ಕೆ ಕರೆತರುವ ಸಾಮರ್ಥ್ಯವಿದ್ದ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಏಷ್ಯಾಕಪ್​ನಲ್ಲಿ ಆಡದಿರುವುದು. ಇವರಿಬ್ಬರನ್ನು ನೋಡುವುದಕ್ಕಾಗಿಯೇ ಸಾವಿರಾರು ಅಭಿಮಾನಿಗಳು ಕ್ರೀಡಾಂಗಣಕ್ಕೆ ಬರುತ್ತಿದ್ದರು. ಆದರೆ ಇವರಿಬ್ಬರು ಟಿ20 ಕ್ರಿಕೆಟ್​ಗೆ ವಿದಾಯ ಹೇಳಿರುವುದು ಕೂಡ ಟಿಕೆಟ್ ಮಾರಾಟವಾಗದಿರಲು ಕಾರಣವೆನ್ನಬಹುದು. ಇದು ಟೀಂ ಇಂಡಿಯಾ ಕಥೆಯಾದರೆ, ಪಾಕಿಸ್ತಾನ ತಂಡದಲ್ಲೂ ಸ್ಟಾರ್ ಆಟಗಾರರಾದ ಬಾಬರ್ ಆಝಂ ಹಾಗೂ ಮೊಹಮ್ಮದ್ ರಿಜ್ವಾನ್ ತಂಡದಲ್ಲಿರುವುದು ಅಭಿಮಾನಿಗಳ ಉತ್ಸಾಹವನ್ನು ಕುಂದಿಸಿದೆ ಎನ್ನಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:30 pm, Sat, 13 September 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ