RCB ಮುಂದಿನ ಸೀಸನ್‌ಗೆ ಆನೆ ಬಲ; 60 ಬಾಲ್ಗೆ 141 ಚಚ್ಚಿದ ಆಟಗಾರ
ಫಿಲಿಪ್ ಸಾಲ್ಟ್ ಅವರು ಇತ್ತೀಚೆಗೆ 60 ಎಸೆತಗಳಲ್ಲಿ 141 ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆರ್‌ಸಿಬಿ ತಂಡವು ಈ ಹಿಂದೆ ಅವರನ್ನು 11.5 ಕೋಟಿ ರೂಪಾಯಿಗೆ ಖರೀದಿಸಿತ್ತು. ಸಾಲ್ಟ್ ಅವರ ಈ ಫಾರ್ಮ್ ಮುಂದಿನ ಐಪಿಎಲ್ ಸೀಸನ್‌ಗೆ ಆರ್‌ಸಿಬಿ ತಂಡಕ್ಕೆ ಉತ್ತಮ ಬಲವನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಆರ್‌ಸಿಬಿ ತಂಡ ಈ ಬಾರಿ ಐಪಿಎಲ್ನಲ್ಲಿ ಕಪ್ ಗೆದ್ದಿದೆ. ಮುಂದಿನ ಸೀಸನ್‌ಗೆ ಈಗಲೇ ನಿರೀಕ್ಷೆ ಮೂಡಿದೆ. ಆರ್‌ಸಿಬಿ (RCB) ಮತ್ತೊಮ್ಮೆ ಕಪ್ ಗೆಲ್ಲುವ ಕನಸು ಕಾಣುತ್ತಿದೆ. ಹೀಗಿರುವಾಗಲೇ ಆರ್ಸಿಬಿಯಲ್ಲಿದ್ದಾಗ ಸಾಧಾರಣ ಆಟ ಆಡಿದ್ದ ಆಟಗಾರ ಈಗ ಫಾರ್ಮ್ಗೆ ಮರಳಿದ್ದಾರೆ. 60 ಬಾಲ್ಗೆ 141 ರನ್ ಚಚ್ಚಿದ್ದಾರೆ. ಅವರು ಬೇರೆ ಯಾರೂ ಅಲ್ಲ ಫಿಲಿಪ್ ಸಾಲ್ಟ್. ಇದರಿಂದ ಆರ್‌ಸಿಬಿ ಮುಂದಿನ ಸೀಸನ್‌ಗೆ ಈಗಲೇ ಬಲ ಬಂದಂತೆ ಆಗಿದೆ.
ಮ್ಯಾಂಚೆಸ್ಟರ್ನ ರಮಿರೇಟ್ಸ್ ಒಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಶುಕ್ರವಾರ (ಸೆಪ್ಟೆಂಬರ್ 13) ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟಿ20 ಪಂದ್ಯ ನಡೆದಿದೆಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಫಿಲಿಪ್ ಸಾಲ್ಟ್ ಅವರು ಅಬ್ಬರದ ದಾಖಲೆ ಬರೆದಿದ್ದಾರೆ. ಕೇವಲ 60 ಬಾಲ್ಗೆ 141 ರನ್ ಸಿಡಿಸಿದ್ದಾರೆ. ಇದರಲ್ಲಿ 15 ಫೋರ್ ಹಾಗೂ 8 ಸಿಕ್ಸ್ಗಳಿವೆ. ಈ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಅವರ ಫಾರ್ಮ್ ನೋಡಿ ಅನೇಕರು ಹೌಹಾರಿದ್ದಾರೆ.
ಮೊದಲು ಬ್ಯಾಟಿಂಗ್ಗೆ ಇಳಿದ ಇಂಗ್ಲೆಂಡ್ ಬಿರುಸಿನ ಆಟ ಪ್ರಾರಂಭಿಸಿತು. ಕೇವಲ 7.5 ಓವರ್ಗಳಲ್ಲಿ ತಂಡ 126 ರನ್ಗಳ ಗಡಿ ದಾಟಿತ್ತು. ಸಾಲ್ಟ್ ಕೇವಲ 39 ಬಾಲ್ಗಳಿಗೆ ಶತಕ ಕೂಡ ಸಿಡಿಸಿದರು. ಇನ್ನು, ಇಂಗ್ಲೆಂಡ್ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಕೂಡ ಸೃಷ್ಟಿ ಮಾಡಿದೆ. 20 ಓವರ್ಗಳಲ್ಲಿ ತಂಡ 300 ರನ್ ಕಲೆ ಹಾಕಿದೆ.
ಇದನ್ನೂ ಓದಿ: ಅಂತರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ದಾಖಲೆ: 300ಕ್ಕೂ ಅಧಿಕ ರನ್ ಚಚ್ಚಿದ ಇಂಗ್ಲೆಂಡ್
ಈ ಬಾರಿಯ ಐಪಿಎಲ್ ಸೀಸನ್ನಲ್ಲಿ ಸಾಲ್ಟ್ನ ಆರ್‌ಸಿಬಿ 11.5 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿತ್ತು. ಆರಂಭದಲ್ಲಿ ಅವರು ಉತ್ತಮವಾಗಿಯೇ ಆಡಿದ್ದರು. ನಂತರ ಕೆಲ ಮ್ಯಾಚ್ ಡಲ್ ಹೊಡೆದರು. ಹೀಗಾಗಿ, ಕೆಲ ಪಂದ್ಯಗಳಲ್ಲಿ ಅವರನ್ನು ಹೊರಕ್ಕೆ ಕೂಡ ಇಡಲಾಯಿತು. ಅವರ ಗರಿಷ್ಠ ರನ್ ಕೇವಲ 65 ರನ್ಗಳಾಗಿದ್ದವು. ಈಗ ಅವರು ಫಾರ್ಮ್ಗೆ ಮರಳಿದ್ದು ಆರ್‌ಸಿಬಿ ಫ್ಯಾನ್ಸ್ಗೆ ಖುಷಿ ಕೊಟ್ಟಿದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:02 am, Sat, 13 September 25
