Team India: ಡಿಕೆಗೆ ಯಾಕಿಲ್ಲ ಚಾನ್ಸ್​? ಟೀಮ್ ಇಂಡಿಯಾಗೆ ಹರ್ಭಜನ್ ಸಿಂಗ್ 3 ಖಡಕ್ ಪ್ರಶ್ನೆ

| Updated By: ಝಾಹಿರ್ ಯೂಸುಫ್

Updated on: Sep 07, 2022 | 12:54 PM

Asia Cup 2022: ಹರ್ಭಜನ್ ಸಿಂಗ್ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮುಂದಿಟ್ಟಿರುವ ಪ್ರಶ್ನೆಗಳಿಗೆ ಅಭಿಮಾನಿಗಳಿಂದಲೂ ಕೂಡ ಉತ್ತಮ ಬೆಂಬಲ ವ್ಯಕ್ತವಾಗಿದೆ.

Team India: ಡಿಕೆಗೆ ಯಾಕಿಲ್ಲ ಚಾನ್ಸ್​? ಟೀಮ್ ಇಂಡಿಯಾಗೆ ಹರ್ಭಜನ್ ಸಿಂಗ್ 3 ಖಡಕ್ ಪ್ರಶ್ನೆ
Harbhajan Singh
Follow us on

Asia Cup 2022: ಏಷ್ಯಾಕಪ್​ನಲ್ಲಿ ಭಾರತ ತಂಡವು ಸತತವಾಗಿ ಎರಡು ಸೋಲನುಭವಿಸಿದೆ. ಅದು ಕೂಡ ನಿರ್ಣಾಯಕವಾಗಿದ್ದ ಸೂಪರ್-4 ಹಂತದಲ್ಲಿ ಎಂಬುದು ವಿಶೇಷ. ಅಂದರೆ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ದ ಸೋತಿದ್ದ ಭಾರತ ತಂಡ ಇದೀಗ ಶ್ರೀಲಂಕಾ ವಿರುದ್ದ ಕೂಡ ಪರಾಜಯಗೊಂಡಿದೆ. ಇದರೊಂದಿಗೆ ಏಷ್ಯಾಕಪ್​ ಫೈನಲ್​ಗೇರುವ ಅವಕಾಶವನ್ನು ಕೈ ತಪ್ಪಿಸಿಕೊಂಡಿದೆ. ಈ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ಆಯ್ಕೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಅದರಲ್ಲೂ ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಟೀಮ್ ಇಂಡಿಯಾ ಆಯ್ಕೆ ಸಮಿತಿ ಮುಂದೆ​ ಮೂರು ಖಡಕ್ ಪ್ರಶ್ನೆಗಳನ್ನಿಟ್ಟಿದ್ದಾರೆ. ಆ ಪ್ರಶ್ನೆಗಳೆಂದರೆ…

  1. ಉಮ್ರಾನ್ ಮಲಿಕ್ ಎಲ್ಲಿ ಹೋದರು? ಐಪಿಎಲ್ 2022 ರಲ್ಲಿ ತನ್ನ 150 ಪ್ಲಸ್ ವೇಗದಲ್ಲಿ ಬೌಲಿಂಗ್ ಮಾಡಿದ್ದ ಉಮ್ರಾನ್ ಮಲಿಕ್ ಈಗ ಎಲ್ಲಿ ಹೋದರು? ಟೀಮ್ ಇಂಡಿಯಾದ ಬೌಲಿಂಗ್ ಅಸ್ತ್ರವಾಗಲಿದ್ದಾರೆ ಎಂದು ಬಿಂಬಿಸಲಾಗಿದ್ದ ಯುವ ವೇಗಿಯನ್ನು 3 ಪಂದ್ಯಗಳ ಬಳಿಕ ತಂಡದಿಂದ ಕೈ ಬಿಡಲಾಗಿತ್ತು. ಈ ನಡೆಯನ್ನೇ ಈಗ ಹರ್ಭಜನ್ ಸಿಂಗ್ ಪ್ರಶ್ನಿಸಿದ್ದಾರೆ.
  2. ದೀಪಕ್ ಚಹರ್​ಗೆ ಯಾಕೆ ಅವಕಾಶವಿಲ್ಲ? ಅದ್ಭುತ ಸ್ವಿಂಗ್ ಬೌಲರ್ ಆಗಿರುವ ದೀಪಕ್ ಚಹರ್​ಗೆ ಯಾಕೆ ಟೀಮ್ ಇಂಡಿಯಾದಲ್ಲಿ ಅವಕಾಶ ನೀಡಲಾಗಿಲ್ಲ ಎಂದು ಭಜ್ಜಿ ಪ್ರಶ್ನಿಸಿದ್ದಾರೆ. ಚಹರ್ ಮೀಸಲು ಆಟಗಾರನಾಗಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದಾಗ್ಯೂ ಅವರನ್ನು ಮುಖ್ಯ ತಂಡಕ್ಕೆ ಯಾಕೆ ಪರಿಗಣಿಸಲಾಗಿಲ್ಲ ಎಂದು ಟೀಮ್ ಇಂಡಿಯಾ ಆಯ್ಕೆ ಸಮಿತಿಯ​ನ್ನು​  ಹರ್ಭಜನ್ ಸಿಂಗ್ ಪ್ರಶ್ನಿಸಿದ್ದಾರೆ.
  3. ದಿನೇಶ್ ಕಾರ್ತಿಕ್​ಗೆ ಯಾಕೆ ಚಾನ್ಸ್​ ನೀಡಿಲ್ಲ? ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಿಂದ ದಿನೇಶ್ ಕಾರ್ತಿಕ್ ಅವರನ್ನು ಯಾಕಾಗಿ ಕೈ ಬಿಡಲಾಗಿದೆ. ಅತ್ಯುತ್ತಮವಾಗಿ ಬ್ಯಾಟ್ ಬೀಸಬಲ್ಲ ಸಾಮರ್ಥ್ಯ ಹೊಂದಿದ್ದರೂ, ಅವರನ್ನೇಕೆ ಆಯ್ಕೆ ಮಾಡಿಲ್ಲ ಎಂಬುದನ್ನು ಹರ್ಭಜನ್ ಸಿಂಗ್ ಪ್ರಶ್ನಿಸಿದ್ದಾರೆ. ಏಕೆಂದರೆ ಪಾಕಿಸ್ತಾನ್ ಹಾಗೂ ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್​ಗೆ ಚಾನ್ಸ್ ನೀಡಿಲ್ಲ. ಇದನ್ನೇ ಪ್ರಶ್ನಿಸಿ ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಇದೀಗ ಹರ್ಭಜನ್ ಸಿಂಗ್ ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಮುಂದಿಟ್ಟಿರುವ ಪ್ರಶ್ನೆಗಳಿಗೆ ಅಭಿಮಾನಿಗಳಿಂದಲೂ ಕೂಡ ಉತ್ತಮ ಬೆಂಬಲ ವ್ಯಕ್ತವಾಗಿದೆ. ಅದರಲ್ಲೂ ಟೀಮ್ ಇಂಡಿಯಾ ಆಯ್ಕೆಯೇ ಸರಿಯಾಗಿರಲಿಲ್ಲ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್