
2025 ರ ಏಷ್ಯಾಕಪ್‌ನಲ್ಲಿ (Asia Cup 2025) ಭಾರತದ ಅಜೇಯ ಓಟ ಮುಂದುವರೆದಿದೆ. ಗುಂಪು ಹಂತದಲ್ಲಿ ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿರುವ ಟೀಂ ಇಂಡಿಯಾ ಈಗ ಸೂಪರ್ 4 ಸುತ್ತಿಗೆ ಭರ್ಜರಿ ತಯಾರಿ ನಡೆಸುತ್ತಿದೆ. ಈ ಸುತ್ತಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳ ನಡುವೆ ಪ್ರಶಸ್ತಿ ಪಂದ್ಯ ನಡೆಯಲಿದೆ. ಆದಾಗ್ಯೂ, ಟಿ20 ಮಾದರಿಯ ಸೂಪರ್ 4 ಹಂತದಲ್ಲಿ ಟೀಂ ಇಂಡಿಯಾದ ದಾಖಲೆಯನ್ನು ನೋಡಿದರೆ, ಅಭಿಮಾನಿಗಳಲ್ಲಿ ಉದ್ವಿಗ್ನತೆ ಹೆಚ್ಚಾಗಲಿದೆ. ಏಕೆಂದರೆ ಟಿ20 ಏಷ್ಯಾಕಪ್‌ನ ಸೂಪರ್ 4 ಸುತ್ತಿನಲ್ಲಿ ಭಾರತದ ದಾಖಲೆ ಗಮನಾರ್ಹವಲ್ಲ. ಈ ಹಿಂದೆ ಎರಡು ಬಾರಿ ನಡೆದಿರುವ ಏಷ್ಯಾಕಪ್ ಸೂಪರ್ 4 ಒಮ್ಮೆ ಮಾತ್ರ ಸೂಪರ್ 4 ಸ್ವರೂಪದಲ್ಲಿ ಪಂದ್ಯಾವಳಿಯನ್ನು ಆಡಲಾಗಿದೆ.
ಗುಂಪು ಹಂತದಲ್ಲಿ ಭಾರತ ತಂಡ ಯುಎಇ ತಂಡವನ್ನು ಒಂಬತ್ತು ವಿಕೆಟ್‌ಗಳಿಂದ ಮತ್ತು ಪಾಕಿಸ್ತಾನ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಸೂಪರ್ ಫೋರ್‌ನಲ್ಲಿ ಸ್ಥಾನ ಪಡೆದುಕೊಂಡಿತು . ಸೆಪ್ಟೆಂಬರ್ 19 ರಂದು ಒಮಾನ್ ವಿರುದ್ಧದ ಕೊನೆಯ ಗುಂಪು ಹಂತದ ಪಂದ್ಯವನ್ನು ಟೀಂ ಇಂಡಿಯಾ 21 ರನ್‌ಗಳಿಂದ ಗೆದ್ದುಕೊಂಡಿತು. ಇದೀಗ ಭಾರತ ಸೆಪ್ಟೆಂಬರ್ 21 ರಂದು ತನ್ನ ಮೊದಲ ಸೂಪರ್ ಫೋರ್ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಅದು ಪಾಕಿಸ್ತಾನವನ್ನು ಎದುರಿಸಲಿದೆ.
ಟೀಂ ಇಂಡಿಯಾ ಇದುವರೆಗೆ ಟಿ20 ಏಷ್ಯಾಕಪ್‌ನ ಸೂಪರ್ ಫೋರ್ ಹಂತದಲ್ಲಿ ಮೂರು ಪಂದ್ಯಗಳನ್ನು ಆಡಿದೆ. ಈ ಮೂರು ಪಂದ್ಯಗಳು 2022 ರ ಟಿ20 ಏಷ್ಯಾ ಕಪ್ ಸಮಯದಲ್ಲಿ ನಡೆದಿವೆ. ಈ ಪಂದ್ಯಗಳಲ್ಲಿ ಭಾರತ ತಂಡವು ಕೇವಲ ಒಂದನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಎರಡು ಸೋಲುಗಳೊಂದಿಗೆ ಪಂದ್ಯಾವಳಿಯಿಂದ ಹೊರಬಿದ್ದಿತ್ತು. ಇದರರ್ಥ ಸೂಪರ್ 4 ಸುತ್ತಿನಲ್ಲಿ ಭಾರತದ ದಾಖಲೆ ಅಷ್ಟು ಉತ್ತಮವಾಗಿಲ್ಲ ಎಂಬುದು ತೋರಿಸುತ್ತದೆ. ಆದಾಗ್ಯೂ ಟಿ20 ಮಾದರಿಯಲ್ಲಿ ಟೀಂ ಇಂಡಿಯಾ ಬಲಿಷ್ಠವಾಗಿ ಕಾಣುತ್ತಿದ್ದು, ಗೆಲುವಿನ ಫೇವರೇಟ್ ಎನಿಸಿಕೊಂಡಿದೆ.
Asia cup 2025: ಭಾರತ- ಪಾಕ್ ಸೂಪರ್ 4 ಸುತ್ತಿನ ಪಂದ್ಯಕ್ಕೆ ಮ್ಯಾಚ್ ರೆಫರಿ ನೇಮಕ
2024 ರ ಟಿ 20 ವಿಶ್ವಕಪ್ ಗೆದ್ದ ನಂತರ, ಟೀಂ ಇಂಡಿಯಾ ಆಡಿರುವ 22 ಟಿ20 ಪಂದ್ಯಗಳಲ್ಲಿ 19 ರಲ್ಲಿ ಗೆದ್ದಿದೆ. ಹಾಗೆಯೇ ಕಳೆದ 42 ಟಿ20 ಪಂದ್ಯಗಳಲ್ಲಿ 37 ಪಂದ್ಯಗಳನ್ನು ಗೆದ್ದುಕೊಂಡಿದೆ. ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದಲ್ಲಿ , ತಂಡವು ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡಿದ್ದು, ಈ ಬಾರಿ ಪ್ರಶಸ್ತಿಗಾಗಿ ಪ್ರಬಲ ಸ್ಪರ್ಧಿಯಾಗಿದೆ. ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ತಯಾರಿ ನಡೆಸುವಲ್ಲಿ ಭಾರತ ತಂಡಕ್ಕೆ ಈ ಪಂದ್ಯಾವಳಿ ನಿರ್ಣಾಯಕವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ