Asia Cup 2025: 21 ವರ್ಷಗಳ ನಂತರ ಇವರಿಬ್ಬರಿಲ್ಲದೆ ಏಷ್ಯಾಕಪ್ ಆಡಲಿದೆ ಟೀಂ ಇಂಡಿಯಾ

Asia Cup 2025: 2025ರ ಏಷ್ಯಾಕಪ್ ಪಂದ್ಯಾವಳಿ ಸೆಪ್ಟೆಂಬರ್ 9 ರಿಂದ 29 ರವರೆಗೆ ನಡೆಯಲಿದೆ. ಈ ಬಾರಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ದಿಗ್ಗಜ ಆಟಗಾರರು ಭಾಗವಹಿಸುತ್ತಿಲ್ಲ. ಇದು 21 ವರ್ಷಗಳ ನಂತರದ ಮೊದಲ ಬಾರಿ. ಅವರ ಅನುಪಸ್ಥಿತಿಯು ಭಾರತ ತಂಡದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದು ಕುತೂಹಲಕರ. ಕಳೆದ ಎರಡು ದಶಕಗಳಿಂದ ಏಷ್ಯಾಕಪ್‌ನಲ್ಲಿ ಅವರ ಪ್ರಮುಖ ಪಾತ್ರವನ್ನು ಪರಿಗಣಿಸಿದರೆ, ಅವರ ಅನುಪಸ್ಥಿತಿಯು ಖಂಡಿತವಾಗಿಯೂ ಪರಿಣಾಮ ಬೀರುತ್ತದೆ.

Asia Cup 2025: 21 ವರ್ಷಗಳ ನಂತರ ಇವರಿಬ್ಬರಿಲ್ಲದೆ ಏಷ್ಯಾಕಪ್ ಆಡಲಿದೆ ಟೀಂ ಇಂಡಿಯಾ
Asia Cup 2025

Updated on: Aug 06, 2025 | 10:28 PM

2025 ರ ಏಷ್ಯಾಕಪ್ (Asia Cup 2025) ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 29 ರವರೆಗೆ ನಡೆಯಲಿದೆ. ಈ ಬಾರಿ ಟೂರ್ನಮೆಂಟ್ ಟಿ20 ಸ್ವರೂಪದಲ್ಲಿ ನಡೆಯಲಿದ್ದು, ಈ ಪಂದ್ಯಾವಳಿಯಲ್ಲಿ ಭಾಗವಹಿಸುವ 8 ತಂಡಗಳನ್ನು ತಲಾ 4ತಂಡಗಳ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಯುಎಇ ಮತ್ತು ಓಮನ್ ತಂಡಗಳಿದ್ದರೆ, ಹಾಂಗ್ ಕಾಂಗ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಬಿ ಗುಂಪು ನಲ್ಲಿವೆ. ಏಷ್ಯಾಕಪ್‌ಗಾಗಿ ಭಾರತ ತಂಡವನ್ನು ಈ ತಿಂಗಳ ಕೊನೆಯಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ಆದರೆ ಕಳೆದ 21 ವರ್ಷಗಳಿಂದ ಏಷ್ಯಾಕಪ್‌ನಲ್ಲಿ ಕಾಣದ ದೃಶ್ಯವನ್ನು ಅಭಿಮಾನಿಗಳು ಈ ಬಾರಿ ನೋಡಲಿದ್ದಾರೆ.

21 ವರ್ಷಗಳ ನಂತರ ದಿಗ್ಗಜರ ಅನುಪಸ್ಥಿತಿ

ವಾಸ್ತವವಾಗಿ, ಈ ಬಾರಿ ಅಭಿಮಾನಿಗಳು ಏಷ್ಯಾಕಪ್‌ನಲ್ಲಿ ಇಬ್ಬರು ದೊಡ್ಡ ಆಟಗಾರರನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಲೆಜೆಂಡರಿ ಆಟಗಾರರು ಈ ಪಂದ್ಯಾವಳಿಯಲ್ಲಿ ಆಡುತ್ತಿಲ್ಲ. ವಾಸ್ತವವಾಗಿ ಇವರಿಬ್ಬರು ಟಿ20 ಸ್ವರೂಪದಿಂದ ನಿವೃತ್ತರಾಗಿರುವುದರಿಂದ ಅವರನ್ನು ತಂಡದಲ್ಲಿ ಆಯ್ಕೆ ಮಾಡಲಾಗುವುದಿಲ್ಲ. 21 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಈ ಇಬ್ಬರು ಆಟಗಾರರು ಏಷ್ಯಾಕಪ್‌ನಲ್ಲಿ ಮೈದಾನದಲ್ಲಿ ಕಾಣಿಸುವುದಿಲ್ಲ. ಈ ಇಬ್ಬರು ಆಟಗಾರರು ಇಲ್ಲದೆ ಕೊನೆಯ ಬಾರಿಗೆ ಏಷ್ಯಾಕಪ್ ಆಡಿದ್ದು 2004 ರಲ್ಲಿ, ಆಗ ಅವರಿಬ್ಬರೂ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರಲಿಲ್ಲ.

ಇದಾದ ನಂತರ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇವರಿಬ್ಬರಲ್ಲಿ ಒಬ್ಬ ಆಟಗಾರನಾದರೂ ಪ್ರತಿ ಆವೃತ್ತಿಯಲ್ಲೂ ಏಷ್ಯಾಕಪ್ ಆಡಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕಳೆದ ಎರಡು ದಶಕಗಳಿಂದ ಭಾರತೀಯ ಕ್ರಿಕೆಟ್‌ನ ಎರಡು ದೊಡ್ಡ ಆಧಾರಸ್ತಂಭಗಳಾಗಿದ್ದಾರೆ. ಇಬ್ಬರೂ ತಮ್ಮ ಬ್ಯಾಟಿಂಗ್‌ನಿಂದ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದಲ್ಲದೆ, ಏಷ್ಯಾಕಪ್‌ನಂತಹ ದೊಡ್ಡ ಪಂದ್ಯಾವಳಿಗಳಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2010 ರಲ್ಲಿ, ಇಬ್ಬರೂ ಆಟಗಾರರು ಒಟ್ಟಾಗಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಶ್ರಮಿಸಿದ್ದರು. ಆ ಬಳಿಕ ಇವರಿಬ್ಬರು ಜೊತೆಯಾಗಿ 2016 ರ ಏಷ್ಯಾಕಪ್ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು.

Asia Cup 2025: ಈ ಎರಡು ಸ್ಥಳಗಳಲ್ಲಿ ನಡೆಯಲಿದೆ ಏಷ್ಯಾಕಪ್ ಪಂದ್ಯಾವಳಿ; ಅಧಿಕೃತ ಘೋಷಣೆ

ರೋಹಿತ್ ದಾಖಲೆ

ರೋಹಿತ್ ಶರ್ಮಾ ತಮ್ಮ ನಾಯಕತ್ವದಲ್ಲಿ 2018 ರ ಏಷ್ಯಾಕಪ್‌ನಲ್ಲಿ ಟೀಮ್ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. 2023 ರಲ್ಲಿಯೂ ಸಹ, ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಈ ಪಂದ್ಯಾವಳಿಯನ್ನು ಗೆದ್ದುಕೊಂಡಿತು. ಆಗ ವಿರಾಟ್ ಕೊಹ್ಲಿ ಕೂಡ ತಂಡದ ಭಾಗವಾಗಿದ್ದರು. ಆದರೆ ಈ ಬಾರಿ ಭಾರತೀಯ ಅಭಿಮಾನಿಗಳು ಈ ಇಬ್ಬರು ಆಟಗಾರರನ್ನು ಮಿಸ್ ಮಾಡಿಕೊಳ್ಳುತ್ತಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ