PAK vs Oman: ಓಮನ್ ಸೋಲಿಸಿದ ನಂತರ ಪಾಕಿಸ್ತಾನ ನಾಯಕನ ವರ್ತನೆ ನೋಡಿ: ಭಾರತ ಪಂದ್ಯಕ್ಕು ಮುನ್ನ ದುರಹಂಕಾರದ ಮಾತು
Salman Ali Agha Post Match Presentation: ಏಷ್ಯಾ ಕಪ್ 2025 ರಲ್ಲಿ ಪಾಕಿಸ್ತಾನ ತಂಡವು ಓಮನ್ ತಂಡವನ್ನು 93 ರನ್‌ಗಳಿಂದ ಸೋಲಿಸಿತು. ಈ ಗೆಲುವಿನ ನಂತರ, ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ದೊಡ್ಡ ಹೇಳಿಕೆ ನೀಡಿದರು. ಅಂದಹಾಗೆ ಪಾಕಿಸ್ತಾನ ತಂಡವು ಸೆಪ್ಟೆಂಬರ್ 14 ರಂದು ಗ್ರೂಪ್ ಎ ನಲ್ಲಿ ಭಾರತವನ್ನು ಎದುರಿಸಲಿದೆ.

ಬೆಂಗಳೂರು (ಸೆ. 13): ಏಷ್ಯಾ ಕಪ್ 2025 ರ ಗ್ರೂಪ್ ಎ ಪಂದ್ಯದಲ್ಲಿ ಪಾಕಿಸ್ತಾನ (Pakistan Cricket Team) ತಂಡವು ಓಮನ್ ತಂಡವನ್ನು 93 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ, ಪಾಕಿಸ್ತಾನ ತಂಡವು ಮೊದಲು ಬ್ಯಾಟಿಂಗ್ ಮಾಡಿ 160 ರನ್‌ಗಳನ್ನು ಗಳಿಸಿದರೆ ಇದಕ್ಕೆ ಪ್ರತಿಯಾಗಿ, ಇಡೀ ಓಮನ್ ತಂಡವು ಕೇವಲ 67 ರನ್‌ಗಳಿಗೆ ಆಲೌಟ್ ಆಗಿತ್ತು. ಟೀಮ್ ಇಂಡಿಯಾ ವಿರುದ್ಧದ ಪಂದ್ಯಕ್ಕೂ ಮೊದಲು ಪಾಕಿಸ್ತಾನ ತಂಡದ ಆತ್ಮವಿಶ್ವಾಸ ಈ ಗೆಲುವಿನಿಂದ ಖಂಡಿತವಾಗಿಯೂ ಹೆಚ್ಚಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಈ ಗೆಲುವಿನ ನಂತರ ದೊಡ್ಡ ಹೇಳಿಕೆ ನೀಡಿದರು.
ಗೆಲುವಿನ ನಂತರ ಆಗಾ ಸಲ್ಮಾನ್ ಹೇಳಿದ್ದೇನು?
ಆಟಗಾರರು ಹೀಗೆ ಉತ್ತಮ ಪ್ರದರ್ಶನ ನೀಡುವುದನ್ನು ಮುಂದುವರಿಸಿದರೆ, ನಾವು ಯಾವುದೇ ತಂಡವನ್ನು ಸೋಲಿಸುತ್ತೇವೆ ಎಂದು ಪಾಕಿಸ್ತಾನ ತಂಡದ ನಾಯಕ ಹೇಳಿದ್ದಾರೆ. ಪಂದ್ಯದ ನಂತರ ಮಾತನಾಡಿದ ಅವರು, ‘ನಾವು ಇನ್ನೂ ಬ್ಯಾಟ್‌ನಲ್ಲಿ ಸ್ವಲ್ಪ ಸುಧಾರಿಸಬೇಕಾಗಿದೆ. ಬೌಲಿಂಗ್ ಅತ್ಯುತ್ತಮವಾಗಿತ್ತು, ಬೌಲಿಂಗ್ ಘಟಕದ ಬಗ್ಗೆ ನನಗೆ ಸಂತೋಷವಾಗಿದೆ. ನಮ್ಮಲ್ಲಿ ಮೂವರು ಸ್ಪಿನ್ನರ್‌ಗಳಿದ್ದಾರೆ ಮತ್ತು ಅವರೆಲ್ಲರೂ ವಿಭಿನ್ನವಾಗಿ ಬೌಲಿಂಗ್ ಮಾಡುತ್ತಾರೆ’ ಎಂದು ಹೇಳಿದರು.
‘ನಮ್ಮಲ್ಲಿ 4-5 ಉತ್ತಮ ಆಯ್ಕೆಗಳಿವೆ. ಈ ಆಯ್ಕೆಗಳು ನಾವು ದುಬೈ ಮತ್ತು ಅಬುಧಾಬಿಯಲ್ಲಿ ಆಡುವಾಗ ಬೇಕಾಗುತ್ತವೆ. ನಾವು ಆರಂಭದಿಂದಲೇ 180 ರನ್ ಗಳಿಸಬೇಕಿತ್ತು ಆದರೆ ಕ್ರಿಕೆಟ್ ನಾವು ಅಂದುಕೊಂಡಂತೆ ಸಾಗುವುದಿಲ್ಲ. ನಾವು ನಿಜವಾಗಿಯೂ ಉತ್ತಮ ಕ್ರಿಕೆಟ್ ಆಡುತ್ತಿದ್ದೇವೆ, ನಾವು ತ್ರಿಕೋನ ಸರಣಿಯನ್ನು ಗೆದ್ದಿದ್ದೇವೆ ಮತ್ತು ಇಂದಿನ ಪಂದ್ಯದಲ್ಲೂ ಸುಲಭವಾಗಿ ಗೆದ್ದಿದ್ದೇವೆ. ನಾವು ದೀರ್ಘಕಾಲದವರೆಗೆ ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದ್ದರೆ, ಮುಂದೆ ಯಾವುದೇ ತಂಡವನ್ನು ಸೋಲಿಸಬಹುದು’ ಎಂಬುದು ಪಾಕ್ ನಾಯಕನ ಮಾತು.
IND vs PAK: ದುಬೈ ಮೈದಾನದಲ್ಲಿ ಭಾರತ- ಪಾಕಿಸ್ತಾನ ನಡುವಿನ ದಾಖಲೆ ಹೇಗಿದೆ?: ಟೀಮ್ ಇಂಡಿಯಾ ಹಲವು ಬಾರಿ ಸೋತಿದೆ
ಪಾಕಿಸ್ತಾನಕ್ಕೆ ಭರ್ಜರಿ ಗೆಲುವು
ಶುಕ್ರವಾರ ನಡೆದ ಏಷ್ಯಾ ಕಪ್ ಟಿ20 ಅಂತಾರಾಷ್ಟ್ರೀಯ ಪಂದ್ಯದ ಗ್ರೂಪ್ ಎ ಪಂದ್ಯದಲ್ಲಿ ಓಮನ್ ವಿರುದ್ಧ ಪಾಕಿಸ್ತಾನ 93 ರನ್‌ಗಳ ಭರ್ಜರಿ ಜಯ ಸಾಧಿಸಿತು. ಮೊಹಮ್ಮದ್ ಹ್ಯಾರಿಸ್ 66 ರನ್‌ಗಳ ಇನ್ನಿಂಗ್ಸ್ ಆಡಿದರು. ಏಳು ವಿಕೆಟ್‌ಗಳಿಗೆ 160 ರನ್‌ಗಳ ಬ್ಯಾಟಿಂಗ್ ಬಳಿಕ, ಪಾಕಿಸ್ತಾನ ತಂಡವು 16.4 ಓವರ್‌ಗಳಲ್ಲಿ ಓಮನ್ ಅನ್ನು 67 ರನ್‌ಗಳಿಗೆ ಆಲೌಟ್ ಮಾಡಿ ದೊಡ್ಡ ಗೆಲುವು ದಾಖಲಿಸಿತು. ಹಮ್ಮದ್ ಮಿರ್ಜಾ ಒಮಾನ್ ಪರ ಅತಿ ಹೆಚ್ಚು 27 ರನ್ ಗಳಿಸಿದರು. ಅವರನ್ನು ಹೊರತುಪಡಿಸಿ, ಆಮಿರ್ ಕಲೀಮ್ (13) ಮತ್ತು ಶಕೀಲ್ ಅಹ್ಮದ್ (10) ಮಾತ್ರ ಎರಡಂಕಿಯ ರನ್ ಗಳಿಸಲು ಸಾಧ್ಯವಾಯಿತು. ಪಾಕಿಸ್ತಾನ ತಂಡವು ಸೆಪ್ಟೆಂಬರ್ 14 ರಂದು ಗ್ರೂಪ್ ಎ ನಲ್ಲಿ ಭಾರತವನ್ನು ಎದುರಿಸಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




