
2025ರ ಏಷ್ಯಾಕಪ್‌ನಲ್ಲಿ (Asia Cup 2025) ಟೀಂ ಇಂಡಿಯಾ ನಿರೀಕ್ಷಿತ ಪ್ರದರ್ಶನವನ್ನೇ ನೀಡಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಯುಎಇ ತಂಡವನ್ನು ಎದುರಿಸಿರುವ ಸೂರ್ಯಕುಮಾರ್ ಪಡೆ, ಆತಿಥೇಯ ತಂಡವನ್ನು ಕೇವಲ 57 ರನ್ಗಳಿಗೆ ಆಲೌಟ್ ಮಾಡಿದೆ. ಭಾರತದ ಬೌಲರ್ಗಳ ಮುಂದೆ ಪೆವಿಲಿಯನ್ ಪರೇಡ್ ನಡೆಸಿದ ಯುಎಇ ಆಟಗಾರರಿಗೆ ಪೂರ್ಣ 50 ಓವರ್ಗಳನ್ನು ಆಡಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಹೊರತುಪಡಿಸಿ ಮಿಕ್ಕ ಐವರು ಬೌಲರ್ಗಳಿಗೆ ವಿಕೆಟ್ ಸಿಕ್ಕಿತು. ಅದರಲ್ಲೂ ಮ್ಯಾಜಿಕಲ್ ಸ್ಪಿನ್ ದಾಳಿ ನಡೆಸಿದ ಕುಲ್ದೀಪ್ ಯಾದವ್ (Kuldeep Yadav) ಕೇವಲ 2.1 ಓವರ್ ಬೌಲ್ ಮಾಡಿ 7 ರನ್‌ಗಳನ್ನು ಬಿಟ್ಟುಕೊಟ್ಟು ಅತ್ಯಧಿಕ 4 ವಿಕೆಟ್ ಉರುಳಿಸಿದರು. ತಂಡದ ಸ್ಟಾರ್ ಸ್ಪಿನ್ನರ್ ಕುಲ್ದೀಪ್ ಯಾದವ್ಗೆ 1 ವರ್ಷದ ಬಳಿಕ ಭಾರತದ ಪರ ಟಿ20 ಪಂದ್ಯ ಆಡುವ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡ ಕುಲ್ದೀಪ್ ತಮ್ಮ ಎರಡನೇ ಓವರ್‌ನಲ್ಲಿ ಯುಎಇ ತಂಡವನ್ನು ನಡುಗಿಸಿಬಿಟ್ಟರು.
ಜೂನ್ 2024 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟಿ20 ಪಂದ್ಯವನ್ನು ಆಡಿದ್ದ ಕುಲ್ದೀಪ್ ಯಾದವ್ ಯುಎಇ ವಿರುದ್ಧದ ತಮ್ಮ ಮೊದಲ ಓವರ್‌ನಲ್ಲಿ ತುಂಬಾ ಮಿತವ್ಯಯದಿಂದ ಬೌಲಿಂಗ್ ಮಾಡಿ ಕೇವಲ 4 ರನ್‌ಗಳನ್ನು ಬಿಟ್ಟುಕೊಟ್ಟರು. ಇದಾದ ನಂತರ, ತಮ್ಮ ಖೋಟಾದ ಎರಡನೇ ಓವರ್‌ನ ಮೊದಲ ಎಸೆತದಲ್ಲೇ ರಾಹುಲ್ ಚೋಪ್ರಾ ಅವರ ವಿಕೆಟ್ ಪಡೆದರು . ರಾಹುಲ್ ಚೋಪ್ರಾ ದೊಡ್ಡ ಹೊಡೆತವನ್ನು ಆಡಲು ಯತ್ನಿಸಿ ಶುಭ್ಮನ್ ಗಿಲ್‌ಗೆ ಕ್ಯಾಚ್ ನೀಡಿದರು.
Kuldeep Yadav strikes thrice in a single over 👊
Watch #INDvUAE LIVE NOW on the Sony Sports Network TV Channels & Sony LIV.#SonySportsNetwork #DPWorldAsiaCup2025 pic.twitter.com/trvfRaq2u4
— Sony Sports Network (@SonySportsNetwk) September 10, 2025
ಇದಾದ ನಂತರ, ಕುಲ್ದೀಪ್ ಯಾದವ್ ಆ ಓವರ್‌ನ ಎರಡನೇ ಎಸೆತದಲ್ಲಿ 1 ರನ್ ಬಿಟ್ಟುಕೊಟ್ಟು ಮೂರನೇ ಎಸೆತದಲ್ಲಿ ಡಾಟ್ ಬಾಲ್ ಎಸೆದರು. ನಂತರ ನಾಲ್ಕನೇ ಎಸೆತದಲ್ಲಿ ಯುಎಇ ನಾಯಕ ಮುಹಮ್ಮದ್ ವಾಸಿಮ್ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಅದೇ ಓವರ್‌ನ ಕೊನೆಯ ಎಸೆತದಲ್ಲಿ ಹರ್ಷಿತ್ ಕೌಶಿಕ್ ಅವರನ್ನು ಸಹ ಪೆವಿಲಿಯನ್ಗೆ ಕಳುಹಿಸಿದರು. ಕುಲ್ದೀಪ್ ಯಾದವ್ ಅವರ ಈ ಮಾಂತ್ರಿಕ ಬೌಲಿಂಗ್ ನಿಂದಾಗಿ ಯುಎಇ ತಂಡ ಕೇವಲ 50 ರನ್ಗಳೊಳಗೆ ಪ್ರಮುಖ 5 ವಿಕೆಟ್ಗಳನ್ನು ಕಳೆದುಕೊಂಡಿತು.
Asia Cup 2025: ಬುಮ್ರಾ ಡೆಡ್ಲಿ ಯಾರ್ಕರ್ಗೆ ಹಾರಿತು ವಿಕೆಟ್; ವಿಡಿಯೋ ನೋಡಿ
ಈ ಪಂದ್ಯದಲ್ಲಿ 3 ವಿಕೆಟ್ಗಳ ಗೊಂಚಲು ಪಡೆಯುವ ಮೂಲಕ ಕುಲ್ದೀಪ್ ಯಾದವ್ ವಿಶೇಷ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಸರಿಗಟ್ಟಿದ್ದಾರೆ. ವಾಸ್ತವವಾಗಿ, ಸಚಿನ್ ತೆಂಡೂಲ್ಕರ್ ಏಷ್ಯಾಕಪ್‌ನಲ್ಲಿ 4 ಬಾರಿ 3 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದ್ದರು. ಇದೀಗ ಕುಲ್ದೀಪ್ ನಾಲ್ಕನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ. ಏಷ್ಯಾಕಪ್‌ನಲ್ಲಿ ಭಾರತ ಪರ ಅತಿ ಹೆಚ್ಚು ಬಾರಿ 3 ವಿಕೆಟ್ ಗೊಂಚಲು ಪಡೆದ ದಾಖಲೆ ರವೀಂದ್ರ ಜಡೇಜಾ ಅವರ ಹೆಸರಿನಲ್ಲಿದ್ದು, 5 ಬಾರಿ ಈ ಸಾಧನೆ ಮಾಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:36 pm, Wed, 10 September 25