
ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಟೀಂ ಇಂಡಿಯಾ ನಡೆಯುತ್ತಿರುವ ಏಷ್ಯಾಕಪ್‌ನಲ್ಲಿ ಸತತ ಎರಡನೇ ಗೆಲುವು ಸಾಧಿಸಿದೆ.ಮೊದಲು ಯುಎಇ ತಂಡವನ್ನು ಸೋಲಿಸಿದ್ದ ಟೀಂ ಇಂಡಿಯಾ, ಇದೀಗ ಸೆಪ್ಟೆಂಬರ್ 14 ರ ಭಾನುವಾರದಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ. ಪಾಕಿಸ್ತಾನ ತಂಡವು ಟೀಮ್ ಇಂಡಿಯಾಗೆ ಗೆಲುವಿಗೆ 128 ರನ್‌ಗಳ ಗುರಿಯನ್ನು ನೀಡಿತ್ತು. ಭಾರತ 3 ವಿಕೆಟ್‌ಗಳನ್ನು ಕಳೆದುಕೊಂಡು 25 ಎಸೆತಗಳು ಬಾಕಿ ಇರುವಂತೆಯೇ ಗುರಿಯನ್ನು ಪೂರ್ಣಗೊಳಿಸಿತು. ನಾಯಕನ ಇನ್ನಿಂಗ್ಸ್ ಆಡಿದ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಹಾಗೂ ಆರಂಭಿಕ ಅಭಿಷೇಕ್ ಶರ್ಮಾ, ಕುಲ್ದೀಪ್ ಯಾದವ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಭಾರತ ತಂಡ, ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿತು. ಸೂರ್ಯಕುಮಾರ್ ಯಾದವ್ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಭಾರತ ತಂಡವು 15.5 ಓವರ್‌ಗಳಲ್ಲಿ 128 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು.
ಭಾರತೀಯ ಕ್ರಿಕೆಟ್ ತಂಡ ಈಗ ಗೆಲುವಿನತ್ತ ಸಾಗುತ್ತಿದೆ. ಸೂರ್ಯಕುಮಾರ್ ಯಾದವ್ ಅದ್ಭುತ ಸ್ವೀಪ್ ಶಾಟ್ ಬಾರಿಸಿ ಸೂಫಿಯಾನ್ ಮುಖೀಮ್ ಅವರ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. 8 ಓವರ್‌ಗಳಲ್ಲಿ ಸ್ಕೋರ್ 71 ರನ್‌ಗಳನ್ನು ತಲುಪಿದೆ.
ಭಾರತ ತಂಡ 5.1 ಓವರ್‌ಗಳಲ್ಲಿ 50 ರನ್‌ಗಳನ್ನು ದಾಟಿದೆ. ತಿಲಕ್ ವರ್ಮಾ ಬೌಂಡರಿ ಬಾರಿಸುವ ಮೂಲಕ ತಂಡವನ್ನು ಐವತ್ತು ರನ್‌ಗಳ ಗಡಿ ದಾಟಿಸಿದ್ದಾರೆ.
ಟೀಮ್ ಇಂಡಿಯಾ ಮೊದಲ ಹಿನ್ನಡೆ ಅನುಭವಿಸಿದೆ, ಶುಭಮನ್ ಗಿಲ್ (10) ಔಟಾಗಿದ್ದಾರೆ. ಎರಡನೇ ಓವರ್‌ನಲ್ಲಿ, ಸ್ಪಿನ್ನರ್ ಸೈಮ್ ಅಯೂಬ್ ಎಸೆತದಲ್ಲಿ ಸತತ ಎರಡು ಬೌಂಡರಿಗಳನ್ನು ಬಾರಿಸಿದ ನಂತರ, ಗಿಲ್ ಕೊನೆಯ ಎಸೆತದಲ್ಲಿ ಸ್ಟಂಪ್ ಔಟ್ ಆದರು.
ಪಾಕಿಸ್ತಾನ ತಂಡವು 20 ಓವರ್‌ಗಳಲ್ಲಿ 127 ರನ್ ಗಳಿಸಿದೆ. ಕೊನೆಯ ಕೆಲವು ಎಸೆತಗಳಲ್ಲಿ ಶಾಹೀನ್ ಅಫ್ರಿದಿ ವೇಗದ ಇನ್ನಿಂಗ್ಸ್ ಆಡಿ ತಮ್ಮ ತಂಡವನ್ನು ಗೌರವಾನ್ವಿತ ಸ್ಕೋರ್‌ಗೆ ಕೊಂಡೊಯ್ದರು. ಅಫ್ರಿದಿ 16 ಎಸೆತಗಳಲ್ಲಿ 4 ಸಿಕ್ಸರ್‌ಗಳನ್ನು ಬಾರಿಸಿ 33 ರನ್ ಗಳಿಸಿದರು.
ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ. ವರುಣ್ ಚಕ್ರವರ್ತಿ ಬೌಲಿಂಗ್‌ನಲ್ಲಿ ಫಹೀಮ್ ಅಶ್ರಫ್ ಔಟ್ ಆದರು. 100 ರನ್‌ಗಳಿಗೂ ಮೊದಲೇ ಪಾಕಿಸ್ತಾನ 8 ವಿಕೆಟ್ ಕಳೆದುಕೊಂಡಿತು.
ಕುಲದೀಪ್ ಯಾದವ್ 4 ಓವರ್‌ಗಳಲ್ಲಿ 18 ರನ್ ನೀಡಿ 3 ವಿಕೆಟ್ ಪಡೆದರು. ಕಳೆದ ಪಂದ್ಯದಲ್ಲಿ ಅವರು 4 ವಿಕೆಟ್ ಪಡೆದಿದ್ದರು. 2 ಪಂದ್ಯಗಳಲ್ಲಿ ಒಟ್ಟು 7 ವಿಕೆಟ್‌ಗಳನ್ನು ಪಡೆದಿದ್ದಾರೆ.
ಪಾಕಿಸ್ತಾನದ 6ನೇ ವಿಕೆಟ್ ಪತನವಾಗಿದೆ. ಈ ಓವರ್‌ನಲ್ಲಿ ಕುಲ್ದೀಪ್ ಸತತ 2 ಎಸೆತಗಳಲ್ಲಿ 2 ವಿಕೆಟ್ ಉರುಳಿಸಿದರು.
ಪಾಕಿಸ್ತಾನದ ನಾಯಕ ಕೂಡ ಔಟ್. ಸಲ್ಮಾನ್ ಅಲಿ ಅಘಾ ಕೇವಲ 3 ರನ್ ಗಳಿಸಿ ಔಟಾದರು. ಪಾಕಿಸ್ತಾನ ತಂಡ 10 ಓವರ್‌ಗಳಲ್ಲಿ ಕೇವಲ 49 ರನ್ ಗಳಿಸಿದೆ.
ಅಕ್ಷರ್ ಪಟೇಲ್ ಓವರ್‌ನಲ್ಲಿ ದೊಡ್ಡ ಹೊಡೆತ ಹೊಡೆಯಲು ಪ್ರಯತ್ನಿಸಿ ಫಖರ್ ಜಮಾನ್ ಔಟ್ ಆದರು.ತಿಲಕ್ ವರ್ಮಾ ಸುಲಭವಾಗಿ ಕ್ಯಾಚ್ ಹಿಡಿದರು. ಪಾಕಿಸ್ತಾನ ತಂಡ ಮತ್ತೊಮ್ಮೆ ಸಂಕಷ್ಟದಲ್ಲಿದೆ.
ಪವರ್‌ಪ್ಲೇನಲ್ಲಿ ಪಾಕಿಸ್ತಾನ ತಂಡವು 42 ರನ್‌ಗಳನ್ನು ಗಳಿಸಿ ಮೊಹಮ್ಮದ್ ಹ್ಯಾರಿಸ್ ಮತ್ತು ಸ್ಯಾಮ್ ಅಯೂಬ್ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತದ ಪರ ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ತಲಾ 1 ವಿಕೆಟ್ ಪಡೆದರು.
ಪಾಕಿಸ್ತಾನ ಮತ್ತೊಂದು ವಿಕೆಟ್ ಕಳೆದುಕೊಂಡಿತು, ಈ ಬಾರಿ ಬುಮ್ರಾ, ಮೊಹಮ್ಮದ್ ಹ್ಯಾರಿಸ್ ಅವರನ್ನು ಔಟ್ ಮಾಡಿದರು, ಹಾರ್ದಿಕ್ ಪಾಂಡ್ಯ ಕ್ಯಾಚ್ ಹಿಡಿದರು.
ಸ್ಯಾಮ್ ಅಯ್ಯೂಬ್ ಸತತ ಎರಡು ಪಂದ್ಯಗಳಲ್ಲಿ ಗೋಲ್ಡನ್ ಡಕ್ ಆಗಿ ಔಟಾದರು. ಓಮನ್ ವಿರುದ್ಧದ ಮೊದಲ ಎಸೆತದಲ್ಲೇ ಸೊನ್ನೆಗೆ ಔಟಾಗಿದ್ದ ಅವರು ಈ ಬಾರಿಯೂ ಮೊದಲ ಎಸೆತದಲ್ಲೇ ಔಟಾದರು.
ಸೈಮ್ ಅಯೂಬ್, ಸಾಹಿಬ್‌ಜಾದಾ ಫರ್ಹಾನ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಫಖರ್ ಜಮಾನ್, ಸಲ್ಮಾನ್ ಆಘಾ (ನಾಯಕ), ಹಸನ್ ನವಾಜ್, ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಸುಫಿಯಾನ್ ಮುಕೀಮ್, ಅಬ್ರಾರ್ ಅಹ್ಮದ್.
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.
ಟಾಸ್ ಗೆದ್ದ ಪಾಕಿಸ್ತಾನ ನಾಯಕ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಇದರೊಂದಿಗೆ ಎರಡು ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ.
ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ
ಟಿ20 ವಿಶ್ವಕಪ್ ನಂತರ ಭಾರತದ ರನ್ ರೇಟ್ 9.66 ಆಗಿದ್ದು ಅದ್ಭುತವಾಗಿದ್ದು, ಪಾಕಿಸ್ತಾನ ತಂಡದ ರನ್ ರೇಟ್ 8.12 ಆಗಿದೆ.
ದುಬೈನಲ್ಲಿ ಟಾಸ್ ದೊಡ್ಡ ಪಾತ್ರ ವಹಿಸಬಹುದು. ಭಾರತ-ಪಾಕಿಸ್ತಾನ ಪಂದ್ಯದ ಬಗ್ಗೆ ಹೇಳುವುದಾದರೆ, ದುಬೈನಲ್ಲಿ ನಡೆದ ಕಳೆದ ಮೂರು ಪಂದ್ಯಗಳಲ್ಲಿ, ಗುರಿಯನ್ನು ಬೆನ್ನಟ್ಟಿದ ತಂಡ ಗೆದ್ದಿದೆ. ಪಾಕಿಸ್ತಾನ ಎರಡು ಪಂದ್ಯಗಳನ್ನು ಗೆದ್ದಿದ್ದರೆ, ಭಾರತ ಒಂದು ಪಂದ್ಯವನ್ನು ಗೆದ್ದಿದೆ.
ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಇಂದು ತಮ್ಮ 35ನೇ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಜನ್ಮದಿನದಂದೇ ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ನಡೆಯುತ್ತಿರುವುದರಿಂದ ಅವರ ಜನ್ಮದಿನ ಮತ್ತಷ್ಟು ವಿಶೇಷವಾಗಿದೆ.
ಭಾರತ ಮತ್ತು ಪಾಕಿಸ್ತಾನ ತಂಡಗಳು ಏಷ್ಯಾಕಪ್‌ನಲ್ಲಿ ಏಕದಿನ ಮತ್ತು ಟಿ20 ಪಂದ್ಯಗಳನ್ನು ಒಳಗೊಂಡಂತೆ 19 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಭಾರತ 10 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ 6 ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ 3 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ದುಬೈನಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.
Published On - 4:20 pm, Sun, 14 September 25