ENG vs SA: ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ದಾಖಲೆ: 300ಕ್ಕೂ ಅಧಿಕ ರನ್ ಚಚ್ಚಿದ ಇಂಗ್ಲೆಂಡ್
England vs South Africa 2nd T20I Record: ಶುಕ್ರವಾರ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 300 ರನ್‌ಗಳ ಗಡಿ ದಾಟುವ ಮೂಲಕ ಹ್ಯಾರಿ ಬ್ರೂಕ್ ನೇತೃತ್ವದ ಇಂಗ್ಲೆಂಡ್ ತಂಡ T20I ನೂತನ ದಾಖಲೆ ಬರೆದಿದೆ. ಜೊತೆಗೆ ಭಾರತೀಯ ತಂಡದ ದೊಡ್ಡ ದಾಖಲೆಯನ್ನು ಸಹ ಮುರಿದರು.

ಬೆಂಗಳೂರು (ಸೆ. 13): ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಯಾರೂ ಊಹಿಸಲಾಗದಂತ ದೊಡ್ಡ ದಾಖಲೆ ನಿರ್ಮಾಣ ಆಗಿದೆ. ಮ್ಯಾಂಚೆಸ್ಟರ್‌ನ ರಮಿರೇಟ್ಸ್ ಒಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಇಂಗ್ಲೆಂಡ್ (England Cricket Team) ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟಿ20 ಪಂದ್ಯದಲ್ಲಿ ನೂತನ ದಾಖಲೆ ಸೃಷ್ಟಿಯಾಗಿದೆ. ಈ ಪಂದ್ಯದಲ್ಲಿ, ಇಂಗ್ಲೆಂಡ್‌ನ ಬಿರುಗಾಳಿಯ ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 300+ ರನ್‌ಗಳನ್ನು ಗಳಿಸಿದರು. ಇಂಗ್ಲೆಂಡ್‌ನ ಆರಂಭಿಕ ಜೋಡಿ ಫಿಲ್ ಸಾಲ್ಟ್ ಮತ್ತು ಜೋಸ್ ಬಟ್ಲರ್ ಒಟ್ಟಾಗಿ ಆಫ್ರಿಕನ್ ಬೌಲರ್‌ಗಳ ಬೆವರಿಳಿಸಿ ಇತಿಹಾಸ ನಿರ್ಮಿಸಿದ್ದಾರೆ. ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಬಾರಿಗೆ 300 ರನ್‌ಗಳ ಗಡಿ ದಾಟಿದ್ದು, ಅವರು ಭಾರತೀಯ ತಂಡದ ದೊಡ್ಡ ದಾಖಲೆಯನ್ನು ಸಹ ಮುರಿದರು.
ಪೂರ್ಣ ಸದಸ್ಯರ ತಂಡದ ವಿರುದ್ಧ 300 ರನ್ ಗಳಿಸಿದ ಮೊದಲ ತಂಡ ಇಂಗ್ಲೆಂಡ್
ಇಲ್ಲಿಯವರೆಗೆ, ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದು ತಂಡವು 300 ರನ್‌ಗಳ ಗಡಿಯನ್ನು ದಾಟಲು ಸಾಧ್ಯವಾದದ್ದು ಕೇವಲ ಮೂರು ಬಾರಿ ಮಾತ್ರ. ಇಂಗ್ಲೆಂಡ್ ಹೊರತುಪಡಿಸಿ, ಜಿಂಬಾಬ್ವೆ ಮತ್ತು ನೇಪಾಳ ತಂಡವೂ ಇದರಲ್ಲಿ ಸೇರಿವೆ. ಅದೇ ಸಮಯದಲ್ಲಿ, ಇಂಗ್ಲೆಂಡ್ ಈಗ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪೂರ್ಣ ಸದಸ್ಯ ತಂಡದ ವಿರುದ್ಧ 300 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ತಂಡವಾಗಿದೆ.
ಈ ಹಿಂದೆ ಪೂರ್ಣ ಸದಸ್ಯ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಭಾರತೀಯ ತಂಡದ ಹೆಸರಿನಲ್ಲಿತ್ತು, ಆದರೆ ಈಗ ಇಂಗ್ಲೆಂಡ್ ತಂಡ ಅದನ್ನು ಸಂಪೂರ್ಣವಾಗಿ ನಾಶಮಾಡಿದೆ. 2024 ರಲ್ಲಿ ಹೈದರಾಬಾದ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಭಾರತ ತಂಡ 297 ರನ್ ಗಳಿಸಿತ್ತು.
Pak vs Oman: ಒಮಾನ್ ವಿರುದ್ಧ 93 ರನ್ಗಳಿಂದ ಗೆದ್ದ ಪಾಕಿಸ್ತಾನ
ಪೂರ್ಣ ಸದಸ್ಯ ತಂಡಗಳ ವಿರುದ್ಧ T20I ಗಳಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ತಂಡಗಳು
- ಇಂಗ್ಲೆಂಡ್- 304 vs ದಕ್ಷಿಣ ಆಫ್ರಿಕಾ (ಮ್ಯಾಂಚೆಸ್ಟರ್, 2025)
- ಭಾರತ – ಬಾಂಗ್ಲಾದೇಶ ವಿರುದ್ಧ 297 ರನ್‌ಗಳು (ಹೈದರಾಬಾದ್, 2024)
- ಭಾರತ – ದಕ್ಷಿಣ ಆಫ್ರಿಕಾ ವಿರುದ್ಧ 283 ರನ್‌ಗಳು (ಜೋಹಾನ್ಸ್‌ಬರ್ಗ್, 2024)
- ಅಫ್ಘಾನಿಸ್ತಾನ – ಐರ್ಲೆಂಡ್ ವಿರುದ್ಧ 278 ರನ್‌ಗಳು (2019, ಡೆಹ್ರಾಡೂನ್)
- ಇಂಗ್ಲೆಂಡ್ – ವೆಸ್ಟ್ ಇಂಡೀಸ್ ವಿರುದ್ಧ 267 ರನ್‌ಗಳು (2023, ತರೂಬಾ)
ಇಂಗ್ಲೆಂಡ್ ತಂಡ ಮೊದಲ ಬಾರಿಗೆ ಪವರ್‌ಪ್ಲೇನಲ್ಲಿ 100 ರನ್ ಗಳಿಸಿತು:
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ತನ್ನ ಟಿ20 ಅಂತರರಾಷ್ಟ್ರೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಪವರ್ ಪ್ಲೇನಲ್ಲಿ 100 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ, ಪವರ್ ಪ್ಲೇನಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಪೂರ್ಣ ಸದಸ್ಯ ತಂಡ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡ್ ಪಾತ್ರವಾಗಿದೆ. ಇದಕ್ಕೂ ಮೊದಲು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಈ ಸಾಧನೆ ಮಾಡಿದ್ದವು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 304 ರನ್ ಸಿಡಿಸಿತು. ಪಿಲ್ ಸಾಲ್ಟ್ ಕೇವಲ 60 ಎಸೆತಗಳಲ್ಲಿ ಅಜೇಯ 141 ರನ್ ಚಚ್ಚಿದರು (15 ಫೋರ್, 8 ಸಿಕ್ಸರ್). ಜೋಸ್ ಬಟ್ಲರ್ 30 ಎಸೆತಗಳಲ್ಲಿ 83 ರನ್ ಬಾರಿಸಿದರು (8 ಫೋರ್, 7 ಸಿಕ್ಸರ್). ಹ್ಯಾರಿ ಬ್ರೂಕ್ 21 ಎಸೆತಗಳಲ್ಲಿ ಅಜೇಯ 41 ರನ್ ಗಳಿಸಿದರು. ಟಾರ್ಗೆಟ್ ಬೆನ್ನಟ್ಟಿದ ದ. ಆಫ್ರಿಕಾ ತಂಡ 16.1 ಓವರ್‌ಗಳಲ್ಲಿ 158 ರನ್ಗಳಿಗೆ ಆಲೌಟ್ ಆಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




